For Quick Alerts
ALLOW NOTIFICATIONS  
For Daily Alerts

ಸಣ್ಣ ವಿಚಾರಕ್ಕೂ ಅತಿಯಾಗಿ ಚಿಂತೆ ಮಾಡುವುದನ್ನು ಹೇಗೆ ಕಡಿಮೆ ಮಾಡುವುದು?

|

ಚಿತೆಗೂ-ಚಿಂತೆಗೂ ನಡುವೆ ಇರುವುದು ಒಂದೇ ವ್ಯತ್ಯಾಸ, ಚಿತೆ ಸತ್ತ ಮೇಲೆ ಸಿಕ್ಕರೆ, ಚಿಂತೆ ಬದುಕಿರುವಾಗಲೇ ನಮ್ಮನ್ನು ಕೊಲ್ಲುವುದು. ಅದಕ್ಕೇ ಹೇಳುವುದು ಅತೀ ಚಿಂತೆ ಒಳ್ಳೆಯದಲ್ಲ ಎಂಬುದು. ಪ್ರತಿಯೊಬ್ಬರಿಗೂ ಯೋಚನೆ ಮಾಡುವ ಸ್ವಾತಂತ್ರ್ಯ, ಹಕ್ಕು ಎರಡೂ ಇದೆ. ನಮ್ಮಲ್ಲಿ ಕೊರೆಯುವ ಯಾವುದೋ ಪ್ರಶ್ನೆಗೆ ಚಿಂತಿಸಿ, ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇವೆ. ಆದರೆ ಕೆಲವೊಮ್ಮೆ ನಾವು ಮಾಡುವ ಯೋಚನೆಗಳಿಗೆ ಅರ್ಥವೇ ಇರುವುದಿಲ್ಲ, ಸಣ್ಣ-ಪುಟ್ಟ ವಿಚಾರಕ್ಕೂ ಏನೋ ಆಗಿದೆ ಎಂಬಂತೆ ಕೂತು ಚಿಂತಿಸುತ್ತಿರುತ್ತೇವೆ. ಹೀಗೆ ಅತಿಯಾಗಿ ಚಿಂತೆ ಮಾಡುವುದನ್ನು ಹೇಗೆ ತಡೆಯಬಹುದು ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.

ಅತಿಯಾಗಿ ಯೋಚಿಸುವುದರಿಂದ ಏನಾದರೂ ಪ್ರಯೋಜನವೇ ಎಂದು ನಿಮ್ಮನ್ನು ನೀವೇ ಕೇಳಿ:

ಅತಿಯಾಗಿ ಯೋಚಿಸುವುದರಿಂದ ಏನಾದರೂ ಪ್ರಯೋಜನವೇ ಎಂದು ನಿಮ್ಮನ್ನು ನೀವೇ ಕೇಳಿ:

ಕೆಲವೊಂದು ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಲು ಚಿಂತಿಸುವುದು ಉತ್ತಮವೇ, ಆದರೆ ಅತಿಯಾಗಿ ಯೋಚಿಸುವುದು, ಯಾವಾಗಲೂ ಅದೇ ವಿಷಯದ ಸುತ್ತವೇ ತಿರುಗುವುದು ನಿಮ್ಮ ಮನಸ್ಸನ್ನು ಹಾಳು ಮಾಡುವುದು. ಇಂತಹ ಸಮಯದಲ್ಲಿ ನಿಮ್ಮನ್ನು ನೀವೇ ಕೇಳಿಕೊಳ್ಳಬೇಕು. ನಾನು ಮಾಡುತ್ತಿರುವ ಈ ಯೋಚನೆ ಷ್ಟು ಸರಿ? ಇದರಿಂದ ಏನಾದರೂ ಪ್ರಯೋಜನವಿದೆಯೇ ಎಂಬುದನ್ನು ನೀವೇ ಅರ್ಥ ಮಾಡಿಕೊಳ್ಳಬೇಕು. ಆಗ ನಿಮಗೆ ತಿಳಿಯುವುದು ಅತಿ ಆಲೋಚನೇ ಬೇಕಾ?, ಬೇಡವೇ ಎಂದು.

ನಿಮ್ಮ ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ಹೆಚ್ಚಿಸಿ:

ನಿಮ್ಮ ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ಹೆಚ್ಚಿಸಿ:

ನಿಮ್ಮ ಸಮಸ್ಯೆಯ ಪರಿಹಾರಕ್ಕಾಗಿ ಕೇವಲ ಯೋಚನೆಯಷ್ಟೇ ಮಾಡದರೆ ಸಾಲದು. ಅದನ್ನು ಪರಿಹರಿಸುವ ಮಾರ್ಗಗಳನ್ನು ಅಸ್ತಿತ್ವಕ್ಕೆ ತರಬೇಕು. ನಿಮ್ಮ ಬಿಡುವಿನ ವೇಳೆಯಲ್ಲಿ, ಸಮಸ್ಯೆಗಳನ್ನು ಪರಿಹರಿಸುವ ಮಾರ್ಗಗಳನ್ನು ನೋಡಿ. ಕೆಲವು ಸನ್ನಿವೇಶಗಳು ಉದ್ಭವಿಸದಂತೆ ತಡೆಯುವ ಮಾರ್ಗಗಳ ಬಗ್ಗೆ ಯೋಚಿಸಿ ಅಥವಾ ನೀವು ಈಗಾಗಲೇ ಸಮಸ್ಯೆಯಲ್ಲಿದ್ದರೆ ಅದನ್ನು ನಿವಾರಿಸಬಹುದಾದ ಮಾರ್ಗಗಳ ಬಗ್ಗೆ ಯೋಚಿಸಿ.

ಮುಖ್ಯವಾದ ವಿಷಯಗಳ ಕಡೆಗೆ ನಿಮ್ಮ ಆಲೋಚನೆ ತಿರುಗಿಸಿ:

ಮುಖ್ಯವಾದ ವಿಷಯಗಳ ಕಡೆಗೆ ನಿಮ್ಮ ಆಲೋಚನೆ ತಿರುಗಿಸಿ:

ಯಾವುದೇ ಪ್ರಯೋಜನಗಳಿಲ್ಲ ಆಲೋಚನೆಗಳ ಮೇಲೆ ಸಮಯ ವ್ಯರ್ಥ ಮಾಡುವ ಬದಲು, ಯಾವುದಾದರೂ ಉಪಯೋಗಕ್ಕೆ ಬರುವ ಯೋಚನೆ ಅಥವಾ ಕೆಲಸಗಳನ್ನು ಮಾಡಿ. ನಿಮ್ಮ ಅತಿಯಾದ ಆಲೋಚನೆಗಿಂತ ಮುಖ್ಯವಾಗಿರುವ ಕೆಲಸಗಳ ಬಗ್ಗೆ ಗಮನ ನೀಡಿ. ನಿಮಗೆ ಯಾವುದು ಮುಖ್ಯ ಎಂಬುದನ್ನು ನೀವೇ ಅರ್ಥ ಮಾಡಿಕೊಳ್ಳಬೇಕು. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಿರಿ ಅಥವಾ ನಿಮಗೆ ಆಸಕ್ತಿಯಿರುವ ಕೆಲಸವನ್ನು ಮಾಡಿ. ಇದು ಖಂಡಿತವಾಗಿಯೂ ನಿಮ್ಮ ಮನಸ್ಸನ್ನು ಬೇರೆಡೆಗೆ ತಿರುಗಿಸುತ್ತದೆ.

ಆಳವಾದ ಉಸಿರಾಟ ಅಥವಾ ಧ್ಯಾನ ಮಾಡಿ:

ಆಳವಾದ ಉಸಿರಾಟ ಅಥವಾ ಧ್ಯಾನ ಮಾಡಿ:

ಕೆಲವೊಮ್ಮೆ, ನಿಮಗೆ ಬೇಕಾಗಿರುವುದು ಆಳವಾದ ಉಸಿರಾಟ ಮತ್ತು ಧ್ಯಾನ. ಅತಿಯಾಗಿ ಯೋಚಿಸುವ ಮತ್ತು ದುಃಖಿಸುವ ಬದಲು, ಆಳವಾದ ಉಸಿರನ್ನು ತೆಗೆದುಕೊಳ್ಳಿ . ಇದರಿಂದ ನಿಮ್ಮ ಮನಸ್ಸು ಮತ್ತು ದೇಹವು ಶಾಂತಿ ಮತ್ತು ಸಾಮರಸ್ಯದತ್ತ ವಾಲುತ್ತದೆ. ಈ ರೀತಿಯಾಗಿ ನಿಮ್ಮ ಮನಸ್ಸು ಎಲ್ಲಾ ಸಂಘರ್ಷಗಳಿಂದ ಮುಕ್ತವಾಗಿರುತ್ತದೆ ಮತ್ತು ನಿಮ್ಮ ಸಮಸ್ಯೆಗಳನ್ನು ಎದುರಿಸಲು ಸಿದ್ಧರಾಗಿರುತ್ತೀರಿ.

ನಿಮ್ಮ ಯಶಸ್ಸನ್ನು ಶ್ಲಾಘಿಸಿ:

ನಿಮ್ಮ ಯಶಸ್ಸನ್ನು ಶ್ಲಾಘಿಸಿ:

ನಾವು ಅತಿಯಾಗಿ ಯೋಚನೆ ಮಾಡಲು ಶುರು ಮಾಡಿದಾಗ, ನಮ್ಮತನವನ್ನು ಕಳೆದುಕೊಳ್ಳುತ್ತೇವೆ, ನಮ್ಮನ್ನು ನಾವು ಟೀಕಿಗೆ ಒಳಪಡಿಸಿಕೊಳ್ಳುತ್ತೇವೆ. ಆದ್ದರಿಂದ ಹೀಗೆ ಮಾಡುವುದನ್ನು ನಿಲ್ಲಿಸಲು, ನಿಮ್ಮ ಸಾಧನೆಗಳು ಮತ್ತು ಯಶಸ್ಸನ್ನು ಶ್ಲಾಘಿಸಿ. ಸ್ವ-ಪ್ರೀತಿಯನ್ನು ಅಭ್ಯಾಸ ಮಾಡಿ ಮತ್ತು ನೀವು ಹಾಕಿದ ಕಠಿಣ ಪರಿಶ್ರಮವನ್ನು ನೆನಪಿಸಿಕೊಳ್ಳಿ. ಅತಿಯಾಗಿ ಯೋಚಿಸುವ ಬದಲು, ನೀವು ಹಾಕಿದ ಎಲ್ಲಾ ಪ್ರಯತ್ನಗಳಿಗೆ ಗಮನ ಕೊಡಿ.

ಯೋಚನೆ ಹಂಚಿಕೊಂಡು, ಸಹಾಯ ಪಡೆಯಿರಿ:

ಯೋಚನೆ ಹಂಚಿಕೊಂಡು, ಸಹಾಯ ಪಡೆಯಿರಿ:

ಅತಿಯಾಗಿ ಯೋಚಿಸುವುದನ್ನು ತಪ್ಪಿಸಲು ಕೆಲವೊಮ್ಮೆ ಉತ್ತಮ ಮಾರ್ಗವೆಂದರೆ ನಿಮ್ಮ ಎಲ್ಲ ಭಾವನೆಗಳನ್ನು ಹೊರಹಾಕುವುದು. ನಿಮ್ಮ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದು ಅಥವಾ ಆಪ್ತರೊಂದಿಗೆ ಹೇಳಿಕೊಳ್ಳುವುದು ನಿಮ್ಮ ಹೃದಯವನ್ನು ಸ್ವಲ್ಪ ಹಗುರಾಗಿಸುತ್ತದೆ. ಸಮಸ್ಯೆಗಳ ಬಗ್ಗೆ ಹೊಸ ದೃಷ್ಟಿಕೋನವನ್ನು ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ ಮತ್ತು ಪರಿಹಾರವನ್ನು ಸಹ ನೀಡುತ್ತದೆ.

Read more about: insync ಜೀವನ
English summary

How to Stop Overthinking About Every Little Problem in Your Life in Kannada

Here we talking about How to stop overthinking about every little problem in your life in kannada, read on
Story first published: Tuesday, June 22, 2021, 17:41 [IST]
X
Desktop Bottom Promotion