For Quick Alerts
ALLOW NOTIFICATIONS  
For Daily Alerts

ದುರ್ಗಾ ವಿಸರ್ಜನೆ 2021: ದಿನಾಂಕ, ಶುಭಮುಹೂರ್ತ, ವಿಧಿವಿಧಾನ ಹಾಗೂ ಮಹತ್ವದ ಸಂಪೂರ್ಣ ಮಾಹಿತಿ

|

ಒಂಬತ್ತು ದಿನಗಳ ನವರಾತ್ರಿ ಸಂಭ್ರಮದ ಅಂತಿಮ ಘಟ್ಟವೇ ದುರ್ಗಾ ವಿಸರ್ಜನೆ. ದುರ್ಗಾದೇವಿಯ ಆಶೀರ್ವಾದಕ್ಕಾಗಿ ಸತತ ಒಂಬತ್ತು ದಿನಗಳ ಕಾಲ ಆಕೆಯನ್ನು ಆರಾಧಿಸಿ, ಕೊನೆಯದಾಗಿ, ಆ ಮೂರ್ತಿಯನ್ನು ವಿಸರ್ಜನೆ ಮಾಡುವ ಮೂಲಕ ಅಂತಿಮಗೊಳ್ಳುತ್ತದೆ. ಇದು ವಿಜಯದಶಮಿಯಂದು ಬೆಳಗ್ಗ ಅಥವಾ ಮಧ್ಯಾಹ್ನ ನೆರವೇರಿಸಲಾಗುವುದು.

ಈ ವರ್ಷ, ದುರ್ಗಾ ವಿಸರ್ಜನೆಯು ಅಕ್ಟೋಬರ್ 15ರಂದು ಬಂದಿದ್ದು, ಅದರ ವಿಧಿವಿಧಾನ, ಆಚರಣೆಗಳು ಹೇಗಿರಬೇಕು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ದುರ್ಗಾವಿಸರ್ಜನೆಗೆ ಶುಭಮುಹೂರ್ತ:

ದುರ್ಗಾವಿಸರ್ಜನೆಗೆ ಶುಭಮುಹೂರ್ತ:

ನವರಾತ್ರಿಯ ದಶಮಿ ಅಥವಾ ನವಮಿಯ ದಿನ ದುರ್ಗಾವಿಸರ್ಜನೆಗೆ ಅತ್ಯಂತ ಶುಭಕರವಾಗಿದೆ. ಸಾಮಾನ್ಯವಾಗಿ ಇದನ್ನು ಮುಂಜಾನೆ ನಡೆಸಲಾಗುತ್ತದೆ ಆದರೆ ಶುಭ ಮುಹೂರ್ತದ ಪ್ರಕಾರ ದುರ್ಗಾ ವಿಸರ್ಜನೆಯನ್ನು ಸಂಜೆಯ ಸಮಯದಲ್ಲಿ ಕೂಡ ನಡೆಸಬಹುದು. ವಿಸರ್ಜನೆಯ ಶುಭ ಸಮಯವು ಅಕ್ಟೋಬರ್ 15 ರಂದು ಬೆಳಿಗ್ಗೆ 6.22 ರಿಂದ ಆರಂಭವಾಗಿ, 8.40 ಕ್ಕೆ ಕೊನೆಗೊಳ್ಳುತ್ತದೆ. ದುರ್ಗಾ ವಿಸರ್ಜನೆಯ ಅವಧಿ ಕೇವಲ 2 ಗಂಟೆ 18 ನಿಮಿಷಗಳು.

ದುರ್ಗಾ ವಿಸರ್ಜನೆಯ ಆಚರಣೆಗಳು:

ದುರ್ಗಾ ವಿಸರ್ಜನೆಯ ಆಚರಣೆಗಳು:

ಈ ದಿನ, ದುರ್ಗಾ ದೇವಿಯು ತನ್ನ ಆಧ್ಯಾತ್ಮಿಕ ನಿವಾಸವಾದ ಕೈಲಾಸ ಪರ್ವತಕ್ಕೆ ಹಿಂದಿರುಗುತ್ತಾಳೆ ಎಂಬ ನಂಬಿಕೆಯಿದೆ. ಆದ್ದರಿಂದ ಈ ಆಚರಣೆಗೆ ಬಹಳ ಮಹತ್ವವಿದ್ದು, ಸಂಪೂರ್ಣ ವಿಧಿವಿಧಾನಗಳ ಮೂಲಕ ನೆರವೇರಿಸಲಾಗುತ್ತದೆ. ಅವುಗಳೆಂದರೆ:

  • ಕನ್ಯಾ ಪೂಜೆಯ ನಂತರ, ಅಂಗೈಯಲ್ಲಿ ಹೂವು ಮತ್ತು ಅಕ್ಷತೆಯನ್ನು ತೆಗೆದುಕೊಂಡು ಪ್ರತಿಜ್ಞೆಯನ್ನು ಮಾಡಿ.
  • ಪಾತ್ರೆಯಲ್ಲಿ ಇಟ್ಟಿರುವ ತೆಂಗಿನಕಾಯಿ, ವೀಳ್ಯದೆಲೆಯನ್ನು ಪ್ರಸಾದವೆಂದು ಭಾವಿಸಿ ಕುಟುಂಬಕ್ಕೆ ನೀಡಿ.
  • ಧಾರಕದ ಪವಿತ್ರ ನೀರನ್ನು ಇಡೀ ಮನೆಯಲ್ಲಿ ಸಿಂಪಡಿಸಿ, ಇಡೀ ಕುಟುಂಬವು ಅದನ್ನು ಪ್ರಸಾದವಾಗಿ ಸೇವಿಸಬೇಕು.
  • ದುರ್ಗಾಮಾತೆಯನ್ನು ಸಿಂಹಾಸನದಿಂದ ಇಳಿಸಿ, ಮನೆಯ ಚೌಕಿಯಲ್ಲಿಡಿ.
  • ಆ ಸಿಂಹಾಸನ ಅಥವಾ ದೇವಿ ಇಟ್ಟಿದ ಜಾಗದಲ್ಲಿ ಗಣೇಶನ ಮೂರ್ತಿಯನ್ನು ಇಡಿ.
  • ಎಲ್ಲಾ ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ನೈವೇದ್ಯವಾಗಿ ವಿತರಿಸಿ.
  • ಕೊನೆಯದಾಗಿ, ದುರ್ಗಾ ವಿಗ್ರಹ ಅಥವಾ ಫೋಟೋದ ಮುಂದೆ ತಲೆಬಾಗಿ ಆಕೆಯ ಆಶೀರ್ವಾದ ಪಡೆಯಿರಿ. ನಂತರ, ನದಿ, ಸರೋವರ ಅಥವಾ ಸಮುದ್ರದಲ್ಲಿ ವಿಸರ್ಜನೆ ಮಾಡಿ.
  • ವಿಸರ್ಜನೆಯ ನಂತರ ಬ್ರಾಹ್ಮಣರಿಗೆ ತೆಂಗಿನಕಾಯಿ, ದಕ್ಷಿಣ ಮತ್ತು ಚೌಕಿಯ ಬಟ್ಟೆಗಳನ್ನು ನೀಡಿ.
  • ವಿಸರ್ಜನೆ ಮಾಡುವಾಗ ಈ ಅಂಶಗಳನ್ನು ನೆನಪಿನಲ್ಲಿಡಿ:

    ವಿಸರ್ಜನೆ ಮಾಡುವಾಗ ಈ ಅಂಶಗಳನ್ನು ನೆನಪಿನಲ್ಲಿಡಿ:

    • ನದಿಯಲ್ಲಿ ಅಥವಾ ಸರೋವರದಲ್ಲಿ ವಿಸರ್ಜನೆ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ತಾಯಿಯ ಪ್ರತಿಮೆಯನ್ನು ಪೂರ್ಣ ನಂಬಿಕೆಯಿಂದ ಮುಳುಗಿಸಿ. ಎಲ್ಲಾ ಪೂಜಾ ಸಾಮಾಗ್ರಿಗಳನ್ನು ಸಹ ಪವಿತ್ರ ನೀರಿನಲ್ಲಿ ಮುಳುಗಿಸಬೇಕು.
    • ಮೂರ್ತಿಯನ್ನು ವಿಸರ್ಜನೆಗಾಗಿ ತೆಗೆದುಕೊಂಡು ಹೋಗುವಾಗಅವಳನ್ನು ಕರೆತಂದ ರೀತಿಯಲ್ಲಿಯೇ ನೋಡಿಕೊಳ್ಳಿ. ವಿಸರ್ಜನೆಯ ಮೊದಲು ದೈವಿಕ ದುರ್ಗಾ ಮೂರ್ತಿಗೆ ಯಾವುದೇ ಹಾನಿ ಉಂಟಾಗಬಾರದು. ವಿಸರ್ಜನೆಗೆ ಮುನ್ನ ಸರಿಯಾದ ಆರತಿಯನ್ನು ಮಾಡಬೇಕು.
    • ಆರತಿಯನ್ನು ದುರ್ಗಾಳ ಆಶೀರ್ವಾದವಾಗಿ ಮತ್ತು ಶುದ್ಧ ಪ್ರಸಾದವಾಗಿ ಸ್ವೀಕರಿಸಬೇಕು.
    • ದುರ್ಗಾ ವಿಸರ್ಜನೆಯ ಮಹತ್ವ:

      ದುರ್ಗಾ ವಿಸರ್ಜನೆಯ ಮಹತ್ವ:

      ಹಿಂದೂ ಸಂಪ್ರದಾಯದಲ್ಲಿ ವಿಸರ್ಜನಗೆ ವಿಶೇಷ ಮಹತ್ವವಿದೆ. ವಿಸರ್ಜನೆ ಎಂದರೆ ಪರಿಪೂರ್ಣತೆ, ಜೀವನದ ಪರಿಪೂರ್ಣತೆ, ಆಧ್ಯಾತ್ಮಿಕ ಧ್ಯಾನ ಅಥವಾ ಪ್ರಕೃತಿ. ಒಂದು ಘಟಕವು ಪೂರ್ಣಗೊಂಡಾಗ, ಅದನ್ನು ಅಗತ್ಯವಾಗಿ ಮುಳುಗಿಸಬೇಕು ಅಥವಾ ವಿಸರ್ಜನೆ ಮಾಡಬೇಕು. ಈ ವಿಸರ್ಜನೆಯಿ ನವರಾತ್ರಿಯ ಒಂಬತ್ತು ದಿನಗಳು ಒಂದು ರೂಪವನ್ನು ಪೂಜಿಸುವುದಕ್ಕೆ ನಮ್ಮನ್ನು ಸೀಮಿತಗೊಳಿಸಬಾರದು ಎಂಬ ಅಂಶವನ್ನು ಸಂಕೇತಿಸುತ್ತದೆ. ತಾಯಿ ದುರ್ಗಾ ಯಾವುದೇ ರೂಪದಲ್ಲಾದರೂ ಇರಬಹುದು. ಆದರೆ, ಆಕೆಯನ್ನು ಪೂಜಿಸುವ ಆತ್ಮ ಪರಿಶುದ್ಧವಾಗಿರಬೇಕು. ಮುಕ್ತ ಮನಸ್ಸಿನಿಂದ ತಾಯಿಯನ್ನು ಪೂಜಿಸಿದರೆ, ಆಕೆ ಒಲಿಯುತ್ತಾಳೆ. ಆದ್ದರಿಂದ ದುರ್ಗಾ ಮೂರ್ತಿಯನ್ನು ವಿಸರ್ಜನೆ ಮಾಡಲಾಗುವುದು.

      ಜೊತೆಗೆ ಹೆಣ್ಣುಮಕ್ಕಳು ನವರಾತ್ರಿಯಂದು ತಮ್ಮ ಅತ್ತೆಯ ಮನೆಯಿಂದ ತಾಯಿಯ ಮನೆಗೆ ಬರುತ್ತಾರೆ ಒಂಬತ್ತು ದಿನಗಳ ನಂತರ ತಮ್ಮ ಅತ್ತೆಯ ಮನೆಗೆ ಮರಳುತ್ತಾರೆ. ಅದೇ ರೀತಿಯಲ್ಲಿ, ತಾಯಿ ದುರ್ಗಾ ಕೂಡ ತನ್ನ ತಾಯಿಯ ಮನೆಗೆ ಅಂದರೆ ಈ ಭೂಮಿಗೆ ಬರುತ್ತಾಳೆ ಮತ್ತು 9 ದಿನಗಳ ನಂತರ ತನ್ನ ಮನೆಗೆ ಅಂದರೆ ಶಿವನ ಕೈಲಾಸ ಪರ್ವತಕ್ಕೆ ತಾಯಿ ಪಾರ್ವತಿಯ ರೂಪದಲ್ಲಿ ಹೋಗುತ್ತಾಳೆ ಎಂಬ ನಂಬಿಕೆಯಿದೆ. ಅದು ವಿಸರ್ಜನೆಯ ಬಳಿಕ ಎಂಬ ನಂಬಿಕೆಯಿದೆ.

English summary

Navratri Durga Visarjan 2021: Date, Time, Rituals, Puja Vidhi and Significance

Here we talking about Navratri Durga Visarjan 2021: Date, Time, Rituals, Puja Vidhi and Significance, read on
Story first published: Wednesday, October 13, 2021, 17:56 [IST]
X
Desktop Bottom Promotion