For Quick Alerts
ALLOW NOTIFICATIONS  
For Daily Alerts

ಇವುಗಳ ಸಹಾಯದಿಂದ ನವರಾತ್ರಿ ಉಪವಾಸ ಮಾಡುವವರು ವೀಕ್‌ನೆಸ್‌ನಿಂದ ಪಾರಾಗಬಹುದು

|

ನವರಾತ್ರಿಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲರೂ ಭರದಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಕ್ಟೋಬರ್ 7 ರಿಂದ ಆರಂಭವಾಗಲಿರುವ ನವರಾತ್ರಿಯು 15 ನೇ ಅಕ್ಟೋಬರ್‌ರಂದು ಕೊನೆಗೊಳ್ಳುತ್ತದೆ. ಈ ಒಂಬತ್ತು ದಿನಗಳು ಭಕ್ತರಿಗೆ ಬಹಳ ವಿಶೇಷವಾಗಿದ್ದು, ಈ ಸಮಯದಲ್ಲಿ, ದೇವಿಯ ಅನುಗ್ರಹ ಪಡೆಯಲು, ಅವಳನ್ನು ಮೆಚ್ಚಿಸಲು ಒಂಬತ್ತು ದಿನಗಳ ಕಾಲ ಉಪವಾಸ ಮಾಡುತ್ತಾರೆ. ಉಪವಾಸದ ನಿಯಮಗಳನ್ನು ಅನುಸರಿಸಿ ಮತ್ತು ಕ್ರಮಬದ್ಧವಾಗಿ ಪೂಜಿಸುವುದರಿಂದ ದುರ್ಗಾದೇವಿಯ ವಿಶೇಷ ಅನುಗ್ರಹ ಸಿಗುತ್ತದೆ ಎಂಬ ನಂಬಿಕೆ ಭಕ್ತವರ್ಗದ್ದು.

ಆದರೆ ಉಪವಾಸ ಮಾಡುವುದರಿಂದ ಕೆಲವರಲ್ಲಿ ಅನಾರೋಗ್ಯ ಅಥವಾ ವೀಕ್‌ನೆಸ್ ಕಾಣಿಸಿಕೊಳ್ಳಬಹುದು. ಆದ್ದರಿದ ಈ ನವರಾತ್ರಿಯ ಉಪವಾಸದ ಸಮಯದಲ್ಲಿ ನಿಮ್ಮನ್ನು ಆರೋಗ್ಯವಾಗಿಡಲು, ನಿಮ್ಮ ಆಹಾರದಲ್ಲಿ ಕೆಲವೊಂದು ವಿಷಯಗಳನ್ನು ಸೇರಿಸಿಕೊಳ್ಳಬೇಕು. ಅವುಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ನವರಾತ್ರಿ ಉಪವಾಸದಂದು ಆರೋಗ್ಯಕರವಾಗಿರಲು ನಿಮ್ಮ ಆಹಾರದಲ್ಲಿ ಸೇರಿಸಕೊಳ್ಳಬೇಕಾದ ವಿಷಯಗಳನ್ನು ಈ ಕೆಳಗೆ ನೀಡಲಾಗಿದೆ:

ಖರ್ಜೂರ:

ಖರ್ಜೂರ:

ನವರಾತ್ರಿ ಉಪವಾಸದ ಸಮಯದಲ್ಲಿ, ನಿಮ್ಮ ಆಹಾರದಲ್ಲಿ ಖರ್ಜೂರವನ್ನು ಖಂಡಿತವಾಗಿ ಸೇರಿಸಬೇಕು. ಖರ್ಜೂರದಲ್ಲಿ ಕಂಡುಬರುವ ಪೋಷಕಾಂಶಗಳು ನಿಮ್ಮನ್ನು ದಿನವಿಡೀ ತಾಜಾತನದಲ್ಲಿಡಲು ಸಹಾಯ ಮಾಡುತ್ತದೆ. ಆದ್ದರಿಂದ ಖರ್ಜೂರ ಸೇವಿಸುವುದನ್ನು ಮರೆಯಬೇಡಿ

ಹಣ್ಣುಗಳು:

ಹಣ್ಣುಗಳು:

ಬಹುತೇಕ ಎಲ್ಲಾ ಕಾಲೋಚಿತ ಹಣ್ಣುಗಳು ಸೇಬು, ಕಿತ್ತಳೆ, ಬಾಳೆ, ಮಾವು ನವರಾತ್ರಿ ಸಮಯದಲ್ಲಿ ಸೇವಿಸಬಹುದು. ಈ ಎಲ್ಲಾ ಹಣ್ಣುಗಳು ನಿಮ್ಮನ್ನು ಆರೋಗ್ಯವಾಗಿಡಲು ಮಾತ್ರವಲ್ಲದೆ ಉಪವಾಸದ ಸಮಯದಲ್ಲಿ ಶಕ್ತಿಯನ್ನು ದೇಹಕ್ಕೆ ತುಂಬುತ್ತವೆ.

ಹಾಲು:

ಹಾಲು:

ಹಾಲನ್ನು ಕ್ಯಾಲ್ಸಿಯಂನ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಸಾತ್ವಿಕ ಆಹಾರದ ನಂತರ ಒಂದು ಲೋಟ ಹಾಲು ಕುಡಿಯಿರಿ. ಹಾಲು ನಿಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ಬಾಳೆಹಣ್ಣು ವಾಲ್ನಟ್ ಶೇಕ್:

ಬಾಳೆಹಣ್ಣು ವಾಲ್ನಟ್ ಶೇಕ್:

ಉಪವಾಸದ ಸಮಯದಲ್ಲಿ ನಿಮ್ಮ ಆರೋಗ್ಯ ಮತ್ತು ಶಕ್ತಿಯ ಮಟ್ಟವನ್ನು ಉತ್ತಮವಾಗಿಡಲು ವಾಲ್ನಟ್ಸ್ ಮತ್ತು ಬಾಳೆಹಣ್ಣಿನಿಂದ ಮಾಡಿದ ಶೇಕ್ ಅನ್ನು ಕುಡಿಯಬಹುದು. ಇದಕ್ಕಾಗಿ ಬಾಳೆಹಣ್ಣು, ಮಜ್ಜಿಗೆ, ವಾಲ್ ನಟ್ ಗಳನ್ನು ಮಿಕ್ಸರ್ ನಲ್ಲಿ ಹಾಕಿ ಶೇಕ್ ತಯಾರು ಮಾಡಿ. ರುಚಿಯನ್ನು ಮತ್ತಷ್ಟು ಹೆಚ್ಚಿಸಲು ಜೇನುತುಪ್ಪವನ್ನು ಸೇರಿಸಿ.

ಹುರಿದ ಮಖಾನ ತಿನ್ನಿ:

ಹುರಿದ ಮಖಾನ ತಿನ್ನಿ:

ನಿಮ್ಮ ನವರಾತ್ರಿಯ ಹಣ್ಣಿನ ಆಹಾರದಲ್ಲಿ ಹುರಿದ ಮಖಾನ ಮತ್ತು ಕಡಲೆಕಾಯಿಯನ್ನು ಸೇರಿಸಬೇಕು. ಇದಕ್ಕಾಗಿ ಮಖಾನ ಮತ್ತು ಕಡಲೆಕಾಯಿಯನ್ನು ತುಪ್ಪದಲ್ಲಿ ಹುರಿಯಿರಿ, ನಂತರ ಅದಕ್ಕೆ ಕಲ್ಲುಪ್ಪು ಸೇರಿಸಿ. ಇದು ಅದರ ರುಚಿಯನ್ನು ಹೆಚ್ಚಿಸುತ್ತದೆ. ನವರಾತ್ರಿಯಲ್ಲಿ ಹುರಿದ ಮಖಾನಾ ಅತ್ಯುತ್ತಮ ಮತ್ತು ಆರೋಗ್ಯಕರ ಹಣ್ಣಿನ ಆಹಾರವಾಗಿದೆ.

ಹುರುಳಿ ಹಿಟ್ಟಿನ ದೋಸೆ:

ಹುರುಳಿ ಹಿಟ್ಟಿನ ದೋಸೆ:

ನವರಾತ್ರಿಯ ಉಪವಾಸದ ಸಮಯದಲ್ಲಿ ಹುರುಳಿ ಹಿಟ್ಟನ್ನು ಸೇವಿಸಲಾಗುತ್ತದೆ. ಇಂತಹ ಸನ್ನಿವೇಶದಲ್ಲಿ, ಇದರಿಂದ ದೋಸೆ ಮಾಡುವ ಮೂಲಕ ತಿನ್ನಬಹುದು. ಇದನ್ನು ಕಡಿಮೆ ಎಣ್ಣೆಯಲ್ಲಿ ತಯಾರಿಸಿ. ನೀವು ಈ ದೋಸೆಯನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ತಿನ್ನಬಹುದು.

English summary

Navratri Diet Plan: Food Items to add in your Diet to avoid Weakness in Kannada

Here we talking about Navratri diet plan: food items to add in your diet to avoid weakness in Kannada, read on
Story first published: Wednesday, October 6, 2021, 19:12 [IST]
X
Desktop Bottom Promotion