For Quick Alerts
ALLOW NOTIFICATIONS  
For Daily Alerts

ರಾಶಿಚಕ್ರದ ಪ್ರಕಾರ, ಮುಂದೆ ನೀವು ಮದುವೆಯಾಗುವ ವ್ಯಕ್ತಿ ಈ ರಾಶಿಗೆ ಸೇರಿರುತ್ತಾರೆ!

|

ಪ್ರತಿಯೊಬ್ಬರೂ ತಾವು ಯಾರೊಂದಿಗೆ ಮದುವೆ ಆಗುತ್ತೇವೆ ಎಂದು ತಿಳಿದುಕೊಳ್ಳುವ ಆಸೆ ಹೊಂದಿರುತ್ತಾರೆ. ನಾವು ಮದುವೆಯಾಗುವ ವ್ಯಕ್ತಿ ಹೇಗಿರಬಹುದು? ಎಂತಹ ವ್ಯಕ್ತಿತ್ವ ಹೊಂದಿರಬಹುದು? ನಮ್ಮ ವ್ಯಕ್ತಿತ್ವಕ್ಕೆ ಸರಿಹೊಂದುವಂತಹ ವ್ಯಕ್ತಿ ಯಾರು? ಇಂತಹ ನೂರಾರು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಕೂತಿರುತ್ತಾರೆ. ಅಂತಹವರಿಗಾಗಿ ಸಹಾಯ ಮಾಡಲು ನಾವು ಬಂದಿದ್ದೇವೆ.

List Of Zodiac Signs You Should Marry, Based On Your Zodiac Sign In Kannada

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀವು ಭವಿಷ್ಯದಲ್ಲಿ ಯಾವ ರಾಶಿಯವರನ್ನು ಮದುವೆಯಾದರೆ ಸೂಕ್ತ, ನಿಮ್ಮ ರಾಶಿಗೆ ಸರಿಹೊಂದುವಂತಹ ರಾಶಿ ಯಾವುದು ಎಂದು ಹೇಳಲಾಗುತ್ತದೆ. ಈ ಮೂಲಕ ನಿಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ರಾಶಿಚಕ್ರ ಚಿಹ್ನೆಯ ಆಧಾರದ ಮೇಲೆ ನೀವು ಮದುವೆಯಾಗಬೇಕಾದ ರಾಶಿಚಕ್ರ ಚಿಹ್ನೆಗಳ ಪಟ್ಟಿ ಇಲ್ಲಿದೆ.

ಮೇಷ ರಾಶಿ - ಧನು ರಾಶಿ ಅಥವಾ ಕುಂಭ:

ಮೇಷ ರಾಶಿ - ಧನು ರಾಶಿ ಅಥವಾ ಕುಂಭ:

ನಿಮ್ಮಂತೆ ಸ್ಟ್ರಾಂಗ್, ಪ್ರಜ್ವಲಿಸುವ ಮತ್ತು ರೋಮಾಂಚನಕಾರಿ ವ್ಯಕ್ತಿಯ ಅಗತ್ಯವಿರುತ್ತದೆ. ಆದ್ದರಿಂದ, ನೀವು ಧನು ರಾಶಿ ಅಥವಾ ಕುಂಭ ರಾಶಿಯವರ ಜೊತೆ ಚೆನ್ನಾಗಿ ಜೋಡಿಯಾಗುತ್ತಿರಿ. ಧನು ರಾಶಿಯವರು ಸ್ವತಂತ್ರ ಮತ್ತು ನಿರಾತಂಕದ ಜೀವನಶೈಲಿಯವರಾಗಿದ್ದು, ನಿಮ್ಮ ಕನಸನ್ನು ಯಾವುದೇ ಅಡೆತಡೆಗಳಿಲ್ಲದೇ ಹಂಚಿಕೊಳ್ಳುತ್ತಾರೆ. ಅವರು ಸ್ವಾಭಾವಿಕತೆಯನ್ನು ಪ್ರೀತಿಸುತ್ತಾರೆ. ಮತ್ತೊಂದೆಡೆ, ಕುಂಭ ರಾಶಿಯವರು ನಿಮಗೆ ಅತ್ಯುತ್ತಮವಾದವರು ಏಕೆಂದರೆ ಅವರು ಎಂದಿಗೂ ನಿಮ್ಮೊಂದ್ಗೆ ಅಂಟಿಕೊಳ್ಳುವುದಿಲ್ಲ. ಅವರು ತಮ್ಮ ಸ್ವಾತಂತ್ರ್ಯದ ಮಾರ್ಗವನ್ನು ಹೆಚ್ಚು ಗೌರವಿಸುತ್ತಾರೆ.

ವೃಷಭ ರಾಶಿ - ಕರ್ಕಾಟಕ ಅಥವಾ ವೃಶ್ಚಿಕ:

ವೃಷಭ ರಾಶಿ - ಕರ್ಕಾಟಕ ಅಥವಾ ವೃಶ್ಚಿಕ:

ಸೂಕ್ಷ್ಮ ಜನರು ಮಾತ್ರ ನಿಭಾಯಿಸಬಲ್ಲ ಮನಸ್ಥಿತಿ ಮತ್ತು ಮೃದು ಹೃದಯದ ಸ್ವಭಾವವನ್ನು ನೀವು ಹೊಂದಿದ್ದೀರಿ. ಆದ್ದರಿಂದ, ಕರ್ಕಾಟಕ ಹಾಗೂ ವೃಶ್ಚಿಕ ರಾಶಿಯವ್ರು ಮದುವೆಯಾಗಲು ನಿಮಗೆ ಸೂಕ್ತವಾಗಿರುತ್ತವೆ. ಕರ್ಕಾಟಕ ರಾಶಿಯವರು ತುಂಬಾ ನಿಷ್ಠಾವಂತರು, ಸೂಕ್ಷ್ಮ ಮನಸ್ಥಿತಿ ಮತ್ತು ತಮ್ಮ ಸಂಗಾತಿಯನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಬಯಸುತ್ತಾರೆ. ವೃಶ್ಚಿಕ ರಾಶಿಯವರು ತಮ್ಮ ಸಂಗಾತಿಯ ಬಗ್ಗೆ ಬಹಳ ರಕ್ಷಣಾತ್ಮಕ ನಿಲುವನ್ನು ತೋರಿಸುತ್ತಾರೆ. ಅದನ್ನು ವೃಷಭ ರಾಶಿಯವ್ರು ಮೆಚ್ಚುತ್ತಾರೆ.

 ಮಿಥುನ - ಕುಂಭ ಅಥವಾ ಧನು ರಾಶಿ:

ಮಿಥುನ - ಕುಂಭ ಅಥವಾ ಧನು ರಾಶಿ:

ಸಾಮಾಜಿಕ ಚಿಟ್ಟೆ ಎಂದು ಕರೆಯಲ್ಪಡುವ ಮಿಥುನ ರಾಶಿಯವರು ವಿನೋದ ಮತ್ತು ಮನರಂಜನೆಯ ಸಂಗಾತಿಯನ್ನು ಪ್ರೀತಿಸುತ್ತೀರಿ. ಕುಂಭ ರಾಶಿಯವರು ತಮ್ಮ ಸೃಜನಶೀಲತೆಯ ಸಹಾಯದಿಂದ ಹೊಸ ಅನುಭವಗಳನ್ನು ಪಡೆಯಲು ಇಷ್ಟಪಡುತ್ತಾರೆ ಮತ್ತು ಆದ್ದರಿಂದ, ಅವರು ನಿಮಗೆ ಉತ್ತಮವಾಗಿ ಹೊಂದಾಣಿಕೆಯಾಗುತ್ತಾರೆ! ಧನು ರಾಶಿಯವರು ಸ್ವತಂತ್ರ ಮನೋಭಾವದ ಜನರು, ಅವರು ಸಾಮಾಜಿಕ ಜೀವನವನ್ನು ಗೌರವಿಸುತ್ತಾರೆ ಮತ್ತು ಹೆಚ್ಚಾಗಿ ಸಾಹಸಗಳನ್ನು ಮಾಡಲು ಬಯಸುತ್ತಾರೆ.

ಕರ್ಕಾಟಕ- ಸಿಂಹ ಅಥವಾ ವೃಷಭ ರಾಶಿ:

ಕರ್ಕಾಟಕ- ಸಿಂಹ ಅಥವಾ ವೃಷಭ ರಾಶಿ:

ಪರಿಪೂರ್ಣ ಸಂಬಂಧಕ್ಕಾಗಿ ನಿಮಗೆ ಬೇಕಾದ ಎಲ್ಲಾ ಪ್ರೀತಿ ಮತ್ತು ಕಾಳಜಿಯನ್ನು ನೀವು ಹೊಂದಿರುವುದರಿಂದ ನಿಮ್ಮಂತೆಯೇ ಇರುವ ವ್ಯಕ್ತಿಯನ್ನು ಹುಡುಕಲು ಇಚ್ಛಿಸುತ್ತೀರಿ. ಆದ್ದರಿಂದ ನಿಮಗೆ ಸಿಂಹ ಹಾಗೂ ವೃಷಭ ರಾಶಿಯವರು ಉತ್ತಮ ಆಯ್ಕೆಗಳಾಗಿವೆ. ಸಿಂಹ ರಾಶಿಯವರ ಉಗ್ರ ಸ್ವಭಾವವು ಎಲ್ಲಾ ಅಡೆತಡೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಮತ್ತು ವೃಷಭ ರಾಶಿಯವರು ನಿಮ್ಮ ಮೂಡಿ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವವರಾಗಿದ್ದಾರೆ.

ಸಿಂಹ - ಮೀನ ಅಥವಾ ತುಲಾ:

ಸಿಂಹ - ಮೀನ ಅಥವಾ ತುಲಾ:

ಸಿಂಹ ರಾಶಿಯವರಲ್ಲಿ ಕೆಲವೊಮ್ಮೆ ಅಹಂಕಾರ ಮತ್ತು ಕೆಲವೊಮ್ಮೆ ಹೆಮ್ಮೆ ಬರಬಹುದು. ಆದ್ದರಿಂದ, ಅದನ್ನು ಸಮತೋಲನಗೊಳಿಸಲು ನಿಮಗೆ ಮೀನ ಅಥವಾ ತುಲಾ ರಾಶಿಯ ಅಗತ್ಯವಿದೆ. ಮೀನ ರಾಶಿಯವ್ರು ಸಂಬಂಧಗಳನ್ನು ಗೌರವಿಸುತ್ತಾರೆ ಮತ್ತು ಸಾಕಷ್ಟು ಸುರಕ್ಷಿತವಾದ ಭಾವನೆಯನ್ನು ನೀಡುತ್ತಾರೆ. ತುಲಾ ರಾಶಿಯವರು ನಿಮ್ಮ ವ್ಯಕ್ತಿತ್ವವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತಾರೆ.

ಕನ್ಯಾರಾಶಿ - ವೃಷಭ ರಾಶಿ ಅಥವಾ ಮಕರ:

ಕನ್ಯಾರಾಶಿ - ವೃಷಭ ರಾಶಿ ಅಥವಾ ಮಕರ:

ಸಂಬಂಧದಲ್ಲಿ ನಿಮಗೆ ಸುರಕ್ಷತೆಯ ಅಗತ್ಯವಿರುತ್ತದೆ, ಆದ್ದರಿಂದ ವೃಷಭ ರಾಶಿ ಮತ್ತು ಮಕರ ರಾಶಿಯವರು ನಿಮ್ಮ ಸೂಕ್ತ ಪಾಲುದಾರರಾಗಿದ್ದಾರೆ. ವೃಷಭ ರಾಶಿಯವರು ನಿಮಗೆ ಜೀವಮಾನದ ಸಂತೋಷ ಮತ್ತು ಬದ್ಧತೆಯ ಭರವಸೆ ನೀಡುತ್ತಾರೆ, ಜೊತೆಗೆ ನೀವು ಮಕರ ರಾಶಿಯವರಂತಹ ಮೌಲ್ಯಗಳು ಮತ್ತು ಸಿದ್ಧಾಂತಗಳನ್ನು ಹೊಂದಿರುವುದರಿಂದ ಅದು ನಿಮ್ಮಿಬ್ಬರಿಗೂ ಹೊಂದಾಣಿಕೆಯಾಗಲು ಸಹಾಯವಾಗುತ್ತದೆ.

ತುಲಾ ರಾಶಿ - ವೃಷಭ ಅಥವಾ ಮೇಷ:

ತುಲಾ ರಾಶಿ - ವೃಷಭ ಅಥವಾ ಮೇಷ:

ನೀವು ತುಂಬಾ ಆಕರ್ಷಕ ಮತ್ತು ನ್ಯಾಯಸಮ್ಮತ ಮನಸ್ಸಿನವರಾಗಿದ್ದರೂ, ಕೆಲವೊಮ್ಮೆ ನಿರ್ಣಾಯಕ ಸಮಸ್ಯೆಗಳನ್ನು ಎದುರಿಸುತ್ತೀರಿ. ಆದ್ದರಿಂದ, ವೃಷಭ ರಾಶಿ ಮತ್ತು ಮೇಷ ರಾಶಿಯು ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ವೃಷಭ ರಾಶಿಯವರು ತಮ್ಮ ಜೀವನದಲ್ಲಿ ನಿಮ್ಮ ಉಪಸ್ಥಿತಿಯನ್ನು ಮೆಚ್ಚುತ್ತಾರೆ ಮತ್ತು ಸಮಾನ ಮನಸ್ಸಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ನೀವು ಉನ್ನತ ಸ್ಥಾನದಲ್ಲಿರಲು ಪ್ರಯತ್ನಿಸಿದರೆ ಮೇಷ ರಾಶಿಯವರು ನಿಮಗೆ ಸಹಾಯ ಮಾಡುತ್ತಾರೆ.

 ವೃಶ್ಚಿಕ - ಮೀನ ಅಥವಾ ಕನ್ಯಾರಾಶಿ:

ವೃಶ್ಚಿಕ - ಮೀನ ಅಥವಾ ಕನ್ಯಾರಾಶಿ:

ನೀವು ನಿಗೂಢ ಸಾಕಷ್ಟು ರಹಸ್ಯವಾಗಿದ್ದೀರಿ. ಮೀನ ಮತ್ತು ಕನ್ಯಾರಾಶಿ ನಿಮ್ಮ ಉತ್ತಮ ವೈವಾಹಿಕ ಪಾಲುದಾರರಾಗಿದ್ದಾರೆ ಏಕೆಂದರೆ ಮೀನವು ಚಿಂತನಶೀಲ, ವಿಶ್ಲೇಷಣಾತ್ಮಕವಾಗಿರುತ್ತಾರೆ. ನಿಮ್ಮ ಭಾವನೆಗಳನ್ನು ಅವರ ಆಧ್ಯಾತ್ಮಿಕ ವ್ಯಕ್ತಿತ್ವದಿಂದ ಸುಲಭವಾಗಿ ಗ್ರಹಿಸಬಹುದು. ಕನ್ಯಾ ರಾಶಿಯು ರಹಸ್ಯತನವನ್ನು ಇಷ್ಟಪಡುವುದರಿಂದ, ನೀವಿಬ್ಬರೂ ಸುಲಭವಾಗಿ ತಮಾಷೆಯ ಸಂಭಾಷಣೆಯಲ್ಲಿ ತೊಡಗಬಹುದು.

ಧನು ರಾಶಿ - ಧನು ರಾಶಿ ಅಥವಾ ಕುಂಭ:

ಧನು ರಾಶಿ - ಧನು ರಾಶಿ ಅಥವಾ ಕುಂಭ:

ಮುಂಬರುವ ಸಾಹಸ ಅಥವಾ ಪ್ರವಾಸಕ್ಕೆ ಹೋಗುವಾಗ ನಿಮ್ಮನ್ನು ತಡೆಯದ ವ್ಯಕ್ತಿಯನ್ನು ನೀವು ಬಯಸುತ್ತೀರಿ. ನೀವು ಧನು ರಾಶಿಗಳೊಂದಿಗೆ ಮದುವೆಯಾಗುವ ಸಾಧ್ಯತೆಯಿದೆ ಏಕೆಂದರೆ ಯಾರೂ ನಿಮಗಿಂತ ಸ್ವಾತಂತ್ರ್ಯ ಮತ್ತು ಸ್ವಾಭಾವಿಕತೆಯನ್ನು ಹೆಚ್ಚು ಗೌರವಿಸುವುದಿಲ್ಲ. ಆದಾಗ್ಯೂ, ಕುಂಭ ರಾಶಿಯವರು ಉತ್ತಮ ಹೊಂದಾಣಿಕೆಯಾಗಬಹುದು ಏಕೆಂದರೆ ಅವರಿಗೆ ಸ್ವಾತಂತ್ರ್ಯದ ಮಹತ್ವ ತಿಳಿದಿದೆ.

ಮಕರ ರಾಶಿ - ಕರ್ಕಾಟಕ ಅಥವಾ ವೃಷಭ:

ಮಕರ ರಾಶಿ - ಕರ್ಕಾಟಕ ಅಥವಾ ವೃಷಭ:

ಮಕರ ರಾಶಿಯವರು ಗುರಿ ಮತ್ತು ಯೋಜನೆಯನ್ನು ಪ್ರೀತಿಸುತ್ತಾರೆ. ಆದ್ದರಿಂದ, ನಿಮ್ಮ ಗುರಿ ಮತ್ತು ಮಹತ್ವಾಕಾಂಕ್ಷೆಗಳನ್ನು ಸಾಧಿಸಲು ಕರ್ಕಾಟಕ ಮತ್ತು ವೃಷಭ ರಾಶಿಯವರು ನಿಮಗೆ ಸಹಾಯ ಮಾಡುತ್ತಾರೆ. ಈ ಎರಡು ಚಿಹ್ನೆಗಳು ನಿಮ್ಮ ಪ್ರಚೋದನೆಯನ್ನು ಅರ್ಥಮಾಡಿಕೊಳ್ಳುತ್ತವೆ ಮತ್ತು ಅದಕ್ಕಾಗಿ ನಿಮ್ಮನ್ನು ಗೌರವಿಸುತ್ತವೆ. ಕುಟುಂಬ ಮತ್ತು ವಿವಾಹದ ವಿಷಯದಲ್ಲಿ ಕರ್ಕಾ ರಾಶಿಯವರು ಇದೇ ರೀತಿಯ ಗುರಿಯನ್ನು ಹೊಂದಿರುತ್ತಾರೆ. ಮತ್ತು ವೃಷಭ ರಾಶಿಯವರು ನಿಮಗೆ ನೈತಿಕ ಬೆಂಬಲವನ್ನು ನೀಡುವಾಗ ಬಹಳ ಬೆಂಬಲ ನೀಡುತ್ತಾರೆ.

ಕುಂಭ- ಕುಂಭ ಅಥವಾ ಮಿಥುನ:

ಕುಂಭ- ಕುಂಭ ಅಥವಾ ಮಿಥುನ:

ನಿಮ್ಮ ಸ್ವತಂತ್ರ ವ್ಯಕ್ತಿತ್ವದಿಂದಾಗಿ ಹೆಚ್ಚಾಗಿ ತಪ್ಪಾಗಿ ಗ್ರಹಿಸಲ್ಪಡುತ್ತೀರಿ. ಆದ್ದರಿಂದ, ನೀವು ಕುಂಭ ರಾಶಿಯವ್ರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತೀರಿ. ಜೊತೆಗೆ ಮಿಥುನ ರಾಶಿಯವರು ಸಹ ಪರಿಪೂರ್ಣ ವೈವಾಹಿಕ ಪಾಲುದಾರರಾಗಿದ್ದಾರೆ ಏಕೆಂದರೆ ನೀವಿಬ್ಬರೂ ದಂಪರಿಗಳಿಗಿಂತ ಒಬ್ಬರಿಗೊಬ್ಬರು ಉತ್ತಮ ಸ್ನೇಹಿತರಾಗಲು ಬಯಸುತ್ತೀರಿ, ಇದು ಸಂತೋಷದಾಯಕ ಮತ್ತು ಯಶಸ್ವಿ ದಾಂಪತ್ಯವನ್ನು ಮುನ್ನಡೆಸಲು ಉತ್ತಮ ಮಾರ್ಗವಾಗಿದೆ.

ಮೀನ - ವೃಶ್ಚಿಕ ಅಥವಾ ಮೇಷ:

ಮೀನ - ವೃಶ್ಚಿಕ ಅಥವಾ ಮೇಷ:

ನಿಮ್ಮನ್ನು ವಾಸ್ತವಕ್ಕೆ ಮರಳಿಸುವ ಅಥವಾ ನಿಮ್ಮನ್ನು ನಿಮ್ಮ ಕಾಲುಗಳ ಮೇಲೆ ನಿಲ್ಲಲು ಸಹಾಯ ಮಾಡುವವರು ನಿಮ್ಮ ಆದರ್ಶ ಸಂಗಾತಿಯಾಗಿರುತ್ತಾರೆ. ಅಂತಹ ಸಮಯದಲ್ಲಿ ವೃಶ್ಚಿಕ ಅಥವಾ ಮೇಷ ರಾಶಿಯನ್ನು ನಿಮ್ಮ ಸಂಗಾತಿಯೆಂದು ಪರಿಗಣಿಸಬಹುದು. ವೃಶ್ಚಿಕ ರಾಸಿಯವರು ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ನಿಮ್ಮ ಎಲ್ಲಾ ಮನಸ್ಥಿತಿಗಳನ್ನು ತಿಳಿದಿರುತ್ತಾರೆ. ಮೇಷ ರಾಶಿಯವರು, ಹೆಚ್ಚು ಮುಕ್ತ ಮತ್ತು ಸಂತೋಷವಾಗಿರಲು ನಿಮಗೆ ಸಹಾಯ ಮಾಡುವ ಮೂಲಕ ನಿಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ಹೊರತರುತ್ತಾರೆ.

English summary

List Of Zodiac Signs You Should Marry, Based On Your Zodiac Sign In Kannada

here we told about List of Zodiac Signs You Should Marry, Based on Your Zodiac Sign in Kannada, read on
X
Desktop Bottom Promotion