For Quick Alerts
ALLOW NOTIFICATIONS  
For Daily Alerts

ಐದು ಚಿತ್ರಗಳಿಗೆ ರಾಜ್ಯ ಪ್ರಶಸ್ತಿ ಪಡೆದ ಅಭಿನಯ ಶಾರದೆ ಜಯಂತಿ ಬಗ್ಗೆ ನಿಮಗೆಷ್ಟು ಗೊತ್ತು?

|

ಅಭಿನಯ ಶಾರದೆ ಎಂಬ ಬಿರುದಾಂಕಿತೆ, ಬಹುಭಾಷ ನಟಿ ಹಿರಿಯ ನಟಿ ಜಯಂತಿ ಅವರು ಇಂದು (26 ಜುಲೈ 2021) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಪ್ರಮುಖವಾಗಿ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಮರಾಠಿ ಮತ್ತು ಹಿಂದಿ ಚಿತ್ರರಂಗದಲ್ಲಿ ಮಿಂಚಿದ್ದ್ ಒಟ್ಟು ಆರು ಭಾಷೆಗಳಲ್ಲಿ ನಟಿಸಿದ್ದ ಜಯಂತಿ ಕಳೆದ 35 ವರ್ಷಗಳಿಂದ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದರು. ಒಂದು ತಿಂಗಳಿನಿಂದ ಉಸಿರಾಟ ಸಮಸ್ಯೆಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟಿ ಜಯಂತಿ ಅವರು ಇಂದು ಬೆಳಗಿನ ಜಾವ ಅಸುನೀಗಿದ್ದಾರೆ.

ಈ ಹಿನ್ನೆಲೆ ಕನ್ನಡ ಹಿರಿಯ ಮೇರು ನಟಿಯ ಬಗ್ಗೆ ಕೆಲವು ಮಾಹಿತಿಗಳನ್ನು ತಿಳಿಯೋಣ:

* ಜಯಂತಿ ಅವರು 1945ರ ಜನವರಿ 6ರಂದು ಕರ್ನಾಟಕದ ಬಳ್ಳಾರಿಯಲ್ಲಿ ಜನಿಸಿದರು.

* ಜಯಂತಿ ಅವರ ಮೂಲ ಹೆಸರು ಕಮಲಾ ಕುಮಾರಿ. ಕಮಲಾ ಕುಮಾರಿಗೆ ಜಯಂತಿ ಎಂದು ನಾಮಕರಣ ಮಾಡಿದ್ದು ಅವರ ಮೊದಲ "ಜೇನುಗೂಡು" ಚಿತ್ರದ ನಿರ್ದೇಶಕ ಪುಟ್ಟಸ್ವಾಮಿ.

* ಜಯಂತಿ ಅವರ ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ತಾಯಿ ಸಂತಾನಲಕ್ಷ್ಮೀ ಗೃಹಿಣಿ.

* ಮನೆಯಲ್ಲಿ ಹಿರಿಯ ಪುತ್ರಿಯಾಗಿ ಜನಿಸಿದ ಜಯಂತಿ ಅವರಿಗೆ ಇಬ್ಬರು ಕಿರಿಯ ಸಹೋದರರಿದ್ದಾರೆ.

* ಜಯಂತಿ ಅವರ ಪತಿ ಪೆಕೆಟಿ ಶಿವರಾಂ ಅವರು ಸಹ ನಟ ಹಾಗೂ ನಿರ್ದೇಶಕ. ಜಯಂತಿ ಹಾಗೂ ಶಿವರಾಂ ಅವರಿಗೆ ಕೃಷ್ಣಕುಮಾರ್ ಏಕೈಕ ಪುತ್ರ.

* ಇವರ ತಂದೆ ಬಾಲಸುಬ್ರಹ್ಮಣ್ಯಂ ಮತ್ತು ತಾಯಿ ಸಂತಾನಲಕ್ಷ್ಮೀ ಚಿಕ್ಕ ವಯಸ್ಸಿಲ್ಲೇ ವಿಚ್ಛೇದನ ಪಡೆದ ಕಾರಣ ಜಯಂತಿ ಅವರು ತಮ್ಮ ತಾಯಿಯ ಜೊತೆ ಮದ್ರಾಸ್‌ನಲ್ಲಿ ಬೆಳೆದರು.

* ಜಯಂತಿಯ ತಾಯಿಯವರಿಗೆ ಇವರನ್ನು ಶಾಸ್ತ್ರೀಯ ನೃತ್ಯಗಾರ್ತಿಯನ್ನಾಗಿ ಮಾಡಬೇಕೆಂಬ ಬಯಕೆ ಇದ್ದುದ್ದರಿಂದ ಚಂದ್ರಕಲಾರವರ ಭರತನಾಟ್ಯ ಶಾಲೆಗೆ ಸೇರಿಸಿದರು.

* ಕನ್ನಡ ನಿರ್ದೇಶಕ ವೈ.ಆರ್. ಪುಟ್ಟಸ್ವಾಮಿಯವರು ಒಂದು ನೃತ್ಯಾಭ್ಯಾಸದಲ್ಲಿ ಜಯಂತಿಯವರನ್ನು ನೋಡಿ ತಮ್ಮ ಜೇನು ಗೂಡು' ಚಿತ್ರದಲ್ಲಿ ನಟಿಸುವ ಅವಕಾಶ ಕೊಟ್ಟರು. 1868ರಲ್ಲಿ ತೆರೆಕಂಡ ಜೇನುಗೂಡು ಎಂಬ ಚಿತ್ರ ಮೂಲಕ ಕನ್ನಡ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಇಲ್ಲಿಂದ ಜಯಂತಿಯವರ ಅದೃಷ್ಟವೇ ಬದಲಾಯಿತು.

* ಜಯಂತಿ ಅವರು ಕನ್ನಡದಲ್ಲಿ ಬರೋಬ್ಬರಿ 190 ಚಿತ್ರಗಳಲ್ಲಿ ನಟಿಸಿದ್ದಾರೆ.

* ಜಯಂತಿ ಜೀವಮಾನದಲ್ಲಿ ಒಟ್ಟು 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

* ಕನ್ನಡದಲ್ಲಿ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ ಜನಯಂತಿ ಅವರು ಡಾ.ರಾಜ್ ಕುಮಾರ್‌ ಜೊತೆ 45 ಚಿತ್ರಗಳಲ್ಲಿ ನಟಿಸುವ ಮೂಲಕ ದಾಖಲೆ ಮಾಡಿದ್ದರು.

* ಇಂಗ್ಲಿಷ್‌ ಭಾಷೆಯ "ಬ್ರೌನ್‌ ನೇಷನ್‌" ಎಂಬ ಟಿವಿ ಷೋನಲ್ಲೂ ನಟಿ ಜಯಂತಿ ಅವರು ನಟಿಸಿದ್ದರು.

* ಜಯಂತಿ ಅವರು ನಟಿಸಿದ್ದ "ಮಿಸ್‌ ಲೀಲಾವತಿ" ಎಂಬ ಚಿತ್ರಕ್ಕೆ 1965ರಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.

* "ಎರಡು ಮುಖ"-1969 , ಮನಸ್ಸಿನಂತೆ ಮಾಂಗಲ್ಯ" -1976, "ಧರ್ಮ ದಾರಿ ತಪ್ಪಿತು" -1981, ಮಸಣದ ಹೂವು 1985 ,"ಆನಂದ್ " 1986 ರಲ್ಲಿ ಈ ಐದು ಚಿತ್ರಗಳ ಅಭಿನಯಕ್ಕಾಗಿ ಐದು ಬಾರಿ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ ನಟಿ ಜಯಂತಿ ಅವರು.

* ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಜಯಂತಿ ಅವರ ಅಮೋಘ ನಟನೆ ಇಂದಿಗೂ ಆ ಚಿತ್ರ ಎವರ್‌ಗ್ರೀನ್‌ ಆಗಿರುವುದಕ್ಕೆ ಸಾಕ್ಷಿ.

* ಜಯಂತಿ ಅವರ ಧ್ವನಿ ಇಂಪಾಗಿದ್ದರಿಂದ ಅಭಿಮಾನಿಗಳು ನೀಡಿದ್ದ ಬಿರುದು "ಕಲಾಕೋಗಿಲೆ", ಆದರೆ ಯಾವ ಪಾತ್ರಗಳನ್ನು ಸಹ ನಿಭಾಯಿಸಬಲ್ಲೆ ಎಂಬ ನಂಬಿಕೆ ನಿರ್ದೇಶಕರಿಗೆ ಇದ್ದದ್ದರಿಂದ ಚಿತ್ರರಂಗ ಚಿತ್ರರಂಗ ನನಗೆ ನೀಡಿದ ಬಿರುದು "ಅಭಿನಯ ಶಾರದೆ".

* 60-70ರ ದಶಕದಲ್ಲೇ ನಟಿಯಾಗಿ ಗ್ಲಾಮರಸ್‌ ಪಾತ್ರಗಳಲ್ಲೂ ಮೊದಲ ಬಾರಿಗೆ ಮಿಂಚಿದ ಕೀರ್ತಿ ಜಯಂತಿ ಅವರಿಗೆ ಸಲ್ಲುತ್ತದೆ.

English summary

Interesting Facts About Veteran Actress Jayanthi in Kannada

Here we are discussing about Interesting Facts About Veteran Actress Jayanthi in Kannada. Read more.
Story first published: Monday, July 26, 2021, 12:13 [IST]
X