For Quick Alerts
ALLOW NOTIFICATIONS  
For Daily Alerts

ಹೆಚ್ಚು ಕಾಲ ಬದುಕೋ ಆಸೆ ನಿಮಗಿದ್ಯಾ?: ಇಲ್ಲಿದೆ ನೋಡಿ ಅತೀ ಹೆಚ್ಚು ಜೀವಿತಾವಧಿ ಹೊಂದಿರುವ ಜಗತ್ತಿನ 4 ದೇಶಗಳು!

|

ಯಾರು ತಾನೇ ಹೆಚ್ಚು ಕಾಲ ಬದುಕೋದಕ್ಕೆ ಬೇಡ ಅನ್ನುತ್ತಾರೆ ಹೇಳಿ? ಎಲ್ಲರೂ ಹೆಚ್ಚು ಕಾಲ ಬದುಕಲು ಇಷ್ಟಪಡುತ್ತಾರೆ. ಮನುಷ್ಯನಿಗೆ ಸಿಗುವ ಒಂದು ಜೀವನದಲ್ಲಿ ದೀರ್ಘಾವಧಿಯ ಜೀವಿತಾವಧಿಯನ್ನು ಹೊಂದಲು ಇಷ್ಟಪಡುತ್ತಾರೆ. ದೀರ್ಘಾವಧಿಯ ಜೀವಿತಾವಧಿಯನ್ನು ಹೊಂದಲು ಮನುಷ್ಯರು ವಿವಿಧ ದಾರಿಗಳನ್ನು ಕಂಡು ಹಿಡಿಯುತ್ತಾರೆ. ಎಲ್ಲರಿಗೂ ಇದು ಸಾಧ್ಯವಾಗೋದಿಲ್ಲ. ನಿಮಗೊಂದು ಗೊತ್ತಾ? ಪ್ರಕೃತಿಯು ಒಬ್ಬ ವ್ಯಕ್ತಿಗೆ 100-120 ವರ್ಷಗಳ ಸಕ್ರಿಯ ಪೂರ್ಣ ಪ್ರಮಾಣದ ಜೀವನವನ್ನು ನಿಗದಿಪಡಿಸಿದೆ.

ಆದರೆ ಈಗೀನ ಆಹಾರ ಪದ್ದತಿ, ಜೀವನಶೈಲಿಯಿಂದ ಜನರ ಜೀವಿತಾವಧಿ ಕಡಿಮೆ ಆಗುತ್ತಿದೆ. ಸದ್ಯ ಭಾರತ ಸೇರಿ ಅನೇಕ ದೇಶಗಳಲ್ಲಿ ಮನುಷ್ಯನ ಜೀವಿತಾವಧಿ ಸರಾಸರಿ 70ಕ್ಕಿಂತ ಕಡಿಮೆ ಇದೆ. ಆದರೆ ನಿಮಗೊಂದು ಗೊತ್ತಾ? ನಮ್ಮ ಜಗತ್ತಿನಲ್ಲಿ ಕೇವಲ ನಾಲ್ಕು ದೇಶಗಳು ಅಲ್ಲಿನ ಜನರಿಗೆ ದೀರ್ಘಾವಧಿಯ ಜೀವಿತಾವಧಿಯನ್ನು ನೀಡುವ ದೇಶವಾಗಿದೆ. ಈ ದೇಶಗಳನ್ನು ಬ್ಲೂ ಜೋನ್ ದೇಶಗಳು ಎಂದು ಕರೆಯುತ್ತಾರೆ. ಉತ್ತಮ ಆರೋಗ್ಯ, ಉತ್ತಮ ಜೀವನ ಪದ್ದತಿ, ಸಾಮಾಜಿಕ ಯೋಗಕ್ಷೇಮವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿ ಜನರಿಗೆ ನೀಡುತ್ತಿದೆ. ಈ ರೀತಿಯ ವ್ಯವಸ್ಥೆ ಹೊಂದಿರುವ ಕಾರಣ ಇಲ್ಲಿನ ಜನರು ಅತೀ ಹೆಚ್ಚು ದೀರ್ಘಾವಧಿಯ ಜೀವಿತಾವಧಿಯನ್ನು ಹೊಂದಿದ್ದಾರೆ. ಇಲ್ಲಿ ಸುಮಾರು 89.4 ವರ್ಷಗಳಷ್ಟು ಜೀವಿತಾವಧಿಯನ್ನು ಜನರು ಹೊಂದಿದ್ದಾರೆ ಎನ್ನುವುದು ವರ್ಲ್ಡ್ ಫ್ಯಾಕ್ಟ್‌ಬುಕ್‌ನ ಅಧ್ಯಯನ ಪ್ರಕಾರ ತಿಳಿದುಬಂದಿದೆ. ಹಾಗಾದರೆ ಈ ದೇಶಗಳು ಯಾವುವು? ಈ ದೇಶದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಜಪಾನ್!

ಜಪಾನ್!

ಜಪಾನ್ ದೇಶದ ಜನರು ಅತೀ ಹೆಚ್ಚು ಜೀವಿತಾವಧಿಯನ್ನು ಹೊಂದಿದ್ದಾರೆ. ಜಪಾನ್ ನಲ್ಲಿರುವ ಒಕಿನಾವಾ ಎನ್ನುವ ನಗರವನ್ನು ಅಮರರುಗಳ ಭೂಮಿ ಎಂದು ಕರೆಯಲಾಗುತ್ತದೆ. ಯಾಕೆಂದರೆ ಇಲ್ಲಿನ ಶೇ.88 ರಷ್ಟು ಜನರು ನೂರಕ್ಕೂ ಹೆಚ್ಚು ಕಾಲ ಬದುಕಿದ್ದರು. ಬೇರೆ ದೇಶಗಳಲ್ಲಿ ನೂರು ವರ್ಷ ಬದುಕುವ ಸಂಖ್ಯೆ ಅತೀ ಕಡಿಮೆ ಆದರೆ ಒಕಿನಾವಾದಲ್ಲಿ ಇಂತಹ ಅನೇಕ ಜನರು ಇದ್ದಾರೆ. ಇದಕ್ಕೆ ಕಾರಣ ಏನು ಎಂದರೆ ಇಲ್ಲಿನ ಜನರ ಆಹಾರ ಪದ್ದತಿ, ಜೀವನಶೈಲಿಯಾಗಿದೆ. ಅಲ್ಲದೇ ಇಲ್ಲಿನ ಜನರಿಗೆ ಆರೋಗ್ಯ ಸಮಸ್ಯೆಯೂ ಇಲ್ಲದಿರುವುದು ಅತೀ ಹೆಚ್ಚು ಕಾಲ ಬದುಕಲು ಸಹಾಯ ಮಾಡುತ್ತದಂತೆ. ಮಧುಮೇಹ, ಹೃದ್ರೋಗ ಸಮಸ್ಯೆ, ಕ್ಯಾನ್ಸರ್ ನಂತಹ ರೋಗಗಳು ಕೂಡ ಅತೀ ವಿರಳ ಎನ್ನಲಾಗಿದೆ. ಇನ್ನು ಇಳಿ ವಯಸ್ಸಿನಲ್ಲೂ ಅತ್ಯಂತ ಫಿಟ್ ಆಗಿ, ಎನರ್ಜಿಟಿಕ್ ಆಗಿ, ರೋಗ ದರ ಕೂಡ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಇನ್ನು ಒಕಿನಾವಾನ್ ಜನರ ಆನುವಂಶಿಕ ರಚನೆಯು ಉರಿಯೂತ ಮತ್ತು ಸ್ವಯಂ ನಿರೋಧಕ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಹೇಳಿವೆ. ಈ ಎಲ್ಲಾ ಕಾರಣಗಳಿಂದ ಒಕಿನಾವಾದಲ್ಲಿ 87.44 ರಷ್ಟು ಜೀವಿತಾವಧಿ ಇದೆ ಎಂದು ಅಧ್ಯಯನಗಳ ಮೂಲಕ ತಿಳಿದುಬಂದಿದೆ.

ಸ್ವಿಟ್ಜರ್ಲ್ಯಾಂಡ್!

ಸ್ವಿಟ್ಜರ್ಲ್ಯಾಂಡ್!

ಸ್ವಿಟ್ಜರ್ಲ್ಯಾಂಡ್ ದೇಶದ ಜನರು ಕೂಡ ದೀರ್ಘಾವಧಿಯ ಜೀವಿತಾವಧಿಯನ್ನು ಹೊಂದಿದ್ದಾರೆ. ಇವರು ಸರಾಸರಿ 81 ರಿಂದ 85 ರಷ್ಟು ದೀರ್ಘಾವಧಿಯ ಜೀವಿತಾವಧಿಯನ್ನು ಹೊಂದಿದ್ದಾರೆ ಎಂದು ಅಧ್ಯಯನ ತಿಳಿಸಿದೆ. ಇಲ್ಲಿನ ಜನರ ಜೀವನ ಶೈಲಿ, ಆಹಾರ ಪದ್ದತಿ, ಉತ್ತಮ ಖಾಸಗಿ ಜೀವನದಿಂದ ಇವರ ಜೀವಿತಾವಧಿ ಹೆಚ್ಚಿದೆ. ಪ್ರಮುಖವಾಗಿ ಇಲ್ಲಿನ ಆಹಾರ ಪದ್ದತಿ ಅಥವಾ ಡಯಟ್ ಇನ್ನಿತರ ದೇಶಕ್ಕೂ ಮಾದರಿಯಾಗಿದೆ. ಅಂದರೆ ಬೆಳಗ್ಗೆ ಉಪಹಾರ, ಮಧ್ಯಾಹ್ನ ಭೋಜನ, ರಾತ್ರಿ ಊಟ ಎಲ್ಲವೂ ಅತ್ಯಂತ ಅಚ್ಚುಕಟ್ಟು. ಇದಲ್ಲದೇ ಸಮಾಜಿಕವಾಗಿ ಅಂದರೆ ಸ್ವಿಟ್ಜರ್ಲೆಂಡ್‌ನಲ್ಲಿ ಉತ್ತಮ ವಸತಿ, ಉತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಮತ್ತು ಕಡಿಮೆ ನಿರುದ್ಯೋಗದಂತಹ ಅನುಕೂಲಕರ ಜೀವನ ಪರಿಸ್ಥಿತಿಗಳು ಆರೋಗ್ಯಕರ ಜೀವನಕ್ಕೆ ಇಂಬು ನೀಡುತ್ತಿದೆ. ಈ ಎಲ್ಲಾ ಕಾರಣಗಳಿಂದ ದೀರ್ಘಾವಧಿಯ ಜೀವಿತಾವಧಿಯನ್ನು ಸ್ವಿಸ್ ಮೂಲದ ಜನರು ಹೊಂದಿದ್ದಾರೆ.

ಸಿಂಗಾಪುರ!

ಸಿಂಗಾಪುರ!

ಸಿಂಗಾಪುರ ಜನರು ಕೂಡ ಅತೀ ಹೆಚ್ಚು ಜೀವಿತಾವಧಿಯನ್ನು ಹೊಂದಿದ ದೇಶವಾಗಿದೆ. ಸಿಂಗಾಪೂರದಲ್ಲಿ ಒಬ್ಬ ವ್ಯಕ್ತಿ ಅತೀ ಹೆಚ್ಚು ಕಾಲ ಬದುಕಬಹುದು ಅದಕ್ಕೆ ಕಾರಣ ಅಲ್ಲಿರುವ ವೈದ್ಯಕೀಯ ವ್ಯವಸ್ಥೆಗಳು. ಅಲ್ಲದೇ ಉತ್ತಮ ಶಿಕ್ಷಣ, ಆಹಾರ, ಆರೋಗ್ಯ ಮತ್ತು ಕೆಲಸದ ಅವಕಾಶಗಳಿಂದಾಗಿ ಇಲ್ಲಿನ ಜನರ ಜೀವನ ಗುಣಮಟ್ಟ ಹೆಚ್ಚಿದೆ. ಇಲ್ಲಿ ಜನರ ಜೀವಿತಾವಧಿ ಸರಾಸರಿ 81 ರಿಂದ 85 ರಷ್ಟಿದೆ. ಇನ್ನು ಇಲ್ಲಿನ ವೈದ್ಯಕೀಯ ಸೇವೆಯೂ ಜನರ ಪಾಲಿಗೆ ವರದಾನವಾಗಿದೆ. ಪ್ರತಿಯೊಬ್ಬರಿಗೂ ಆರೋಗ್ಯ ಸೇವೆ ಎನ್ನುವ ಧ್ಯೇಯ ವಾಕ್ಯದೊಂದಿಗೆ ಪ್ರತಿಯೊಬ್ಬ ಪ್ರಜೆಗೂ ವೈದ್ಯಕೀಯ ಸೇವೆ ನೀಡಲಾಗುತ್ತಿದೆ. ಅಲ್ಲದೇ ಮನುಷ್ಯ ಆರೋಗ್ಯರ ಜೀವನವನ್ನು ಹೊಂದಬೇಕು ಎನ್ನುವ ಉದ್ದೇಶದಿಂದ ಪ್ರತಿಯೊಂದು ಪಬ್ಲಿಕ್ ಪಾರ್ಕ್ ನಲ್ಲಿ ಜಿಮ್, ವ್ಯಾಯಾಮಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಇಲ್ಲಿನ ಸರ್ಕಾರವು ಜನರ ಜೀವಿತಾವಧಿ ವೃದ್ದಿಗೆ ಥೆರಾಪ್ಯೂಟಿಕ್ ಗಾರ್ಡನ್ ಹಾಗೂ ಪಾರ್ಕ್ ಗಳನ್ನು ನಿರ್ಮಾಣ ಮಾಡಲಾಗಿದೆ. ಈ ಗಾರ್ಡನ್ ಹಾಗೂ ಪಾರ್ಕ್ ಗಳಿಂದ ಇಲ್ಲಿನ ಜನರಿಗೆ ಒತ್ತಡ ಕಡಿಮೆಯಾಗಿ ಉತ್ತಮ ಮಾನಸಿಕ ಆರೋಗ್ಯ ದೊರೆಯುತ್ತದೆ. ಈ ಎಲ್ಲದರಿಂದ ದೀರ್ಘಾವಧಿಯ ಜೀವಿತಾವಧಿ ದೊರೆಯುತ್ತದೆ. ಅಲ್ಲದೇ ಇಲ್ಲಿ ಶಿಶು ಮರಣ ದರ ಭಾರೀ ಕಡಿಮೆ.

ದಕ್ಷಿಣ ಕೊರಿಯಾ!

ದಕ್ಷಿಣ ಕೊರಿಯಾ!

ಈ ಮೇಲಿನ ಮೂರು ದೇಶಗಳಿಗೆ ಹೋಲಿಸಿದರೆ ಅತೀ ಹೆಚ್ಚು ಹಾಗೂ ದೀರ್ಘಾವಧಿ ಜೀವಿತಾವಧಿಯನ್ನು ಹೊಂದಿದ ದೇಶ ಎಂದರೆ ಅದು ದಕ್ಷಿಣ ಕೊರಿಯಾ. ದಕ್ಷಿಣ ಕೊರಿಯಾದಲ್ಲಿನ ಜನರು ಬರೋಬ್ಬರಿ 90 ವರ್ಷಗಳ ಜೀವಿತಾವಧಿಯನ್ನು ಹೊಂದಿದ್ದಾರೆ ಎಂದು ಇತ್ತೀಚೆಗೆ ನಡೆದ ಅದ್ಯಯನದಲ್ಲಿ ತಿಳಿದುಬಂದಿದೆ. ಆರ್ಥಿಕವಾಗಿ ಮುಂದಿರುವ ಈ ಪುಟ್ಟ ದೇಶ ಎಲ್ಲರಿಗೂ ಉತ್ತಮ ವೈದ್ಯಕೀಯ ಸೇವೆ ನೀಡುತ್ತಿದೆ. ಈ ಮೂಲಕ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುವ ರಕ್ತದೊತ್ತಡ ನಿಯಂತ್ರಿಸುವ ಕೆಲಸ ಮಾಡುತ್ತಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ರಕ್ತದೊತ್ತಡ ಹೊಂದಿರುವ ಜನರ ಸಂಖ್ಯೆ ಇಲ್ಲಿ ಅತೀ ಕಡಿಮೆ. ಅಲ್ಲದೇ ಸೌತ್ ಕೊರಿಯಾ ಜನರ ಆಹಾರ ಪದ್ದತಿಗೆ ಎಲ್ಲಾ ದೇಶಗಳಿಂದ ಪ್ರಶಂಸೆ ವ್ಯಕ್ತವಾಗಿದೆ. ಯಾಕೆಂದರೆ ಇವರ ಆಹಾರ ಪದ್ದತಿ ಕೊಲೆಸ್ಟಾಲ್ ಲೆವೆಲ್, ಕ್ಯಾನ್ಸರ್ ದರ ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ. ಅಲ್ಲದೇ, ರೋಗ ನಿರೋಧಕ ಶಕ್ತಿ ಜಾಸ್ತಿ ಮಾಡುತ್ತದೆ. ಇನ್ನು ಈ ದೇಶದ ಜನರು ಬುದ್ದನ ಜೀವನವನ್ನು ಅನುಸರಿಸುವುದರಿಂದ ಆರೋಗ್ಯಕರ ಸಾಮಾಜಿಕ ಜೀವನ ನಡೆಸುತ್ತಿದ್ದಾರೆ. ಇದು ಒತ್ತಡ, ದುಗುಡ, ಇನ್ನಿತರ ಆರೋಗ್ಯ ಸಮಸ್ಯೆ, ಮಾನಸಿಕ ಆರೋಗ್ಯವನ್ನು ಉತ್ತಮವಾಗಿಡುತ್ತಿದೆ. ಇವೆಲ್ಲ ಕಾರಣಗಳು ಜೀವಿತಾವಧಿ ಹೆಚ್ಚಾಗಲು ಕಾರಣವಾಗಿದೆ.

ಆದೇನೆ ಇದ್ದರೂ ಎಲ್ಲಾ ದೇಶಗಳು ಉತ್ತಮ ಆರೋಗ್ಯ ಸೇವೆ, ಉತ್ತಮ ಸಾಮಾಜಿಕ ಭದ್ರತೆ, ಉತ್ತಮ ಜೀವನ ಶೈಲಿ, ಉತ್ತಮ ಆಹಾರ ಪದ್ದತಿ ಉತ್ತಮ ಆರೋಗ್ಯಕರ ವ್ಯವಸ್ಥೆಗಳನ್ನು ಹೊಂದಿದರೆ ಈ ದೇಶಗಳ ಜನರ ಜೀವಿತಾವಧಿ ಕೂಡ ಹೆಚ್ಚುತ್ತದೆ. ಇದಲ್ಲದೇ ಮನುಷ್ಯ ಕೂಡ ತಾನೇ ಈ ಎಲ್ಲಾ ವಿಚಾರಗಳನ್ನು ಸರಿಯಾಗಿ ಪಾಲಿಸಿದರೆ ಉತ್ತಮ ಆರೋಗ್ಯವನ್ನು ಹೊಂದಬಹುದಾಗಿದೆ.

English summary

Most Wonderful countries where people live the longest In kannada

Here we are discussing about Most Wonderful countries where people live the longest In kannada.Read more.
Story first published: Tuesday, August 9, 2022, 13:00 [IST]
X
Desktop Bottom Promotion