For Quick Alerts
ALLOW NOTIFICATIONS  
For Daily Alerts

ಅನ್ನಾ ಮಣಿಗೆ ಗೂಗಲ್‌ ಡೂಡೆಲ್‌ ಗೌರವ: ಭಾರತದ ಭೌತಶಾಸ್ತ್ರಜ್ಞೆ ಬಗ್ಗೆ ತಿಳಿಯಲೇಬೇಕಾದ ಸಂಗತಿಗಳು

|

ಇಂದು ಅಂದ್ರೆ ಆಗಸ್ಟ್‌ 23ರಂದು ಗೂಗಲ್‌ ಡೂಡೆಲ್‌ನಲ್ಲಿ ಅನ್ನಾ ಮಣಿಯವರ 104ನೇ ಹುಟ್ಟುಹಬ್ಬವನ್ನು ಸೆಲೆಬ್ರೇಟ್‌ ಮಾಡಲಾಗಿದೆ. ಈ ಅನ್ನಾ ಮಣಿ ಯಾರು ಎಂದು ನೋಡುವುದಾದರೆ ಇವರು ಇಂದು ಅನೇಕ ಯುವ ಜನರಿಗೆ ಸ್ಪೂರ್ತಿಯಾಗಿದ್ದಾರೆ.

Google Doodle Celebrates 104th birth anniversary Anna Mani; Know about Indian physicist and meteorologist in kannada

ಅನ್ನಾಮಣಿಯವರು ಭಾರತದ ಮಹಿಳಾ ಭೌತವಿಜ್ಞಾನಿ ಹಾಗೂ ಪವನಶಾಸ್ತ್ರ ವಿಜ್ಞಾನಿ, ಓಝೋನ್ ಹಾಗೂ ವಾಯು ಶಕ್ತಿಯ ಬಗ್ಗೆ ಅನೇಕ ಸಂಶೋಧನೆಗಳನ್ನು ಮಾಡಿ ಲೇಖನಗಳನ್ನು ಪ್ರಕಟಿಸಿದ್ದಾರೆ.

ಇವರಿಗೆ ಡ್ಯಾನ್ಸ್ ಎಂದರೆ ತುಂಬಾನೇ ಪ್ರೀತಿ, ನಾನು ಡ್ಯಾನ್ಸರ್ ಆಗಬೇಕೆಂದು ಬಯಸಿದ್ದರು. ಆದರೆ ಅವರು ಓದುವಾಗ ಭೌತಶಾಸ್ತ್ರ ಆಯ್ಕೆ ಮಾಡಿಕೊಂಡರು, ಭೌತಶಾಸ್ತ್ರದ ಬಗ್ಗೆಯೂ ಅವರಿಗೆ ಅಪಾರ ಆಸಕ್ತಿ ಇತ್ತು, ಅವರು ತುಂಬಾ ಪುಸ್ತಕಗಳನ್ನು ಓದುತ್ತಿದ್ದರು, ತಮ್ಮ ಊರಿನಲ್ಲಿದ್ದ ಅಷ್ಟೂ ಬುಕ್‌ಗಳನ್ನು ಅವರು ಓದಿ ಮುಗಿಸಿದ್ದರಂತೆ, ಓದುವುದು ಅಂದ್ರೆ ಅಷ್ಟು ಪ್ರಿಯ ಅವರಿಗೆ.

1940ರಲ್ಲಿ ಇಂಡಿಯನ್‌ ಇನ್ಸಿಟ್ಯೂಟ್‌ ಆಫ್‌ ಸೈನ್ಸ್‌, ಬೆಂಗಳೂರಿನಲ್ಲಿ ಅವರಿಗೆ ಸ್ಕಾಲರ್‌ಶಿಪ್‌ ಸಿಕ್ಕಿತ್ತು. ಇವರು ಪ್ರಸಿದ್ಧ ಭೌತಶಾಸ್ತ್ರಜ್ಞ ಪ್ರೊ. ಸೊಲೊಮೊನ್‌ ಪಪ್ಪಯ್ಯ ಅವರ ಅಡಿಯಲ್ಲಿ ಕೆಲಸ ಮಾಡಿದ್ದರು. ಇವರು ಮಾಣಿಕ್ಯ ಮತ್ತು ವಜ್ರದ ಆಪ್ಟಿಕಲ್‌ ಗುಣ ಲಕ್ಷಣಗಳ ಬಗ್ಗೆ ಕೂಡ ಸಂಶೋಧನೆ ಮಾಡಿದ್ದಾರೆ.

ಭೌತಶಾಸ್ತ್ರದಲ್ಲಿ ಹೆಚ್ಚಿನ ಅಧ್ಯಯನಕ್ಕಾಗಿ ಲಂಡನ್‌ಗೆ ಹೋಗಿ ಅಭ್ಯಾಸ ಮಾಡಿದರು. ನಂತರ ಭಾರತಕ್ಕೆ ಮರಳಿ ಬಂದ ಮೇಲೆ IMDಯಲ್ಲಿ ಕೆಲಸ ಮಾಡಿದರು. ಇವರು ಹವಾಮಾನ ಬಗ್ಗೆ ತಿಳಿಯುವ ವಿವಿಧ ಉಪಕರಣಗಳ ತಯಾರಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. 1953ರವರೆಗೆ ಹೆಡ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಇವರ ಮಾರ್ಗದರ್ಶನದಲ್ಲಿ 100 ಹವಮಾನ ಮಾಪಕಗಳನ್ನು ತಯಾರಿಸಲಾಯಿತು.

ಇವರ ಕೊಡುಗೆಯನ್ನು ಮೆಚ್ಚಿ ಇವರಿಗೆ 1987ರಲ್ಲಿ ಕೆ. ಆರ್‌ ರಾಮನಾಥನ್‌ ಮೆಡಲ್‌ ನೀಡಿ ಗೌರವಿಸಲಾಯಿತು. ಇವರು 2001ರಲ್ಲಿ ಕೇರಳದ ತಿರುವನಂತಪುರಂದಲ್ಲಿ ಕೊನೆಯುಸಿರೆಳೆದರು.

Read more about: india life ಭಾರತ ಜೀವನ
English summary

Google Doodle Celebrates 104th birth anniversary Anna Mani; Know about Indian physicist and meteorologist in kannada

Google Doodle Celebrates 104th birth anniversary Anna Mani; Who Is Anna Mani, Whatare their achievements,Read On...
X
Desktop Bottom Promotion