For Quick Alerts
ALLOW NOTIFICATIONS  
For Daily Alerts

ಸಂಖ್ಯಾಶಾಸ್ತ್ರದ ಪ್ರಕಾರ, ಯಾವ ಮನೆ ನಂಬರ್ ನಿಮಗೆ ಅದೃಷ್ಟ ತರುವುದು?

|

ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ವಂತ ಮನೆಯಿರಬೇಕು ಎಂಬ ಆಸೆಯಿರುತ್ತದೆ. ಅದಕ್ಕಾಗಿ ಹಲವಾರು ವರ್ಷಗಳಿಂದ ಕಾಸು ಕೂಡಿಡುತ್ತಲೇ ಬಂದಿರುತ್ತಾರೆ. ಸ್ವಂತ ಮನೆಯಾಗಲೀ, ಬಾಡಿಗೆ ಮನೆಯಾಗಲೀ ನಿಮ್ಮ ಕನಸಿನ ಮನೆಯನ್ನು ಹುಡುಕುವುದು ಒಂದು ಸವಾಲೇ ಸರಿ. ಎಲ್ಲವೂ ಸರಿಯಾಗಿದ್ದು, ವಾಸ್ತುಪ್ರಕಾರ ಇರಬೇಕು ಎಂಬ ನಿರೀಕ್ಷೆ ಎಲ್ಲರಲ್ಲಿ ಇರುತ್ತದೆ.

ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನಿಮ್ಮ ಮನೆಯ ನಂಬರ್ ಸಹಿತ ನಿಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆಯಂತೆ. ಹಾಗಾದರೆ ಯಾವ ಮನೆನಂಬರ್ ನಿಮಗೆ ಅದೃಷ್ಟ ತರಲಿದೆ. ಈ ಮನೆನಂಬರ್‌ನ್ನು ಸಂಖ್ಯಾಶಾಸ್ತ್ರದ ಪ್ರಕಾರ, ಆಯ್ಕೆ ಮಾಡುವುದು ಹೇಗೆ ಎಲ್ಲವನ್ನೂ ಹೇಳ್ತೀವಿ, ಈ ಸ್ಟೋರಿ ನೋಡಿ.

ಸಂಖ್ಯಾಶಾಸ್ತ್ರದ ಪ್ರಕಾರ, ನಿಮಗೆ ಆಸ್ತಿ, ಮನೆ ಅಥವಾ ಬಾಡಿಗೆ ಮನೆ ಖರೀದಿಸಲು ನಿಮ್ಮ ಜನ್ಮದಿನಾಂಕ ಸಹಾಯ ಮಾಡಲಿದೆ. ಜನ್ಮದಿನಾಂಕವನ್ನು ಈ ಕೆಳಗಿನಿಂತೆ ಲೆಕ್ಕಹಾಕಿದರೆ, ನಿಮ್ಮ ಅದೃಷ್ಟದ ಮನೆನಂಬರ್ ಸಿಗಲಿದೆ. ಅದು ಹೇಗೆಂಬುದನ್ನು ಇಲ್ಲಿ ನೋಡಿ.

ಸಂಖ್ಯಾಶಾಸ್ತ್ರದ ಪ್ರಕಾರ, ನಿಮಗೆ ಆಸ್ತಿ, ಮನೆ ಅಥವಾ ಬಾಡಿಗೆ ಮನೆ ಖರೀದಿಸಲು ನಿಮ್ಮ ಜನ್ಮದಿನಾಂಕ ಸಹಾಯ ಮಾಡಲಿದೆ. ಜನ್ಮದಿನಾಂಕವನ್ನು ಈ ಕೆಳಗಿನಿಂತೆ ಲೆಕ್ಕಹಾಕಿದರೆ, ನಿಮ್ಮ ಅದೃಷ್ಟದ ಮನೆನಂಬರ್ ಸಿಗಲಿದೆ. ಅದು ಹೇಗೆಂಬುದನ್ನು ಇಲ್ಲಿ ನೋಡಿ.

ಸಂಖ್ಯಾಶಾಸ್ತ್ರದ ಪ್ರಕಾರ, ಆಸ್ತಿಯನ್ನು ಖರೀದಿಸಲು, ನಿಮ್ಮ ಜೀವನ ಪಥದ ಸಂಖ್ಯೆಯನ್ನು ಅನುಸರಿಸುವುದು ಮುಖ್ಯ. ಜೀವನ ಪಥ ಸಂಖ್ಯೆ ಅಂದ್ರೆ ನಿಮ್ಮ ಪೂರ್ಣ ಹುಟ್ಟಿದ ದಿನಾಂಕದ ಮೊತ್ತದ ಸಿಂಗಲ್ ಡಿಜಿಟ್ ಸಂಖ್ಯೆ. ಉದಾಹರಣೆಗೆ, ನಿಮ್ಮ ಪೂರ್ಣ ಜನ್ಮ ದಿನಾಂಕ 14.4.2001 ಆದರೆ (1+4+4+2+0+0+1=12, 1+2=3 ) ನಿಮ್ಮ ಜನ್ಮ ದಿನಾಂಕದ ಎಲ್ಲಾ ಸಂಖ್ಯೆಗಳನ್ನು ಕೂಡಿಸುವ ಮೂಲಕ 3 ನಿಮ್ಮ ಜೀವನ ಪಥ ಸಂಖ್ಯೆ ಆಗುತ್ತದೆ.

ಮನೆಯನ್ನು ಬಾಡಿಗೆಗೆ ಪಡೆಯಲು ಸಹ ನಿಮ್ಮ ಜನ್ಮ ದಿನಾಂಕವನ್ನು ತೆಗೆದುಕೊಳ್ಳಿ. ಇದನ್ನು ಅತೀಂದ್ರಿಯ ಸಂಖ್ಯೆ ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ನಿಮ್ಮ ಜನ್ಮ ದಿನಾಂಕ 16 ಆಗಿದ್ದರೆ, ಅದು, 1+6 = 7 ಆಗುತ್ತದೆ. ಆದ್ದರಿಂದ ನಿಮ್ಮ ಅತೀಂದ್ರಿಯ ಸಂಖ್ಯೆ 7.

ನಿಮ್ಮ ಮನೆಯ ನಂಬರ್‌ನ ಸಂಖ್ಯಾಶಾಸ್ತ್ರವನ್ನು ಹೇಗೆ ಲೆಕ್ಕ ಹಾಕುವುದು?:

ನಿಮ್ಮ ಮನೆಯ ನಂಬರ್‌ನ ಸಂಖ್ಯಾಶಾಸ್ತ್ರವನ್ನು ಹೇಗೆ ಲೆಕ್ಕ ಹಾಕುವುದು?:

ಮನೆಯ ಸಂಖ್ಯಾಶಾಸ್ತ್ರವನ್ನು ಲೆಕ್ಕಹಾಕಲು, ವರ್ಣಮಾಲೆಗಳು ಹಾಗೂ ಮನೆಯ ಸಂಖ್ಯೆ ಎರಡನ್ನೂ ಗಣನೆಗೆ ತೆಗೆದುಕೊಳ್ಳಿ. ಪ್ರತಿ ವರ್ಣಮಾಲೆಗೆ ನಿಗದಿಪಡಿಸಲಾದ ಸಂಖ್ಯಾ ಮೌಲ್ಯವು ಈ ಕೆಳಗಿನಂತಿದೆ:

ವರ್ಣಮಾಲೆಗಳು- ಸಂಖ್ಯಾ ಮೌಲ್ಯ

A, I, J, Q, Y- 1

B, K, R- 2

C, G, L, S- 3

D, M, T- 4

E, H, N, X- 5

U, V , W- 6

O, Z- 7

F, P- 8

ಉದಾ: ವಿಳಾಸ F44 ಆಗಿದ್ದರೆ, ಮನೆಯ ಸಂಖ್ಯಾಶಾಸ್ತ್ರ 8+4+4 =16, 1+6 = 7.

ಸಂಖ್ಯಾಶಾಸ್ತ್ರದಲ್ಲಿ ನೆನಪಿಡಬೇಕಾದ ಮುಖ್ಯ ಅಂಶವೆಂದರೆ, ಎಲ್ಲಾ ಫಲಾಫಲಗಳು ಸಿಂಗಲ್ ಡಿಜಿಟ್ ನಂಬರ್ ಮೇಲೆ ನಿಂತಿದೆ. ಅಂದರೆ ಒಂದಂಕಿಯ ಸಂಖ್ಯೆಗಳು. ನೀವು ಲೆಕ್ಕಹಾಕುವಾಗ 2-3ಮೂರಂಕಿಯ ಸಂಖ್ಯೆಗಳು ಬಂದಾಗ ಅದನ್ನ ಮತ್ತೆ ಬಿಡಿಬಿಡಿಯಾಗಿ ಕೂಡಿಸಿಕೊಂಡು, ಒಂದಂಕಿಗೆ ಬರುವ ಹಾಗೇ ಮಾಡಿಕೊಳ್ಳಬೇಕು.

ಯಾವ ಮನೆ ನಂಬರ್ ನಿಮಗೆ ಅದೃಷ್ಟ ತರುವುದು?:

ಯಾವ ಮನೆ ನಂಬರ್ ನಿಮಗೆ ಅದೃಷ್ಟ ತರುವುದು?:

ಸಂಖ್ಯೆ 1:

ಜೀವನ ಪಥ ಮತ್ತು ಅತೀಂದ್ರಿಯ ಸಂಖ್ಯೆ 1 ಆಗಿರುವ ಜನರಿಗೆ ಅದೃಷ್ಟದ ಮನೆ ನಂಬರ್‌ಗಳು 1,2,3,4,5,7,9. ಇವರಿಗೆ 6 ಅಥವಾ 8 ನಂಬರ್ ಮನೆ ಒಳ್ಳೆಯದಲ್ಲ.

ಸಂಖ್ಯೆ 2:

ಜೀವನ ಪಥ ಮತ್ತು ಅತೀಂದ್ರಿಯ ಸಂಖ್ಯೆ 2ಆಗಿರುವವರಿಗೆ ಅದೃಷ್ಟದ ಮನೆ ನಂಬರ್‌ಗಳು 1,3,4,7,8,9. ಇವರು 2, 5, ಅಥವಾ 6 ನಂಬರ್‌ಗಳಿಂದ ದೂರವಿರಬೇಕು.

ಸಂಖ್ಯೆ 3:

ಜೀವನ ಪಥ ಮತ್ತು ಅತೀಂದ್ರಿಯ ಸಂಖ್ಯೆ 3 ಇದ್ದವರಿಗೆ ಅದೃಷ್ಟದ ಮನೆ ಸಂಖ್ಯೆಗಳು 1,2,3,5,6,8,9. ಇವರು 4 ಅಥವಾ 7 ನಂಬರ್‌ನ್ನು ತಪ್ಪಿಸಬೇಕು.

ಸಂಖ್ಯೆ 4:

ಜೀವನ ಪಥ ಮತ್ತು ಅತೀಂದ್ರಿಯ ಸಂಖ್ಯೆ 4 ಆಗಿರುವವರಿಗೆ ಅದೃಷ್ಟದ ಮನೆ ಸಂಖ್ಯೆ 1,2,5,6,7,9 ಆಗಿದೆ. ಇವರು 3, 4, ಅಥವಾ 8 ಸಂಖ್ಯೆಗಳಿರುವ ಮನೆಗಳನ್ನು ಖರೀದಿಸಬಾರದು.

ಸಂಖ್ಯೆ 5:

ಜೀವನ ಪಥ ಮತ್ತು ಅತೀಂದ್ರಿಯ ಸಂಖ್ಯೆ 5 ಇದ್ದವರಿಗೆ ಅದೃಷ್ಟದ ಮನೆ ನಂಬರ್‌ಗಳು 1,3,4,5,6,7,8,9 ಆಗಿವೆ. ಇವರು ಮನೆ ಸಂಖ್ಯೆ 2 ಅನ್ನು ತಪ್ಪಿಸಬೇಕು.

ಸಂಖ್ಯೆ 6:

ಸಂಖ್ಯೆ 6:

ಜೀವನ ಪಥ ಮತ್ತು ಅತೀಂದ್ರಿಯ ಸಂಖ್ಯೆ 6ಇರುವವರಿಗೆ ಅದೃಷ್ಟದ ಮನೆ ಸಂಖ್ಯೆಗಳು 3,4,5,8,9 ಆಗಿವೆ. ಇವರಿಗೆ 1, 2, 6, ಅಥವಾ 7 ನಂಬರ್ ಮನೆ ಒಳ್ಳೆಯದಲ್ಲ.

ಸಂಖ್ಯೆ 7:

7 ನೇ ಸಂಖ್ಯೆಯ ಜೀವನ ಪಥ ಮತ್ತು ಅತೀಂದ್ರಿಯ ಸಂಖ್ಯೆ ಹೊಂದಿರುವ ಜನರಿಗೆ ಅದೃಷ್ಟದ ಮನೆ ನಂಬರ್‌ಗಳು 1,2,4,5 ಆಗಿದ್ದು, ಇವರಿಗೆ 3,6,7,8, ಅಥವಾ 9 ನಂಬರ್ ಶುಭಕರವಲ್ಲ.

ಸಂಖ್ಯೆ 8:

ಜೀವನ ಪಥ ಮತ್ತು ಅತೀಂದ್ರಿಯ ಸಂಖ್ಯೆ 8 ಇರುವವರಿಗೆ ಅದೃಷ್ಟದ ಮನೆ ನಂಬರ್‌ಗಳು 2,3,5,6 ಆಗಿವೆ. ಇವರು 1,4,7,8 ಅಥವಾ 9 ನಂಬರ್ ತಪ್ಪಿಸಬೇಕು.

ಸಂಖ್ಯೆ 9:

ಜೀವನ ಪಥ ಮತ್ತು ಅತೀಂದ್ರಿಯ ಸಂಖ್ಯೆಯ 9ಇರುವವರಿಗೆ ಅದೃಷ್ಟದ ಮನೆ ನಂಬರ್‌ಗಳು 1,2,3,4,5,6,9 ಆಗಿದ್ದು, ಇವರು 7 ಅಥವಾ 8 ನಂಬರ್ ಇರುವ ಮನೆ ಖರೀದಿಸಬಾರದು.

ಮನೆ ಸಂಖ್ಯೆಗಳು ಮತ್ತು ಅವುಗಳ ಗುಣಲಕ್ಷಣಗಳು:

ಮನೆ ಸಂಖ್ಯೆಗಳು ಮತ್ತು ಅವುಗಳ ಗುಣಲಕ್ಷಣಗಳು:

  • ಸಂಖ್ಯೆ 1 ಹೊಂದಿರುವ ಮನೆಗಳು ನಾಯಕತ್ವ, ಮಹತ್ವಾಕಾಂಕ್ಷೆ, ನಾವೀನ್ಯತೆ ಮತ್ತು ಸ್ವಾತಂತ್ರ್ಯವನ್ನು ಉತ್ತೇಜಿಸುತ್ತವೆ. ಮನೆನಂಬರ್ 1 ಇರುವ ಮನೆಯಲ್ಲಿ ವಾಸಿಸುವುದು ಆತ್ಮವಿಶ್ವಾಸವನ್ನು ಬೆಳೆಸಲು ಸಹಾಯ ಮಾಡುತ್ತದೆ.
  • ಸಂಖ್ಯೆ 2 ಹೊಂದಿರುವ ಮನೆಗಳು ಸೃಜನಶೀಲತೆ ಮತ್ತು ಸೌಕರ್ಯವನ್ನು ಉತ್ತೇಜಿಸುತ್ತವೆ. ಸಂಬಂಧಗಳಲ್ಲಿ ಪ್ರೀತಿ ಮತ್ತು ಸಾಮರಸ್ಯಕ್ಕೆ ಉತ್ತಮ ಸಂಖ್ಯೆಯಾಗಿದೆ. ಸಂವಹನವು ಈ ಮನೆಯಲ್ಲಿ ಪ್ರಮುಖವಾದುದು ಏಕೆಂದರೆ ಅದು ನಿಮ್ಮನ್ನು ಕೆಲವೊಮ್ಮೆ ನಿರ್ದಯವಾಗಿಸುತ್ತದೆ.
  • 3 ನೇ ಸಂಖ್ಯೆಯನ್ನು ಹೊಂದಿರುವ ಮನೆಗಳು ಅದೃಷ್ಟ, ಸಮೃದ್ಧ ಮತ್ತು ಸೃಜನಶೀಲತೆಯನ್ನು ಉತ್ತೇಜಿಸಲಾಗುತ್ತದೆ. ಆದರೆ, 3 ನೇ ಸಂಖ್ಯೆಯ ಮನೆಯು ನಿಮ್ಮನ್ನು ಗಮನಹರಿಸದಿರಲು ಮತ್ತು ಖರ್ಚು ಮಾಡುವಂತೆ ಮಾಡುತ್ತದೆ, ಜಾಗರೂಕರಾಗಿರಿ.
  • ನಂಬರ್ 4 ಹೊಂದಿರುವ ಮನೆಗಳು ಸ್ಥಿರತೆ ಮತ್ತು ಭದ್ರತೆಯನ್ನು ನೀಡುತ್ತವೆ ಜೊತೆಗೆ ಶಿಸ್ತು ಮತ್ತು ಜವಾಬ್ದಾರಿಯನ್ನು ಉತ್ತೇಜಿಸುತ್ತವೆ. 4 ನೇ ಸಂಖ್ಯೆಯ ಮನೆಯ ವ್ಯಕ್ತಿಗೆ, ಮೋಜಿನೊಂದಿಗೆ ಕೆಲಸವನ್ನು ಮಾಡುವುದು ಮುಖ್ಯವಾಗಿದೆ ಏಕೆಂದರೆ ಈ ಸಂಖ್ಯೆಯ ಮನೆ ನಿಮ್ಮನ್ನು ಸಂಪ್ರದಾಯವಾದಿಯಾಗಿ ಮಾಡುತ್ತದೆ.
  • 5 ನೇ ಸಂಖ್ಯೆಯ ಮನೆಗಳು ರೋಮಾಂಚಕ ಮತ್ತು ಉತ್ಸಾಹಭರಿತವಾಗಿದ್ದು, ಸ್ನೇಹಿತರು ಮತ್ತು ಕುಟುಂಬಕ್ಕೆ ಮನರಂಜನೆ ನೀಡಲು ಉತ್ತಮ ಸ್ಥಳವಾಗಿದೆ. ಈ ಸಂಖ್ಯೆಯು ಬದಲಾವಣೆಯನ್ನು ಸೂಚಿಸುತ್ತದೆ, ಆದ್ದರಿಂದ ನಿಮ್ಮ ಗುರಿಗಳ ಮೇಲೆ ಕೇಂದ್ರೀಕರಿಸಿ.
  • ಸಂಖ್ಯೆ 6 ಹೊಂದಿರುವ ಮನೆಗಳು ಪೋಷಣೆ ಮತ್ತು ಪ್ರೀತಿಯನ್ನು ಉತ್ತೇಜಿಸುತ್ತದೆ. ಆದ್ದರಿಂದ ಮಕ್ಕಳು ಮತ್ತು ಸಾಕುಪ್ರಾಣಿಗಳಿಗೆ ಸೂಕ್ತವಾಗಿದೆ. ಇತರರನ್ನು ಪೋಷಿಸುವಾಗ ನಿಮ್ಮ ಬಗ್ಗೆ ಕಾಳಜಿ ವಹಿಸಲು ಮರೆಯದಿರಿ.
  • ಮನೆ ಸಂಖ್ಯೆಗಳು ಮತ್ತು ಅವುಗಳ ಗುಣಲಕ್ಷಣಗಳು:

    ಮನೆ ಸಂಖ್ಯೆಗಳು ಮತ್ತು ಅವುಗಳ ಗುಣಲಕ್ಷಣಗಳು:

    • 7 ನೇ ಸಂಖ್ಯೆಯ ಮನೆಗಳು ಶಾಂತಿ ಮತ್ತು ಏಕಾಂತತೆಯನ್ನು ತರುತ್ತವೆ. ಲೇಖಕರು ಮತ್ತು ಸಂಶೋಧಕರಿಗೆ ಸೂಕ್ತವಾಗಿದೆ ಏಕೆಂದರೆ ಇದು ಆಳವಾದ ಆಲೋಚನೆಗಳು ಮತ್ತು ಒಳನೋಟಗಳನ್ನು ಪ್ರೇರೇಪಿಸುತ್ತದೆ. ಇದು ಏಕಾಂತ ಶಕ್ತಿಯನ್ನು ಹೊಂದಿರುವುದರಿಂದ ಖಂಡಿತವಾಗಿಯೂ ಬಹಿರ್ಮುಖಿಗಳಿಗೆ ಸೂಕ್ತವಲ್ಲ.
    • ಮನೆ ಸಂಖ್ಯೆ 8 ಸಮೃದ್ಧಿ ಮತ್ತು ಉತ್ಸಾಹವನ್ನು ಉತ್ತೇಜಿಸುತ್ತದೆ. ಉದ್ಯಮಿಗಳಿಗೆ ಸೂಕ್ತವಾಗಿದೆ.
    • 9 ನೇ ಸಂಖ್ಯೆಯ ಮನೆಗಳು ಸಹಾನುಭೂತಿ ಮತ್ತು ಸ್ವೀಕಾರವನ್ನು ಉತ್ತೇಜಿಸುತ್ತವೆ. ಆದರೆ ಭಾವನೆಗಳಿಗೆ ಹೆಚ್ಚು ಒಳಗಾಗಬೇಡಿ ಮತ್ತು ಹಿಂದಿನದ್ದನ್ನೇ ಹೆಚ್ಚು ಕಾಲ ಯೋಚಿಸಬೇಡಿ.
English summary

House Number Numerology: Lucky House numbers according to numerology

Here we talking about House Number Numerology: Lucky House numbers according to numerology, readon
Story first published: Wednesday, September 22, 2021, 17:11 [IST]
X
Desktop Bottom Promotion