For Quick Alerts
ALLOW NOTIFICATIONS  
For Daily Alerts

ಆಗಸ್ಟ್ 13ಕ್ಕೆ ನಾಗರಪಂಚಮಿ: ಈ ದಿನ ಮಾಡಬೇಕಾದ ಹಾಗೂ ಮಾಡಬಾರದ ಕಾರ್ಯಗಳು ಇಲ್ಲಿವೆ

|

ಶ್ರಾವಣ ಮಾಸದ ಮೊದಲ ಹಬ್ಬ ಎಂದರೆ ಅದು ನಾಗರಪಂಚಮಿ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಪ್ರತಿ ವರ್ಷ ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ವರ್ಷ ನಾಗರ ಪಂಚಮಿ ಆಗಸ್ಟ್ 13ರಂದು ಬಂದಿದ್ದು, ದೇಶದಾದ್ಯಂತ ಬಹಳ ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸುತ್ತಾರೆ.

ಇದು ಹಿಂದೂ ಧರ್ಮದ ಮಹತ್ವದ ದಿನಗಳಲ್ಲಿ ಒಂದಾಗಿದ್ದು, ತಮ್ಮೆಲ್ಲಾ ನಾಗದೋಷಗಳಿಂದ ಮುಕ್ತಿ ಪಡೆಯಲು ಈ ದಿನ, ನಾಗ ದೇವತೆಯನ್ನು ಪೂಜಿಸಬೇಕು. ಈ ದಿನ ಸರ್ಪಗಳಿಗೆ ಹಾಲನ್ನು ಅರ್ಪಿಸಿ, ತಮ್ಮ ಹಾಗೂ ಕುಟುಂಬದ ಮೇಲೆ ನಾಗನ ಆಶೀರ್ವಾದವಿರಲಿ ಎಂದು ಬೇಡಿಕೊಳ್ಳಬೇಕು ಎಂಬುದು ಧಾರ್ಮಿಕ ದೃಷ್ಟಿಕೋನವಾಗಿದ್ದರೆ, ಭೂಮಿಯ ಮೇಲಿನ ಎಲ್ಲಾ ಜೀವಗಳನ್ನು ಪ್ರೀತಿಸುವುದು, ಗೌರವಿಸುವುದು ಹಾಗೂ ಸಾಮರಸ್ಯದ ಜೀವನ ನಡೆಸಬೇಕು ಎಂಬುದು ಇದರ ಹಿಂದಿರುವ ತಾತ್ಪರ್ಯವಾಗಿದೆ.

ಸರ್ಪದ ಮೇಲಿನ ಭಕ್ತಿ ವಿಶೇಷವಾಗಿದ್ದು, ಇದರ ಪೂಜೆಗೆ ಕೆಲವೊಂದು ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕು. ಸ್ವಲ್ಪ ಎಡವಟ್ಟು ಆದರೂ ನಾಗದೋಷ ಸುತ್ತಿಕೊಳ್ಳುವುದು ಎಂಬ ಭಯ ಕೆಲವರಲ್ಲಿದೆ. ಆದ್ದರಿಂದ ನಾಗರ ಪಂಚಮಿಯಂದು ಯಾವುದನ್ನು ಮಾಡಿದರೆ ಒಳಿತು, ಯಾವುದನ್ನು ಮಾಡಬಾರದು ಎಂಬ ವಿಷಯಗಳನ್ನು ಈ ಕೆಳಗೆ ವಿವರಿಸಲಾಗಿದೆ:

ನಾಗದೇವತೆಗೆಳ ಆಶೀರ್ವಾದಕ್ಕಾಗಿ ನಾಗರ ಪಂಚಮಿಯಂದು ಮಾಡಬೇಕಾದ ಕೆಲಸಗಳು ಹೀಗಿವೆ:

ಉಪವಾಸ ಮಾಡಿ:

ಉಪವಾಸ ಮಾಡಿ:

ನಾಗರ ಪಂಚಮಿಯಂದು ಉಪವಾಸವನ್ನು ಮಾಡಿ ಏಕೆಂದರೆ ಇದು ಹಾವಿನ ಕಡಿತದ ಅಪಾಯದಿಂದ ರಕ್ಷಿಸುತ್ತದೆ. ಯಾವುದೇ ಆಹಾರ ಸೇವಿಸದೇ, ಶ್ರದ್ಧೆ ಹಾಗೂ ಭಕ್ತಿಯಿಂದ ಉಪವಾಸ ಕೈಗೊಂಡರೆ, ಹಾವು ಕಚ್ಚಬಹುದು ಎಂಬ ಭಯವೂ ಸಜ ನಿಮ್ಮಿಂದ ದೂರವಾಗುವುದು.

ಪೂಜೆ ಮಾಡಿ:

ಪೂಜೆ ಮಾಡಿ:

ನಾಗ ದೇವರುಗಳಿಗೆ ಹಾಲು, ಸಿಹಿ, ಹೂವುಗಳನ್ನು ಅರ್ಪಿಸಿ, ಪೂಜೆ ಮಾಡಿ. ಇಲ್ಲಿ ಒಂದು ವಿಚಾರ ನೆನಪಿಡಿ, ಹಾಲನ್ನು ಸರ್ಪಗಳ ಹುತ್ತಗಳಿಗೆ ಸುರಿಯುವ ಬದಲು, ಅರ್ಪಿಸಿದರೆ ಉತ್ತಮ. ನೀವು ಹಾಲನ್ನು ಹುತ್ತದ ಒಳಗೆ ಸುರಿಯುವುದರಿಂದ ಹಾವಿಗೂ ಕಷ್ಟವಾಗುವುದು. ಆದ್ದರಿಂದ ಮಣ್ಣಿನ ಮೂರ್ತಿಗೆ ಅಥವಾ ಹಾವಿನ ಲೋಹದ ಶಿಲ್ಪಕ್ಕೆ ಹಾಲನ್ನು ಅರ್ಪಿಸಿ. ಸಾಂಕೇತಿಕವಾಗಿ, ಹಾವುಗಳಿಗೆ ಹಾಲನ್ನು ನೀಡುವುದರಿಂದ ನಾವು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಇರಲು ಕಲಿಯಬೇಕು ಎಂದು ಸೂಚಿಸುತ್ತದೆ.

ರುದ್ರಾಭಿಷೇಕ ಮಾಡಿ:

ರುದ್ರಾಭಿಷೇಕ ಮಾಡಿ:

ನಾಗರ ಪಂಚಮಿ ದಿನದಂದು ರುದ್ರಾಭಿಷೇಕ ಮಾಡಿ. ಶ್ರಾವಣ ಮಾಸದಲ್ಲಿ ಶಿವನನ್ನು ಮೆಚ್ಚಿಸಲು ಮತ್ತು ಆತನ ಆಶೀರ್ವಾದ ಪಡೆಯಲು ಇದು ಒಂದು ಉತ್ತಮ ಮಾರ್ಗವಾಗಿದೆ. ಆದಾಗ್ಯೂ, ನಂಬಿಕೆ ಮತ್ತು ಭಕ್ತಿ ಅತ್ಯಂತ ಮುಖ್ಯವಾದುದು, ಕೇವಲ ಆಚರಣೆಗಳಲ್ಲ ಎಂಬುದನ್ನು ನೆನಪಿಡಿ.

ಮಂತ್ರಗಳನ್ನು ಪಠಿಸಿ:

ಮಂತ್ರಗಳನ್ನು ಪಠಿಸಿ:

ನಾಗರ ಪಂಚಮಿಯಂದು ನಾಗದೇವನಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸಿ. ಜೊತೆಗೆ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಿ. ದೇವಸ್ಥಾನಗಳಿಗೆ ಭೇಟಿ ನೀಡಿ ಅಥವಾ ಮನೆಯಲ್ಲಿಯೇ ನಾಗದೇವರ ಪೂಜೆ ಮಾಡಿ, ಮಂತ್ರಗಳನ್ನು ಪಠಿಸಿ. ಉಪವಾಸ ಕೈಗೊಂಡು, ಮಂತ್ರ ಪಠಿಸಿದರೆ ಉತ್ತಮ.

ನಾಗರ ಪಂಚಮಿ ದಿನದಂದು ಈ ಕೆಲಸಗಳನ್ನು ಮಾಡಬೇಡಿ:

ನಾಗರ ಪಂಚಮಿ ದಿನದಂದು ಈ ಕೆಲಸಗಳನ್ನು ಮಾಡಬೇಡಿ:

  • ನಾಗ ಪಂಚಮಿ ದಿನದಂದು ಭೂಮಿಯನ್ನು ಉಳುಮೆ ಮಾಡಬೇಡಿ ಏಕೆಂದರೆ ಅದು ಭೂಮಿಯಲ್ಲಿ ವಾಸಿಸುವ ಹಾವುಗಳಿಗೆ ಹಾನಿ ಮಾಡಬಹುದು ಅಥವಾ ಸಾವಿಗೆ ಕಾರಣವಾಗಬಹುದು.
  • ಈ ದಿನ ಮರಗಳನ್ನು ಕತ್ತರಿಸಬೇಡಿ ಏಕೆಂದರೆ ಅದು ಮರದ ಮೇಲೆ ವಾಸಿಸುವ ಸರ್ಪಗಳಿಗೆ ಹಾನಿಯಾಗಿರಬಹುದು.
  • ನಾಗರ ಪಂಚಮಿಯಂದು ಕಬ್ಬಿಣದ ಪಾತ್ರೆಯಲ್ಲಿ ಆಹಾರವನ್ನು ತಯಾರಿಸಬೇಡಿ.
  • ಈ ದಿನದಂದು, ಆಹಾರಕ್ಕೆ ಒಗ್ಗರಣೆ ಹಾಕಬಾರದು ಎಂಬ ಪದ್ಧತಿಯೂ ಹಳ್ಳಿಕಡೆಗಳಲ್ಲಿ ಇದೆ.
  • ನಾಗ ಪಂಚಮಿಯ ದಿನ ಸೂಜಿ ಅಥವಾ ಯಾವುದೇ ಚೂಪಾದ ವಸ್ತುವನ್ನು ಬಳಸುವುದನ್ನು ತಪ್ಪಿಸಬೇಕು.
  • ಯಾವುದೇ ಹಾವುಗಳಿಗೆ ಅಥವಾ ಇತರ ಯಾವುದೇ ಜೀವಿಗಳಿಗೆ ಹಾನಿ ಮಾಡಬೇಡಿ.
  • ಯಾರೊಂದಿಗೂ ಜಗಳವಾಡಬೇಡಿ.
English summary

Nag Panchami 2021: Nag Panchami Do's and Don'ts in Kannada

Here we talking about Nag Panchami 2021: Nag Panchami Do's and Don'ts in kannada, read on
X
Desktop Bottom Promotion