For Quick Alerts
ALLOW NOTIFICATIONS  
For Daily Alerts

ಭಾರತದ ತ್ರಿವರ್ಣ ಧ್ವಜವನ್ನು ಹೇಗೆ ಮಡಚಿ ಇಡಬೇಕು?

|

ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸ್ಮರಣಾರ್ಥ ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಣೆ ಮಾಡಲಾಗುತ್ತಿದೆ. 'ಸ್ವಾತಂತ್ರ್ಯದ ಅಮೃತ ಮಹೋತ್ಸವ' ಒಂದು ಸಾಮೂಹಿಕ ಜನಾಂದೋಲನ ಆಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ 'ಮನ್ ಕೀ ಬಾತ್' ರೇಡಿಯೊ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಹೇಳಿದ್ದರು. ಜನರು ಆಗಸ್ಟ್ 2-15ರ ಅವಧಿಯಲ್ಲಿ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳ ಪ್ರೊಫೈಲ್ ಚಿತ್ರವಾಗಿ ರಾಷ್ಟ್ರಧ್ವಜ ಬಳಸಬೇಕು ಎಂದು ಕರೆ ನೀಡಿದ್ದರು.

ಅಲ್ಲದೇ ಆಗಸ್ಟ್ 13 ರಿಂದ 15ರ ವರೆಗೆ ಹರ್ ಘರ್ ತಿರಂಗಾದಡಿ ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಬೇಕು ಎಂದು ಮೋದಿ ಮನವಿ ಮಾಡಿದ್ದರು. ಈ ಹಿನ್ನೆಲೆ ಸರ್ಕಾರಿ ಕಾರ್ಯಾಲಯಗಳಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ. ಸಾರ್ವಜನಿಕರು ಕೂಡ ಉತ್ಸುಕತೆಯಿಂದ ತ್ರಿವರ್ಣ ಧ್ವಜವನ್ನು ಖರೀದಿಸುತ್ತಿದ್ದಾರೆ.

ಹರ್ ಘರ್ ತಿರಂಗಾ

ಹರ್ ಘರ್ ತಿರಂಗಾ

ತ್ರಿವರ್ಣ ಧ್ವಜವನ್ನು ಸ್ವಾತಂತ್ರ್ಯ ದಿನಾಚರಣೆ ಅಂದರೆ ಆಗಸ್ಟ್‌ 15ರ ಬಳಿಕ ಸರಿಯಾಗಿ ಮಡಚಿ ಇಡಬೇಕು, ಮನೆಯಲ್ಲಿ ಬಳಸಿರುವ ತ್ರಿವರ್ಣ ಧ್ವಜವನ್ನು ಸರಿಯಾಗಿ ಮಡಚಿ ಇಡದಿದ್ದರೆ ಅದು ರಾಷ್ಟ್ರಕ್ಕೆ ಮಾಡುವ ಅಗೌರವ. ಆದ್ದರಿಂದ ಅಮೃತ್ ಮಹೋತ್ಸದ ಅಧಿಕೃತ ಟ್ವಿಟರ್ ಖಾತೆ ಯಾವ ರೀತಿ ಮಡಚ ಬೇಕು ಯಾವ ರೀತಿ ಸಂಗ್ರಹಿಸಿ ಇಡಬೇಕು ಎನ್ನುವುದನ್ನು ಚಿತ್ರದ ಮೂಲಕ ವಿವರಿಸಿ ಹೇಳಿದೆ. ಹಾಗಾದ್ರೆ ಹೇಗೆ ತ್ರಿವರ್ಣ ಧ್ವಜವನ್ನು ಮಡಚಬೇಕು ಮತ್ತು ಸಂಗ್ರಹಿಸಿ ಇಡಬೇಕು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

 ತ್ರಿವರ್ಣ ಧ್ವಜಕ್ಕೆ ಈ ರೀತಿ ಗೌರವ ಕೊಡಿ

ತ್ರಿವರ್ಣ ಧ್ವಜಕ್ಕೆ ಈ ರೀತಿ ಗೌರವ ಕೊಡಿ

1. ಮೊದಲು ತ್ರಿವರ್ಣ ಧ್ವಜವನ್ನು ಅಡ್ಡಲಾಗಿ ಇರಿಸಿ

2. ಕೇಸರಿ ಮತ್ತು ಹಸಿರು ಭಾಗವನ್ನು ಮಾತ್ರ ಮಡಚಿ ಈ ವೇಳೆ ಮಧ್ಯದ ಭಾಗವನ್ನು ಹಾಗೇ ಇರಿಸಿ. ಹೀಗೆ ಮಡಿಚುವಾಗ ಕೇಸರಿ ಹಾಗೂ ಹಸಿರು ಬಣ್ಣ ಕೊಂಚ ಕಾಣಿಸುತ್ತಿರಬೇಕು.

3. ಇನ್ನು ಕೇಸರಿ, ಬಿಳಿ, ಹಸಿರು ಬಣ್ಣದ ಎರಡು ಭಾಗವನ್ನು ಒಳಗೆ ಮಡಚಿಕೊಳ್ಳಿ. ಈ ವೇಳೆ ಕೊಂಚ ಬಿಳಿ, ಕೇಸರಿ, ಹಸಿರು ಬಣ್ಣ ಕಾಣಿಸುವಂತೆ ಇರಬೇಕು. ಅಲ್ಲದೇ ಅಶೋಕ ಚಕ್ರವೂ ಕಾಣಿಸಬೇಕು.

4.ಬಳಿಕ ಎರಡು ಕೈಗಳಿಂದ ಕೆಳಗಿನ ಭಾಗದಿಂದ ತ್ರಿವರ್ಣ ಧ್ವಜವನ್ನು ಹಿಡಿಕೊಂಡು ಹೋಗಿ ಕಪಾಟು ಅಥವಾ ಯಾವುದೇ ರೀತಿಯಲ್ಲಿ ಧಕ್ಕೆ ಬರದಂತಹ ಜಾಗದಲ್ಲಿ ಇರಿಸಬೇಕು.

ಇದು ಸರಿಯಾದ ರೀತಿಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಮಡಿಸಿ ಸಂಗ್ರಹಿಸಿಡುವ ರೀತಿ. ಈ ರೀತಿ ಮಾಡುವ ಮೂಲಕ ದೇಶದ ಧ್ವಜಕ್ಕೆ ಗೌರವ ಕೊಡಬಹುದಾಗಿದೆ. ಇನ್ನು ದೇಶದೆಲ್ಲೆಡೆ ಹರ್ ಘರ್ ತಿರಂಗಾ ಅಭಿಯಾನ ಜೋರಾಗಿ ನಡೆಯುತ್ತಿದೆ.

ತ್ರಿವರ್ಣ ಧ್ವಜ ರಚಿಸಿದ್ದು ಯಾರು?

ತ್ರಿವರ್ಣ ಧ್ವಜ ರಚಿಸಿದ್ದು ಯಾರು?

ಸ್ವಾತಂತ್ರ್ಯ ದಿನದಂದು ಎಲ್ಲಿ ನೋಡಿದರೂ ರಾಷ್ಟ್ರಧ್ವಜ ಹಾರಾಡುತ್ತಾ ಇರುತ್ತದೆ. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ಎಲ್ಲರ ಕೈಯಲ್ಲೂ ಸಣ್ಣ ಸಣ್ಣ ಭಾವುಟ ಹಾರಾಡುತ್ತಿರುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಶಾಲಾ, ಕಾಲೇಜುಗಳಲ್ಲಿ ದೊಡ್ಡ ದೊಡ್ಡ ಭಾವುಟ ರಾರಾಜಿಸುತ್ತಿರುತ್ತದೆ. ಕೆಲವೊಂದು ಕಾರ್ಯಕ್ರಮಗಳಲ್ಲಿ ಈ ತ್ರಿವರ್ಣ ಧ್ವಜದ ಹಾರಾಟ ನಮಗೆ ರೋಮಾಂಚನ ಉಂಟು ಮಾಡುತ್ತದೆ. ಇಂತಹ ಹೆಮ್ಮೆಯ ಧ್ವಜವನ್ನು ಕೊಟ್ಟಿರುವ ವ್ಯಕ್ತಿ ಯಾರು ಎಂಬುವುದು ನಮ್ಮಲ್ಲಿ ಅನೇಕರಿಗೆ ತಿಳಿದಿರಲು ಸಾಧ್ಯವಿಲ್ಲ. ಭಾರತದ ತ್ರಿವರ್ಣ ಧ್ವಜದ ಶಿಲ್ಪಿ ದಿ. ಪಿಂಗಳಿ ವೆಂಕಯ್ಯ ಅವರು. ಇವರನ್ನು ಪತ್ತಿ ವೆಂಕಯ್ಯ ಎಂದೂ ಕರೆಯುತ್ತಿದ್ದರು. ಭಾರತ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದವರು ಮತ್ತು ಭಾರತದೇಶದ ಧ್ವಜವನ್ನು ಸ್ಥೂಲಕಲ್ಪಿಸಿದರು ಈ ವೆಂಕಯ್ಯ ಅವರು. ಅಪ್ಪಟ ಗಾಂಧಿವಾದಿಯಾಗಿದ್ದ ವೆಂಕಯ್ಯನವರು ಆಗಸ್ಟ್ 2, 1876 ನೇ ಇಸವಿಯಲ್ಲಿ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ದಿವಿ ತಾಲ್ಲೂಕಿನ ಭಟ್ಲಪೆನ್ನುಮಾರು ಗ್ರಾಮದಲ್ಲಿ ಜನಿಸಿದರು.

English summary

Independence Day: How to correctly fold and store the Indian National Flag in Kannada

Independence Day: Here are information about how to to how to fold and store the indian national flag in Kannada
X
Desktop Bottom Promotion