For Quick Alerts
ALLOW NOTIFICATIONS  
For Daily Alerts

Hanuman Jayanti puja vidhi :ಪೂಜಾವಿಧಾನ ಹಾಗೂ ಹನುಮನನ್ನು ಒಲಿಸಿಕೊಳ್ಳುವ ಮಾರ್ಗಗಳು ಇಲ್ಲಿದೆ

|

ಇದೇ ಬರುವ 27ರಂದು ಹನುಮಾನ್ ಜಯಂತಿ. ಅಂದರೆ ರಾಮಭಕ್ತ ಹನುಮ ಹುಟ್ಟಿದ ದಿನ. ಈ ದಿನ ಹನುಂತನನ್ನ ಪೂಜಿಸಿದರ ತಮ್ಮ ಕಷ್ಟಗಳೆಲ್ಲಾ ದೂರವಾಗುತ್ತವೆ ಎಂಬ ನಂಬಿಕೆ. ಹಾಗಾದರೆ ಈ ದಿನ ಭಗವಾನ್ ಹನುಮಂತನನ್ನು ಪೂಜಿಸುವುದು ಹೇಗೆ? ಪೂಜಾ ವಿಧಾನ ಯಾವದು? ಹನುಮನನ್ನು ಒಲಿಸಿಕೊಳ್ಳಲು ನಾವು ಮಾಡಬೇಕಾಗಿರುವುದು ಏನು ಎಂಬುದನ್ನು ಈ ಲೇಖನದಲ್ಲಿ ನೀಡಲಾಗಿದೆ.

ಹನುಮಾನ್ ಜಯಂತಿಯ ಪೂಜಾ ವಿಧಾನವನ್ನು ಈ ಕೆಳಗೆ ನೀಡಲಾಗಿದೆ:

ಹನುಮಾನ್ ಜಯಂತಿಯ ಪೂಜಾ ವಿಧಾನವನ್ನು ಈ ಕೆಳಗೆ ನೀಡಲಾಗಿದೆ:

ಚೈತ್ರಮಾಸದಲ್ಲಿ ಹನುಮನನ್ನು ಪೂಜಿಸಲು ಹಲವಾರು ಮಾರ್ಗಗಳಿವೆ. ಈ ದಿನದಂದು ಜನರು ದೇವಾಲಯಗಳಿಗೆ ಭೇಟಿ ನೀಡಿ ಧಾರ್ಮಿಕ ಅರ್ಪಣೆಗಳೊಂದಿಗೆ ಪೂಜಿಸುತ್ತಾರೆ. ದೇವಾಲಯದ ಅರ್ಚಕರಿ ಭಕ್ತರಿಗೆ ಹೂವು, ತಿಂಡಿ, ತೆಂಗಿನಕಾಯಿ ಮೊದಲಾದವುಗಳಗಳನ್ನು ಪ್ರಸಾದದ ರೂಪದಲ್ಲಿ ನೀಡುತ್ತಾರೆ.

ಹನುಮಾನ್ ಜಯಂತಿ ಪೂಜಾ ವಿಧಾನ:

ಹನುಮಾನ್ ಜಯಂತಿ ಪೂಜಾ ವಿಧಾನ:

  • ಈ ದಿನದಂದು ಬೆಳಿಗ್ಗೆ ಬೇಗ ಏಳಬೇಕು.
  • ಸ್ನಾನ ಮಾಡಿದ ನಂತರ ಹನುಮಾನ್ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಬಹುದು ಅಥವಾ ನೆಯಲ್ಲಿಯೂ ಪೂಜೆ ಮಾಡಬಹುದು.
  • ಪೂಜೆಗೆ ನಿಂತಿರುವ ಹನುಮ ವಿಗ್ರಹ ಒಳಿತೆಂಬ ನಂಬಿಕೆಯಿದೆ.
  • ಭಗವಂತನಿಗೆ ಕೆಂಪು ಸಿಂಧೂರವನ್ನು ಅರ್ಪಿಸಿ.
  • ಈ ದಿನ ಹನುಮಾನ್ ಚಾಲಿಸಾ ಪಠಿಸಿ
  • ಹನುಮನಿಗೆ ಹೂವುಗಳು, ಸಿಹಿತಿಂಡಿಗಳನ್ನು ಅರ್ಪಿಸಿ.
  • ಹನುಮನನ್ನು ಸಂತೋಷಪಡಿಸಲು, ಮಲ್ಲಿಗೆ ಎಣ್ಣೆಯನ್ನು ಬಳಸಿ.
  • ಪೂಜೆ ಮಾಡುವಾಗ ಹೆಚ್ಚು ಹೆಚ್ಚು ಕೆಂಪು ವಸ್ತುಗಳನ್ನು ಬಳಸಿ.
  • ಹನುಮಾನ್ ಜಯಂತಿ ಉಪವಾಸ ಆಚರಿಸುವವರು ಕೆಲವು ನಿಯಮಗಳನ್ನು ಪಾಲಿಸಬೇಕು. ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದ ನಂತರ, ಭಗವಾನ್ ಶ್ರೀ ರಾಮ್, ತಾಯಿ ಸೀತಾ ಮತ್ತು ಶ್ರೀ ಹನುಮಾನ್ ಅವರನ್ನು ಸ್ಮರಿಸಿ, ಉಪವಾಸದ ನಿರ್ಣಯವನ್ನು ತೆಗೆದುಕೊಳ್ಳಿ.
  • ಹನುಮನನ್ನು ಒಲಿಸಿಕೊಳ್ಳುವ ವಿಧಾನ ಇಲ್ಲಿದೆ:

    ಹನುಮನನ್ನು ಒಲಿಸಿಕೊಳ್ಳುವ ವಿಧಾನ ಇಲ್ಲಿದೆ:

    - ಓಂ ಹನುಮಂತೆ ನಮಃ ಜಪಿಸುವುದರಿಂದ, ದೈವಿಕ ಮತ್ತು ದೈಹಿಕ ತೊಂದರೆಗಳಿಂದ ಮುಕ್ತಿ ಪಡೆಯುತ್ತಾರೆ.

    -ಪೂಜೆಯಲ್ಲಿ ಪರಿಮಳಯುಕ್ತ ಎಣ್ಣೆ ಮತ್ತು ಸಿಂಧೂರ ಹನುಮನಿಗೆ ಪ್ರಿಯವಾದುದರಿಂದ ಅವುಗಳನ್ನು ಅರ್ಪಿಸುವುದರಿಂದ ಉತ್ತಮ ಲಾಭವಿದೆ.

    - ರಾಮಚರಿತ ಮಾನಸ, ಹನುಮಾನ್ ಚಾಲೀಸಾ, ಹನುಮಾನ್ ಬಹುಕ್ ಇತ್ಯಾದಿಗಳನ್ನು ಓದಿ.

    -ದೇವಾಲಯಕ್ಕೆ ಭೇಟಿ ನೀಡಿ, ತೆಂಗಿನಕಾಯಿ ಹಿಡಿದು ೭ ಪ್ರದಕ್ಷಿಣೆ ಹಾಕಿದ ಬಳಿಕ ತೆಂಗಿನಕಾಯಿ ಒಡೆದು ದೇವರಿಗೆ ಅರ್ಪಿಸಿ.

    -ಸೂರ್ಯಾಸ್ತದ ನಂತರ, ಹನುಮಾನ್ ಮುಂದೆ ಸಾಸಿವೆ ಎಣ್ಣೆ ದೀಪವನ್ನು ಬೆಳಗಿಸಿ. ದೀಪವು ಜೇಡಿಮಣ್ಣಿನಿಂದ ಕೂಡಿದ್ದರೆ, ಅದು ಹೆಚ್ಚು ಶುಭವಾಗಿರುತ್ತದೆ. ದೀಪವನ್ನು ಬೆಳಗಿಸಿದ ನಂತರ, ಹನುಮಾನ್ ಚಾಲಿಸಾ ಪಠಿಸಿ.

English summary

Hanuman Jayanti Puja Vidhi, Rituals and How to Please Lord Hanuman

Here we talking about Hanuman Jayanti 2021 Puja Vidhi, Rituals and How to Please Lord Hanuman, read on
X
Desktop Bottom Promotion