For Quick Alerts
ALLOW NOTIFICATIONS  
For Daily Alerts

ಆ್ಯನ್‌ ಫ್ರಾಂಕ್‌ ಬಗ್ಗೆ ಡೂಡೆಲ್‌: ಹಿಟ್ಲರ್‌ ಬಗ್ಗೆ 13ರ ಈ ಬಾಲಕಿಯ ಡೈರಿ ಪ್ರಕಟವಾದಾಗ ಇಡಿ ವಿಶ್ವವೇ ಬೆಚ್ಚಿ ಬಿತ್ತು

|

ಇವತ್ತಿನ ಗೂಗಲ್ ಡೂಡೆಲ್ ಗಮನಿಸಿದ್ದೀರಾ? ಆ್ಯನ್‌ ಫ್ರಾಂಕ್‌ ಎಂಬ ಬಾಲಕಿಯ ಬಗ್ಗೆ ಹೇಳಲಾಗಿದೆ. ನಾವೆಲ್ಲಾ ಇತಿಹಾಸ ಓದಿದಾಗ ಅಟಾಲ್ಫ್‌ ಹಿಡ್ಲರ್‌ನ ಪೈಶಾಚಿಕ ಕೃತ್ಯದ ಬಗ್ಗೆ ತಿಳಿಯುತ್ತೆ. ಈ ಹಿಡ್ಲರ್‌ ಕ್ರೂರಿ ಎಂಬುವುದು ಗೊತ್ತು, ಆದರೆ ಆತನ ನಮ್ಮ ಊಹೆಗೂ ಮೀರಿದ ಕ್ರೂರಿಯಾಗಿದ್ದ ಎಂಬುವುದನ್ನು ಈ ಜಗತ್ತಿಗೆ ತಿಳಿಸಿದ್ದೇ ಈ ಆ್ಯನ್‌ ಫ್ರಾಂಕ್‌ ಎಂಬ ಪುಟ್ಟ ಬಾಲಕಿಯ ಡೈರಿ.

'ದಿ ಡೈರಿ ಆಫ್‌ ಯಂಗ್‌ ಗರ್ಲ್‌'

'ದಿ ಡೈರಿ ಆಫ್‌ ಯಂಗ್‌ ಗರ್ಲ್‌'

ಎರಡನೇ ಮಹಾಯುದ್ಧದ ಸಮಯವದು. ಅಡಾಲ್ಫ್ ಹಿಟ್ಲರ್‌ ಆ ಹೆಸರು ಕೇಳಿದರೇ ಜನರ ಹೃದಯ ಸ್ತಬ್ಧವಾಗುತ್ತಿದ್ದ ಕಾಲವದು, ಅಷ್ಟರ ಮಟ್ಟಿಗೆ ಕ್ರುರಿಯಾಗಿದ್ದ. ಆತನ ನಾಝಿ ಸೈನ್ಯದ ಸ್ವೇಚ್ಛಾಚಾರಕ್ಕೆ ಎಷ್ಟೋ ಅಮಾಯಕರು ಬಲಿಯಾಗಬೇಕಾಯ್ತು. ಎಷ್ಟೋ ಜನ ಅವರಿಗೆ ಹೆದರಿ ಪಲಾಯನ ಮಾಡಿದರು. ಹೀಗೆ ಪಲಾಯನ ಮಾಡಿದ ಆಕೆ ತಾನು ಅಡಗಿದ್ದ ಅಡಗು ತಾಣದಲ್ಲಿ ಕುಳಿತು ಅಡಾಲ್ಫ್‌ ಹಿಟ್ಲರ್‌ ಹಾಗೂ ಆತನ ನಾಝಿ ಸೈನ್ಯದ ಕ್ರೂರ ಮುಖವನ್ನು ತೆರೆದಿಟ್ಟಿದ್ದಳು. ವರ್ಷಗಳ ಬಳಿಕ ಯುದ್ಧ ಮುಗಿದಾಗ ಆ ಹುಡುಗಿ ಜೀವಂತವಿರಲಿಲ್ಲ, ಆದರೆ ಆಕೆ ಬರೆದ ಡೈರಿ 'ದಿ ಡೈರಿ ಆಫ್‌ ಯಂಗ್‌ ಗರ್ಲ್‌' ಶೀರ್ಷಿಕೆಯೊಂದಿಗೆ ಪ್ರಕಟಗೊಂಡಾಗ ಇಡಿ ವಿಶ್ವವೇ ಬೆಚ್ಚಿ ಬಿತ್ತು.

ಆಕೆಯ ಡೈರಿ ಹಲವು ಮಹತ್ವದ ವಿಷಯಗಳನ್ನು ಹೊರಗೆಡಹಿತ್ತು. ಪುಟ್ಟ ಬಾಲಕಿಯ ಲೇಖನಿಯು ನಾಝಿಗಳು ಎಷ್ಟು ಕ್ರೂರಿಗಳಾಗಿ ವರ್ತಿಸಿದರು ಎಂಬುವುದನ್ನು ಜಗತ್ತಿಗೆ ಸಾರಿ ಹೇಳಿತು. ಆದರೆ ಆಕೆಯ ಡೈರಿಯಲ್ಲಿನ ಎರಡು ಪುಟ ಮಾತ್ರ ಆಕೆ ಯಾರಿಗೂ ಕಾಣದಂತೆ ಮುಚ್ಚಿದ್ದಳು, ಅದರಲ್ಲಿ ಅವಳು ಬರೆದಿದ್ದನ್ನು ಶಾಹಿಯಿಂದ ಗೀಚಿ ಅಳಿಸಿಹಾಕಲಾಗಿತ್ತು.

ಕ್ರೂರಿ ನಾಝಿಗಳ ಬಗ್ಗೆ ಸವಿಸ್ತಾರವಾಗಿ ಬರೆದಿದ್ದ ಬಾಲಕಿ

ಕ್ರೂರಿ ನಾಝಿಗಳ ಬಗ್ಗೆ ಸವಿಸ್ತಾರವಾಗಿ ಬರೆದಿದ್ದ ಬಾಲಕಿ

ಕ್ರೂರಿ ನಾಝಿಗಳ ಬಗ್ಗೆ ಸವಿಸ್ತಾರವಾಗಿ ಬರೆದಿದ್ದ ಆ ಬಾಲಕಿ ಆ ಎರಡು ಪುಟ ಮಾತ್ರ ಏಕೆ ಅಳಸಿಹಾಕಲು ಅಥವಾ ಅದು ಯಾರಿಗೆ ತಿಳಿಯಬಾರದು ಬಯಸಿದ್ದಳು ಎಂಬುವುದು ತುಂಬಾ ಕುತೂಹಲಕ್ಕೆ ಕಾರಣವಾಗಿತ್ತು. ಅಂಥದ್ದೇನು ಬರೆದಿದ್ದಳು ಎಂದು ತಿಳಿಯುವ ಕುತೂಹಲ ಜಗತ್ತಿಗೆ ಹೆಚ್ಚಿತು. ಈ ಕಾರಣಕ್ಕೆ ಆಕೆ ಶಾಯಿಯಿಂದ ಅಳಿಸಿ ಹಾಕಿದ್ದ ಎರಡು ಪುಟಗಳಲ್ಲಿನ 33 ಸಾಲುಗಳನ್ನು ಡಿಜಿಟಲ್‌ ತಂತ್ರಜ್ಞಾನದ ಮೂಲಕ ನೆದರ್ಲೆಂಡ್‌ನ ಸಂಶೋಧಕರು ಹುಡುಕಿದರು, ಕೊನೆಗೂ ಆ ಕುತೂಹಲಕ್ಕೆ ತೆರೆ ಬಿತ್ತು.

ಅಂಥದ್ದೇನಿತ್ತು ಆ ಎರಡು ಪುಟದಲ್ಲಿ ?

ಅಂಥದ್ದೇನಿತ್ತು ಆ ಎರಡು ಪುಟದಲ್ಲಿ ?

ಆಕೆ ಕೆಲ ನಾಟಿ ಜೋಕ್ಸ್‌ ಅಂದರೆ ಸೆಕ್ಸ್ ಮುಂತಾದವುಗಳ ಬಗ್ಗೆ ಅಶ್ಲೀಲ ಜೋಕ್‌ ಬರೆದಿದ್ದಳು, ಇದನ್ನು ಬರೆಯಲೆಂದೇ ಈ ಎರಡು ಪುಟು ತೆರೆದಿಡುತ್ತೇನೆ ಎಂದು ಬರೆದು ಆ ಎರಡು ಪುಟದಲ್ಲಿ ಅಶ್ಲೀಲ ಜೋಕ್ ಬರೆದು ನಂತರ ಅದನ್ನು ಯಾರೂ ಓದಬಾರದು ಎಂದು ಶಾಹಿಯಿಂದ ಅಳಿಸಿ ಹಾಕಿದ್ದಳು ಎಂದು ನೆದರ್‌ಲ್ಯಾಂಡ್‌ ಸಂಶೋಧಕರು ಹೇಳಿದ್ದಾರೆ.

ಡೈರಿ ಪ್ರಕಟವಾದಾಗ ಆಕೆ ಜೀವಂತವಾಗಿರಲಿಲ್ಲ

ಡೈರಿ ಪ್ರಕಟವಾದಾಗ ಆಕೆ ಜೀವಂತವಾಗಿರಲಿಲ್ಲ

ಆ್ಯನ್‌ ಫ್ರಾಂಕ್‌ ಕುಟುಂಬ ನಾಝಿಗಳಿಗೆ ಹೆದರಿ ಅವಿತು ಕುಳಿತಿದ್ದರು. ಆಗ ಆಕೆಯ 13 ನೇ ಹುಟ್ಟುಹಬ್ಬದಂದು ಉಡುಗೊರೆಯಾಗಿ ದೊರೆತ ಡೈರಿಯಲ್ಲೇ ಪುಟ್ಟ ಆ್ಯನ್ ತನ್ನ ಅನುಭವಗಳನ್ನು ಬರೆಯತೊಡಗಿದಳು. ಆದರೆ ಅದರ ಕುರಿತು ಯಾರೋ ಹಿಟ್ಲರ್‌ನ ಪಡೆಗೆ ಪಡೆಗೆ ಮಾಹಿತಿ ನೀಡುತ್ತಾರೆ. ಅಲ್ಲಿಂದ ಎಲ್ಲರನ್ನು ಬಂದಿಸಿಕಾನ್‌ಸೆಂಟ್ರೇಷನ್‌ ಕ್ಯಾಂಪ್‌ಗೆ ಕರೆದುಕೊಂಡ ಬರಲಾಗುತ್ತೆ, ಅಲ್ಲಿಯೇ ಆ್ಯನ್ ಮತ್ತು ಆಕೆಯ ಸಹೋದರಿ ಸಾವನ್ನಪ್ಪುತ್ತಾರೆ. ಆ್ಯನ್‌ನ ಕುಟುಂಬದಲ್ಲಿ ಅವಳ ತಂದೆಯನ್ನು ಹೊರತುಪಡಿಸಿ ಯಾರೂ ಹೊರ ಜಗತ್ತನ್ನು ಕಾಣಲ್ಲ, ಯುದ್ಧ ಮುಗಿದ ಬಳಿಕ ಜೀವಂತವಾಗಿ ಬಂದ ಬಂದ ತಂ ದೆಆ್ಯನ್ ಬರೆದಿದ್ದ ಡೈರಿಯನ್ನು ಪ್ರಕಟಿಸಿದರು. ಆ ಡೈರಿ ಪ್ರಕಟಗೊಂಡಾಗ ಸಂಚಲನವನ್ನೇ ಸೃಷ್ಟಿಸಿತು. ಆ ಡೈರಿ 1947ರಲ್ಲಿ ಮುದ್ರಣ ಕಂಡ ಬಳಿಕಸುಮಾರು 60 ಭಾಷೆಗಳಿಗೆ ಅನುವಾದಗೊಂಡಿದೆ, ಕನ್ನಡದಲ್ಲಿಯೂ ಇದೆ.

English summary

Google doodle pays tribute to Holocaust victim Anne Frank; Know details in Kannada

Google doodle pays tribute to Holocaust victim Anne Frank; Know details in Kannada, Read on...
X
Desktop Bottom Promotion