For Quick Alerts
ALLOW NOTIFICATIONS  
For Daily Alerts

ಕಬೀರ್ ದಾಸ್ ಜಯಂತಿ 2021: ದಿನಾಂಕ, ತಿಥಿ ಹಾಗೂ ಮಹತ್ವದ ಕುರಿತು ಮಾಹಿತಿ

|

ಇದೇ ಜೂನ್ 24ರಂದು ಕಬೀರ್‌ದಾಸ್ ಜಯಂತಿಯನ್ನು ಆಚರಿಸಲಾಗುವುದು. ಭಾರತದ ಪ್ರಸಿದ್ಧ ಕವಿ, ಸಂತ ಮತ್ತು ಸಾಮಾಜಿಕ ಸುಧಾರಕರಾದ ಸಂತ ಕಬೀರ್‌ದಾಸ್ ರ ಜನ್ಮ ದಿನವನ್ನು ಕಬೀರ್ ದಾಸ್ ಜಯಂತಿ ಎಂದು ಆಚರಣೆ ಮಾಡಲಾಗುವುದು. ಇಲ್ಲಿ ನಾವು ಜಯಂತಿಯ ತಿಥಿ ಮತ್ತು ಮಹತ್ವವನ್ನು ವಿವರಿಸಿದ್ದೇವೆ.

ಕಬೀರ್ ದಾಸ್ ಬಗ್ಗೆ :

ಕಬೀರ್ ದಾಸ್ ಬಗ್ಗೆ :

ಕಬೀರ್ ಮುಸ್ಲಿಂ ಕುಟುಂಬದಲ್ಲಿ ಜನಿಸಿದರೂ ಅವನಿಗೆ ಹಿಂದೂ ಗುರು ಶಿಕ್ಷಣ ನೀಡಿದ್ದರು. ಆದರೆ, ಅವನಿಗೆ ಸರಿಯಾದ ಶಿಕ್ಷಣ ಇರಲಿಲ್ಲ ಎಂದು ಸಹ ಹೇಳಲಾಗುತ್ತದೆ. ಸಂತ ಕಬೀರ್, ತಮ್ಮ ಇಡೀ ಜೀವಿತಾವಧಿಯಲ್ಲಿ, ಬೂಟಾಟಿಕೆ, ಮೂಢನಂಬಿಕೆ ಮತ್ತು ವ್ಯಕ್ತಿ ಆರಾಧನೆಯನ್ನು ವಿರೋಧಿಸಿದರು, ಜನರಿಗೆ ಐಕ್ಯತೆಯ ಪಾಠವನ್ನು ಕಲಿಸಿದರು.

ಕಬೀರ್ ದಾಸ್ ಜಯಂತಿಯ ದಿನಾಂಕ ಮತ್ತು ಸಮಯ:

ಕಬೀರ್ ದಾಸ್ ಜಯಂತಿಯ ದಿನಾಂಕ ಮತ್ತು ಸಮಯ:

ದಿನಾಂಕ - 2021, ಜೂನ್ 24 ರ ಗುರುವಾರ

ಪೂರ್ಣಿಮಾ ತಿಥಿ - 2021 ಜೂನ್ 24 ರಂದು ಬೆಳಿಗ್ಗೆ 03:32ಕ್ಕೆ

ಪೂರ್ಣಿಮಾ ತಿಥಿ ಅಂತ್ಯ - ಜೂನ್ 21, 2021 ರಂದು ರಾತ್ರಿ 12.09 ನಿಮಿಷಕ್ಕೆ

ಕಬೀರ್ ದಾಸ್ ಜಯಂತಿಯ ಮಹತ್ವ:

ಕಬೀರ್ ದಾಸ್ ಜಯಂತಿಯ ಮಹತ್ವ:

ಹಿಂದೂ ಪಂಚಾಂಗದ ಪ್ರಕಾರ, ಸಂತ ಕಬೀರ್ ಅವರ ಜನ್ಮ ದಿನಾಚರಣೆಯನ್ನು ಜೇಷ್ಠ ಮಾಸದ ಪೂರ್ಣಿಮಾ ತಿಥಿಯಲ್ಲಿ ಆಚರಿಸಲಾಗುತ್ತದೆ. ಸಂತ ಕಬೀರ್‌ದಾಸ್ ಅವರ ಪ್ರಸಿದ್ಧ ಬರಹಗಳಲ್ಲಿ ಬಿಜಾಕ್, ಸಖಿ ಗ್ರಂಥ, ಕಬೀರ್ ಗ್ರಂಥಾವಳಿ ಮತ್ತು ಅನುರಾಗ ಸಾಗರ ಸೇರಿವೆ. ಈ ದಿನ, ಸಂತ ಕಬೀರ್ ದಾಸರ ಅನುಯಾಯಿಗಳು ಅವರ ಬೋಧನೆಗಳನ್ನು ಭೋದಿಸುತ್ತಾರೆ ಮತ್ತು ಅವರ ಕವಿತೆಗಳನ್ನು ಒಟ್ಟಿಗೆ ಪಠಿಸುತ್ತಾರೆ.

ಸತ್ಯವೇ ದೇವರು :

ಸತ್ಯವೇ ದೇವರು :

ಸಂತ ಕಬೀರ್‌ದಾಸ್ ಅವರ ಕೃತಿಯ ವಿಶಿಷ್ಟ ಲಕ್ಷಣವೆಂದರೆ, 'ಕಬೀರ್ ಕೆ ದೋಹಾ' ಅಂದರೆ ಎರಡು ಸಾಲಿನ ಪದ್ಯಗಳು. ಕಬೀರ್ ದಾಸ್ ಜೀವನದ ನಿಜವಾದ ಅರ್ಥವನ್ನು ಬರೆಯುವಲ್ಲಿ ಬಹಳ ಸರಳವಾದ ಭಾಷೆಯನ್ನು ಬಳಸಿದ್ದಾರೆ. ಪದ್ಯಗಳನ್ನು ಬರೆಯಲು ಹಿಂದಿ ಭಾಷೆಯನ್ನು ಬಳಸಲಾಗುತ್ತಿತ್ತು, ಆದರೆ ಅದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಅವರ ಕಾಲದ ಜನರು ಅವರ ಕಾವ್ಯವನ್ನು ಒಪ್ಪಿಕೊಂಡರು. ಜನರಲ್ಲಿ ಜಾಗೃತಿ ಮೂಡಿಸುವ ಸಾಧನವಾಗಿ ಅವರು ಈ ಎರಡು ಸಾಲಿನ ಪದ್ಯವನ್ನು ಬರೆಯಲು ಪ್ರಾರಂಭಿಸಿದರು. ಅವರ ಕವನಗಳು ಮತ್ತು ನುಡಿಗಟ್ಟುಗಳನ್ನು ಶಾಲಾ ಮಟ್ಟದ ಪಠ್ಯಕ್ರಮದಲ್ಲಿ ಅಳವಡಿಸಲಾಗಿದೆ.

English summary

Kabirdas Jayanti 2021 Date, Time and Significance

Here we talking about Kabirdas Jayanti 2021 Date, Time and Significance, read on
X
Desktop Bottom Promotion