For Quick Alerts
ALLOW NOTIFICATIONS  
For Daily Alerts

ಅಂತರರಾಷ್ಟ್ರೀಯ ಹುಲಿ ದಿನ: ಭಾರತ ಹಾಗೂ ವಿಶ್ವದಲ್ಲಿರುವ ಹುಲಿಗಳ ಸಂಖ್ಯೆ ನೋಡಿದರೆ ಅಚ್ಚರಿ ಪಡುವಿರಿ

|

ಜುಲೈ 29 ಅಂತರರಾಷ್ಟ್ರೀಯ ಹುಲಿ ದಿನ ಎಂದು ಆಚರಿಸಲಾಗುವುದು. ಹುಲಿಯ ಸಂತತಿ ನಶಿಸುತ್ತಿರುವುದರಿಂದ ಅವುಗಳ ರಕ್ಷಣೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ದಿನವನ್ನು ಆಚರಿಸಿಲಾಗುವುದು.

ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿ. ಅನೇಕ ಕಾರಣಗಳಿಂದಾಗಿ ಹುಲಿಯ ಸಂತತಿ ಕ್ಷೀಣಿಸುತ್ತಿದೆ, ಅವುಗಳನ್ನು ರಕ್ಷಣೆ ಮಾಡದಿದ್ದರೆ ಮುಂದೊಂದು ಹುಲಿಗಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗಿ ಅವುಗಳು ಕಣ್ಮರೆಯಾಗುವ ಅಪಾಯ ಇರುವುದರಿಂದ ಅವುಗಳ ಸಂತತಿ ಬೆಳೆಸಬೇಕಾಗಿದೆ. ಕಾಡುಗಳ ನಾಶ, ಅರಣ್ಯಕ್ಕೆ ಬೆಂಕಿ ಬೀಳುವುದು, ಮನುಷ್ಯರು ಹುಲಿಗಳನ್ನು ಕಾನೂನು ಬಾಹಿರವಾಗಿ ಬೇಟೆಯಾಡುವುದು ಹೀಗೆ ಅನೇಕ ಕಾರಣಗಳಿಂದಾಗಿ ಹುಲಿಗಳ ಸಂತತಿ ಕಡಿಮೆಯಾಗಿವೆ.

ಹುಲಿಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ

ಹುಲಿಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ

WWF (World Wide Fund for Nature) ಪ್ರಕಾರ ವಿಶ್ವದಲ್ಲಿ ಹುಲಿಗಳ ಸಂಖ್ಯೆ ಕಳೆದ 150 ವರ್ಷಗಳಲ್ಲಿ ಶೇ. 95ರಷ್ಟು ಕಡಿಮೆಯಾಗಿದೆ. ಅಂದ್ರೆ ಈಗ ಉಳಿದಿರುವುದು ಕೇವಲ ಶೇ.5ರಷ್ಟು ಹುಲಿಗಳು. ಈ ಸಂಖ್ಯೆ ಪ್ರಕೃತ್ತಿ ನಿಯಮಕ್ಕೆ ವಿರುದ್ಧವಾಗಿದೆ. ಸಂರಕ್ಷಿತಾ ಅರಣ್ಯ ಪ್ರದೇಶಗಳಲ್ಲಿರುವ ಹುಲಿಗಳ ಸಂತತಿ ಹೆಚ್ಚುತ್ತಿರುವುದು WWF ಗುರುತಿಸಿದೆ.

2022ರಲ್ಲಿ ಹುಲಿಗಳ ಸಂಖ್ಯೆ ದ್ವಿಗುಣ ಮಾಡುವ ಗುರಿ

2022ರಲ್ಲಿ ಹುಲಿಗಳ ಸಂಖ್ಯೆ ದ್ವಿಗುಣ ಮಾಡುವ ಗುರಿ

2022ರಷ್ಟರಲ್ಲಿ ಹುಲಿಗಳ ಸಂಖ್ಯೆ ದ್ವಿಗುಣ ಮಾಡುವ ಗುರಿಯನ್ನು WWF ಹೊಂದಿದೆ. 2022ನ್ನು ಚೈನೀಸ್ ಇಯರ್‌ ಆಫ್‌ ದಿ ಟೈಗರ್‌ ಎಂದು ಆಚರಿಸಲಾಗುವುದು. ಮುಂದಿನ ವರ್ಷಕ್ಕೆ ಹುಲಿಗಳ ಸಂಖ್ಯೆ 6000 ಮಾಡುವ ಸವಾಲು WWF ಮುಂದಿದೆ.

ಭಾರತ ಹಾಗೂ ವಿಶ್ವದಲ್ಲಿರುವ ಹುಲಿಗಳ ಸಂಖ್ಯೆ

ಭಾರತ ಹಾಗೂ ವಿಶ್ವದಲ್ಲಿರುವ ಹುಲಿಗಳ ಸಂಖ್ಯೆ

ವಿಶ್ವದಲ್ಲಿ ಇದೀಗ 3900 ಹುಲಿಗಳಿದ್ದು ಭಾರತದಲ್ಲಿ ಹುಲಿಗಳ ಸಂಖ್ಯೆ 3000 ಇದೆ. ಅವುಗಳ ಸಂತತಿ ಅಳಿಯುವ ಮುನ್ನವೇ ಎಚ್ಚೆತ್ತು ಏಷ್ಯಾದ ಕಾಡುಗಳಲ್ಲಿ ಅವುಗಳು ಓಡಾಡುವಂತೆ ಮಾಡಬೇಕಾಗಿದೆ. ಈಗ ಹುಲಿಗಳ ಸಂಖ್ಯೆ ಶೇ.7ರಷ್ಟು ಅಧಿಕವಾಗಿದೆ.

ಹುಲಿಗಳ ರಕ್ಷಣೆ ಅವಶ್ಯಕ ಏಕೆ?

ಹುಲಿಗಳ ರಕ್ಷಣೆ ಅವಶ್ಯಕ ಏಕೆ?

* ಪ್ರಕೃತ್ತಿಯ ನಿಯಮದಲ್ಲಿ ಆಹಾರ ಜಾಲ ಎಂಬುವುದಿದೆ. ಈ ಆಹಾರಜಾಲ ವ್ಯವಸ್ಥೆ ಪ್ರಕೃತಿಯ ವ್ಯವಸ್ಥೆಯನ್ನು ಸಮತೋಲನದಲ್ಲಿಡಲು ಸಹಕಾರಿಯಾಗಿದೆ. ಒಂದು ವಸ್ತುವನ್ನು ಅಥವಾ ಪ್ರಾಣಿಯನ್ನು ತಿಂದು ಬದುಕುವುದೇ ಆ ಆಹಾರ ವ್ಯವಸ್ಥೆ. ಈ ಆಹಾರ ಜಾಲದಲ್ಲಿ ಸಸ್ಯಾಹಾರಿಗಳಷ್ಟೇ ಮಾಂಸಾಹಾರಿಗಳ ಪ್ರಾಣಿಗಳು ತುಂಬಾನೇ ಮುಖ್ಯ... ಇವುಗಳಲ್ಲಿ ಅಸಮತೋಲನ ಉಂಟಾದರೆ ಇಡೀ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗುವುದು.

* ಹುಲಿಗಳಿದ್ದರೆ ಜಿಂಕೆಗಳ ಸಂಖ್ಯೆ ಹೆಚ್ಚುವುದು ಇದರಿಂದ ಹಸಿರು ನಾಶವಾಗುವುದು.

* ಹುಲಿ ಕಾಡಿನ ಬಲಿಷ್ಠ ಪ್ರಾಣಿಯಾಗಿದೆ. WWF ಪ್ರಕಾರ ಹುಲಿಯು ತಾನು ವಾಸಿಸುತ್ತಿರುವ ಸ್ಥಳದ ಸುತ್ತಮುತ್ತ 9-19 ಕಿ.ಮೀವರೆಗಿನ ಸ್ಥಳವನ್ನು ಸುತ್ತಾಡಿ ಬೇಟೆಯಾಡುವುದು.

* ಹುಲಿಯು ಪ್ರಮುಖವಾಗಿ ಜಿಂಕೆಯನ್ನು ಬೇಟೆಯಾಡುವುದು. ಒಂದು ದೊಡ್ಡ ಜಿಂಕೆಯನ್ನು ಬೇಟೆಯಾಡಿದರೆ ಒಮದು ವಾರದ ಹಸಿವು ತಣಿಸಲು ಸಾಕು.

English summary

International Tiger Day 2021: Know Total Tiger count in India and World in 2021

International Tiger Day: Know total tiger count in India and World in 2021, read on...
X
Desktop Bottom Promotion