For Quick Alerts
ALLOW NOTIFICATIONS  
For Daily Alerts

ಮಹಾನವಮಿ 2021: ದಿನಾಂಕ, ಪೂಜಾವಿಧಿ ಹಾಗೂ ಮಹತ್ವ

|

ಮಹಾ ನವಮಿ, ನವರಾತ್ರಿಯ ಸಂದರ್ಭದಲ್ಲಿ ವಿಜಯ ದಶಮಿಯ ಹಿಂದಿನ ದಿನ ಅತ್ಯಂತ ಸಂಭ್ರಮದಿಂದ ಆಚರಿಸುವ ಆಚರಣೆಗಳಲ್ಲಿ ಒಂದಾಗಿದೆ. ಈ ವರ್ಷ ಮಂಗಳಕರ ದಿನವು ಅಕ್ಟೋಬರ್ 14, ಗುರುವಾರದಂದು ಬರುತ್ತಿದೆ ಈ ದಿನವನ್ನು ದೇಶದಾದ್ಯಂತ ಬಹಳ ಉತ್ಸಾಹ ಮತ್ತು ಸಂತೋಷದಿಂದ ಆಚರಿಸಲಾಗುತ್ತದೆ.

ಮಹಾನವಮಿಯ ಶುಭ ಮುಹೂರ್ತ:

ಮಹಾನವಮಿಯ ಶುಭ ಮುಹೂರ್ತ:

ನವಮಿಯ ತಿಥಿ ಆರಂಭ: ಅಕ್ಟೋಬರ್ 13, 2021 ರಂದು ರಾತ್ರಿ 8.07 ಕ್ಕೆ

ನವಮಿಯ ತಿಥಿ ಅಂತ್ಯ: 2021 ರ ಅಕ್ಟೋಬರ್ 14 ರಂದು ಸಂಜೆ 6.52 ಕ್ಕೆ

ಮಹಾನವಮಿಯ ಪೂಜಾ ವಿಧಿ:

ಮಹಾನವಮಿಯ ಪೂಜಾ ವಿಧಿ:

  • ಮಹಾ ನವಮಿ ಪೂಜೆಯು ಇತರ ದಿನಗಳಂತೆ ಪವಿತ್ರ ವಿಧಿವಿಧಾನಗಳನ್ನು ಹೊಂದಿದೆ. ಇದು ಸ್ನಾನ ಮತ್ತು ಷೋಡಶೋಪಚಾರ ಪೂಜೆಯಿಂದ ಆರಂಭವಾಗುತ್ತದೆ.
  • ಈ ದಿನ ದೇವಿಗೆ ಗುಲಾಬಿ ಹೂವುಗಳನ್ನು ಅರ್ಪಿಸುತ್ತಾರೆ ಜೊತೆಗೆ ಭಕ್ತರು ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ ಏಕೆಂದರೆ ಗುಲಾಬಿ ಬಣ್ಣವು ಮಹಾನವಮಿ ದಿನದ ಸಂಕೇತವಾಗಿದೆ.
  • ಕನ್ಯಾ ಪೂಜೆ ಅಥವಾ ಕುಮಾರಿ ಪೂಜೆಯು ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿದೆ. 8-9 ವರ್ಷ ವಯಸ್ಸಿನ ಒಂಬತ್ತು ಯುವತಿಯರನ್ನು ಮನೆಗೆ ಆಹ್ವಾನಿಸಿ, ಅವರ ಪಾದಗಳನ್ನು ತೊಳೆದು, ಅವರಿಗೆ ಪೂಜೆ ಮಾಡಿ ಉಡುಗೊರೆ ನೀಡುತ್ತಾರೆ. ಈ ಒಂಬತ್ತು ಹುಡುಗಿಯರು ದುರ್ಗೆಯ 9 ರೂಪಗಳನ್ನು ಸಂಕೇತಿಸುತ್ತಾರೆ.
  • ನವಮಿ ಪೂಜೆಯ ಕೊನೆಯಲ್ಲಿ ನವಮಿ ಹೋಮವನ್ನು ಬಹಳ ಭಕ್ತಿಯಿಂದ ನಡೆಸಲಾಗುತ್ತದೆ.
  • ಮಹಾ ನವಮಿಯ ಮಹತ್ವ:

    ಮಹಾ ನವಮಿಯ ಮಹತ್ವ:

    ಈ ಅಶ್ವಿನಿ ನವರಾತ್ರಿಯ ಸಮಯದಲ್ಲಿ ಶಾರದಿಯಾ ನವರಾತ್ರಿಯಂದು ದುರ್ಗೆಯ ಒಂಬತ್ತು ಅವತಾರಗಳನ್ನು ಧಾರ್ಮಿಕ ಶ್ರದ್ಧೆಯಿಂದ ಪೂಜಿಸಲಾಗುತ್ತದೆ. ಅದರಲ್ಲಿ ಒಂದು ರೂಪವಾದ ದೇವಿ ಸಿದ್ದಿಧಾತ್ರಿಯ ಪೂಜೆಗೆ ಮಹಾ ನವಮಿ ದಿನವನ್ನು ಮೀಸಲಿಡಲಾಗಿದೆ. ಆಕೆಯನ್ನು ಮಹಿಷಾಸುರಮರ್ದಿನಿ ಎಂದು ಪೂಜಿಸಲಾಗುತ್ತದೆ.

    ದೇವಿಯ ಈ ಅವತಾರವು ವಿಪರೀತ ಶಕ್ತಿಯನ್ನು ಹೊಂದಿದ್ದು, ಜೀವನದ ಮೂಲವನ್ನು ಪ್ರತಿನಿಧಿಸುತ್ತದೆ. ಜೊತೆಗೆ ಇದು ಅತ್ಯಂತ ಶಕ್ತಿಶಾಲಿ ರೂಪವೆಂದು ಹೇಳಲಾಗುತ್ತದೆ. ಮಹಾ ನವಮಿಯ ಪೂಜೆಯು ಹೆಚ್ಚಿನ ಮಹತ್ವವನ್ನು ಹೊಂದಿದೆ ಏಕೆಂದರೆ ಈ ದಿನದಂದು ಮಾಡುವ ಪೂಜೆಯು ಹಬ್ಬದ ಇತರ 8 ದಿನಗಳಲ್ಲಿ ಮಾಡುವ ಪೂಜೆಗೆ ಸಮನಾಗಿದೆ ಎಂದು ನಂಬಲಾಗಿದೆ.

English summary

Maha Navami 2021: Date, Puja Vidhi, Shubh Muhurat and Significance in kannada

Here we talking about Maha Navami 2021: Date, Puja Vidhi, Shubh Muhurat and Significance in kannada, read on
Story first published: Wednesday, October 13, 2021, 18:14 [IST]
X
Desktop Bottom Promotion