For Quick Alerts
ALLOW NOTIFICATIONS  
For Daily Alerts

ರುಬ್ಬುವ ಕಲ್ಲನ್ನು ಪೂಜಿಸುವ ಮಿಥುನ ಸಂಕ್ರಾಂತಿಯ ದಿನಾಂಕ, ಪೂಜಾವಿಧಿ ಹಾಗೂ ಮಹತ್ವದ ಕುರಿತು ಸಂಪೂರ್ಣ ಮಾಹಿತಿ

|

ಪ್ರತಿ ತಿಂಗಳು ಸೂರ್ಯನು ಒಂದು ರಾಶಿಚಕ್ರದಿಂದ ಇನ್ನೊಂದಕ್ಕೆ ಸಾಗುತ್ತಾನೆ. ಸೂರ್ಯನ ರಾಶಿಚಕ್ರದ ಬದಲಾವಣೆಯ ದಿನಾಂಕವನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ರೀತಿಯಾಗಿ ಒಂದು ವರ್ಷದಲ್ಲಿ 12 ಸಂಕ್ರಾಂತಿ ತಿಥಿಗಳಿವೆ. ಸೂರ್ಯ ಪ್ರವೇಶಿಸುವ ರಾಶಿಚಕ್ರದ ಪ್ರಕಾರ ಸಂಕ್ರಾಂತಿ ತಿಥಿಗೆ ಹೆಸರಿಡಲಾಗುವುದು.

ಮಕರ ರಾಶಿಗೆ ಪ್ರವೇಶಿಸಿದಾಗ, ಮಕರ ಸಂಕ್ರಾಂತಿ ಆಚರಿಸುವಂತೆ, ಸೂರ್ಯನು ಮಿಥುನ ರಾಶಿಗೆ ಪ್ರವೇಶಿಸಿದ ದಿನಾಂಕವನ್ನು ಮಿಥುನ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಈ ದಿನದಿಂದ ನಕ್ಷತ್ರ ಸ್ಥಾನಗಳಲ್ಲಿ ಮಹತ್ತರ ಬದಲಾವಣೆಯಾಗುವುದರಿಂದ ಇತರ ಸಂಕ್ರಾಂತಿಗಳಿಗಿಂತ ಹೆಚ್ಚಿನ ಮಹತ್ವ ಪಡೆದಿದೆ.

ಮಿಥುನ ಸಂಕ್ರಾಂತಿ ದಿನಾಂಕ:

ಮಿಥುನ ಸಂಕ್ರಾಂತಿ ದಿನಾಂಕ:

ಹಿಂದೂ ಕ್ಯಾಲೆಂಡರ್ ಪ್ರಕಾರ, ವರ್ಷದ ಮೂರನೇ ತಿಂಗಳಲ್ಲಿ ಸೂರ್ಯನು ಮಿಥುನ ರಾಶಿಗೆ ಪ್ರವೇಶಿಸುತ್ತಾನೆ. ಆದರೆ ಈ ಬಾರಿ ಸೂರ್ಯನು ಜೂನ್ 15 ರ ಮಂಗಳವಾರ ಮಿಥುನ ರಾಶಿಗೆ ಪ್ರವೇಶಿಸಲಿದ್ದು, ಜೂನ್ 18ರವರೆಗೆ ಅಲ್ಲಿದ್ದು, ನಂತರ ಬೇರೆ ರಾಶಿಗೆ ಸಾಗಲಿದ್ದಾನೆ. ಈ ದಿನ ಸೂರ್ಯನ ಆರಾಧನೆಯೊಂದಿಗೆ ದಾನ ಮಾಡುವುದರಿಂದ ವಿಶೇಷ ಲಾಭವಿದೆ.

ಮಿಥುನ ರಾಶಿಗೆ ಸೂರ್ಯನ ಪ್ರವೇಶ ಸಮಯ:

ಮಿಥುನ ರಾಶಿಗೆ ಸೂರ್ಯನ ಪ್ರವೇಶ ಸಮಯ:

ಹಿಂದೂ ಕ್ಯಾಲೆಂಡರ್ ಪ್ರಕಾರ, ಸೂರ್ಯನು ಜೂನ್ 15, 2021ರ ಮಂಗಳವಾರ ಬೆಳಿಗ್ಗೆ 06:17 ಕ್ಕೆ ಮಿಥುನ ರಾಶಿಗೆ ಪ್ರವೇಶಿಸಲಿದ್ದಾನೆ.

ಮಿಥುನ ಸಂಕ್ರಾಂತಿಯ ಮಹತ್ವ:

ಮಿಥುನ ಸಂಕ್ರಾಂತಿಯ ಮಹತ್ವ:

ಸಂಕ್ರಾಂತಿಗೆ ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆ ಇದ್ದು, ಒರಿಸ್ಸಾದಲ್ಲಿ ಈ ದಿನವನ್ನು ಹಬ್ಬದಂತೆ ಆಚರಿಸುತ್ತಾರೆ. ಈ ಹಬ್ಬವನ್ನು ಪ್ರಕೃತಿಯ ಬದಲಾವಣೆಯ ಸಂಕೇತವೆಂದು ಪರಿಗಣಿಸಲಾಗಿದ್ದು, ಇದು ಮಳೆಗಾಲದ ಆರಂಭದ ಸೂಚನೆಯಾಗಿದೆ. ಈ ದಿನದಂದು ದಾನ-ಸ್ನಾನ ಮತ್ತು ಸೂರ್ಯನ ಆರಾಧನೆಗೆ ಹೆಚ್ಚಿನ ಪ್ರಾಮುಖ್ಯತೆ ಇದ್ದು, ಭಕ್ತಾಧಿಗಳು ಪವಿತ್ರ ನದಿಯಲ್ಲಿ ಸ್ನಾನ ಮಾಡಿ ದಾನ ಮಾಡುತ್ತಾರೆ. ಈ ಮೂಲಕ ಸೂರ್ಯ ದೇವನ ಆಶೀರ್ವಾದ ಪಡೆಯುತ್ತಾರೆ. ಕೆಲವರು ಈ ದಿನ ಉಪವಾಸವನ್ನೂ ಮಾಡುತ್ತಾರೆ. ನಂಬಿಕೆಯ ಪ್ರಕಾರ, ಸೂರ್ಯ ದೇವನ ಅನುಗ್ರಹದಿಂದ, ಪ್ರತಿಷ್ಠೆ ಮತ್ತು ಉನ್ನತ ಸ್ಥಾನಮಾನವನ್ನು ಪಡೆಯಬಹುದು.

ಪೂಜಾವಿಧಾನ:

ಪೂಜಾವಿಧಾನ:

ಮಿಥುನ ಸಂಕ್ರಾಂತಿಯ ಹಬ್ಬವನ್ನು ನಾಲ್ಕು ದಿನಗಳವರೆಗೆ ಪೂರ್ಣ ಭಕ್ತಿ ಮತ್ತು ಸಂತೋಷದಿಂದ ಆಚರಿಸಲಾಗುತ್ತದೆ. ಈ ದಿನದಂದು ರುಬ್ಬುವ ಕಲ್ಲನ್ನು ಪೂಜಿಸಲಾಗುತ್ತದೆ. ಜನರು ಇದನ್ನು ಭೂದೇವತೆಯ ರೂಪವಾಗಿ ಪೂಜಿಸುತ್ತಾರೆ. ಈ ರುಬ್ಬುವ ಕಲ್ಲಿಗೆ ಹಾಲು ಮತ್ತು ನೀರಿನಿಂದ ತೊಳೆದು, ತದ ನಂತರ, ಹೂವು, ಅರಿಶಿನ, ಸಿಂಧೂರ ಹಾಗೂ ಶ್ರೀಗಂಧವನ್ನು ಲೇಪನೆ ಮಾಡಲಾಗುತ್ತದೆ. ನಂತರ ಸೂರ್ಯ ದೇವರನ್ನು ಆರಾಧಿಸಿ. ಮಿಥುನ ಸಂಕ್ರಾಂತಿಯ ದಿನದಂದು ದಾನ ಮಾಡುವುದಕ್ಕೂ ಹೆಚ್ಚಿನ ಮಹತ್ವವಿದೆ. ಈ ದಿನ ಬಡ ಮತ್ತು ನಿರ್ಗತಿಕ ಬ್ರಾಹ್ಮಣರಿಗೆ ದೇಣಿಗೆ ನೀಡಿದರೆ ಸೂರ್ಯದೇವ ಸಂತೋಷನಾಗುತ್ತಾನೆ ಎಂಬ ನಂಬಿಕೆಯಿದೆ.

ಈ ವಿಧಾನದೊಂದಿಗೆ ಸೂರ್ಯದೇವನನ್ನು ಮಿಥುನ ಸಂಕ್ರಾಂತಿಯಂದು ಪೂಜಿಸಿ:

ಈ ವಿಧಾನದೊಂದಿಗೆ ಸೂರ್ಯದೇವನನ್ನು ಮಿಥುನ ಸಂಕ್ರಾಂತಿಯಂದು ಪೂಜಿಸಿ:

೧. ಮಿಥುನ ಸಂಕ್ರಾಂತಿಯ ದಿನದಂದು, ಬೆಳಿಗ್ಗೆ ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು, ದೈನಂದಿನ ಚಟುವಟಿಕೆಗಳ ನಂತರ ಸ್ನಾನ ಮಾಡಿ.

೨. ನಂತರ, ತಾಮ್ರದ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು, ಅದರಲ್ಲಿ ರೋಲಿ, ಕೆಂಪು ಹೂವುಗಳನ್ನು ಹಾಕಿ ಮತ್ತು 'ಓಂ ಗ್ರೀಂ ಸೂರ್ಯ ನಮ' ಎಂಬ ಮಂತ್ರವನ್ನು ಜಪಿಸುವ ಮೂಲಕ ಸೂರ್ಯನಿಗೆ ಮುಖ ಮಾಡಿ ಅರ್ಪಿಸಿ.

೩. ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತು, ಸೂರ್ಯ ದೇವರ ಮಂತ್ರದ ಜೊತೆ ಕನಿಷ್ಠ ಒಂದು ಜಪಮಾಲೆಯನ್ನಾದರೂ ಜಪಿಸಿ ಅಥವಾ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ.

English summary

Mithun Sankranti 2021 Date, Timing, Shubh Muhrat, Importance And Puja Vidhi Of Sankranti Tithi in kannada

Here we talking about Mithun Sankranti 2021 Date, Timing, Shubh Muhrat, Importance And Puja Vidhi Of Sankranti Tithi in kannada, read on
X