For Quick Alerts
ALLOW NOTIFICATIONS  
For Daily Alerts

ನಾರದ ಜಯಂತಿ 2021: ದಿನಾಂಕ, ಶುಭಮುಹೂರ್ತ, ಪೂಜಾವಿಧಿ ಹಾಗೂ ಮುನಿಗಳ ಕುರಿತು ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು

|

ಜಗತ್ತಿನ ಮೊದಲ ಪತ್ರಕರ್ತ ಎಂಬ ಹೆಗ್ಗಳಿಕೆ ಪಾತ್ರರಾದವನು ಎಂದರೆ ಅದು ನಾರದ ಮುನಿಗಳು. ಪುರಾಣ ಕಾಲದಲ್ಲಿ ದೇವಲೋಕ, ಭೂಲೋಕ ಹಾಗೂ ಪಾತಾಳ ಲೋಕಗಳನ್ನು ಸುತ್ತಿ, ಸಂದೇಶಗಳನ್ನು ಮುಟ್ಟಿಸುತ್ತಿದ್ದವರು ಇವರು. ವಿಷ್ಣುವಿನ ಕಟ್ಟಾ ಭಕ್ತನಾಗಿದ್ದ ನಾರದರು, ಪ್ರತಿ ಯುಗದಲ್ಲೂ ಪ್ರಾಮುಖ್ಯತೆಯನ್ನು ಪಡೆದಿದ್ದಾರೆ. ಆದ್ದರಿಂದ ಹಿಂದೂಗಳು ಪ್ರತಿವರ್ಷ ದೇವತೆಗಳ ಋಷಿಯಾದ ನಾರದರ ಜನ್ಮ ವಾರ್ಷಿಕೋತ್ಸವವನ್ನು ಆಚರಿಸುತ್ತಾರೆ. ಹಾಗಾದರೆ ಈ ವರ್ಷ ನಾರದ ಜಯಂತಿ ಯಾವಾಗ ಬಂದಿದೆ? ಅದರ ಪ್ರಾಮುಖ್ಯತೆಯೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಹಿಂದೂ ಪುರಾಣದ ಪ್ರಕಾರ ನಾರದ ಯಾರು?:

ಹಿಂದೂ ಪುರಾಣದ ಪ್ರಕಾರ ನಾರದ ಯಾರು?:

ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂದೇಶ, ಮಾಹಿತಿಯನ್ನು ಒಯ್ಯುತ್ತಿದ್ದ ಈ ನಾರದ ಮುನಿಗಳು ಪರಮ ಹರಿಭಕ್ತರು. ತಮ್ಮ ಈ ಕಾಯಕದಿಂದಲೇ ದುಷ್ಟ ಶಿಕ್ಷೆ, ಶಿಷ್ಟ ರಕ್ಷಣೆಯ ಕಾರ್ಯವನ್ನು ಸಾಧಿಸುತ್ತಿದ್ದವರು.

ನಾರದರ ಬಗ್ಗೆ ಹೆಚ್ಚಿನ ಎಲ್ಲ ಪುರಾಣಗಳಲ್ಲೂ ಉಲ್ಲೇಖವಿದೆ. ರಾಮಾಯಣ ಮಹಾಭಾರತ ಭಾಗವತಗಳಲ್ಲೂ ನಾರದರು ಬರುತ್ತಾರೆ. ವಾಯು ಪುರಾಣದಲ್ಲಿ ಇವರು ಕಶ್ಯಪ ಪ್ರಜಾಪತಿಯ ಪುತ್ರ. ಮತ್ಸ್ಯ ಪುರಾಣದಲ್ಲಿ ಬ್ರಹ್ಮನ ಮಾನಸಪುತ್ರ. ಬ್ರಹ್ಮಾಂಡ ಮತ್ತು ಬ್ರಹ್ಮ ಪುರಾಣಗಳಲ್ಲಿ ಪರಮೇಷ್ಠಿ ದಕ್ಷ ಪುತ್ರಿಯ ಮಗ. ಭಾಗವತದಲ್ಲಿ ಸಾಕ್ಷಾತ್ ಬ್ರಹ್ಮನ ಮೂರನೆಯ ಅವತಾರ.

ನಾರದ' ಎಂದರೆ ‘ನಾರಂ ಜ್ಞಾನಂ ದದಾತಿ' ಅರ್ಥಾತ್ ಮನುಷ್ಯರಿಗೆ ಜ್ಞಾನವನ್ನು ಕೊಡುವವ ಎಂದರ್ಥ. ಐತರೇಯ ಬ್ರಾಹ್ಮಣದಲ್ಲಿ ಇವರು ಹರಿಶ್ಚಂದ್ರನ ಪುರೋಹಿತರಾಗಿದ್ದರು ಎಂದು ಹೇಳಲಾಗಿದೆ. ಅಘಟಿತಘಟನಾಪಟುʼ ಎಂದು ಇವರ ಪ್ರಸಿದ್ಧಿ. ಆ ದೃಷ್ಟಿಯಿಂದ ಶಂಕರ ಪಾರ್ವತಿಯರ ವಿವಾಹದಲ್ಲಿ ಇವರು ಮಧ್ಯಸ್ಥರಾಗಿ ಕೆಲಸ ಮಾಡಿದರು. ವಿಷ್ಣುವಿನ ಐದನೆಯ ಅವತಾರವಾದ ವಾಮನನ ಉಪನಯನ ಕಾರ್ಯವನ್ನೆಸಗಿದುದು, ದಕ್ಷ ನ ಶಾಪವನ್ನು ನಿಷ್ಫಲಗೊಳಿಸಲು ಇವರು ಮಾಡಿದ ಕಾರ್ಯ, ಕೃಷ್ಣಾವತಾರದ ಸಂದರ್ಭದಲ್ಲಿ ಕಂಸನ ಬಳಿಗೆ ಬಂದು ಅವನಿಗೆ ಅಂತಕನಾಗಲಿರುವ ಮಗುವಿನ ಬಗ್ಗೆ ತಿಳಿಸಿದುದೆಲ್ಲ ಈತ ಆಡಿದ ಮಹತ್ವದ ಪಾತ್ರಗಳು.

ತಂಬೂರಿ ತಾಳವನ್ನು ಹಿಡಿದುಕೊಂಡು, ಕಾಲಿಗೆ ಗೆಜ್ಜೆಗಳನ್ನು ಕಟ್ಟಿಕೊಂಡು ನಾರಾಯಣ, ನಾರಾಯಣ ಎಂದು ಹಾಡುತ್ತಾ ಕುಣಿಯುತ್ತಾ, ತ್ರಿಲೋಕ ಸಂಚಾರ ಮಾಡುತ್ತ ದೇವಮಾನವರಲ್ಲಿನ, ದೇವದೇವತೆಗಳಲ್ಲಿನ ತೊಡಕುಗಳನ್ನು ಅವರಿಗೆ ಅರ್ಥಮಾಡಿಸುತ್ತಿದ್ದ ಮುನಿಗಳಿವರು.

2021 ರ ನಾರದ ಜಯಂತಿ ದಿನಾಂಕ ಮತ್ತು ಶುಭಘಳಿಗೆ:

2021 ರ ನಾರದ ಜಯಂತಿ ದಿನಾಂಕ ಮತ್ತು ಶುಭಘಳಿಗೆ:

ದಕ್ಷಿಣ ಭಾರತದ ಕ್ಯಾಲೆಂಡರ್ ಪ್ರಕಾರ, ವೈಶಾಖ ಪೂರ್ಣಿಮೆಯ ನಂತರ ಕೃಷ್ಣ ಪಕ್ಷ ಪಾಡ್ಯದಂದು ನಾರದ ಜಯಂತಿ ಬರುತ್ತದೆ. ಆದರೆ ಉತ್ತರ ಮತ್ತು ದಕ್ಷಿಣ ಭಾರತದ ಕ್ಯಾಲೆಂಡರ್ನಲ್ಲಿ ದಿನಾಂಕ ಒಂದೇ ಆಗಿರುತ್ತದೆ. ಈ ವರ್ಷ, ನಾರದ ಜಯಂತಿಯನ್ನು 2021 ರ ಮೇ 27 ರಂದು ರಾಷ್ಟ್ರದಾದ್ಯಂತ ಆಚರಿಸಲಾಗುವುದು.

ಶುಭ ಮುಹೂರ್ತ ಪ್ರಾರಂಭ: ಸಂಜೆ 4:43, ಮೇ 26

ಶುಭ ಮುಹೂರ್ತ ಅಂತ್ಯ: ಮಧ್ಯಾಹ್ನ 1:02, ಮೇ 27

ಪೂಜಾ ಸಮಯ: ಮೇ 27 ರಂದು ಬೆಳಿಗ್ಗೆ 11:50 ರಿಂದ ಮಧ್ಯಾಹ್ನ 12:50 ರವರೆಗೆ, ಮಧ್ಯಾಹ್ನ 2:42 ರಿಂದ ಸಂಜೆ 4:07 ರವರೆಗೆ, ಮೇ 27 ಮತ್ತು 4:09 ರಿಂದ ಬೆಳಿಗ್ಗೆ 4:57 ರವರೆಗೆ, ಮೇ 28

ನಾರದ ಜಯಂತಿಯ ಪೂಜಾ ವಿಧಿ:

ನಾರದ ಜಯಂತಿಯ ಪೂಜಾ ವಿಧಿ:

- ಸೂರ್ಯೋದಯಕ್ಕೆ ಮುಂಚೆ ಎದ್ದು ಸ್ನಾನ ಮಾಡಿ.

- ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ

- ಹೂವುಗಳು, ತುಳಸಿ ಎಲೆಗಳು, ಚಂದನ, ಧೂಪದ್ರವ್ಯದ ಕಡ್ಡಿಗಳು ಮುಂತಾದ ಪೂಜಾ ಸಾಮಾಗ್ರಿಗಳನ್ನು ಸಂಗ್ರಹಿಸಿ

- ಚಂದನ ಮತ್ತು ಕುಂಕುಮದ ತಿಲಕವಿಟ್ಟು, ಹೂವುಗಳು ಮತ್ತು ತುಳಸಿ ಎಲೆಗಳನ್ನು ಅರ್ಪಿಸಿ

- ನಾರಾಯಣ ವಿಷ್ಣು ಅಚಲ ಭಕ್ತನಾಗಿದ್ದರಿಂದ ವಿಷ್ಣುವನ್ನು ಪೂಜಿಸಿ

- ವಿಷ್ಣು ಸಹಸ್ರನಾಮ ಪಠಿಸಿ

- ವಿಷ್ಣು ಆರತಿ ಮಾಡುವ ಮೂಲಕ ನಿಮ್ಮ ಪೂಜೆಯನ್ನು ಮುಕ್ತಾಯಗೊಳಿಸಿ

-ಉಪವಾಸ ಕೂಡ ಮಾಡಬಹುದು. ಉಪವಾಸ ಆಚರಿಸುವ ಭಕ್ತರು ರಾತ್ರಿ ಮಲಗಬಾರದು. ವಿಷ್ಣುವನ್ನು ಮೆಚ್ಚಿಸಲು ವಿಷ್ಣು ಮಂತ್ರಗಳನ್ನು ಪಠಿಸಬೇಕು.

ನಾರದ ಜಯಂತಿಯ ಪ್ರಾಮುಖ್ಯತೆ:

ನಾರದ ಜಯಂತಿಯ ಪ್ರಾಮುಖ್ಯತೆ:

ನಾರದ ಜಯಂತಿಯಂದು ದಾನ ಮಾಡುವುದು ಹೆಚ್ಚು ಲಾಭದಾಯಕವೆಂದು ಪರಿಗಣಿಸಲಾಗಿದೆ. ಆದ್ದರಿಂದ ಭಕ್ತರು ಬಟ್ಟೆ, ಆಹಾರ, ಹಣ ಇತ್ಯಾದಿಗಳನ್ನು ಬ್ರಾಹ್ಮಣರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡುವುದರಿಂದ ಉತ್ತಮ ಶುಭಲಾಭಗಳು ನಮ್ಮದಾಗುತ್ತದೆ ಎಂಬ ನಂಬಿಕೆಯಿದೆ.

English summary

Narada Jayanti 2021 Date, Puja Vidhi, History and Significance in kannada

Here we talking about Narada Jayanti 2021 Date, Puja Vidhi, History, Significance, read on
X
Desktop Bottom Promotion