For Quick Alerts
ALLOW NOTIFICATIONS  
For Daily Alerts

ಫೋರ್ಬ್ಸ್‌ನ ಅತ್ಯಂತ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತೀಯ ಮೂಲದ ಜಯಶ್ರಿ ಉಲ್ಲಾಳ್ , ಯಾರಿವರು?

|

ಫೋರ್ಬ್ಸ್‌ ಪಟ್ಟಿಯಲ್ಲಿ ಕಂಡು ಬರುವುದು ಎಂದರೆ ಸಾಮಾನ್ಯದ ಮಾತಲ್ಲ, ಫೋರ್ಬ್ಸ್‌ ಈ ಸಾಲಿನ ಅತ್ಯಂತ ಶ್ರೀಮಂತ ಮಹಿಳೆಯರ ಪಟ್ಟಿ ಬಿಡುಗಡೆ ಮಾಡಿದ್ದು ಅದರಲ್ಲಿರುವ ಒಂದು ಹೆಸರು ನೋಡಿ ಭಾರತೀಯರು ಹೆಮ್ಮೆ ಪಡುತ್ತಿದ್ದಾರೆ.

Jayshree Ullal

ಹೌದು ಭಾರತೀಯ ಮೂಲದ ಮಹಿಳಾ ಉದ್ಯಮಿ ಪ್ರತಿಷ್ಠಿತ ಫೋರ್ಬ್ಸ್‌ ಪಟ್ಟಿಯಲ್ಲಿ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಫೋರ್ಬ್ಸ್‌ನ ಸೆಲ್ಫ್‌ ಮೇಡ್‌ ವುಮೆನ್‌ ಲಿಸ್ಟ್‌ನಲ್ಲಿ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರೇ ಜಯಶ್ರಿ ಉಲ್ಲಾಳ್. ಇವರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ:
ಫೋರ್ಬ್ಸ್‌ ಲಿಸ್ಟ್‌ನಲ್ಲಿರುವ ಭಾರತೀಯ ಮೂಲದ ಮಹಿಳೆ

ಫೋರ್ಬ್ಸ್‌ ಲಿಸ್ಟ್‌ನಲ್ಲಿರುವ ಭಾರತೀಯ ಮೂಲದ ಮಹಿಳೆ

ನೆಟ್‌ ವರ್ಥ್‌ USD 1.7 ಬಿಲಿಯನ್‌ ಆಸ್ತಿಯ ಒಡತಿಯಾಗಿರುವ ಜಯಶ್ರಿ ಉಲ್ಲಾಳ್, Arista ನೆಟ್‌ವರ್ಕ್‌ ಕಂಪನಿಯ ಸಿಇಒ ಆಗಿದ್ದಾರೆ.

ಫೋರ್ಬ್ಸ್‌ ಲಿಸ್ಟ್‌ ಮಾಡಿರುವ ಅಮೆರಿಕದ 5 ಶ್ರೀಮಂತ ಸೆಲ್ಫ್ ಮೇಡ್‌ ಮಹಿಳೆಯರಲ್ಲಿ ಭಾರತೀಯ ಮೂಲದ ಇವರ ಹೆಸರು ಕೂಡ ಇರುವುದು ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಜಯಶ್ರಿ ಉಲ್ಲಾಳ್‌ ಫೋರ್ಬ್ಸ್‌ನಲ್ಲಿ 15ನೇ ರ‍್ಯಾಂಕ್‌ ಗಳಿಸಿದ್ದು ಪ್ರಸಿದ್ಧ ಟಿವಿ ಸ್ಟಾರ್‌ ಕಿಮ್ ಕಾರ್ಡಶಿಯಾನ್‌ಗಿಂತ ಮೇಲಿನ ರ‍್ಯಾಂಕ್‌ ಇವರಿಗಿದೆ. 2022ರ ಪ್ರಾರಂಭದಲ್ಲಿ USD 2.1 ಬಿಲಿಯನ್‌ ಇದ್ದ ಆಸ್ತಿ ಷೇರು ಮಾರುಕಟ್ಟೆಯಲ್ಲಿ ಸ್ವಲ್ಪ ಇಳಿಕೆಯಾದಾಗ USD 1.7 ಬಿಲಿಯನ್ ತಲುಪಿದೆ.

 ದೆಹಲಿಯಲ್ಲಿ ಬೆಳೆದಿದ್ದರು

ದೆಹಲಿಯಲ್ಲಿ ಬೆಳೆದಿದ್ದರು

ಜಯಶ್ರಿ ಉಲ್ಲಾಳ್‌ ಹುಟ್ಟಿದ್ದು ಲಂಡನ್‌ನಲ್ಲಿ, ಆದರೆ ಬೆಳೆದಿದ್ದು ದೆಹಲಿಯಲ್ಲಿ. ಇವರರು ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ಇಂಜಿನಿಯರ್‌ ಹಾಗೂ ಸ್ಯಾಂಟಾ ಕ್ಲಾರಾ ಯೂನಿವರ್ಸಿಟಿಯಲ್ಲಿ ಮ್ಯಾನೇಜ್‌ಮೆಂಟ್ ಓದಿ Arista ಟೀಂ ಸೇರಿದರು.

 ಇವರು ಸೇರಿದಾಗ ಕಂಪನಿ ತುಂಬಾ ಚಿಕ್ಕದಾಗಿತ್ತು

ಇವರು ಸೇರಿದಾಗ ಕಂಪನಿ ತುಂಬಾ ಚಿಕ್ಕದಾಗಿತ್ತು

ಇವರು ಕಂಪನಿಗೆ ಸೇರಿದಾಗ 50 ಜನಕ್ಕೂ ಕಡಿಮೆ ಉದ್ಯೋಗಿಗಳಿದ್ದರು. 2008ರಲ್ಲಿ ಇವರನ್ನು ಪ್ರೆಸಿಡೆಂಟ್ ಹಾಗೂ ಸಿಇಒ ಮಾಡಲಾಯ್ತು. ಆ ನಂತರ ಈ ಕಂಪನಿ ಬೃಹದಾಕಾರವಾಗಿ ಬೆಳೆಯಿತು. ಇವರಿಗೆ ಕಂಪನಿಯಿಂದ ಶೇ.5 ರಷ್ಟು ನೆಟ್‌ವರ್ಕ್‌ ಸ್ಟಾಕ್‌ ಇದೆ. ಕಂಪನಿ ಏನೂ ಅಲ್ಲದಿದ್ದಾಗ ಆ ಕಂಪನಿಗೆ ಸೇರಿ ಈಗ ಅತ್ಯಂತ ದೊಡ್ಡ ಕಂಪನಿಯಾಗಿ ಬೆಳೆಸಿ, ತಾವೂ ಸೆಲ್ಫ್ ಮೇಡ್‌ ರಿಚ್ ವುಮೆನ್‌ (ಶ್ರೀಮಂತ ಮಹಿಳೆ) ಎಂದು ಗುರುತಿಸಿಕೊಂಡಿದ್ದಾರೆ.

ಫೋರ್ಬ್ಸ್‌ ಪಟ್ಟಿಯಲ್ಲಿರುವ ಇನ್ನಿತರ ಭಾರತೀಯರು

* ನೀರಜ್‌ ಸೇಥಿ, ನೇಕಾ ನರ್ಕೇಡೆ, ಇಂದ್ರಾ ನೂಯಿ, ರೇಷ್ಮಾ ಶೆಟ್ಟಿ ಕೂಡ ಫೋರ್ಬ್ಸ್‌ ಪಟ್ಟಿಯಲ್ಲಿದ್ದಾರೆ.

English summary

Indian-origin Jayshree Ullal on Forbes' list of America's richest self made women

Meet Indian origin Jayshree Ullal on Forbes list, she gets 15th rank in forbes, here are more details...
Story first published: Wednesday, July 6, 2022, 21:25 [IST]
X
Desktop Bottom Promotion