For Quick Alerts
ALLOW NOTIFICATIONS  
For Daily Alerts

ಅಂತರರಾಷ್ಟ್ರೀಯ ಮಾತೃ ಭಾಷೆ ದಿನ 2023: ನಮ್ಮ-ನಮ್ಮ ಮಾತೃಭಾಷೆ ನಮ್ಮ ಮೊದಲ ಆದ್ಯತೆ ಆಗಿರಲಿ

|

ಅಂತರರಾಷ್ಟ್ರೀಯ ಮಾತೃಭಾಷೆ ದಿನವನ್ನು ಫೆಬ್ರವರಿ 21ರಂದು ಆಚರಿಸಲಾಗುವುದು. 1999ರಲ್ಲಿ ಯುನೆಸ್ಕೋ ಮಾತೃ ಭಾಷೆ ದಿನವನ್ನು ಆಚರಿಸಲು ಅನುಮತಿ ನೀಡಿತು. ಮೊತ್ತ ಮೊದಲ ಬಾರಿಗೆ ಅಂತರರಾಷ್ಟ್ರೀಯ ಮಾತೃಭಾಷೆ ದಿನವನ್ನು 2000 ಇಸವಿಯಲ್ಲಿ ಆಚರಿಸಲಾಯಿತು.

International Mother Language Day: Date, Theme, History and Significance in Kannada

ಬಾಷೆ, ಸಂಸ್ಕತಿ ಹಾಗೂ ವೈವಿಧ್ಯತೆಗಳನ್ನು ಉಳಿಸಲು ಹಾಗೂ ಮತ್ತಷ್ಟು ಶ್ರೀಮಂತಗೊಳಸಿಉವ ಉದ್ದೇಶದಿಂದ ಯುನೆಸ್ಕೋ ಈ ದಿನ ಆಚರಣೆಯನ್ನು ಪ್ರಾರಂಭಿಸಿತು.

ಈಗ ನಮಗೆ ಅನೇಕ ಭಾಷೆಗಳು ತಿಳದಿರಬಹುದು ಅಥವಾ ಮಾತನಾಡಬಹುದು. ಆದರೆ ಹುಟ್ಟಿದಾಗಲೇ ಕಲಿತ ಭಾಷೆಯೆಂದರೆ ಅದು ಮಾತೃಭಾಷೆಯಾಗಿರುತ್ತೆ. ಮಾತೃಭಾಷೆಯಲ್ಲಿ ನಾವು ವಿಷಯವನ್ನು ಹೇಳುವಂತೆ ಅಥವಾ ಅರ್ಥ ಮಾಡಿಕೊಳ್ಳುವಂತೆ ಇತರ ಭಾಷೆಯಲ್ಲಿ ಸಾಧ್ಯವಾಗುವುದಿಲ್ಲ, ಸಾಧ್ಯವಾದರು ಅಷ್ಟೊಂದು ಆಪ್ತತೆ ಅನಿಸುವುದಿಲ್ಲ. ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ಮಾತೃಭಾಷೆಯ ಮೂಲಕವೇ.

ನಮ್ಮ ದೇಶದಲ್ಲಿ ಹಲವಾರು ಮಾತೃಭಾಷೆಗಳಿವೆ. ಕರ್ನಾಟಕದಲ್ಲಿಯೇ ಹಲವಾರು ಮಾತೃಭಾಷೆಗಳನ್ನು ಕಾಣಬಹುದು. ನಾವೆಲ್ಲಾ ಕನ್ನಡ ಮಾತನಾಡುತ್ತಿದ್ದರೂ ಆ ಕನ್ನಡ ಭಾಷೆ ಜಿಲ್ಲೆಯಿಂದ-ಜಿಲ್ಲೆಗೆ ವ್ಯತ್ಯಾಸವಿರುತ್ತದೆ. ಬೆಂಗಳೂರು ಕನ್ನಡ ಒಂದು ರೀತಿಯಾದರೆ ಮಂಗಳೂರು ಕಕನ್ನಡವೇ ಬೇರೆ, ಉತ್ತರ ಕರ್ನಾಟಕದ ಕಡೆ ಬೇರೆ ಹೀಗೆ ನಮ್ಮ ಭಾಷೆಗಳಲ್ಲಿ ಹಲವಾರು ವೈವಿಧ್ಯತೆಗಳಿವೆ.

ಮಾತೃಭಾಷೆಯನ್ನು ಬೆಳೆಸುವ ಹಾಗೂ ಅದನ್ನು ಮತ್ತಷ್ಟು ಶ್ರೀಮಂತಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಮಾತೃ ಭಾಷೆ ಬಳಸದೇ ಹೋದರೆ ಅದು ಅವನತಿ ಹಂತ ತಲುಪುವುದು. ಕೆಲವು ಬುಡಕಟ್ಟು ಜನರ ಭಾಷೆಗಳು ನಿಧಾನಕ್ಕೆ ಕಣ್ಮರೆಯಾಗುತ್ತಿವೆ. ಜಗತ್ತಿನಲ್ಲಿ ಮ್ಯಾಂಡರಿನ್ ಎಂಬ ಭಾಷೆಯಿದೆ, ಅದನ್ನು ಕೇವಲ 14 ಜನ ಮಾತನಾಡುತ್ತಾರಂತೆ.

ಎಷ್ಟೋ ಪೋಷಕರು ತಮ್ಮ ಮಕ್ಕಳ ಬಳಿ ಮಾತೃಭಾಷೆ ಬಿಟ್ಟು ಇಂಗ್ಲೀಷ್, ಹಿಂದಿ ಮಾತನಾಡುತ್ತಾರೋ ಅದು ನಾವು ಆ ಪೀಳಿಗೆಗೆ ಮಾಡುತ್ತಿರುವ ತಪ್ಪು. ಹಿಂದಿ-ಇಂಗ್ಲೀಷ್ ಭಾಷೆಗಳನ್ನು ಶಾಲೆಗಳಲ್ಲಿ ಕಲಿಯುತ್ತಾರೆ, ಆದರೆ ಮಾತೃಭಾಷೆಯನ್ನು ಕಲಿಯುವುದು ಮನೆಯಲ್ಲಿ ಮಾತ್ರ.

ನಮ್ಮ ಮಾತೃ ಭಾಷೆ ಅದು ತುಳು, ಕೊಡವ, ಕೊಂಕಣಿ, ಮರಾಠಿ, ಬ್ಯಾರಿ ಹೀಗೆ ಯಾವುದೇ ಆಗಿರಲಿ ಅದು ನಮ್ಮ ಹೆಮ್ಮೆ, ನಮ್ಮ ಭಾಷೆ ಪ್ರೀತಿಸೋಣ, ಅದನ್ನು ಬೆಳೆಸೋಣ, ಜೊತೆಗೆ ತಾಯ್ನಾಡ ಭಾಷೆಯನ್ನು ಬೆಳೆಸೋಣ.

2023ರ ಮಾತೃಭಾಷೆ ಆಚರಣೆಯ ಥೀಮ್
Multilingual education - a necessity to transform education." (ಶಿಕ್ಷಣದಲ್ಲಿ ಬದಲಾವಣೆಯಾಗಲು ಬಹುಭಾಷೆಯ ಶಿಕ್ಷಣ ಅವಶ್ಯಕವಾಗಿದೆ).

English summary

International Mother Language Day: Date, Theme, History and Significance in Kannada

International Mother Language Day 2022: Date, Theme, History and Significance in Kannada
X
Desktop Bottom Promotion