For Quick Alerts
ALLOW NOTIFICATIONS  
For Daily Alerts

ವಾಸ್ತು ಪ್ರಕಾರ, ಅದೃಷ್ಟಕ್ಕಾಗಿ ಈ 5 ವಸ್ತುಗಳನ್ನು ಮನೆಯ ಮುಖ್ಯ ದ್ವಾರದಲ್ಲಿರಿಸಿ

|

ಅದೃಷ್ಟವೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ನಾವು ಮಾಡುವ ಕೆಲಸದಲ್ಲಿ ಪರಿಶ್ರಮದ ಜೊತೆಗೆ ಸಣ್ಣ ಮಟ್ಟದ ಅದೃಷ್ಟ ಇರಲೇಬೇಕು. ಆಗಲೇ ಅದು ಯಶಸ್ಸು ಸಾಧಿಸುವುದು. ಅದೇ ರೀತಿ ಈ ಅದೃಷ್ಟ ಪಡೆಯಲು, ಜನರು ಯಾವ ಕ್ರಮಗಳನ್ನು ಬೇಕಾದರೂ ಮಾಡಲು ತಯಾರಿರುತ್ತಾರೆ. ಅದು ಮನೆಯಿಂದಲೇ ಶುರುವಾಗುವುದು ಎಂಬುದು ಹೆಚ್ಚಿನವರಿಗೆ ಗೊತ್ತು.

ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ಶುಚಿತ್ವವಿಲ್ಲದಿದ್ದರೆ ಅಥವಾ ಬೂಟುಗಳು ಮತ್ತು ಚಪ್ಪಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದರೆ, ನಿಮ್ಮ ಮನೆಗೆ ಧನಾತ್ಮಕ ಶಕ್ತಿಯ ಪ್ರವೇಶ ಆಗುವುದಿಲ್ಲ ಎನ್ನುವುದು ನಂಬಿಕೆ. ಅದಕ್ಕಾಗಿ ನಾವಿಂದು, ಅದೃಷ್ಟವನ್ನು ಆಕರ್ಷಿಸುವ ಕೆಲವೊಂದು ವಸ್ತುಗಳನ್ನು ಮನೆಯ ಮುಖ್ಯ ದ್ವಾರದ ಬಳಿ ಹಾಕಬೇಕಾದುದರ ಬಗ್ಗೆ ತಿಳಿಸಿಕೊಡಲಿದ್ದೇವೆ.

ವಾಸ್ತು ಪ್ರಕಾರ, ಅದೃಷ್ಟಕ್ಕಾಗಿ ಮನೆಯ ಮುಖ್ಯ ದ್ವಾರದಲ್ಲಿ ಹಾಕಬೇಕಾದ ವಸ್ತುಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಮಂಗಳಕರ ಕಲಶ :

ಮಂಗಳಕರ ಕಲಶ :

ಕಲಶವನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ, ಅಂದರೆ ಸಂಪತ್ತು ಮತ್ತು ಸಮೃದ್ಧಿ. ಆಧ್ಯಾತ್ಮಿಕ ದೃಷ್ಟಿಕೋನದಿಂದ, ಇದು ಶುಕ್ರ ಮತ್ತು ಚಂದ್ರನ ಸಂಕೇತವಾಗಿದೆ ಮತ್ತು ಗಣೇಶನ ರೂಪದಲ್ಲಿ ಪೂಜಿಸಲಾಗುತ್ತದೆ. ಆದ್ದರಿಂದ, ಕಲಶವನ್ನು ಮುಖ್ಯ ದ್ವಾರದಲ್ಲಿ ಪ್ರತಿನಿತ್ಯ ಇಟ್ಟು ಪೂಜಿಸುವುದರಿಂದ, ಗಣೇಶನ ಕೃಪೆ ಲಭ್ಯವಾಗಿ ಶುಭ ಫಲಗಳು ದೊರೆಯುತ್ತವೆ. ಬೇಕಿದ್ದರೆ ತಾಮ್ರದ ಕಮಲವನ್ನೂ ಇಟ್ಟುಕೊಳ್ಳಬಹುದು. ಲೋಟ ಅಥವಾ ಕಲಶ ಯಾವುದನ್ನು ಇಟ್ಟರೂ ಅದರ ಬಾಯಿ ಅಗಲವಾಗಿರಬೇಕು. ಪ್ರತಿದಿನ ಬೆಳಿಗ್ಗೆ ಸ್ನಾನದ ನಂತರ, ಕಲಶವನ್ನು ತುಂಬಿಸಿ, ಅದರಲ್ಲಿ ಕೆಲವು ಗುಲಾಬಿ ದಳಗಳನ್ನು ಕೂಡ ಹಾಕಬಹುದು. ಹೀಗೆ ಮಾಡುವುದರಿಂದ ಧನಾತ್ಮಕ ಶಕ್ತಿಯು ನಿಮ್ಮ ಮನೆಯತ್ತ ಆಕರ್ಷಿತವಾಗುತ್ತದೆ. ಈ ನೀರನ್ನು ಪ್ರತಿದಿನ ಬದಲಾಯಿಸಬೇಕು.

ತೋರಣ:

ತೋರಣ:

ಯಾವುದೇ ಶುಭ ಕಾರ್ಯವಾಗಲಿ, ಹಬ್ಬ ಹರಿದಿನವಾಗಲಿ ತೋರಣ ಕಟ್ಟುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದನ್ನು ಮುಖ್ಯಬಾಗಿಲಿಗೆ ಕಟ್ಟುವುದರಿಂದ, ಮನೆಯಲ್ಲಿ ಎಲ್ಲಾ ಶುಭ ಕಾರ್ಯಗಳು ಯಾವುದೇ ಅಡೆತಡೆಗಳಿಲ್ಲದೆ ಸುರಕ್ಷಿತವಾಗಿ ಪೂರ್ಣಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಮಾವಿನ ಎಲೆಗಳು ಅತ್ಯುತ್ತಮ ಜೊತೆಗೆ, ಅಶೋಕ ಎಲೆಗಳಿಂದಲೂ ಮಾಡಬಹುದು. ಹಬ್ಬಗಳ ಹೊರತಾಗಿ, ಪ್ರತಿ ಮಂಗಳವಾರದಂದು ನಿಮ್ಮ ಮನೆಯಲ್ಲಿ ತೋರಣ ಕಟ್ಟಿದರೆ, ತುಂಬಾ ಶುಭ ಫಲಿತಾಂಶಗಳು ಸಿಗುತ್ತವೆ ಎಂದು ವಾಸ್ತುದಲ್ಲಿ ಹೇಳಲಾಗಿದೆ.

ಚೀನೀ ನಾಣ್ಯಗಳು:

ಚೀನೀ ನಾಣ್ಯಗಳು:

ಫೆಂಗ್ ಶೂಯಿಯಲ್ಲಿ, ಚೀನಾದ ನಾಣ್ಯಗಳನ್ನು ಮುಖ್ಯ ಬಾಗಿಲಿನಲ್ಲಿ ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಮೂರು ಚೈನೀಸ್ ನಾಣ್ಯಗಳನ್ನು ಕೆಂಪು ದಾರದಲ್ಲಿ ಕಟ್ಟಿ, ಮನೆಯ ಒಳಭಾಗದಲ್ಲಿರುವ ಮುಖ್ಯ ಬಾಗಿಲಿನ ಮೇಲೆ ಇರಿಸಿ. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಹಣ ಸಂಗ್ರಹಣೆ ಹೆಚ್ಚುತ್ತದೆ ಮತ್ತು ಜನರ ಕೈಯಿಂದ ಅನಗತ್ಯ ಖರ್ಚು ನಿಲ್ಲುತ್ತದೆ.

ಸ್ವಸ್ತಿಕ್:

ಸ್ವಸ್ತಿಕ್:

ಮುಖ್ಯ ದ್ವಾರದ ಮೇಲೆ ಹಾಕಲು ಅತ್ಯಂತ ಮಂಗಳಕರವಾದ ವಿಷಯವೆಂದರೆ ಸ್ವಸ್ತಿಕ್. ಮುಖ್ಯ ದ್ವಾರದ ಎರಡೂ ಬದಿಯಲ್ಲಿ ಕೆಂಪು, ಹಳದಿ ಅಥವಾ ನೀಲಿ ಸ್ವಸ್ತಿಕವನ್ನು ಮಾಡಬೇಕು. ಬೇಕಿದ್ದರೆ ಮಾರುಕಟ್ಟೆಯಿಂದ ಸ್ವಸ್ತಿಕವನ್ನೂ ತಂದು ಮುಖ್ಯ ಬಾಗಿಲಿನ ಎರಡೂ ಬದಿಯಲ್ಲಿ ಹಾಕಬಹುದು. ಮುಖ್ಯ ಬಾಗಿಲಿನ ಎರಡೂ ಬದಿಯಲ್ಲಿ ಕೆಂಪು ಸ್ವಸ್ತಿಕವನ್ನು ಇಡುವುದರಿಂದ ಮನೆಯ ವಾಸ್ತು ದೋಷಗಳು ದೂರವಾಗುತ್ತವೆ. ಮತ್ತೊಂದೆಡೆ, ಮುಖ್ಯ ಬಾಗಿಲಿನ ಮೇಲೆ ಮಧ್ಯದಲ್ಲಿ ನೀಲಿ ಸ್ವಸ್ತಿಕವನ್ನು ಇರಿಸುವ ಮೂಲಕ, ಮನೆಯ ಜನರು ದುಷ್ಟ ಕಣ್ಣಿನಿಂದ ದೂರವಿರುತ್ತಾರೆ.

ಗಣೇಶನ ಪ್ರತಿಮೆ ಅಥವಾ ಚಿತ್ರ:

ಗಣೇಶನ ಪ್ರತಿಮೆ ಅಥವಾ ಚಿತ್ರ:

ಮುಖ್ಯ ಬಾಗಿಲಿನ ಮೇಲೆ ಗಣೇಶನನ್ನು ಇರಿಸುವುದರಿಂದ ಧನಾತ್ಮಕ ಶಕ್ತಿಯು ನಿಮ್ಮ ಮನೆಗೆ ಪ್ರವೇಶಿಸುತ್ತದೆ. ಆದರೆ ಗಣೇಶನ ವಿಗ್ರಹ ಅಥವಾ ಚಿತ್ರವನ್ನು ಇರಿಸುವ ಮೊದಲು ಕೆಲವು ನಿಯಮಗಳನ್ನು ತಿಳಿದುಕೊಳ್ಳುವುದು ಮುಖ್ಯ. ಗಣೇಶನ ಉದರ ನೆಲೆಸಿರುವ ಭಾಗದಲ್ಲಿ ಸಮೃದ್ಧಿ ಮತ್ತು ಬೆನ್ನು ಇರುವ ಕಡೆ ಬಡತನವಿದೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಗಣೇಶನನ್ನು ಮುಖ್ಯ ಬಾಗಿಲಿನಲ್ಲಿ ಇಡುವಾಗ ಅವುಗಳನ್ನು ಒಳಕ್ಕೆ ಮುಖ ಮಾಡಿ ಇರಿಸಿ. ಇದನ್ನು ಹೊರಗೆ ಇಡುವುದರಿಂದ ನಿಮ್ಮ ಮನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಮತ್ತು ಮನೆಯಲ್ಲಿ ಬಡತನವು ಹೆಚ್ಚಾಗಲು ಪ್ರಾರಂಭಿಸುತ್ತದೆ.

English summary

Main Door Vastu : Lucky Things at Your Main Door Can Bring Prosperity and Wealth in Kannada

Here we talking about Main Door Vastu : Lucky things at your main door can bring prosperity and wealth in Kannada, read on
Story first published: Thursday, March 10, 2022, 18:00 [IST]
X
Desktop Bottom Promotion