For Quick Alerts
ALLOW NOTIFICATIONS  
For Daily Alerts

ನಿಮ್ಮ ಮನೆಯ ಮುಖ್ಯ ಬಾಗಿಲು ಈ ತರ ವಾಸ್ತು ಪ್ರಕಾರ ಇರಲಿ

|

ಮುಖ್ಯ ಬಾಗಿಲಿಗೆ ಉತ್ತಮ ದಿಕ್ಕನ್ನು ನೋಡುವುದಕ್ಕಿಂತ ಮೊದಲು ನೋಡಬೇಕಾದ ಮುಖ್ಯವಾದ ಕಾರ್ಯವೆಂದರೆ ಮನೆಯಲ್ಲಿರುವ ಇತರ ಬಾಗಿಲುಗಳಿಗಿಂತ ಮುಖ್ಯ ಬಾಗಿಲು ದೊಡ್ಡದಾಗಿರಬೇಕು ಮತ್ತು ಸುಂದರವಾಗಿರಬೇಕು ಎಂಬುದು. ಇದು ಗಾತ್ರದಲ್ಲಿ ವ್ಯತ್ಯಾಸವಿರಬೇಕು ಮತ್ತು ಇತರ ಬಾಗಿಲುಗಳಿಂದ ವಿಭಿನ್ನವಾಗಿರಬೇಕು.

main door

ಮನೆಯ ಮುಖ್ಯ ಬಾಗಿಲು ಮನೆ ಎಂದರೆ ಅದು ಎಲ್ಲವೂ ಪ್ರವೇಶಿಸುವ ಜಾಗ. ದೇವಿ ಲಕ್ಷ್ಮಿ ಮತ್ತು ಉತ್ತಮ ವಾಸ್ತು ಶಕ್ತಿ ಮನೆಗೆ ಪ್ರವೇಶಿಸಿದಾಗ ಅದು ಸುಂದರವಾದ ಬಾಗಿಲುಗಳನ್ನು ಇಷ್ಟಪಡುತ್ತದೆ. ಯಾಕಂದರೆ ಮನುಷ್ಯರಾದ ನಾವುಗಳು ಸಹ ಮೊದಲು ಇಷ್ಟ ಪಡುವುದು ಮುಖವನ್ನೇ ತಾನೇ? ಅದೇ ರೀತಿ ಈ ಶಕ್ತಿಗಳು ಕೂಡ. ಹಾಗಾಗಿ ಈ ಬಾಗಿಲು ವಾಸ್ತು ಪ್ರಕಾರ ಹೇಗಿರಬೇಕು? ಯಾವ ದಿಕ್ಕಿನಲ್ಲಿದ್ದರೆ ಉತ್ತಮ? ಇಂತಹ ಹಲವಾರು ಪ್ರಶ್ನೆಗಳಿಗೆ ನಾವು ಈ ಲೇಖನದ ಮೂಲಕ ಉತ್ತರ ನೋಡಿದ್ದೇವೆ.

ಬಾಗಿಲನ್ನು ಚಿಹ್ನೆಯೊಂದಿಗೆ ಸುಂದರಗೊಳಿಸಿ:

ಬಾಗಿಲನ್ನು ಚಿಹ್ನೆಯೊಂದಿಗೆ ಸುಂದರಗೊಳಿಸಿ:

ಮುಖ್ಯ ಬಾಗಿಲ ಮೇಲೆ ತೆಂಗಿನಕಾಯಿಯ ಕಲಶ ಚಿಹ್ನೆ, ಮನೆಯ ಕಡೆಗೆ ತೋರಿಸುವ ಲಕ್ಷ್ಮಿಯ ಚರಣ (ಅಡಿ), ಸ್ವಸ್ತಿಕ್ ಚಿಹ್ನೆ, ರಿದ್ಧಿ-ಸಿದ್ದಿ, ಶುಭ ಲಾಭಗಳನ್ನು ಸೂಚಿಸುವ ಚಿಹ್ನೆಗಳಿಂದ ಕೂಡಿರುವಂತೆ ನೋಡಿಕೊಳ್ಳಿ. ರಿದ್ದಿ, ಸಿಧಿ ಗಣೇಶನ ಇಬ್ಬರು ಹೆಂಡತಿಯರು ಮತ್ತು ಶುಭ ಲಾಭಗಳು ಆತನ ಇಬ್ಬರು ಮಕ್ಕಳು ಎಂಬ ನಂಬಿಕೆಯಿದೆ. ತೋರಣ ಮತ್ತು ಭಂಡಾರ ಮುಖ್ಯ ಬಾಗಿಲಿಗೆ ಉತ್ತಮ ಆಭರಣವಾಗಿದ್ದು, ಇದು ಅದೃಷ್ಟವನ್ನು ಆಹ್ವಾನಿಸುತ್ತದೆ ಮತ್ತು ಕೆಟ್ಟ ಶಕ್ತಿಗಳನ್ನು ನಿವಾರಿಸುತ್ತದೆ.

ಬಾಗಿಲ ಹೊರಗೆ ದೀಪ ಬೆಳಗಿಸಿ:

ಬಾಗಿಲ ಹೊರಗೆ ದೀಪ ಬೆಳಗಿಸಿ:

ಬಾಗಿಲಿನ ಹೊರಗೆ ದೀಪವನ್ನು ಬೆಳಗಿಸುವುದು ಉತ್ತಮ ಅಭ್ಯಾಸ. ಇದನ್ನು ಸೂರ್ಯಾಸ್ತದ ಸಮಯದಲ್ಲಿ ಮಾಡಬೇಕು. ಈ ಅಭ್ಯಾಸವು ಮನೆಗೆ ಬರುವ ಋಣಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ . ಇದು ದುಷ್ಟ ಶಕ್ತಿಗಳ ವಿರುದ್ಧ ಭದ್ರತೆಯಾಗಿ ಕಾರ್ಯನಿರ್ವಹಿಸುತ್ತದೆ.

ಬಾಗಿಲನ್ನು ಎಡ ಕಡೆಗೆ ಒಳಗೆ ತೆಗೆಯಿರಿ:

ಬಾಗಿಲನ್ನು ಎಡ ಕಡೆಗೆ ಒಳಗೆ ತೆಗೆಯಿರಿ:

ಮುಖ್ಯ ಬಾಗಿಲನ್ನು ಎಡ ಕಡೆಗೆ ಒಳಗೆ ತೆರೆಯಬೇಕು. ಈ ತೆರೆಯುವಿಕೆಯು ಉತ್ತಮ ಶಕ್ತಿಯನ್ನು ಬಹಳ ಮುಕ್ತವಾಗಿ ಬರಲು ಅನುವು ಮಾಡಿಕೊಡುತ್ತದೆ. ಬಲಕ್ಕೆ ಅಥವಾ ಹೊರಗಡೆ ತೆರೆಯುವ ಬಾಗಿಲುಗಳನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಇನ್ನೊಂದು ವಿಷಯವೆಂದರೆ ನೀವು ಮುಖ್ಯ ಬಾಗಿಲು ತೆರೆದಾಗ ಅದರ ಎದುರು ಬೇರೆ ಬಾಗಿಲು ಇಲ್ಲ ಎಂದು ಖಚಿತಪಡಿಸಿಕೊಳ್ಳಿ ಈ ನಿಯಮವು ಬಾಗಿಲಿನ ಒಳಗೆ ಮತ್ತು ಹೊರಗೆ ಅನ್ವಯಿಸುತ್ತದೆ.

ಮುಖ್ಯ ಬಾಗಿಲ ಅಳತೆ ಹೀಗಿರಲಿ:

ಮುಖ್ಯ ಬಾಗಿಲ ಅಳತೆ ಹೀಗಿರಲಿ:

ಮುಖ್ಯ ಬಾಗಿಲಿನ ಗಾತ್ರಕ್ಕೆ ಅದರದ್ದೇ ಆದ ಅಳತೆಯಿದೆ. ಇದಕ್ಕೆ ತಕ್ಕಂತಹ ಬಾಗಿಲುಗಳನ್ನು ಮಾಡಿದರೆ ಉತ್ತಮ. ಉದ್ದ-ಅಗಲದ ಅನುಪಾತವು 1: 2 ರಲ್ಲಿರಬೇಕು. ಕೆಲವು ಸ್ಥಳಗಳು ಮೇಲ್ಛಾವಣಿಗಳ ಎತ್ತರದಿಂದಾಗಿ ತುಂಬಾ ಕಡಿಮೆಯಾಗಿರುತ್ತದೆ. ಇನ್ನು ಕೆಲವೆಡೆ ಸ್ಥಳದ ಕೊರತೆಯಿಂದಾಗಿ ಬಾಗಿಲಿನ ಅಗಲವು ತುಂಬಾ ಕಡಿಮೆಯಾಗಿರುತ್ತದೆ. ಇದು ಕೆಲವೊಮ್ಮೆ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.

ಮುಖ್ಯ ಬಾಗಿಲಿನ ಹೊರಗೆ:

ಮುಖ್ಯ ಬಾಗಿಲಿನ ಹೊರಗೆ:

ಈಗ ನಾವು ಬಾಗಿಲಿನ ಹೊರಗೆ ದೊಡ್ಡ ಮರ, ಕಂಬ, ದೊಡ್ಡ ಗೋಡೆ ಅಥವಾ ಬಾಗಿಲಿನ ಮುಂದೆ ಕಟ್ಟಡ ಕೂಡ ಉತ್ತಮವಾಗಿಲ್ಲ. ತೀಕ್ಷ್ಣವಾದ ದೀಪಗಳನ್ನು ನೀಡುವುದು ದೋಷಗಳನ್ನು ಸರಿಪಡಿಸುವ ಪರಿಹಾರಗಳಲ್ಲಿ ಒಂದಾಗಿದೆ. ಇನ್ನು ಬಾಗಿಲು ಮಾಡುವ ಶಬ್ದವು ಕಿರಿಕಿರಿಯುಂಟುಮಾಡುವ ಮತ್ತು ಕೇಳಲು ಕೆಟ್ಟದಾಗಿದಾಗಿದೆಯೇ ಎಂದು ಪರಿಶೀಲಿಸಿ. ಈ ಶಬ್ದಗಳು ಉತ್ತಮ ಶಕ್ತಿ ಪ್ರವೇಶೀಸುವುದನ್ನು ನಿಲ್ಲಿಸುತ್ತವೆ.

English summary

Main Door Vastu Tips For Home In Kannada

Here we told about Main Door Vastu Tips For Home In Kannada, have a look
X
Desktop Bottom Promotion