For Quick Alerts
ALLOW NOTIFICATIONS  
For Daily Alerts

ರಾಶಿಚಕ್ರದ ಪ್ರಕಾರ, ನಿಮ್ಮ ಮನಸ್ಸಿಗೆ ನೋವಾಗುವುದು ಯಾವ ವಿಚಾರಕ್ಕೆ ಗೊತ್ತಾ?

|

ಪ್ರತಿಯೊಬ್ಬರ ಜೀವನದಲ್ಲಿ ಏರಿಳಿತಗಳು ಸಾಮಾನ್ಯ. ಸ್ವಾಭಾವಿಕವಾಗಿ ಅವು ನಮ್ಮ ಮನಸ್ಥಿತಿಯ ಮೇಲೂ ಪರಿಣಾಮ ಬೀರುತ್ತವೆ. ಒಂದು ಒಳ್ಳೆ ಸುದ್ದಿಯ ನಮ್ಮ ಜೀವನದಲ್ಲಿ ಸಂತೋಷ ಮತ್ತು ನಗುವನ್ನು ತಂದರೆ, ಕೆಟ್ಟ ಸುದ್ದಿ ಕಣ್ಣೀರು, ಅಳು ಹಾಗೂ ಇತರ ಭಾವನೆಗೆ ಕಾರಣವಾಗುತ್ತದೆ. ಕೆಲವೊಮ್ಮೆ, ವಿವಿಧ ಕಾರಣಗಳಿಂದಾಗಿ, ನಾವು ಹೆಚ್ಚು ಸೂಕ್ಷ್ಮ ಮತ್ತು ಮೂಡಿ ಆಗಿರುತ್ತೇವೆ. ನಿಮ್ಮ ರಾಶಿಚಕ್ರ ಚಿಹ್ನೆಯು ನಿಮ್ಮ ಮನಸ್ಥಿತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ನೋಡೋಣ.

How Moody Are You Based On Your Zodiac Sign?

ನಿಮ್ಮ ರಾಶಿಚಕ್ರ ಚಿಹ್ನೆಯು ನಿಮ್ಮ ಮನಸ್ಥಿತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ನೋಡೋಣ.

ಮೇಷ:

ಮೇಷ:

ನೀವು ಸಾಮಾನ್ಯವಾಗಿ ಇತರರ ಮೇಲೆ ಹಿಡಿತ ಹೊಂದಬೇಕು ಎನ್ನುವ ಮನಸ್ಥಿತಿಯುಳ್ಳವರಾಗಿರುವುದರಿಂದ ಆಗಾಗ್ಗೆ ನಿಮ್ಮ ಶಾಂತತೆ ಮತ್ತು ನಿಯಂತ್ರಣವನ್ನು ಕಳೆದುಕೊಳ್ಳುತ್ತೀರಿ. ಆದ್ದರಿಂದ ಸ್ವಲ್ಪ ತಾಳ್ಮೆ ಇಟ್ಟುಕೊಂಡು ಕೆಲಸ ಮಾಡಬೇಕಾಗುತ್ತದೆ. ಇತರರಿಗೂ ಅವರ ಅಭಿಪ್ರಾಯ ತಿಳಿಸಲು ಅವಕಾಶ ನೀಡಬೇಕು.

ವೃಷಭ:

ವೃಷಭ:

ನೀವು ಜೀವನವನ್ನು ಹೆಚ್ಚು ಪ್ರೀತಿಸುವ ವ್ಯಕ್ತಿ. ಕೆಲವೊಮ್ಮೆ ಎಲ್ಲದಕ್ಕೂ, ಎಲ್ಲರಿಗೂ ಬೇಗ ಹೊಂದಿಕೊಳ್ಳುತ್ತೀರಿ, ಆದರೆ ಕೆಲವು ವಿಚಾರಗಳಿಗೆ ತುಂಬಾ ಸಮಯ ತೆಗೆದುಕೊಳ್ಳುತ್ತೀರಿ. ಈ ಸಂದರ್ಭದಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ತಲೆ ಕೆಡಿಸಿಕೊಂಡು, ಅಸಮಾಧಾನಗೊಳ್ಳುವ ಪ್ರವೃತ್ತಿಯನ್ನು ಹೊಂದಿದ್ದೀರಿ.

ಮಿಥುನ:

ಮಿಥುನ:

ನಿಮ್ಮನ್ನು ಯಾವ ವಿಚಾರದಲ್ಲೂ ನಿರೀಕ್ಷಿಸಲು ಸಾಧ್ಯವಾಗುವುದಿಲ್ಲ. ಆದರೆ ಬದಲಾಗುತ್ತಿರುವ ವಾತಾವರಣಕ್ಕೆ ಬೇಗ ಹೊಂದಿಕೊಳ್ಳುತ್ತೀರಿ. ನೀವು ಮನಸ್ಸಿಗಿಂತ ಬುದ್ಧಿಯ ಮಾತನ್ನು ಹೆಚ್ಚು ನಂಬುವವರು. ಇದೇ ನಿಮಗೆ ಹಾನಿ ಮಾಡುವುದು.ಇದಕ್ಕಾಗಿ ನಿಮಗೆ ವೈಯಕ್ತಿಕ ಜಾಗ ಬೇಕಾಗುತ್ತದೆ. ಏಕೆಂದರೆ ಎಲ್ಲವನ್ನೂ ಮರೆಯಲು ನಿಮಗೆ ಸಮಯ ಬೇಕು.

ಕರ್ಕ:

ಕರ್ಕ:

ಇವರು ತುಂಬಾ ಸೂಕ್ಷ್ಮ ಮನಸ್ಥಿತಿಯುಳ್ಳವರು. ಜೊತೆಗೆ ಇತತರ ಮಾತಿನಿಂದ ಸುಲಭವಾಗಿ ಬೇಜಾರು ಮಾಡಿಕೊಳ್ಳುವವರು. ಆ ಮಾತನ್ನು ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ. ಇದರಿಂದ ಮನಸ್ಥಿತಿ ಹಾಳು ಮಾಡಿಕೊಳ್ಳುತ್ತಾರೆ.

ಸಿಂಹ:

ಸಿಂಹ:

ನಿಮಗೆ ಎಲ್ಲವನ್ನೂ ಮುನ್ನಡೆಸುವ ಜವಾಬ್ದಾರಿ ಎಂದರೆ ಬಹಳ ಇಷ್ಟ ಆದರೆ, ಆ ದಾರಿಯಲ್ಲಿ ಏನಾದರೂ ಸಮಸ್ಯೆಗಳು ಎದುರಾದರೆ ಬಹಳ ಬೇಗ ವಿಚಲಿತರಾಗುತ್ತೀರಿ, ನಿಮ್ಮ ಮನಸ್ಸು ಹಾಳು ಮಾಡಿಕೊಳ್ಳುತ್ತೀರಿ. ಆ ಸಮಯದಲ್ಲಿ ಸಮಾಜದಿಂದ ದೂರವಿರಲು ಬಯಸುತ್ತೀರಿ, ಅಂದರೆ ಕರೆಗಳನ್ನು ಮಾಡದೇ ಯಾರ ಬಳಿಯೂ ಸೇರದೇ ದೂರವಿರಲು ಇಚ್ಛಿಸುತ್ತೀರಿ.

ಕನ್ಯಾ:

ಕನ್ಯಾ:

ನೀವು ಸ್ವಭಾವತಃ ಸ್ವವಿಮರ್ಶಕರಾಗಿದ್ದೀರಿ. ಆದರೆ ನಿಮ್ಮ ನ್ಯೂನತೆಗಳ ಬಗ್ಗೆ ಯಾರಾದರೂ ಯಾವುದಾದರೂ ವಿಷಯವನ್ನು ಹೇಳಿದಾಗ ಸುಲಭವಾಗಿ ಕಿರಿಕಿರಿಗೊಳ್ಳುತ್ತೀರಿ. ಏಕೆಂದರೆ ಇನ್ನೊಬ್ಬರು ಆ ತಪ್ಪನ್ನು ಹೇಳುವುದನ್ನು ನೀವು ಸಹಿಸುವುದಿಲ್ಲ. ಆ ವಿಷಯಗಳನ್ನು ಸರಿಪಡಿಸಿಕೊಳ್ಳುವ ಪ್ರಯತ್ನ ಪಟ್ಟರೂ ಅವರ ಮಾತಿಂದ ಹೆಚ್ಚು ನಿರಾಶೆ ಅನುಭವಿಸುತ್ತೀರಿ.

ತುಲಾ:

ತುಲಾ:

ನಿಮ್ಮ ಸುತ್ತಮುತ್ತಲಿನ ಜನರನ್ನು ಮೆಚ್ಚಿಸಲು ಇಷ್ಟಪಡುತ್ತೀರಿ ಆದರೆ ನಿಮ್ಮ ನಡವಳಿಕೆಗೆ ಯಾರಾದರೂ ಸಣ್ಣದೊಂದು ಟೀಕೆ ಮಾಡಿದರೆ ಅಥವಾ ಅದು ಹಾಗಲ್ಲ ಹೀಗೆ ಅಂದರೆ ಸಾಕು ನಿಮ್ಮ ಮನಸ್ಥಿತಿ ಹಾಳಾಗುತ್ತದೆ. ಮುಂದೆ ನಿಮ್ಮ ಮನಸ್ಸು ನಿಮ್ಮ ಕೈಯಲ್ಲಿರುವುದಿಲ್ಲ.

ವೃಶ್ಚಿಕ:

ವೃಶ್ಚಿಕ:

ನೀವು ಪ್ರತಿಯೊಂದು ವಿಷಯಗಳನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತೀರಿ. ಎಲ್ಲಾ ವಿಚಾರದಲ್ಲೂ ಉತ್ಸಾಹ ತೋರುತ್ತೀರಿ. ಇದೇ ವರ್ತನೆ ನಿಮ್ಮ ಮನಸ್ಥಿತಿಗೆ ಕೆಲವೊಮ್ಮೆ ಮುಳುವಾಗುವುದು. ಯಾಕೀಗೆ ಎಂಬ ಭಾವನೆ ನಿಮ್ಮ ಮನಸ್ಸಿಗೆ ಬಂದು ಎಲ್ಲವನ್ನು ಹಾಳು ಮಾಡುವುದು.

ಧನು:

ಧನು:

ನೀವು ಕರುಣಾಮಯಿ ಮತ್ತು ಪ್ರತಿ ಸನ್ನಿವೇಶದಲ್ಲೂ ಉತ್ತಮವಾಗಿರಲು ಪ್ರಯತ್ತಸಿವವರು. ಆದರೆ ನಿಮ್ಮ ಕೋಪ ಮತ್ತು ಹತಾಶೆಯನ್ನು ವ್ಯಕ್ತಪಡಿಸಲು ನೀವು ಹೆಣಗಾಡುತ್ತೀರಿ. ಅದಕ್ಕಾಗಿ ಮೌನದ ದಾರಿ ಹಿಡಿಯುತ್ತೀರಿ. ಅದೇ ಮೌನದಿಂದ ಮನಸ್ಸೊಳಗೆ ಕೊರಗುತ್ತೀರಿ.

ಮಕರ:

ಮಕರ:

ಈ ರಾಶಿಯವರು ಇತರರ ಮೇಲೆ ನಂಬಿಕೆ ಇಡುತ್ತಾರೆ ಮತ್ತು ಅದೇ ಮಟ್ಟದ ನಿಷ್ಠೆ ಅವರಿಂದಲೂ ನಿರೀಕ್ಷಿಸುತ್ತಾರೆ. ಆದರೆ ಆ ನಂಬಿಕೆಗೆ ಮೋಸ ಆದಾಗ ಅಥವಾ ಯಾರಿಂದಲಾದರೂ ಮೋಸ ಹೋದಾಗ, ಕ್ರೂರ ಮತ್ತು ಉಗ್ರ ರೂಪ ತಾಳುತ್ತಾರೆ.

ಕುಂಭ:

ಕುಂಭ:

ನೀವು ನಿಮ್ಮ ಜೀವನಕ್ಕೆ ಕೆಲವೊಂದು ನಿಯಮಗಳನ್ನು ಹಾಕಿಕೊಂಡು ಅದಕ್ಕೆ ಅನುಗುಣವಾಗಿ ಜೀವನವನ್ನು ನಡೆಸುತ್ತೀರಿ. ಇದು ನಿಮಗೆ ಸ್ವಲ್ಪ ಅನಿರೀಕ್ಷಿತ ಮತ್ತು ಸವಾಲಾಗಿ ಪರಿಣಮಿಸುತ್ತದೆ. ನೀವು ಮೂಡಿ ಭಾವನೆ ಹೊಂದಿರುವಾಗ, ನಿಮ್ಮ ಸುತ್ತಮುತ್ತಲಿನ ಜನರು ನಿಮ್ಮನ್ನು ದೂರವಿಡಬಹುದು.

ಮೀನ:

ಮೀನ:

ಮೀನ ರಾಶಿಯವರು ಉದಾರ ಮತ್ತು ಪ್ರಾಮಾಣಿಕರು. ಎಲ್ಲಾ ವಿಚಾರಗಳಲ್ಲೂ ನೈಜತೆಯನ್ನು ನಿರೀಕ್ಷಿಸುವವರು. ಕೆಲವೊಮ್ಮೆ ಇದೇ ಅವರ ಭಾವನೆಗೆ ಕಾರಣವಾಗಬಹುದು.

English summary

How Moody Are You Based On Your Zodiac Sign?

Here we talking about How Moody Are You Based On Your Zodiac Sign?, read on
Story first published: Friday, May 14, 2021, 16:44 [IST]
X
Desktop Bottom Promotion