Just In
- 25 min ago
ರನ್ನಿಂಗ್ vs ಸೈಕ್ಲಿಂಗ್:ಬೇಗ ತೂಕ ಕಡಿಮೆಯಾಗಲು ಯಾವುದು ಒಳ್ಳೆಯದು?
- 4 hrs ago
Today Rashi Bhavishya: ಶನಿವಾರದ ದಿನ ಭವಿಷ್ಯ: ಕನ್ಯಾ, ವೃಶ್ಚಿಕ, ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ
- 12 hrs ago
ಮಳೆಗಾಲದಲ್ಲಿ ಉಲ್ಬಣವಾಗುವ ಅಸ್ತಮಾ ನಿಯಂತ್ರಣಕ್ಕೆ ಇಲ್ಲಿವೆ ಟಿಪ್ಸ್
- 16 hrs ago
ಮಳೆಗಾಲದಲ್ಲಿ ಗರ್ಭಿಣಿಯರ ಆಹಾರ ಕ್ರಮ ಹೀಗಿದ್ದರೆ ಉತ್ತಮ
Don't Miss
- News
ಮಿಂಟೋ ಕಣ್ಣಾಸ್ಪತ್ರೆ ದುರಂತ: ಔಷಧ ಕಂಪನಿ ನಿರ್ದೇಶಕರು ಖುಲಾಸೆ
- Sports
IPL 2022: ಚೆನ್ನೈ ವಿರುದ್ಧ ಗೆದ್ದದ್ದು ರಾಜಸ್ಥಾನ್; ದೊಡ್ಡ ಹೊಡೆತ ಬಿದ್ದದ್ದು ಕೆಎಲ್ ರಾಹುಲ್ ಪಡೆಗೆ!
- Automobiles
ಭಾರತದಲ್ಲಿ 2022ರ ರೇಂಜ್ ರೋವರ್ ಸ್ಪೋರ್ಟ್ ಬುಕಿಂಗ್ ಆರಂಭಿಸಿದ ಲ್ಯಾಂಡ್ ರೋವರ್
- Movies
ಕಾನ್ ಫೆಸ್ಟಿವಲ್ ಬಗ್ಗೆ ಕಿರುತೆರೆ ನಟಿ ಶ್ವೇತಾ ಬಸು ಪ್ರಸಾದ್ ಅಸಮಾಧಾನ
- Technology
ಕಡಿಮೆ ಬೆಲೆಯಲ್ಲಿ ಆಕರ್ಷಕ ಪ್ರಯೋಜನ ಪಡೆದ ಟಾಪ್ ಏರ್ಟೆಲ್ ಪ್ಲ್ಯಾನ್ಗಳು!
- Finance
ಮೇ 20ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Education
ESIC Karnataka Recruitment 2022 : 5 ಸಹಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎಲ್ಲರಿಗಿಂತ, ಈ ರಾಶಿಯ ತಾಯಂದಿರು ಹೆಚ್ಚು ಎಮೋಷನಲ್ ಆಗಿರ್ತಾರಂತೆ
ಸಾಮಾನ್ಯವಾಗಿ ತಾಯಿ ಎಂದರೆ, ಮಮತೆ, ಕರುಣೆ ಭಾವನೆಗಳ ಆಗರವಾಗಿರುತ್ತಾಳೆ. ತನ್ನ ಮಕ್ಕಳಿಗಾಗಿ ಸರ್ವಸ್ವವನ್ನು ತ್ಯಾಗ ಮಾಡುವ ತ್ಯಾಗಮಯಿ ತಾಯಿ. ಆದರೆ, ಎಲ್ಲಾ ತಾಯಂದಿರು ಮಗುವಿನೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಹೊಂದಿರುವುದಿಲ್ಲ. ಮಗು ಹಾಗೂ ತಮ್ಮೊಡನೆ ಸಣ್ಣದೊಂದು, ಸೇತುವೆ ನಿರ್ಮಿಸಿ, ಆಕೆಯ ಭಾವನೆಗಳು ಆ ಗೆರೆ ದಾಟಿ ಹೋಗದಂತೆ ನಿರ್ಬಂಧಿಸುತ್ತಾಳೆ.
ಆದರೆ, ಮಗುವಿನೊಂದಿಗೆ ಭಾವನಾತ್ಮಕ ಸಂಪರ್ಕ ಬೆಳೆಸುವುದು ಅಗತ್ಯವಾಗಿದೆ. ಏಕೆಂದರೆ, ಇದು ಮಗುವಿನ ಭಾವನಾತ್ಮಕ ಬೆಳವಣಿಗೆಗೆ ಅಡ್ಡಿಯುಂಟಾಗಬಹುದು. ಆದರೆ, ಈ ರಾಶಿಯ ತಾಯಂದಿರು ತಮ್ಮ ಮಕ್ಕಳೊಡನೆ ಭಾವನೆಗಳನ್ನು ಹಂಚಿಕೊಳ್ಳಲು ಹೆದರುವುದಿಲ್ಲವಂತೆ, ಅದು ಅಳು, ಸಂತೋಷ, ದುಃಖ ಏನೇ ಇರಲಿ, ಸುಗಮವಾಗಿ ಹಂಚಿಕೊಳ್ಳುತ್ತಾರಂತೆ. ಹಾಗಾದರೆ, ಆ ರಾಶಿಗಳಾವುವು ಎಂಬುದನ್ನು ನೋಡೋಣ.

ಮೇಷ ರಾಶಿ:
ಈ ಬೆಂಕಿಯ ರಾಶಿಯು ಅನಿರೀಕ್ಷಿತವಾಗಿ ಉರಿಯುವುದಕ್ಕೆ ಹೆಸರುವಾಸಿಯಾಗಿದ್ದರೂ, ಕೋಪವು ಸಹ ಒಂದು ಭಾವನೆಯಾಗಿದೆ ಎಂಬುದನ್ನು ನಾವು ಮರೆಯಬಾರದು. ಮೇಷ ರಾಶಿಯವರಿಗೆ ಕೋಪ ಬರುವುದು ಬೇಗ, ಅದೇ ರೀತಿ ಭಾವನೆಗಳಿಗೆ ಕರಗುವುದು ಬೇಗ. ಆದ್ದರಿಂದ, ಮೇಷ ರಾಶಿಯೊಂದಿಗೆ ಎಂದಿಗೂ ಶತ್ರುತ್ವ ಬೆಳೆಸಬಾರದು. ಅವರು ದ್ವೇಷಿಸುವುದು ವಿರಳ, ಏಕೆಂದರೆ, ಪ್ರೀತಿಯನ್ನೇ ಇಷ್ಟಪಡುತ್ತಾರೆ. ಮೇಷ ರಾಶಿಯ ತಾಯಂದಿರು ಕೋಪಿಷ್ಟರಾಗಿಬಹುದು ಆದರೆ ಅವರು ಅತ್ಯಂತ ಪ್ರೀತಿಯ ಮತ್ತು ರಕ್ಷಣಾತ್ಮಕ ವ್ಯಕ್ತಿಗಳಲ್ಲಿ ಒಬ್ಬರು.

ಕರ್ಕ ರಾಶಿ:
ಕರ್ಕಾಟಕ ರಾಶಿಯವರು ಚಂದ್ರನಿಂದ ಆಳಲ್ಪಡುತ್ತಾರೆ, ಇದು ಸಹಜವಾಗಿ ಭಾವನಾತ್ಮಕ ಭಾಗಕ್ಕೆ ಸಂಬಂಧಿಸಿದೆ. ಈ ರಾಶಿಯ ತಾಯಂದಿರು ಭಾವನೆಗಳನ್ನು ಸರಿಯಾದ ಮಟ್ಟದಲ್ಲಿ ಇಟ್ಟುಕೊಂಡಿರುತ್ತಾಳೆ. ತನ್ನ ಭಾವನೆಗಳನ್ನು ತನ್ನ ಮಕ್ಕಳ ಮುಂದೆ ಅಥವಾ ಯಾರ ಮುಂದೆಯೂ ವ್ಯಕ್ತಪಡಿಸುವುದನ್ನು ಬಿಡುವುದಿಲ್ಲ.

ಸಿಂಹ ರಾಶಿ:
ಸಿಂಹವು ಪ್ರಾಯೋಗಿಕ ಮನಸ್ಥಿತಿಯುಳ್ಳವರಾಗಿದ್ದರೂ ಸಹ, ಇವರು ಬಲವಾದ ಭಾವನೆಗಳನ್ನು ಹೊಂದಿರುತ್ತಾರೆ. ಆ ಭಾವನೆಗಳನ್ನು ಅವರಿಗೆ ಸರಿಹೊಂದುವಂತಹ ಜನರ ಮುಂದೆ ಮುಕ್ತವಾಗಿ ವ್ಯಕ್ತಪಡಿಸುತ್ತಾರೆ. ಮಕ್ಕಳ ವಿಷಯಕ್ಕೆ ಬಂದಾಗ, ಸಿಂಹ ರಾಶಿಯ ತಾಯಂದಿರು ರಕ್ಷಣಾತ್ಮಕ, ಪ್ರಾಬಲ್ಯ ಮತ್ತು ಅತ್ಯಂತ ಭಾವನಾತ್ಮಕ ಮನೋಭಾವದವರು. ಇದನ್ನು ಯಾವಾಗಲೂ ತೋರಿಸದಿರಬಹುದು, ಆದರೆ, ವ್ಯಕ್ತಪಡಿಸುವಾಗ, ಸಂಪೂರ್ಣ ಉತ್ಸಾಹದಲ್ಲಿರುತ್ತಾರೆ.

ವೃಶ್ಚಿಕ ರಾಶಿ:
ಈ ರಾಶಿಯವರು ಹೊರಗಿನಿಂದ ಒರಟು ಅನಿಸಿದರೂ, ತುಂಬಾ ಮೃದು ಸ್ವಭಾವದವರು. ಇವರು ಭಾವನಾತ್ಮಕವಾಗಿ ತುಂಬಾ ತೀವ್ರವಾಗಿರುತ್ತಾರೆ, ಆದರೆ, ಎಲ್ಲರೂ ಅವರ ಕೋಪವನ್ನು ಮಾತ್ರ ನೋಡಿ ಇವರಿಗೆ ಕೆಟ್ಟವರು ಎಂಬ ಹಣೆಪಟ್ಟಿ ಕೊಟ್ಟಿರುತ್ತಾರೆ. ಆದರೆ, ನಿಜವೇನೆಂದರೆ, ಅವರ ಇನ್ನೊಂದು ಮುಖವನ್ನು ಅರ್ಥ ಮಾಡಿಕೊಂಡಿರುವುದಿಲ್ಲ. ಅಲ್ಲಿ ಇವರು ತಮ್ಮನ್ನು ತಾವು ವಿರಳವಾಗಿ ವ್ಯಕ್ತಪಡಿಸುವ ಅತ್ಯಂತ ಪ್ರೀತಿಯ ಜನರು. ಅದನ್ನು ಪೂರ್ಣ ಹೃದಯದಿಂದ ಮಾಡುತ್ತಾರೆ.

ಮೀನ ರಾಶಿ:
ಅತ್ಯಂತ ಭಾವನಾತ್ಮಕ ರಾಶಿಚಕ್ರದ ಚಿಹ್ನೆಗಳಲ್ಲಿ ಒಂದಾದ ಮೀನ ರಾಶಿಯವರು ಮುಖ್ಯವಾಗಿ ಕರುಣೆ ಮತ್ತು ಸಹಾನುಭೂತಿಯುಳ್ಳವರಾಗಿದ್ದಾರೆ. ಮಕ್ಕಳೊಂದಿಗೆ ಇರುವಾಗ, ಹೇರಳವಾದ ಪ್ರೀತಿಯನ್ನು ನೀಡುತ್ತಾರೆ. ಮೀನ ರಾಶಿಯವರು ಮಂಜು ಭಾವನಾತ್ಮಕ ತಾಯಂದಿರಲ್ಲಿ ಒಬ್ಬರಾಗುತ್ತಾರೆ ಮತ್ತು ಯಾವಾಗಲೂ ತಮ್ಮ ಮಗುವಿನ ಭಾವನಾತ್ಮಕ ಭದ್ರತೆಯನ್ನು ಖಾತ್ರಿಪಡಿಸುತ್ತಾರೆ.