For Quick Alerts
ALLOW NOTIFICATIONS  
For Daily Alerts

ನವರಾತ್ರಿ 2021: ಘಟಸ್ಥಾಪನಕ್ಕೆ ಬೇಕಾಗಿರುವ ಸಾಮಾಗ್ರಿ, ಪೂಜಾವಿಧಿಯ ಸಂಪೂರ್ಣ ಮಾಹಿತಿ

|

ನವರಾತ್ರಿ ಅಂದರೆ ದುರ್ಗಾಮಾತೆಯ ಒಂಬತ್ತು ಅವತಾರಗಳನ್ನು ಒಂಬತ್ತು ದಿನಗಳು ಪೂಜಿಸುವುದಾಗಿದೆ. ಈ ಒಂಬತ್ತು ದಿನಗಳ ಆರಾಧನೆ ಘಟಸ್ಥಾಪನ ಅಥವಾ ಕಲಶ ಸ್ಥಾಪನೆಯೊಂದಿಗೆ ಆರಂಭವಾಗುತ್ತದೆ. ಹಾಗಾದರೆ ಈ ಬಾರಿಯ ಅಂದರೆ 2021ರ ಘಟಸ್ಥಾಪಪನವು ಯಾವಾಗ ನಡೆಯಲಿದೆ? ಅದಕ್ಕೆ ಶುಭಮುಹೂರ್ತ ಯಾವುದು? ಕಲಶ ಸ್ಥಾಪನೆ ಮಾಡುವುದು ಹೇಗೆ? ಅದರ ಪೂಜಾವಿಧಿಗಳೇನು? ಎಲ್ಲದರ ಸಂಪೂರ್ಣ ಮಾಹಿತಿ ನಿಮಗಾಗಿ.

ಘಟಸ್ಥಾಪನಕ್ಕೆ ಶುಭ ಮಹೂರ್ತ:

ಘಟಸ್ಥಾಪನಕ್ಕೆ ಶುಭ ಮಹೂರ್ತ:

ನವರಾತ್ರಿಯ ಮೊದಲ ದಿನ, ಮಾತೃ ದೇವಿಯ ಆರಾಧನೆಯನ್ನು ಘಟಸ್ಥಾಪನದೊಂದಿಗೆ ಆರಂಭಿಸಲಾಗುತ್ತದೆ. ಘಟಸ್ಥಾಪನಕ್ಕೆ ಅಕ್ಟೋಬರ್ 7 ರಂದು ಬೆಳಿಗ್ಗೆ 6.17 ರಿಂದ 7.07 ರವರೆಗೆ ಶುಭಮಹೂರ್ತ ಇರುತ್ತದೆ. ಈ ಸಮಯದಲ್ಲಿ ಘಟಸ್ಥಾಪನ ಮಾಡುವುದರಿಂದ ನವರಾತ್ರಿ ಫಲಪ್ರದವಾಗುತ್ತದೆ.

ಘಟಸ್ಥಾಪನಕ್ಕೆ ಬೇಕಾಗಿರುವ ವಸ್ತುಗಳು ಹೀಗಿವೆ:

ಘಟಸ್ಥಾಪನಕ್ಕೆ ಬೇಕಾಗಿರುವ ವಸ್ತುಗಳು ಹೀಗಿವೆ:

  • ಮಣ್ಣಿನ ಮಡಕೆ ಮತ್ತು ಮುಚ್ಚಳ
  • ಶುದ್ಧ ಮಣ್ಣು
  • ಏಳು ವಿವಿಧ ಧಾನ್ಯಗಳ ಬೀಜಗಳು
  • ಸಣ್ಣ ಮಣ್ಣಿನ ಅಥವಾ ಹಿತ್ತಾಳೆ ಕಲಶದ ಚೊಂಬು
  • ಶುದ್ಧ ನೀರು ಅಥವಾ ಗಂಗಾ ಜಲ
  • ಪವಿತ್ರ ದಾರ
  • ಸುಗಂಧ ದ್ರವ್ಯ
  • ವೀಳ್ಯದೆಲೆ
  • ನಾಣ್ಯಗಳು
  • ಅಶೋಕ ಅಥವಾ ಮಾವಿನ ಮರದ 5 ಎಲೆಗಳು
  • ಅಕ್ಷತೆ
  • ತೆಂಗಿನ ಕಾಯಿ
  • ಕೆಂಪು ಬಟ್ಟೆ
  • ಹೂವು
  • ಗರಿಕೆ ಹುಲ್ಲು
  • ದುರ್ಗಾದೇವಿಯನ್ನು ಆಹ್ವಾನಿಸಲು ಕಲಶ ತಯಾರಿಕೆ:

    ದುರ್ಗಾದೇವಿಯನ್ನು ಆಹ್ವಾನಿಸಲು ಕಲಶ ತಯಾರಿಕೆ:

    ಮಣ್ಣಿನ ಮಡಕೆಯನ್ನು ತೆಗೆದುಕೊಂಡು ಅದರ ಮೇಲೆ ಮಣ್ಣನ್ನು ಹಾಕಿ, ತದನಂತರ ಧಾನ್ಯ ಬೀಜಗಳನ್ನು ಹರಡಿ, ಅದರ ಮೇಲೆ ಮಣ್ಣಿನ ಎರಡನೇ ಪದರವನ್ನು ಸೇರಿಸಿ, ಅದನ್ನು ಹೊಂದಿಸಲು ಸ್ವಲ್ಪ ನೀರನ್ನು ಸಿಂಪಡಿಸಿ.

    ಕಲಶದ ಚೊಂಬಿನ ಕುತ್ತಿಗೆಗೆ ಪವಿತ್ರ ದಾರವನ್ನು ಕಟ್ಟಿ, ಅದಕ್ಕೆ ಪವಿತ್ರ ನೀರನ್ನು ತುಂಬಿಸಿ. ವೀಳ್ಯದೆಲೆ, ಸುಗಂಧ ದ್ರವ್ಯ, ಗರಿಕೆ ಹುಲ್ಲು, ಅಕ್ಷತೆ ಮತ್ತು ನಾಣ್ಯಗಳನ್ನು ಆ ನೀರಿಗೆ ಹಾಕಿ.

    ಕಲಶದ ಅಂಚಿನಲ್ಲಿ ಅಶೋಕ ಅಥವಾ ಮಾವಿನ 5 ಎಲೆಗಳನ್ನು ಹಾಕಿ ಮುಚ್ಚಳದಿಂದ ಮುಚ್ಚಿ.

    ಒಂದು ತೆಂಗಿನಕಾಯಿಗೆ ಕೆಂಪು ಬಟ್ಟೆಯನ್ನು ಸುತ್ತಿ, ಅದನ್ನು ದಾರದಿಂದ ಕಟ್ಟಿ, ಕಲಶದ ಮೇಲೆ ಇರಿಸಿ.

    ದುರ್ಗಾದೇವಿಯನ್ನು ಆವಾಹಿಸಲು ಕಲಶ ಇದೀಗ ಸಿದ್ಧವಾಗಿದ್ದು, ದುರ್ಗಾ ದೇವಿಯನ್ನು ಆಹ್ವಾನಿಸಿ, ನಿಮ್ಮ ಪ್ರಾರ್ಥನೆಯನ್ನು ಸ್ವೀಕರಿಸಿ, ನವರಾತ್ರಿಯ ಒಂಬತ್ತು ದಿನಗಳು ಕಲಶದಲ್ಲಿ ವಾಸಿಸುವಂತೆ ವಿನಂತಿಸಿ.

    ಘಟಸ್ಥಾಪನದ ವೇಳೆ ಅನುಸರಿಸಬೇಕಾದ ಪೂಜಾ ಕ್ರಮಗಳು:

    ಘಟಸ್ಥಾಪನದ ವೇಳೆ ಅನುಸರಿಸಬೇಕಾದ ಪೂಜಾ ಕ್ರಮಗಳು:

    ದುರ್ಗಾ ದೇವಿಯನ್ನು ಆಹ್ವಾನಿಸಿ:

    ಕಲಶ ಸ್ಥಾಪನೆಯಾದ ಬಳಿಕ ದುರ್ಗಾದೇವಿಯನ್ನು ಆಮಂತ್ರಿಸಿ. ನಿಮ್ಮ ಪ್ರಾರ್ಥನೆಯನ್ನು ಸ್ವೀಕರಿಸಿ, ಒಂಬತ್ತು ದಿನಗಳ ಕಾಲ ಕಲಶದಲ್ಲಿ ನೆಲೆಸುವಂತೆ ದುರ್ಗೆಯನ್ನು ವಿನಂತಿಸಿ.

    ಪಂಚೋಪಚಾರ ಪೂಜೆ:

    ಹೆಸರೇ ಸೂಚಿಸುವಂತೆ ಪಂಚೋಪಚಾರ ಪೂಜೆಯನ್ನು ಐದು ಪೂಜಾ ಸಾಮಾಗ್ರಿಗಳೊಂದಿಗೆ ಮಾಡಲಾಗುತ್ತದೆ. ಮೊದಲು ಕಲಶಕ್ಕೆ ದೀಪವನ್ನು ಬೆಳಗಿಸಿ, ಎಲ್ಲಾ ದೇವತೆಗಳನ್ನು ಆವಾಹಿಸಿ. ತದನಂತರ, ಧೂಪ ಕಡ್ಡಿಗಳನ್ನು ಹಚ್ಚಿ, ಅದನ್ನು ಕಲಶಕ್ಕೆ ಅರ್ಪಿಸಿ, ನಂತರ ಹೂವುಗಳು ಮತ್ತು ಸುಗಂಧ ದ್ರವ್ಯಗಳನ್ನು ನೀಡಿ. ಅಂತಿಮವಾಗಿ ನೈವೇಧ್ಯ ಅಂದರೆ ಪಂಚೋಪಚಾರ ಪೂಜೆಯನ್ನು ಮುಗಿಸಲು ಹಣ್ಣುಗಳು ಮತ್ತು ಸಿಹಿತಿಂಡಿಗಳನ್ನು ಕಳಶಕ್ಕೆ ಅರ್ಪಿಸಿ. ಮುಂದೆ ದುರ್ಗಾ ಮಂತ್ರಗಳನ್ನು ಪಠಿಸಿ ನಂತರ, ಆರತಿಯನ್ನು ಮಾಡಿ.

ದುರ್ಗಾ ಮಂತ್ರ ಹೀಗಿದೆ:

1. ಮೊದಲನೇ ಮಂತ್ರ:

"ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ|

ಶರಣ್ಯೇ ತ್ರ್ಯಂಬಕೇ ಗೌರೀ ನಾರಾಯಣಿ ನಮೋಸ್ತುತೇ||''

2. ಎರಡನೇ ಮಂತ್ರ:

''ಓಂ ಜಯಂತೀ ಮಂಗಳಾ ಕಾಳೀ ಭದ್ರಕಾಳಿ ಕಪಾಲಿನೀ|

ದುರ್ಗಾ ಕ್ಷಮಾ ಶಿವಾ ಧಾತ್ರೀ ಸ್ವಾಹಾ ಸ್ವಧಾ ನಮೋಸ್ತುತೇ||''

3. ಮೂರನೇ ಮಂತ್ರ:

''ಯಾ ದೇವೀ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು ಲಕ್ಷ್ಮಿ ರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು ತುಷ್ಠಿ ರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು ಮಾತೃ ರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು ದಯಾ ರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು ಬುದ್ಧಿ ರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ಯಾ ದೇವೀ ಸರ್ವಭೂತೇಷು ಶಾಂತಿ ರೂಪೇಣ ಸಂಸ್ಥಿತಾ |

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||''

English summary

Ghatasthapana 2021 : Kalash Sthapana Puja Vidhi, Rituals and Significance in Kannada

Here we talking about Ghatasthapana 2021 : Kalash Sthapana Puja Vidhi, Rituals and Significance, read on
Story first published: Monday, October 4, 2021, 17:33 [IST]
X
Desktop Bottom Promotion