For Quick Alerts
ALLOW NOTIFICATIONS  
For Daily Alerts

ಗರುಡ ಪುರಾಣದ ಪ್ರಕಾರ, ಈ ವಿಚಾರಗಳನ್ನು ಅರ್ಧದಲ್ಲೇ ಬಿಡಬೇಡಿ, ಮುಂದೆ ಹಾನಿಯಾಗುವುದು ಖಚಿತ

|

ಹಿಂದೂ ಧರ್ಮದ 18 ಪುರಾಣಗಳಲ್ಲಿ ಒಂದಾದ ಗರುಡ ಪುರಾಣಕ್ಕೆ ವಿಶೇಷ ಮಹತ್ವವಿದೆ. ಗರುಡ ಪುರಾಣವು ವಿಷ್ಣುವಿನ ಮಹಿಮೆಯನ್ನು ವಿವರಿಸುತ್ತದೆ. ಇದರಲ್ಲಿ, ಮಾನವ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸುವುದು ಹೇಗೆ? ಜೊತೆಗೆ ಸಂತೋಷದ ಜೀವನವನ್ನು ಮಾಡುವುದು ಹೇಗೆ ಎಂಬುದನ್ನ ಹೇಳಿದೆ.

ಪುರಾಣಗಳಲ್ಲಿ ಉಲ್ಲೇಖಿಸಿರುವ ವಿಷಯಗಳನ್ನು ಅನುಸರಿಸುವ ಮೂಲಕ ಮನುಷ್ಯ ಯಾವಾಗಲೂ ಸದೃಢವಾಗಿರುತ್ತಾನೆ ಎಂದು ನಂಬಲಾಗಿದೆ. ಇದೇ ಗರುಡ ಪುರಾಣದಲ್ಲಿ, ಕೆಲವು ವಿಚಾರಗಳನ್ನು ಮಧ್ಯದಲ್ಲಿ ಬಿಡಬಾರದು ಎಂದು ಒಂದು ಪದ್ಯದ ಮೂಲಕ ಹೇಳಲಾಗಿದೆ. ಈ ಕಾರ್ಯಗಳನ್ನು ಅರ್ಧದಲ್ಲೇ ಬಿಡುವುದರಿಂದ ಮುಂದಿನ ದಿನಗಳಲ್ಲಿ ಅನೇಕ ಸಮಸ್ಯೆಗಳಿಗೆ ನಾಂದಿಯಾಗುತ್ತದೆ. ಹಾಗಾದ್ರೆ ಆ ವಿಚಾರಗಳಾವುವು ಎಂಬುದನ್ನು ವಿವರಿಸಲಾಗಿದೆ.

ಗರುಡ ಪುರಾಣದ ಪ್ರಕಾರ ಮಧ್ಯದಲ್ಲೇ ಬಿಡಬಾರದಂತಹ ವಿಚಾರಗಳನ್ನು ಈ ಕೆಳಗೆ ನೀಡಲಾಗಿದೆ:

1. ಅನಾರೋಗ್ಯ:

1. ಅನಾರೋಗ್ಯ:

ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯು ಅನಾರೋಗ್ಯದಿಂದ ಬಳಲುತ್ತಿದ್ದರೆ, ಅವನು ತನ್ನ ಔಷಧಿಗಳನ್ನು ಅರ್ಧದಲ್ಲೇ ನಿಲ್ಲಿಸಬಾರದು. ಅನೇಕ ಬಾರಿ ಜನರು ಸಂಪೂರ್ಣವಾಗಿ ಗುಣವಾಗದೇ, ಔಷಧಿಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸುತ್ತಾರೆ. ಇದರಿಂದಾಗಿ ಮುಂಬರುವ ಸಮಯದಲ್ಲಿ ರೋಗವು ಹೆಚ್ಚಾಗಬಹುದು. ಆದ್ದರಿಂದ ನಿಮ್ಮ ಆರೋಗ್ಯ ಸಾಮಾನ್ಯ ಸ್ಥಿತಿಯವರೆಗೆ ಬರುವವರೆಗೂ ಔಷಧಿಗಳನ್ನು ಮಧ್ಯದಲ್ಲಿ ಬಿಡಬಾರದು. ಗರುಡ ಪುರಾಣದಲ್ಲಿ ಹೇಳಿದ ಈ ಮಾತನ್ನು ನಿಧಾನವಾಗಿ ಕೂತು ಚಿಂತಿಸಿದರೆ ಇಂದಿಗೂ ಎಂದಿಗೂ ಸೂಕ್ತ ಎನಿಸುತ್ತದೆ. ಏಕೆಂದರೆ ಅನಾರೋಗ್ಯವನ್ನ ಹಾಗೆಯೇ ಬಿಡಲು ಸಾಧ್ಯವಿಲ್ಲ.

2. ಬೆಂಕಿ:

2. ಬೆಂಕಿ:

ಯಾವುದಾದರೂ ಸ್ಥಳದಲ್ಲಿ ಬೆಂಕಿ ಇದ್ದರೆ ಅದನ್ನು ಸಂಪೂರ್ಣವಾಗಿ ನಂದಿಸಬೇಕು ಎಂದು ಗರುಡ ಪುರಾಣ ಹೇಳುತ್ತದೆ. ಹೌದು, ಯಾವುದೇ ಜಾಗದಲ್ಲಿ ಬೆಂಕಿ ಕಂಡರೆ ಅಥವಾ ಬೆಂಕಿ ಉರಿಯುತ್ತಿದ್ದರೆ ಅದನ್ನು ಅಲ್ಲಿಗೇ ಬಿಟ್ಟು ಹೋಗಬೇಡಿ. ಸಂಪೂರ್ಣವಾಗಿ ನಂದಿಸಿ ಹೋಗಿ. ಅಲ್ಲಿ ಸಣ್ಣ ಕಿಡಿ ಉಳಿದಿದ್ದರೂ ಸಹ ಮತ್ತೆ ಬೆಂಕಿ ಹಿಡಿಯಬಹುದು. ಇದರಿಂದಾಗಿ ಜೀವ ಮತ್ತು ಆಸ್ತಿಪಾಸ್ತಿ ನಷ್ಟವಾಗುವ ಸಾಧ್ಯತೆಯಿದೆ. ಆದ್ದರಿಂದ ಬೆಂಕಿ ಎಲ್ಲೇ ಕಂಡರೂ, ಸಂಪೂರ್ಣವಾಗಿ ನಂದಿಸುವುದು ಒಳ್ಳೆಯದು.

3. ಸಾಲ:

3. ಸಾಲ:

ಗರುಡ ಪುರಾಣದ ಪ್ರಕಾರ, ನೀವು ಯಾರಿಂದಾದರೂ ಸಾಲ ಪಡೆದಿದ್ದರೆ, ಅದನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಬೇಕು. ಸಾಲವನ್ನು ಸಮಯಕ್ಕೆ ಮರುಪಾವತಿಸದಿದ್ದರೆ, ಅದರ ಬಡ್ಡಿ ಹೆಚ್ಚಾಗಬಹುದು. ಅದು ನಿಮಗೆ ಮತ್ತೆ ಹೊರೆಯಾಗಬಹುದು. ಒಂದು ವೇಳೆ ನಿಮ್ಮ ಸಂಬಂಧಿಕರು ಅಥವಾ ಸ್ನೇಹಿತರ ಬಳಿ ಸಾಲ ತೆಗೆದುಕೊಂಡಿದ್ದರೆ, ಹಣದ ಕಾರಣದಿಂದಾಗಿ ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ಆದ್ದರಿಂದ, ಪ್ರತಿಯೊಬ್ಬ ವ್ಯಕ್ತಿಯು ಸಾಲವನ್ನು ತ್ವರಿತವಾಗಿ ಮರುಪಾವತಿಸಲು ಪ್ರಯತ್ನಿಸಬೇಕು. ಇದು ಹಣ ಕೊಂಡು ನಿಮಗೂ, ಹಣ ನೀಡಿದ ಅವರಿಗೂ ಜೊತೆಗೆ ನಿಮ್ಮ ಗೌರವಕ್ಕೂ ಒಳ್ಳೆಯದು.

Read more about: insync ಸಂಪ್ರದಾಯ
English summary

Garuda Purana: These Works Should Not Be Left Unfinished Otherwise It May Cause Heavy Loss

Here we talking about Garuda Purana: These Works Should Not Be Left Unfinished Otherwise It May Cause Heavy Loss, read on
Story first published: Wednesday, May 19, 2021, 17:15 [IST]
X
Desktop Bottom Promotion