For Quick Alerts
ALLOW NOTIFICATIONS  
For Daily Alerts

'ಮಾನವನ ಮುಖ' ದೊಂದಿಗೆ ಜನಿಸಿದ ರೂಪಾಂತರಿತ ಕರು

|

ಜಗತ್ತಿನಲ್ಲಿ ನಿತ್ಯ ಹಲವು ಅಚ್ಚರಿಗಳು ನಡೆಯುತ್ತಲೇ ಇರುತ್ತದೆ. ಆದರೆ ಕೆಲವು ವಿಚಿತ್ರಗಳು ಮಾತ್ರ ನಂಬಲು, ಊಹಿಸಲು ಅಸಾಧ್ಯವಾದ ಘಟನೆಗಳಾಗಿರುತ್ತದೆ.

ಹಸುವಿಗೆ ಮೂರು ಕಣ್ಣಿನ, ಕಾಲಿನ ಕರು ಹುಟ್ಟುವುದು, ಎರಡು ತಲೆಯ ಕರು, ಐದು ಕಾಲಿನ ಕರು ಹೀಗೆ ಹಲವು ವಿಚಿತ್ರಗಳನ್ನು ನಾವು ಕೇಳಿದ್ದೇವೆ. ಆದರೆ ಹಸುವಿಗೆ ಮನುಷ್ಯನ ಮುಖದ ಆಕೃತಿ ಊಹಿಸಲು ಸಾಧ್ಯವಿಲ್ಲ.

ಅಚ್ಚರಿಯೆನಿಸಿದರೂ ನಂಬಲೇಬೇಕು, ಅರ್ಜೆಂಟಿನಾದಲ್ಲಿ ಇಂತಹ ವಿಚಿತ್ರಕ್ಕೆ ಕರುವೊಂದು ಸಾಕ್ಷಿಯಾಗಿದೆ. ಉತ್ತರ ಅರ್ಜೆಂಟೀನಾದ ದೂರದ ಹಳ್ಳಿಯಲ್ಲಿ 'ಮಾನವ ಮುಖ' ದೊಂದಿಗೆ ಜನಿಸಿದ ರೂಪಾಂತರಿತ ಕರು ರೈತರನ್ನು ದಿಗ್ಭ್ರಮೆಗೊಳಿಸಿದೆ.

mutanat cow

ಹೌದು, ಇತ್ತೀಚೆಗೆ ಮನುಷ್ಯನ ಮುಖವನ್ನೆ ಹೋಲುವ ಕರುವೊಂದು ಉತ್ತರ ಅರ್ಜೆಂಟಿನಾದ ವಿಲ್ಲಾ ಅನಾ ಎಂಬ ಪ್ರದೇಶದ ರೈತನ ಮನೆಯಲ್ಲಿ ಜನಿಸಿದೆ. ಹುಟ್ಟಿದ ಕೂಡಲೇ ಸ್ಥಳೀಯರು ಮಾಡಿರುವ ಕರುವಿನ ಚಲನ-ವಲನದ ವಿಡಿಯೋ ನಿಜಕ್ಕೂ ವಿಚಿತ್ರವೆನಿಸುತ್ತದೆ. ಈ ಕರುವಿನ ಫೋಟೋ ಹಾಗೂ ವೀಡಿಯೋ ವೈರಲ್ ಆಗಿದೆ.

ಬಿಳಿ ಬಣ್ಣದ ಮುಖ ಇರುವ ಈ ಕರುವಿಗೆ ಚಿಕ್ಕದಾಗ ಮೂಗು, ದಪ್ಪದಾದ ಎರಡು ಕಣ್ಣುಗಳು, ಅಗಲದ ಬಾಯಿ ಹೊಂದಿದ್ದು ಮನುಷ್ಯನ ಮುಖವನ್ನೇ ಹೋಲುತ್ತದೆ. ದುರದೃಷ್ಟವೆಂದರೆ ಈ ಕರುವಿಗೆ ಮನುಷ್ಯನ ಆಕೃತಿಯ ತಲೆಯೇ ಭಾರವಾಗಿತ್ತು, ಅದ್ದರಿಂದಲೇ ಹುಟ್ಟಿದ ಕೆಲವೇ ಗಂಟೆಗಳಲ್ಲಿ ಕರು ತನ್ನ ತಲೆಯ ಭಾರವನ್ನು ತಾಳಲಾರದೆ ಸಾವನ್ನಪ್ಪಿದೆ.

ರೂಪಾಂತರ ಜನನಕ್ಕೆ ಕಾರಣ

ಕರು ತಾಯಿಯ ಹೊಟ್ಟೆಯಲ್ಲಿರುವಾಗಲೇ ತಲೆಬುರುಡೆ ವಿರೂಪಗೊಂಡ ಕಾರಣ ಕರುವಿನ ಮುಖ ಹೀಗಾಗಿರಬಹುದು ಎಂದು ಸ್ಥಳೀಯರು ತಜ್ಞರು ಅಂದಾಜಿಸಿದ್ದಾರೆ.

ಆದರೆ ಜೆನೆಟಿಕ್ಸ್ ತಜ್ಞ ನಿಕೋಲಾಸ್ ಮ್ಯಾಗ್ನಾಗೊ ಅವರು, ಅಪರೂಪದ ಆನುವಂಶಿಕ ರೂಪಾಂತರದ ಪರಿಣಾಮದಿಂದ ಕರು ಹೀಗೆ ಹುಟ್ಟಿದೆ. ಇದಕ್ಕೆ ಹಸುವಿನ ದೈಹಿಕ, ರಾಸಾಯನಿಕ, ಜೈವಿಕ ಪರಿಣಾಮಗಳು ಇದಕ್ಕೆ ಪ್ರೇರಣೆ ನೀಡಿರಬಹುದು ಎಂದು ಹೇಳಿದ್ದಾರೆ.

2017ರಲ್ಲೂ ಇಂತಹ ವಿಸ್ಮಯ ನಡೆದಿತ್ತು

ವಿಶೇಷವೆಂದರೆ ಮಾನವ ಮುಖ ಹೋಲುವ ಕರು ಜನಿಸಿದ್ದು ಇದೇ ಮೊದಲೇನಲ್ಲ. 2017ರಲ್ಲೂ ಭಾರತದ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಮಾನವನ ಮುಖ ಹೊಂದಿದ್ದ ಕರು ಜನಿಸಿತ್ತು, ಇದೂ ಸಹ ಹುಟ್ಟಿದ ಕೆಲವೇ ಗಂಟೆಗಳಲ್ಲಿ ಅಸುನೀಗಿತ್ತು. ಆದರೆ ಸ್ಥಳೀಯರು ದೈವೀ ಸ್ವರೂಪವೆಂದು ಪೂಜೆ- ಪುನಸ್ಕಾರ ಮಾಡಿ ಅಂತ್ಯಸಂಸ್ಕಾರ ಮಾಡಿದ್ದರು.

English summary

Mutated Calf Born with 'Human Face' Stuns Farmers

A MUTANT calf which was born with an eerie-looking "human face" has been captured on a bizarre video. The beast - born with a small nose and mouth - was filmed by shocked locals in Villa Ana in the north of Argentina.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more