For Quick Alerts
ALLOW NOTIFICATIONS  
For Daily Alerts

Lal Bahadur Shastri Jayanti : ಲಾಲ್ ಬಹದ್ದೂರ್ ಶಾಸ್ತ್ರಿ 118ನೇ ಜನ್ಮದಿನಾಚರಣೆ ವಿಶೇಷ ಆಸಕ್ತಿಕರ ಸಂಗತಿಗಳು

|

ಭಾರತದಲ್ಲಿ "ಜೈ ಜವಾನ್, ಜೈ ಕಿಸಾನ್" ಎಂಬ ಘೋಷಣೆ ಹಾಗೂ ದೇಶಕ್ಕೆ ಸೈನಿಕರು ಹಾಗೂ ರೈತರ ಪ್ರಾಮುಖ್ಯತೆಯನ್ನು ತಿಳಿಸಿದ್ದ ಸ್ವಾತಂತ್ರ ಹೋರಾಟಗಾರ ಲಾಲ್ ಬಹದ್ದೂರ್ ಶಾಸ್ತ್ರಿ. ಇಂದಿಗೂ ಎಲ್ಲರ ಮನದಲ್ಲೂ ಈ ಘೋಷಣೆ ಬಹಳ ಜನಪ್ರಿಯವಾಗಿದೆ, ಬ್ರಿಟಿಷ್ ಆಡಳಿತದ ವಿರುದ್ಧದ ಭಾರತದ ಸ್ವಾತಂತ್ರ್ಯ ಹೋರಾಟದ ಜನಪ್ರಿಯ ಐಕಾನ್‌ಗಳಲ್ಲಿ ಒಬ್ಬರು ಲಾಲ್ ಬಹದ್ದೂರ್ ಶಾಸ್ತ್ರಿ.

Lal Bahadur Shastri: Interesting Facts About The 2nd PM of India in kannada

ಅಕ್ಟೋಬರ್ 2, 1904 ರಂದು ಉತ್ತರ ಪ್ರದೇಶದ ವಾರಣಾಸಿಯ ಮೊಘಲ್ಸರಾಯ್ ಪಟ್ಟಣದಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಶಾಸ್ತ್ರಿ ಅವರು ತಮ್ಮ ಆತ್ಮಶಕ್ತಿ, ದೇಶಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ಅವರು ದೇಶದ ಎರಡನೇ ಪ್ರಧಾನಿಯಾಗುವ ಮಟ್ಟಕ್ಕೆ ಸಾಧನೆಗೈದರು.

ಲಾಲ್ ಬಹದ್ದೂರ್ ಶಾಸ್ತ್ರಿಯವರ 118ನೇ ಜನ್ಮ ವಾರ್ಷಿಕೋತ್ಸವದ ವಿಶೇಷ ಅವರ ಬಗೆಗಿನ ಆಸಕ್ತಿಕರ ಸಂಗತಿಗಳನ್ನು ತಿಳಿಯೋಣ:

1. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆಸಕ್ತಿಕರ ಸಂಗತಿ

1. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆಸಕ್ತಿಕರ ಸಂಗತಿ

ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ವಾರ್ಷಿಕೋತ್ಸವವು ಮಹಾತ್ಮ ಗಾಂಧಿಯವರ ಜನ್ಮದೊಂದಿಗೆ ಹೊಂದಿಕೆಯಾಗುತ್ತದೆ, ಶಾಸ್ತ್ರಿ ಅವರು ಸಹ ಗಾಂಧೀ ಅವರ ಬಗ್ಗೆ ಆಳವಾಗಿ ಪ್ರಭಾವಿತರಾಗಿದ್ದರು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರ ತಂದೆ ಶಾಲಾ ಶಿಕ್ಷಕರಾಗಿದ್ದು, ಅವರು ಕೇವಲ ಒಂದೂವರೆ ವರ್ಷದವರಾಗಿದ್ದಾಗ ಗಂಗಾನದಿಯಲ್ಲಿ ಸ್ನಾನ ಮಾಡುವಾಗ ನಿಧನರಾದರು. ತಂದೆಯ ಮರಣದ ನಂತರ, ಅವರ ತಾಯಿ ಮೂರು ಮಕ್ಕಳನ್ನು ಬೆಳೆಸಿದರು.

ಹೈಸ್ಕೂಲಿನ ಶಿಕ್ಷಣಕ್ಕಾಗಿ ವಾರಣಾಸಿಯ ಚಿಕ್ಕಪ್ಪನ ಮನೆಯನ್ನು ಸೇರಿಕೊಂಡರು. ಮೈಲುಗಟ್ಟಲೆ ನಡೆದು ಬೂಟುಗಳಿಲ್ಲದೆ ಶಾಲೆಗೆ ಹೋಗುತ್ತಿದ್ದರು.

ಶಾಲಾ ದಿನಗಳಲ್ಲಿ, ದೋಣಿಯಲ್ಲಿ ಹೋಗಲು ಸಾಕಷ್ಟು ಹಣವಿಲ್ಲದ ಕಾರಣ ಶಾಸ್ತ್ರಿಯವರು ತಮ್ಮ ಪುಸ್ತಕವನ್ನು ತಲೆಯ ಮೇಲೆ ಕಟ್ಟಿಕೊಂಡು ದಿನಕ್ಕೆ ಎರಡು ಬಾರಿ ಗಂಗೆಯನ್ನು ಈಜುತ್ತಿದ್ದರು.

2. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆಸಕ್ತಿಕರ ಸಂಗತಿ

2. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆಸಕ್ತಿಕರ ಸಂಗತಿ

ಶಾಸ್ತ್ರಿ ಅವರು ವಾರಣಾಸಿಯ ಕಾಶಿ ವಿದ್ಯಾ ಪೀಠದಲ್ಲಿ ಅಧ್ಯಯನ ಮಾಡಿದರು, ಇದು ಬ್ರಿಟಿಷರ ಆಳ್ವಿಕೆಯನ್ನು ವಿರೋಧಿಸಿ ಸ್ಥಾಪಿಸಲಾದ ಅನೇಕ ರಾಷ್ಟ್ರೀಯ ಸಂಸ್ಥೆಗಳಲ್ಲಿ ಒಂದಾಗಿದೆ. ಅಲ್ಲಿ, ಯುವ ನಾಯಕ ದೇಶದ ಮಹಾನ್ ಬುದ್ಧಿಜೀವಿಗಳು ಮತ್ತು ರಾಷ್ಟ್ರೀಯವಾದಿಗಳ ಪ್ರಭಾವಕ್ಕೆ ಒಳಗಾದರು.

ಲಾಲ್ ಬಹದ್ದೂರ್ ಅವರು ವಿದ್ವತ್ಪೂರ್ಣ ಯಶಸ್ಸಿನ ಗುರುತಾಗಿ 1926 ರಲ್ಲಿ ಕಾಶಿ ವಿದ್ಯಾಪೀಠ ವಿಶ್ವವಿದ್ಯಾಲಯದಲ್ಲಿ 'ಶಾಸ್ತ್ರಿ' ಎಂಬ ಬಿರುದನ್ನು ಪಡೆದರು. ಅವರ ಹೆಸರಿನಲ್ಲಿರುವ ‘ಶಾಸ್ತ್ರಿ' ಎಂಬ ಪದವು ಅವರಿಗೆ ವಿದ್ಯಾ ಪೀಠ ನೀಡಿದ ಪದವಿಯಾದರೂ ಅದು ಅವರ ಹೆಸರಿನ ಭಾಗವಾಗಿ ಜನಮಾನಸದಲ್ಲಿ ಅಂಟಿಕೊಂಡಿತು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರು 1927 ರಲ್ಲಿ ಲಲಿತಾ ದೇವಿ ಅವರನ್ನು ವಿವಾಹವಾದರು. ಅವರ ಮದುವೆಯ ಸಂದರ್ಭದಲ್ಲಿ, ಶಾಸ್ತ್ರಿಯವರು ವರದಕ್ಷಿಣೆಯ ಭಾಗವಾಗಿ ಖಾದಿ ಬಟ್ಟೆ ಮತ್ತು ನೂಲುವ ಚಕ್ರವನ್ನು ತೆಗೆದುಕೊಂಡರು.

 3. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆಸಕ್ತಿಕರ ಸಂಗತಿ

3. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆಸಕ್ತಿಕರ ಸಂಗತಿ

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ಅವರು ಹಲವಾರು ಅಭಿಯಾನಗಳನ್ನು ನಡೆಸಿದರು ಮತ್ತು ಒಟ್ಟು ಏಳು ವರ್ಷಗಳ ಕಾಲ ಬ್ರಿಟಿಷ್ ಜೈಲುಗಳಲ್ಲಿ ಕಳೆದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅವರು ಜೈಲಿನಲ್ಲಿದ್ದಾಗ, ಶಾಸ್ತ್ರಿಯವರ ಪತ್ನಿಗೆ ತಿಂಗಳಿಗೆ 50 ರೂಪಾಯಿ ಪಿಂಚಣಿ ಸಿಗುತ್ತಿತ್ತು. ಶಾಸ್ತ್ರಿಯವರ ಪತ್ನಿ ಒಮ್ಮೆ ಹಣದಿಂದ 10 ರೂಪಾಯಿಗಳನ್ನು ಉಳಿಸಿರುವುದಾಗಿ ತಿಳಿಸಿದರು. ಅವಳೊಂದಿಗೆ ಸಿಟ್ಟಿಗೆದ್ದ ಶಾಸ್ತ್ರಿ ತನ್ನ ಪಿಂಚಣಿಯನ್ನು ಕಡಿಮೆ ಮಾಡಲು ಮತ್ತು ಕೆಲವು ನಿರ್ಗತಿಕರಿಗೆ 10 ರೂಪಾಯಿಗಳನ್ನು ನೀಡುವಂತೆ ಪೀಪಲ್ಸ್ ಸೊಸೈಟಿಯ ಸೇವಕರನ್ನು ಕೇಳಿದರು.

ಶಾಸ್ತ್ರೀ ಅವರ ಮಗನಿಗೆ ಇಲಾಖೆಯಲ್ಲಿ ಅನಗತ್ಯ ಬಡ್ತಿ ನೀಡಿದಾಗ, ಶಾಸ್ತ್ರಿ ಅದನ್ನು ತಕ್ಷಣವೇ ಬದಲಾಯಿಸಿದರು.

1946 ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ, ಆಡಳಿತದಲ್ಲಿ ರಚನಾತ್ಮಕ ಪಾತ್ರವನ್ನು ವಹಿಸಲು ಯುವಕನನ್ನು ಆಹ್ವಾನಿಸಲಾಯಿತು. ಪಕ್ಷವು ಅವರನ್ನು ಉತ್ತರ ಪ್ರದೇಶ ರಾಜ್ಯದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ ನೇಮಿಸಿತು ಮತ್ತು ಶೀಘ್ರದಲ್ಲೇ ಗೃಹ ಸಚಿವ ಸ್ಥಾನಕ್ಕೆ ಏರಿದರು.

4. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆಸಕ್ತಿಕರ ಸಂಗತಿ

4. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆಸಕ್ತಿಕರ ಸಂಗತಿ

ಅವರು 1951 ರಲ್ಲಿ ನವದೆಹಲಿಗೆ ಸ್ಥಳಾಂತರಗೊಂಡರು ಮತ್ತು ಕೇಂದ್ರ ಸಂಪುಟದಲ್ಲಿ ಹಲವಾರು ಖಾತೆಗಳನ್ನು ಹೊಂದಿದ್ದರು. ರೈಲ್ವೇ ಸಚಿವ, ಸಾರಿಗೆ ಮತ್ತು ಸಂವಹನ ಸಚಿವರು, ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಿ, ಗೃಹ ಸಚಿವರು ಆಗಿದ್ದರು.

ಅವರು ಶ್ವೇತ ಕ್ರಾಂತಿಯನ್ನು ಉತ್ತೇಜಿಸಿದರು. ಹಾಲಿನ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸುವ ರಾಷ್ಟ್ರೀಯ ಅಭಿಯಾನ ಮಾಡಿದರು. ಗುಜರಾತ್‌ನ ಅಮುಲ್ ಹಾಲು ಸಹಕಾರಿ ಮತ್ತು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯನ್ನು ರಚಿಸುವ ಮೂಲಕ ಇದು ಯಶಸ್ವಿಯಾಯಿತು.

2004ರಲ್ಲಿ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ, ಆರ್‌ಬಿಐ ಅವರ ಭಾವಚಿತ್ರದೊಂದಿಗೆ ರೂ.100 ನಾಣ್ಯವನ್ನು ಬಿಡುಗಡೆ ಮಾಡುವ ಮೂಲಕ ಅವರ ಜೀವನವನ್ನು ಸ್ಮರಿಸಲಾಯಿತು.

ಶಾಸ್ತ್ರಿಯವರು 11 ಜನವರಿ 1966 ರಂದು ಆಗಿನ USSR ನ ತಾಷ್ಕೆಂಟ್‌ನಲ್ಲಿ ಹೃದಯಾಘಾತದಿಂದ ನಿಧನರಾದರು, ಆದರೆ ಅವರ ಸಾವು ಇಂದಿಗೂ ಅನುಮಾನದಿಂದ ಕಂಡುಬರುತ್ತದೆ.

English summary

Lal Bahadur Shastri Jayanti 2022 : Interesting Facts About The 2nd PM of India in kannada

Here we are discussing about Lal Bahadur Shastri: Interesting Facts About The 2nd PM of India in kannada. Read more.
X
Desktop Bottom Promotion