For Quick Alerts
ALLOW NOTIFICATIONS  
For Daily Alerts

ವಾಲ್ಮೀಕಿ ಜಯಂತಿ 2022: ಮಹಾನ್‌ ಋಷಿ ವಾಲ್ಮೀಕಿ ಅವರ ಕೋಟ್ಸ್‌, ಶುಭಾಶಯಗಳು

|

ಆದಿಕವಿ ಮಹರ್ಷಿ ವಾಲ್ಮೀಕಿ ಹಿಂದೂಗಳ ಧರ್ಮಗ್ರಂಥ ರಾಮಾಯಣ ಮಹಾಕಾವ್ಯದ ಕರ್ತೃ. ವಾಲ್ಮೀಕಿ ಮಹರ್ಷಿಗಳು ಬ್ರಹ್ಮನ ಅನುಗ್ರಹದಿಂದ ರಾಮಾಯಣವನ್ನು ರಚಿಸಿದರು ಎಂಬುದು ಭಾರತೀಯ ನಂಬಿಕೆ. ಇದು ಭಾರತದ ಮೊಟ್ಟ ಮೊದಲ ಮಹಾಕಾವ್ಯ ಎಂಬ ಹಿರಿಮೆಗೆ ಸಹ ಪಾತ್ರವಾದ ಕೃತಿ ಹಾಗೂ ಕರ್ತೃ ಮಹರ್ಷಿ ವಾಲ್ಮೀಕಿ.

Happy Valmiki Jayanti 2021: Wishes, Messages, Quotes, Images, Facebook & Whatsapp status in kannada

ಅಕ್ಟೋಬರ್‌ 31ರಂದು ಮಹರ್ಷಿ ವಾಲ್ಮೀಕಿ ಅವರು ಜನಿಸಿದ ದಿನ, ಇಂದು ದೇಶಾದ್ಯಂತ ಅವರ ಜಯಂತಿಯನ್ನು ಆಚರಿಸಲಾಗುತ್ತದೆ. 2022ನೇ ಸಾಲಿನಲ್ಲಿ ಅಕ್ಟೋಬರ್‌ 9ರಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಗುತ್ತಿದೆ. ವಿಶೇಷವಾಗಿ ಕರ್ನಾಟಕದಲ್ಲಿ ವಾಲ್ಮೀಕಿ ಜಯಂತಿಗೆ ವಿಶೇಷ ಗೌರವ ನೀಡಲಾಗಿದೆ. ಈ ಹಿನ್ನೆಲೆ ಮಹಾನ್‌ ಋಷಿ ವಾಲ್ಮೀಕಿ ಅವರು ಹೇಳಿರುವ ಜೀವನಸಾರವುಳ್ಳ ಹೇಳಿಕೆಗಳನ್ನು ನಾವಿಲ್ಲಿ ದಾಖಲಿಸಿದ್ದೇವೆ:

1. ಬೆನ್ನಿನ ಹಿಂದೆ ಆಡಿಕೊಳ್ಳುವ ಜನರ ಬಗ್ಗೆ ತಲೆಕೆಡಿಸಿಕೊಳ್ಳಬೇಡ, ಏಕೆಂದರೆ ನಿನ್ನ ಬೆನ್ನೆ ನಿನಗೆ ಕಾಣುವುದಿಲ್ಲ, ಎದುರಾದರೆ ಎದುರಿಸು ಗೆದ್ದೇ ಗೆಲ್ಲುವೆ. -ಮಹರ್ಷಿ ವಾಲ್ಮೀಕಿ

2. ನೀವು ಜ್ಞಾನ, ಹಣ, ಪ್ರತಿಷ್ಠೆ, ಶಕ್ತಿಯನ್ನು ಸಂಗ್ರಹಿಸಬಹುದು. ಆದರೆ ಇದೆಲ್ಲದರ ನಡುವೆ ಪ್ರೀತಿಯನ್ನು ಕಳೆದುಕೊಂಡಿದ್ದರೆ ನೀವು ನಿಜವಾದ ಬದುಕನ್ನೇ ಕಳೆದುಕೊಂಡಿದ್ದೀರಿ ಎಂದರ್ಥ. - ಮಹರ್ಷಿ ವಾಲ್ಮೀಕಿ

3. ಪ್ರಶ್ನಿಸಿದರು ಎಂದು ಕುಗ್ಗಬೇಡ, ಪ್ರಶ್ನೆ ಯಾರಾದರೂ ಕೇಳುವರು, ಸಮಯ ನೋಡಿ ಉತ್ತರ ಕೊಡುವವನೇ ಚಾಣಾಕ್ಯ. - ಮಹರ್ಷಿ ವಾಲ್ಮೀಕಿ

4. ಬೇರೆಯವರ ಬಗ್ಗೆ ಕೆಟ್ಟ್ ಭಾವನೆ, ಆಲೋಚನೆಗಳನ್ನು ನಮ್ಮ ಮನಸ್ಸಲ್ಲಿ ಇಟ್ಟುಕೊಳ್ಳುವುದರಿಂದ ನಮ್ಮ ಮನಸ್ಸೆ ಮಲಿನವಾಗುತ್ತದೆ. - ಮಹರ್ಷಿ ವಾಲ್ಮೀಕಿ

5. ವ್ಯಕ್ತಿಯು ಆನೆಯನ್ನೇ ಉಡುಗೊರೆಯಾಗಿ ನೀಡುವಾಗ, ಆನೆಯನ್ನು ಕಟ್ಟುವ ಹಗ್ಗದ ಮೇಲೆ ಮನಸ್ಸಿದ್ದರೆ ಏನು ಪ್ರಯೋಜನ. ಆನೆಯನ್ನೇ ಕಳೆದುಕೊಂಡಾಗ ಹಗ್ಗದ ಮೇಲಿನ ಬಾಂಧವ್ಯದಿಂದ ಏನು ಉಪಯೋಗ. - ಮಹರ್ಷಿ ವಾಲ್ಮೀಕಿ

6. ವೈರಿಯನ್ನು ಇಲ್ಲವಾಗಿಸಲು ಅವನ ತಲೆ ತೆಗೆಯಬೇಕಾಗಿಲ್ಲ, ನಮ್ಮ ತಲೆಯಿಂದ ಅವನನ್ನು ತೆಗೆದರೆ ಸಾಕು. - ಮಹರ್ಷಿ ವಾಲ್ಮೀಕಿ

7. ಬಂಗಾರವೇ ಬದುಕಲ್ಲ, ಬದುಕು ಬಂಗಾರವಾಗಲಿ. - ಮಹರ್ಷಿ ವಾಲ್ಮೀಕಿ

8. ಯಾವಾಗಲೂ ಸಂತೋಷವಾಗಿರಲು ಹೇಗೆ ತಾನೇ ಸಾಧ್ಯ. ಜೀವನ ಎಂದ ಮೇಲೆ ಸುಖ ಮತ್ತು ದುಃಖಗಳ ಮಿಳಿತವಾಗಿರುತ್ತದೆ, ನಿರಂತರವಾದ ಸಂತೋಷ ಮಾತ್ರ ಇರಲು ಸಾಧ್ಯವೇ ಇಲ್ಲ. - ಮಹರ್ಷಿ ವಾಲ್ಮೀಕಿ

9. ಸಮಯಕ್ಕಿಂತ ಶಕ್ತಿಶಾಲಿ ದೇವತೆ ಮತ್ತೊಂದಿಲ್ಲ. - ಮಹರ್ಷಿ ವಾಲ್ಮೀಕಿ

10. ಧರ್ಮದಿಂದ ಸಂಪತ್ತು ಚಿಗುರುತ್ತದೆ, ಧರ್ಮದಿಂದ ಸಂತೋಷ ಬರುತ್ತದೆ ಮತ್ತು ಧರ್ಮದಿಂದ ಎಲ್ಲವನ್ನೂ ಪಡೆಯುತ್ತಾನೆ. ಧರ್ಮವೆ ಈ ಪ್ರಪಂಚದ ಸಾರವಾಗಿದೆ. - ಮಹರ್ಷಿ ವಾಲ್ಮೀಕಿ

English summary

Happy Valmiki Jayanti 2022: Wishes, Messages, Quotes, Images, Facebook & Whatsapp status in kannada

Here we are discussing about Happy Valmiki Jayanti 2021: Wishes, Messages, Quotes, Images, Facebook & Whatsapp status in kannada. Read more.
X
Desktop Bottom Promotion