For Quick Alerts
ALLOW NOTIFICATIONS  
For Daily Alerts

ಹಣೆಗೆ ತಿಲಕವನ್ನು ಇಟ್ಟುಕೊಳ್ಳುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

|

ನಮ್ಮ ಸಂಸ್ಕೃತಿಯಲ್ಲಿ, ಹಣೆಗೆ ತಿಲಕವನ್ನು ಇಡುವುದಕ್ಕೆ ಹೆಚ್ಚು ಒತ್ತು ನೀಡುತ್ತೇವೆ. ಹೆಣ್ಣಿರಲಿ, ಗಂಡಿರಲಿ ಹಳದಿ ಶ್ರೀಗಂಧ ಅಥವಾ ಕುಂಕುಮದ ತಿಲಕವನ್ನು ಇಟ್ಟುಕೊಳ್ಳುವುದು ನಮ್ಮ ಸಾಮಾನ್ಯ ಅಭ್ಯಾಸವಾಗಿದೆ. ಆದರೆ, ಹಣೆಯ ಮೇಲೆ ಶ್ರೀಗಂಧವನ್ನು ಹಚ್ಚುವುದರ ಧಾರ್ಮಿಕ ಮಹತ್ವ ಹಾಗೂ ಇತರ ಪ್ರಯೋಜನಗಳನ್ನು ತಿಳಿದಿರಬೇಕು. ಅದನ್ನು ಈ ಲೇಖನದಲ್ಲಿ ನೋಡೋಣ.

ಹಣೆಗೆ ತಿಲಕವನ್ನು ಇಡುವುದರ ಮಹತ್ವ:

ಹಣೆಗೆ ತಿಲಕವನ್ನು ಇಡುವುದರ ಮಹತ್ವ:

ಹಿಂದೂ ಸಂಸ್ಕೃತಿಯಲ್ಲಿ ತಿಲಕವನ್ನು ಪವಿತ್ರ ಮತ್ತು ಮಂಗಳಕರವೆಂದು ಪರಿಗಣಿಸಲಾಗಿದೆ. ನಾವು ತಿಲಕ ಇಡುವ ಜಾಗವನ್ನು ಅಜ್ಞಾಚಕ್ರ ಎನ್ನುತ್ತೇವೆ. ಇದು ನಮ್ಮ ಹುಬ್ಬುಗಳ ನಡುವೆ ಇದೆ. ಈ ಚಕ್ರವನ್ನು ಯೋಗ ವಿಜ್ಞಾನದಲ್ಲಿ ಸಾಮಾನ್ಯವಾಗಿ ಮೂರನೇ ಕಣ್ಣು ಎಂದು ಕರೆಯಲಾಗುತ್ತದೆ, ಮೂರನೆಯ ಕಣ್ಣು ಜಾಗೃತಿಯ ಬಿಂದುವಾಗಿದ್ದು, ಆಗಾಗ್ಗೆ ಎಚ್ಚರಗೊಳ್ಳುತ್ತದೆ.

ಯಾವಾಗಲೂ ಉಂಗುರ ಬೆರಳಿನಿಂದ ತಿಲಕವನ್ನು ಹಚ್ಚಲಾಗುತ್ತದೆ. ಉಂಗುರ ಬೆರಳು ಸೂರ್ಯನ ಪ್ರತೀಕ. ಈ ಬೆರಳಿನಿಂದ ತಿಲಕ ಹಚ್ಚಿದರೆ, ಯಶಸ್ಸು ಸಿಗುತ್ತದೆ. ಇದಲ್ಲದೇ ಗೌರವದ ಪ್ರತೀಕವಾಗಿ ಹೆಬ್ಬೆಟ್ಟಿನಿಂದ ತಿಲಕವನ್ನು ಇಡಲಾಗುತ್ತದೆ. ವಿಜಯದ ಪ್ರತೀಕವಾಗಿ ತೋರು ಬೆರಳಿನಿಂದ ತಿಲಕವಿಡಲಾಗುತ್ತದೆ.

ಯಾವುದೇ ಬಣ್ಣದ ತಿಲಕ ಹಚ್ಚಿದರೂ ಅದರಿಂದ ಶಕ್ತಿ ಹೆಚ್ಚುತ್ತದೆ. ಆದರೆ ಒಂದೊಂದು ಬಣ್ಣಕ್ಕೂ ಒಂದೊಂದು ಅರ್ಥವಿದೆ. ಬಿಳಿ ಅಥವಾ ಗಂಧದ ತಿಲಕ ಸೌಮ್ಯತೆಯ ಸಂಕೇತವಾದರೆ, ಕೆಂಪು ಶಕ್ತಿಯ ಸಂಕೇತ. ಅದೇ ರೀತಿ ಹಳದಿ ಬಣ್ಣದ ತಿಲಕ ಸಂತೋಷದ ಸಂಕೇತ.

ಹಣೆಗೆ ಶ್ರೀಗಂಧದ ತಿಲಕವನ್ನು ಇಡುವುದರಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಹಣೆಗೆ ಶ್ರೀಗಂಧದ ತಿಲಕವನ್ನು ಇಡುವುದರಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಏಕಾಗ್ರತೆ ಹೆಚ್ಚಿಸುವುದು:

ತಿಲಕವನ್ನು ಯಾವಾಗಲೂ ಹಣೆಯ ಕೇಂದ್ರ ಭಾಗದಲ್ಲಿ ಹಚ್ಚಲಾಗುತ್ತದೆ. ನಮ್ಮ ಶರೀರದಲ್ಲಿ ಏಳು ಸಣ್ಣ ಶಕ್ತಿ ಕೇಂದ್ರಗಳಿವೆ. ಅದರಲ್ಲಿ ನಾವು ತಿಲಕವಿಡುವ ಅಜ್ಞಾ ಚಕ್ರ ಕೂಡ ಒಂದು. ಮಸ್ತಿಷ್ಕದ ಮಧ್ಯದಲ್ಲಿ ಆಜ್ಞಾ ಚಕ್ರವಿದ್ದು, ಇದನ್ನು ಗುರು ಚಕ್ರ ಎಂದೂ ಕರೆಯಲಾಗುತ್ತದೆ. ಇದು ಮಾನವ ಶರೀರದ ಕೇಂದ್ರ ಭಾಗವಾಗಿದ್ದು, ಇಲ್ಲಿ ತಿಲಕವನ್ನು ಇಡುವುದರಿಂದ ಏಕಾಗ್ರತೆ ಮತ್ತು ಜ್ಞಾನ ಹೆಚ್ಚುತ್ತದೆ.

ನಿಮ್ಮನ್ನು ಧನಾತ್ಮಕವಾಗಿ ಇರಿಸುತ್ತದೆ:

ನಿಮ್ಮನ್ನು ಧನಾತ್ಮಕವಾಗಿ ಇರಿಸುತ್ತದೆ:

ಮೂರನೇ ಕಣ್ಣು ವ್ಯಕ್ತಿಯ ಉಪಪ್ರಜ್ಞೆ ಮತ್ತು ಮಾನಸಿಕ ಪ್ರಕ್ರಿಯೆಯನ್ನು ಸಂಕೇತಿಸುತ್ತದೆ. ಈ ಚಕ್ರದ ಮೂಲಕ, ನಕಾರಾತ್ಮಕ ಶಕ್ತಿಯು ನಕಾರಾತ್ಮಕ ಆಲೋಚನೆಗಳ ರೂಪದಲ್ಲಿ ದೇಹವನ್ನು ಪ್ರವೇಶಿಸುತ್ತದೆ. ಅದಕ್ಕಾಗಿಯೇ ಶ್ರೀಗಂಧವನ್ನು ಹಣೆಯ ಮೇಲೆ ಹಚ್ಚಬೇಕು. ಈ ಮೂಲಕ ಎಲ್ಲಾ ನಕಾರಾತ್ಮಕತೆಯನ್ನು ತೆಗೆದುಹಾಕಲು ಹಾಗೂ ದೇಹ ಪ್ರವೇಶಿಸದಂತೆ ತಡೆಯಲು ಸಹಾಯ ಮಾಡುತ್ತದೆ.

ದೇಹವನ್ನು ತಂಪಾಗಿಡುವುದು:

ದೇಹವನ್ನು ತಂಪಾಗಿಡುವುದು:

ಶ್ರೀಗಂಧವು ಅದರ ತಂಪಾಗಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾದ ಮಾಂತ್ರಿಕ ಅಂಶವಾಗಿದೆ. ಇದು ಚರ್ಮಕ್ಕೆ ಮಾತ್ರವಲ್ಲದೆ ಅದರ ಕೆಳಗಿನ ನರಗಳಿಗೂ ಪ್ರಯೋಜನವನ್ನು ನೀಡುತ್ತದೆ. ಆದ್ದರಿಂದ ನಿಮ್ಮ ಹಣೆಯ ಮೇಲೆ ಶ್ರೀಗಂಧವನ್ನು ಹಚ್ಚುವುದರಿಂದ ನಿಮ್ಮ ಇಡೀ ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ.

ತಲೆನೋವಿನಿಂದ ಪರಿಹಾರ:

ತಲೆನೋವಿನಿಂದ ಪರಿಹಾರ:

ಹುಬ್ಬುಗಳ ನಡುವಿನ ಪ್ರದೇಶವನ್ನು ನರಗಳ ಪರಿವರ್ತನೆಯ ಬಿಂದು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಇದು ತಲೆನೋವುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ನಿಮ್ಮ ಹಣೆಯ ಮೇಲೆ ಶ್ರೀಗಂಧವನ್ನು ಹಚ್ಚುವುದರಿಂದ ನರಗಳು ತಂಪಾಗುತ್ತದೆ ಜೊತೆಗೆ ಹೆಚ್ಚು ಬಿಸಿಲಿನಿಂದ ಉಂಟಾಗುವ ತಲೆನೋವಿನಿಂದ ಪರಿಹಾರವನ್ನು ನೀಡುತ್ತದೆ.

English summary

Know Why People apply Tilak on your forehead & What are the benefits in kannada

Here we talking about Know Why People apply Tilak on your forehead & What are the benefits in kannada, read on
X
Desktop Bottom Promotion