For Quick Alerts
ALLOW NOTIFICATIONS  
For Daily Alerts

ತಾನು ಪ್ರೀತಿಸಿದ ವ್ಯಕ್ತಿಗಾಗಿ ಅವಾಹಿತರಾಗಿಯೇ ಉಳಿದರು ಲತಾ ಮಂಗೇಶ್ಕರ್‌!

|

ಲತಾ ಮಂಗೇಶ್ಕರ್ ಇವರ ಮಧುರ ಧ್ವನಿಯನ್ನು ಕೇಳಿರದ ಭಾರತೀಯನೇ ಇರಲ್ಲ. ಭಾರತೀಯ ಚಿತ್ರರಂಗದ ಶ್ರೇಷ್ಠ ಗಾಯಕರು. ಇವರು 36 ಭಾಷೆಗಳಲ್ಲಿ 30 ಸಾವಿರಕ್ಕೂ ಅಧಿಕ ಹಾಡುಗಳಲ್ಲಿ ಹಾಡಿದ್ದಾರೆ. ಇವರ ಮಧುರ ಕಂಠಕ್ಕೆ ಇವರನ್ನು ಕ್ವೀನ್‌ ಆಫ್‌ ಮೆಲೋಡಿ ಎಂದು ಕರೆಯಲಾಗುವುದು. 'ನಾನು ಎಂದಿಗೂ ಹಾಡುವುದನ್ನು ನಿಲ್ಲಿಸುವುದಿಲ್ಲ, ನಾನು ಸತ್ತಾಗ ನನ್ನ ಮ್ಯೂಸಿಕ್‌ ನನ್ನೊಂದಿಗೆ ಹೋಗುತ್ತದೆ' ಎಂಬ ಮಾತನ್ನು ಹೇಳಿದ್ದರು.

Veteran Singer Lata Mangeshkar

ತನ್ನ ಸುಮಧುರವಾದ ಕಂಠದಿಂದ ಎಲ್ಲರನ್ನೂ ಮೋಡಿ ಮಾಡುತ್ತಿದ್ದ ಈ ಗಾಯಕಿ 92ನೇ ವಯಸ್ಸಿನಲ್ಲಿ ತಾವು ಹಾಡುವುದನ್ನು ನಿಲ್ಲಿಸಿದ್ದಾರೆ, ಅವರು ಇಲ್ಲದಿದ್ದರೂ ಅವರು ಹಾಡಿರುವ ಹಾಡುಗಳು ಎಂದೆಂದಿಗೂ ಅವರ ನೆನಪನ್ನು ನಮ್ಮೊಂದಿಗೆ ಹಸಿರಾಗಿಡುತ್ತದೆ.

ಲತಾ ಮಂಗೇಶ್ಕರ್‌ ಅವಾಹಿತರಾಗಿದ್ದರು, ಅವರು ಅವಾಹಿತರಾಗಿ ಉಳಿಯಲು ಕಾರಣ ಭಗ್ನ ಪ್ರೇಮ. ಹೌದು ಅವರ ಪ್ರೇಮ ಭಗ್ನವಾಗಿದ್ದರೂ ಅವರು ಹಾಗೂ ಅವರ ಪ್ರೇಮಿ ಮಾತ್ರ ಅಮರ ಪ್ರೇಮಿಗಳಾಗಿ ಉಳಿದರು.

ಲತಾ ಮಂಗೇಶ್ಕರ್ ಪ್ರೇಮ ಕತೆ

ಲತಾ ಮಂಗೇಶ್ಕರ್ ಪ್ರೇಮ ಕತೆ

ಹೌದು ಹದಿಹರೆಯದ ವಯಸ್ಸಿನಲ್ಲಿ ಲತಾ ಮಂಗೇಶ್ಕರ್‌ಗೂ ಒಬ್ಬ ಹುಡುಗನ ಮೇಲೆ ಪ್ರೀತಿ ಅಂಕುರವಾಗಿತ್ತು. ಅವರಿಬ್ಬರು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಅವರೊಂದಿಗೆ ಒಂದು ಸುಂದರ ವೈವಾಹಿಕ ಬದುಕಿನ ಕನಸ್ಸು ಕಂಡಿದ್ದ ಲತಾಮಂಗೇಶ್ಕರ್‌ಗೆ ಆ ಕನಸ್ಸು ಕನಸ್ಸಾಗಿಯೇ ಉಳಿಯಿತು.

ಲತಾ ಮಂಗೇಶ್ಕರ್‌ ಪ್ರೇಮ ಭಗ್ನವಾಗಿದ್ದೇಕೆ?

ಲತಾ ಮಂಗೇಶ್ಕರ್‌ ಪ್ರೇಮ ಭಗ್ನವಾಗಿದ್ದೇಕೆ?

ಲತಾ ಮಂಗೇಶ್ಕರ್‌ಗೆ ಅವರ ಅಣ್ಣನ ಸ್ನೇಹಿತನಾಗಿದ್ದ ಮಹಾರಾಜ್‌ ಸಿಂಗ್‌ ಅವರೊಂದಿಗೆ ಪ್ರೇಮವಾಯಿತು. ಅವರು ರಾಜಸ್ಥಾನದ ರಜಪೂತ ರಾಜಮನೆತನಕ್ಕೆ ಸೇರಿದ ಹುಡುಗ. ಇದುವೇ ಇವರಿಬ್ಬರ ಪ್ರೀತಿಗೆ ಅಡ್ಡಿಯಾಯಿತು, ಲತಾ ಮಂಗೇಶ್ಕರ್‌ ಅವರನ್ನು ತನ್ನ ಮಗ ಮದುವೆಯಾಗಲು ಬಿಡಲ್ಲ ಎಂದು ಮಹಾರಾಜ್‌ ಸಿಂಗ್‌ ಅವರ ತಂದೆ ಹಠ ಹಿಡಿದರು. ಸಾಮಾನ್ಯ ಮನೆತನದ ಹಡುಗಿಯೊಬ್ಬಳನ್ನು ತಮ್ಮ ಕುಟುಂಬಕ್ಕೆ ತರಲು ಆ ರಾಜ ಮನೆತನದವರು ಸಿದ್ಧರಿರಲಿಲ್ಲ.

ಅಮರ ಪ್ರೇಮಿಯಾದ ಲತಾ ಮಂಗೇಶ್ಕರ್‌

ಅಮರ ಪ್ರೇಮಿಯಾದ ಲತಾ ಮಂಗೇಶ್ಕರ್‌

ಮನೆಯವರನ್ನು ವಿರೋಧಿಸಿ ಮದುವೆಯಾಗಲು ಇಬ್ಬರಿಗೂ ಇಷ್ಟವಿರಲಿಲ್ಲ. ಲತಾ ಅವರನ್ನು ಮದುವೆಯಾಗದಿದ್ದರೆ ಕೊನೆಯವರೆಗೂ ಯಾರನ್ನೂ ಮದುವೆಯಾಗಲ್ಲ ಎಂದು ಮಹಾರಾಜ್‌ ಸಿಂಗ್‌ ಹಠ ಹಿಡಿದರು. ಇತ್ತ ಲತಾ ಮಂಗೇಶ್ಕರ್‌ ಕೂಡ ಅವಹಿತರಾಗಿಯೇ ಉಳಿಯಲು ತೀರ್ಮಾನಿಸಿದರು. ಮಹಾರಾಜ್‌ ಸಿಂಗ್‌ ಬಿಸಿಸಿಐನ ಮಾಜಿ ಅಧ್ಯಕ್ಷರಾಗಿದ್ದರು, ಇವರು 2009ರಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಇವರಿಬ್ಬರದ್ದು ಪವಿತ್ರ ಪ್ರೇಮವಾಗಿತ್ತು, ತಮ್ಮ ಪ್ರೀತಿಗಾಗಿ ಅವಾಹಿತರಾಗಿ ಉಳಿಯುವ ಮೂಲಕ ಇಡೀ ಜೀವನವನ್ನೇ ಒಬ್ಬರಿಗೊಬ್ಬರು ಸಮರ್ಪಿಸಿ ಅಮರ ಪ್ರೇಮಿಗಳಾದರು.

English summary

Interesting Facts about Veteran Singer Lata Mangeshkar in kannada

Interesting Facts about Veteran Singer Lata Mangeshkar, read on....
X
Desktop Bottom Promotion