For Quick Alerts
ALLOW NOTIFICATIONS  
For Daily Alerts

ಕೃಷ್ಣ ಜನ್ಮಾಷ್ಟಮಿ 2021: ಬಾಲಗೋಪಾಲನ ಸಂಪೂರ್ಣ ಕೃಪೆಗಾಗಿ ಆತನನ್ನು ಈ ರೀತಿ ಪೂಜಿಸಿ

|

ಇದೇ ಬರುವ ಆಗಸ್ಟ್ 30ರಂದು ಗೋಕುಲಾಂದನ ಜನ್ಮದಿನ, ಅಂದರೆ ಶ್ರೀಕೃಷ್ಣಜನ್ಮಾಷ್ಟಮಿ. ವಿಷ್ಣುವಿನ ಪ್ರಮುಖ ಅವತಾರಗಳಲ್ಲಿ ಒಂದಾದ, ಕೃಷ್ಣಾವತಾರವು, ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ಬಹಳ ಶ್ರದ್ಧೆ, ಪ್ರೀತಿ, ಗೌರವದಿಂದ ಕೃಷ್ಣನ ಜನ್ಮಾಷ್ಟಮಿಯನ್ನು ಆಚರಣೆ ಮಾಡಲಾಗುತ್ತದೆ.

ದುಷ್ಟರ ಸಂಹಾರ, ಶಿಷ್ಟರ ರಕ್ಷಣೆಗೆ ಜನ್ಮವೆತ್ತಿದ ಗೋಕುಲಾಂದನ ಸಿದ್ಧಿಗಾಗಿ, ಆತನ ಪೂಜೆಯನ್ನು ಮನೆಯಲ್ಲಿ ಹೇಗೆ ಸರಳವಾಗಿ ಮಾಡಬಹುದು? ಅದಕ್ಕೆ ಬೇಕಾಗಿರುವ ಪೂಜಾಸಾಮಾಗ್ರಿಗಳಾವುವು? ಕೃಷ್ಣನ ಪೂಜಾಮಂತ್ರ ಎಲ್ಲವನ್ನೂ ಈ ಲೇಖನದಲ್ಲಿ ನೀಡಲಾಗಿದೆ. ಇವುಗಳನ್ನು ಅನುಸರಿಸಿ, ನೀವೂ ಕೃಷ್ಣನ ಕೃಪೆಗೆ ಪಾತ್ರರಾಗಿ.

ಬಾಲ ಗೋಪಾಲನ ಪೂಜೆಗೆ ಅಗತ್ಯವಾದ ಸಾಮಾಗ್ರಿಗಳು:

ಬಾಲ ಗೋಪಾಲನ ಪೂಜೆಗೆ ಅಗತ್ಯವಾದ ಸಾಮಾಗ್ರಿಗಳು:

ದೊಡ್ಡ ಮಡಕೆ, ತಾಮ್ರದ ಮಡಕೆ, ಕಲಶ, ಹಾಲು, ಬಟ್ಟೆ, ಆಭರಣ, ಅಕ್ಕಿ, ಕುಂಕುಮ, ದೀಪ, ಎಣ್ಣೆ, ಹತ್ತಿ, ಧೂಪದ ಕಡ್ಡಿಗಳು, ಹೂವು, ಅಷ್ಟಗಂಧ, ತುಳಸಿ, ಎಳ್ಳು, ಜೇನು, ಹಣ್ಣು, ಸಿಹಿತಿಂಡಿಗಳು, ತೆಂಗಿನಕಾಯಿ, ಪಂಚಾಮೃತ, ಒಣ ಹಣ್ಣುಗಳು, ವೀಳ್ಯದೆಲೆ, ಖೀರ್, ಹಾಲು ಮತ್ತು ಹಾಲಿನ ಉತ್ಪನ್ನಗಳು.

ಪೂಜಾ ಮುಹೂರ್ತ:

ಪೂಜಾ ಮುಹೂರ್ತ:

ನಿಶಿತಾ ಕಾಲ ಮುಹೂರ್ತ: ರಾತ್ರಿ 11:59ರಿಂದ 12:44ರವರೆಗೆ

ಅಷ್ಟಮಿ ತಿಥಿ ಪ್ರಾರಂಭ: ಆಗಸ್ಟ್ 29, 2021 ರಾತ್ರಿ 11:25ರವರೆಗೆ

ಅಷ್ಟಮಿ ತಿಥಿ ಮುಕ್ತಾಯ: ಆಗಸ್ಟ್‌ 30 ರಾತ್ರಿ 01:59ರವರೆಗೆ

ಮುರಾರಿಯ ಪೂಜಾವಿಧಾನ:

ಮುರಾರಿಯ ಪೂಜಾವಿಧಾನ:

  1. ಬೆಳಿಗ್ಗೆ ಬೇಗನೆ ಎದ್ದು ಪೂಜೆಗೆ ವ್ಯವಸ್ಥೆ ಮಾಡಿ. ಮೊದಲು ಗಣೇಶನನ್ನು ಪೂಜಿಸಿ. ಗಣೇಶನಿಗೆ ಅಭಿಷೇಕ ಮಾಡಿ, ಹೂವುಗಳಿಂದ ಅಲಂಕರಿಸಿ, ಅಕ್ಕಿಯನ್ನು ನೀಡಿ.
  2. ತದನಂತರ ಕೃಷ್ಣ ಪೂಜೆ. ಕೃಷ್ಣನ ಮೂರ್ತಿಯನ್ನು ಈಶಾನ್ಯ ದಿಕ್ಕಿನಲ್ಲಿ ಇರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಮೂರ್ತಿಯನ್ನು ಹಳದಿ ಮತ್ತು ನೀಲಿ ಬಣ್ಣಗಳಿಂದ ಅಲಂಕರಿಸುವುದು ಅತ್ಯಗತ್ಯ. ಏಕೆಂದರೆ ಇದು ಅವರಿಗೆ ಅದೃಷ್ಟ ಮತ್ತು ಶಾಂತಿಯನ್ನು ತರಬಹುದು.
  3. ಮೊದಲು ಶುದ್ಧ ನೀರಿನಿಂದ ಕೃಷ್ಣನಿಗೆ ಸ್ನಾನ ಮಾಡಿಸಿ, ನಂತರ ಜೇನು, ಸಕ್ಕರೆ, ಹಾಲು, ಮೊಸರು, ತುಪ್ಪ ಮತ್ತು ಗಂಗಾಜಲದ ಮಿಶ್ರಣವಾಗಿರುವ ಪಂಚಾಮೃತದಿಂದ ಅಭಿಷೇಕ ಮಾಡಿ, ನಂತರ ಶುದ್ಧ ನೀರನ್ನು ಅರ್ಪಿಸಿ.
  4. ಅದರ ನಂತರ ಕೃಷ್ಣನಿಗೆ ಬಟ್ಟೆಗಳನ್ನು ಧರಿಸಿ, ಆಭರಣಗಳಿಂದ ಅಲಂಕರಿಸಿ.
  5. ಹೂವು, ಹಣ್ಣು, ಸಿಹಿತಿಂಡಿಗಳು, ಜೇನು, ತೆಂಗಿನಕಾಯಿ, ಪಂಚಾಮೃತ, ಡ್ರೈ ಫ್ರೂಟ್ಸ್, ವೀಳ್ಯದೆಲೆ, ಖೀರ್, ಲಡ್ಡು, ಹಾಲು, ಹಾಲಿನ ಉತ್ಪನ್ನಗಳು ಸೇರಿದಂತೆ ಇತರ ಪೂಜಾ ಸಾಮಗ್ರಿಗಳನ್ನು ಕೃಷ್ಣನ ಮುಂದಿಟ್ಟು, ತಿಲಕವನ್ನಿಟ್ಟು, ಧೂಪ ಹಾಕಿರಿ.
  6. ತುಳಸಿ ಎಲೆಗಳ ಸಹಾಯದಿಂದ ಬೆಣ್ಣೆ ಮತ್ತು ಸಕ್ಕರೆ ಮಿಶ್ರಣವನ್ನು ಕೃಷ್ಣನಿಗೆ ಅರ್ಪಿಸುತ್ತಾ, ಕೃಷ್ಣನ ಮಂತ್ರವನ್ನು 108 ಬಾರಿ ಜಪಿಸಿ.
  7. ಕೊನೆಯದಾಗಿ ಆರತಿ ಬೆಳಗಿ, ಪ್ರದಕ್ಷಿಣೆ ಹಾಕಿ, ಪೂಜೆಯಲ್ಲಿ ಉದ್ದೇಶಪೂರ್ವಕವಲ್ಲದ ತಪ್ಪಿಗೆ ಕ್ಷಮೆ ಕೇಳಿ.
  8. ಇದರ ನಂತರ, ಇತರ ಭಕ್ತರಿಗೆ ಪ್ರಸಾದವನ್ನು ವಿತರಿಸಿ, ನೀವೂ ಪ್ರಸಾದವನ್ನು ತೆಗೆದುಕೊಳ್ಳಿ.
  9. ನೀವು ಉಪವಾಸ ಮಾಡುತ್ತಿದ್ದರೆ, ಜನ್ಮಾಷ್ಟಮಿಯ ದಿನ ಯಾವುದೇ ಧಾನ್ಯಗಳನ್ನು ಸೇವಿಸಬಾರದು ಎಂಬುದನ್ನು ನೆನಪಿನಲ್ಲಿಡಿ.
ಕೃಷ್ಣ ಜನ್ಮಾಷ್ಟಮಿಯಂದು ಪಠಿಸಬೇಕಾದ ಮಂತ್ರ:

ಕೃಷ್ಣ ಜನ್ಮಾಷ್ಟಮಿಯಂದು ಪಠಿಸಬೇಕಾದ ಮಂತ್ರ:

ಹರೇ ಕೃಷ್ಣ, ಹರೇ ಕೃಷ್ಣ

ಕೃಷ್ಣ ಕೃಷ್ಣ ಹರೇ ಹರೇ

ಹರೇ ರಾಮ ಹರೇ ರಾಮ

ರಾಮ ರಾಮ ರಾಮ ಹರೇ ಹರೇ

ಅಥವಾ

ರಾಧೆ ಕೃಷ್ಣ ರಾಧೆ ಕೃಷ್ಣ

ಕೃಷ್ಣ ಕೃಷ್ಣ ರಾಧೆ ರಾಧೆ

ಮೇಲಿನ ಎಲ್ಲಾ ಆಚರಣೆಗಳನ್ನು ಮಾಡಿದರೆ, ಶ್ರೀಕೃಷ್ಣ ನಿಮ್ಮೆಲ್ಲಾ ಕಷ್ಟಗಳನ್ನು ದೂರಮಾಡಿ, ನಿಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಸಮೃದ್ಧೀಯಿಂದ ಕೂಡಿರುವಂತೆ ಮಾಡುತ್ತಾನೆ. ಆದರೆ ಇಲ್ಲಿ ಶ್ರದ್ಧೆ ಹಾಗೂ ಭಕ್ತಿ ತುಂಬಾ ಮುಖ್ಯ. ಕೃಷ್ಣಂ ವಂದೇ ಜಗದ್ಗುರುಂ..

English summary

Krishna Janmashtami 2021: Puja Vidhi, Vrat Vidhi, Puja Samagri, Puja Rituals and Mantra

Here we talking about Krishna Janmashtami 2021: Puja Vidhi, Vrat Vidhi, Puja Samagri, Puja Rituals and Mantra, read on
Story first published: Tuesday, August 24, 2021, 18:24 [IST]
X
Desktop Bottom Promotion