For Quick Alerts
ALLOW NOTIFICATIONS  
For Daily Alerts

ನಿಮ್ಮ ರಾಶಿಯ ಪ್ರಕಾರ, ಗಣೇಶ ಚತುರ್ಥಿಯಂದು, ವಿನಾಯಕನನ್ನು ಈ ರೀತಿ ಪೂಜಿಸಿ

|

ವಿಘ್ನಗಳನ್ನು ನಿವಾರಿಸುವವ ವಿಘ್ನೇಶ. ಈತ ಜನಿಸಿದ ದಿನವೇ ಗಣೇಶ ಚತುರ್ಥಿ ಅಥವಾ ಚೌತಿ. ಈ ವರ್ಷ ಸೆಪ್ಟೆಂಬರ್ 10ರಂದು ಆರಂಭವಾಗುವ ಗಣೇಶ ಚತುರ್ಥಿ ಹತ್ತು ದಿನಗಳ ಕಾಲ ಮುಂದುವರಿಯುವುದು ಸಂಪ್ರದಾಯ.

ಯಾವುದೇ ಕಾರ್ಯಕ್ಕೂ ಮುನ್ನ ಗಣನಾಯಕನನ್ನು ನೆನಯುವುದು ರೂಢಿ. ಆತ ಎದುರಾಗುವ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತಾನೆ ಎಂಬ ನಂಬಿಕೆ. ಆದರೆ ಚೌತಿಯಂದು ವಿಘ್ನೇಶನ ಪೂಜಿಸುವುದರಿಂದ ಸಾಕಷ್ಟು ಸಿದ್ಧಿಗಳು ಲಭ್ಯವಾಗುತ್ತವೆ. ನಿಜವಾದ ಭಕ್ತಿ, ನಂಬಿಕೆಯಿಟ್ಟು ಪ್ರಾರ್ಥಿಸುವ ಪ್ರತಿಯೊಬ್ಬರಿಗೂ ಒಳಿತನ್ನ ಮಾಡುವ ಗಣೇಶನ ಮತ್ತಷ್ಟು ಅನುಗ್ರಹಕ್ಕಾಗಿ ರಾಶಿಚಕ್ರದ ಪ್ರಕಾರ ಪೂಜಿಸಿದರೆ ಉತ್ತಮ. ಹಾಗಾದರೆ, ನಿಮ್ಮ ರಾಶಿಯ ಪ್ರಕಾರ, ಗಣಪನನ್ನು ಹೇಗೆ ಪೂಜಿಸಬೇಕು ಎಂಬುದನ್ನು ನಾವಿಂದು ಹೇಳಲಿದ್ದೇವೆ.

ಗಣೇಶನನ್ನು ಮೆಚ್ಚಿಸಲು ಪ್ರತಿ ರಾಶಿಚಕ್ರ ಯಾವ ರೀತಿ ಪೂಜೆ ಮಾಡಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮೇಷ:

ಮೇಷ:

ಈ ರಾಶಿಚಕ್ರದವರು ಮನೆಯಲ್ಲಿ ಕೆಂಪು ಬಣ್ಣದ ಗಣೇಶನ ಮೂರ್ತಿಯನ್ನು ಇಟ್ಟು, ಅದನ್ನು ಕೆಂಪು ಅಥವಾ ಸಿಂಧೂರ ಬಣ್ಣದ ಬಟ್ಟೆಯನ್ನು ಅರ್ಪಿಸಿ ಪೂಜಿಸಬೇಕು. ಪೂಜೆಯ ಸಮಯದಲ್ಲಿ, ಬೆಲ್ಲ, ದಾಳಿಂಬೆ, ಖರ್ಜೂರ, ಕೆಂಪು ಗುಲಾಬಿ ಮತ್ತು 11 ಗರಿಕೆ ಹುಲ್ಲಿನಿಂದ ತಯಾರಿಸಿದ ಲಡ್ಡುವನ್ನು ಗಣೇಶನಿಗೆ ಅರ್ಪಿಸಿ.

ವೃಷಭ ರಾಶಿ:

ವೃಷಭ ರಾಶಿ:

ಈ ರಾಶಿಯವರು ಮನೆಯಲ್ಲಿ ನೀಲಿ ಬಣ್ಣದ ಗಣೇಶನ ಮೂರ್ತಿಯನ್ನು ಇಟ್ಟು ಅದನ್ನು ಬಿಳಿ ಬಟ್ಟೆಯಿಂದ ಅಲಂಕರಿಸಬೇಕು. ಪೂಜೆಯ ಸಮಯದಲ್ಲಿ, ಮೋದಕ, ಬಿಳಿ ಹೂವುಗಳು, ಸುಗಂಧ ದ್ರವ್ಯ ಮತ್ತು ತೆಂಗಿನಕಾಯಿ ಹಾಕಿ ತಯಾರಿಸಿದ ಲಡ್ಡುಗಳನ್ನು ಅರ್ಪಿಸಿ.

ಮಿಥುನ:

ಮಿಥುನ:

ಮಿಥುನ ರಾಶಿಯವರು ಹಸಿರು ಬಣ್ಣದ ಗಣೇಶನ ಮೂರ್ತಿಯನ್ನು ತಂದು, ಅದನ್ನು ಹಸಿರು ಬಟ್ಟೆಯಿಂದ ಅಲಂಕರಿಸಬೇಕು. ಗಜಾನನ ಪೂಜೆಯಲ್ಲಿ ಹೆಸರುಬೇಳೆ ಲಡ್ಡು, ವೀಳ್ಯದೆಲೆ, ಏಲಕ್ಕಿ, ಗರಿಕೆ, ಹಸಿರು ಹಣ್ಣುಗಳು ಮತ್ತು ಒಣ ಹಣ್ಣುಗಳನ್ನು ಅರ್ಪಿಸಿ.

ಕರ್ಕಾಟಕ:

ಕರ್ಕಾಟಕ:

ಈ ರಾಶಿಚಕ್ರದ ಜನರು ಬಿಳಿ ಬಣ್ಣದ ಗಣೇಶನ ಮೂರ್ತಿಯನ್ನು ತಂದು ಗುಲಾಬಿ ಬಣ್ಣದ ಬಟ್ಟೆಯಿಂದ ಅಲಂಕರಿಸಿ. ಲಂಬೋದರನ ಆರಾಧನೆ ಮಾಡುವಾಗ ಅವನಿಗೆ ಮೋದಕ, ಅಕ್ಕಿ ಪುಡಿಂಗ್, ಬೆಣ್ಣೆ ಮತ್ತು ಗುಲಾಬಿ ಹೂವುಗಳನ್ನು ಅರ್ಪಿಸಿ.

ಸಿಂಹ:

ಸಿಂಹ:

ಈ ರಾಶಿಯ ವ್ಯಕ್ತಿಗಳು ಕೆಂಪು ಬಣ್ಣದ ಗಣೇಶನ ಮೂರ್ತಿಯನ್ನು ಇಟ್ಟು ಅದನ್ನು ಕೆಂಪು ಬಟ್ಟೆಯಿಂದ ಅಲಂಕರಿಸಬೇಕು. ಪೂಜೆಯ ಸಮಯದಲ್ಲಿ, ಬೆಲ್ಲ ಅಥವಾ ಬೆಲ್ಲದಿಂದ ತಯಾರಿಸಿದ ಸಿಹಿತಿಂಡಿಗಳು, ಹಳದಿ ಹೂವುಗಳು, ಖರ್ಜೂರಗಳನ್ನು ಅರ್ಪಿಸಿ.

ಕನ್ಯಾ:

ಕನ್ಯಾ:

ಈ ರಾಶಿಚಕ್ರದವರು ಮನೆಯಲ್ಲಿ ಹಸಿರು ಬಣ್ಣದ ಗಣೇಶನ ಮೂರ್ತಿಯನ್ನು ತಂದು ಹಸಿರು ಬಟ್ಟೆಯಿಂದ ಅಲಂಕರಿಸಬೇಕು. ಪೂಜೆಯ ಸಮಯದಲ್ಲಿ, ಹಸಿರು ಹಣ್ಣುಗಳು, ಹೆಸರು ಬೇಳೆಯ ಲಡ್ಡುಗಳು, ವೀಳ್ಯದೆಲೆ, ಏಲಕ್ಕಿ, ಒಣದ್ರಾಕ್ಷಿ, ಗರಿಕೆ ಮತ್ತು ಒಣ ಹಣ್ಣುಗಳನ್ನು ನೀಡಿ.

ತುಲಾ :

ತುಲಾ :

ಈ ರಾಶಿಯ ಜನರು ಬಿಳಿ ಮತ್ತು ನೀಲಿ ಬಣ್ಣದ ಗಣೇಶನ ಮೂರ್ತಿಯನ್ನು ಇಟ್ಟು, ಅದನ್ನು ಬಿಳಿ ಬಟ್ಟೆಯಿಂದ ಅಲಂಕರಿಸಬೇಕು. ಪೂಜೆಯ ಸಮಯದಲ್ಲಿ ಗಣಪತಿಗೆ ಲಡ್ಡು, ಬಾಳೆಹಣ್ಣು, ಬಿಳಿ ಬಣ್ಣದ ಹೂವುಗಳು, ಸುಗಂಧ ದ್ರವ್ಯ ಮತ್ತು ಕಲ್ಲುಸಕ್ಕರೆಯನ್ನು ಅರ್ಪಿಸಿ.

ವೃಶ್ಚಿಕ:

ವೃಶ್ಚಿಕ:

ಈ ರಾಶಿಯ ಜನರು ಮನೆಯಲ್ಲಿ ಕೆಂಪು ಬಣ್ಣದ ಗಣೇಶನ ಮೂರ್ತಿಯನ್ನು ಇಟ್ಟು ಅದನ್ನು ಕೆಂಪು ಮತ್ತು ವರ್ಮಿಲಿಯನ್ ಬಟ್ಟೆಗಳಿಂದ ಅಲಂಕರಿಸಬೇಕು. ಪೂಜೆಯ ಸಂದರ್ಭದಲ್ಲಿ ಬೆಲ್ಲದ ಲಡ್ಡು, ಒಣ ಖರ್ಜೂರ, ದಾಳಿಂಬೆ ಮತ್ತು ಕೆಂಪು ಗುಲಾಬಿಗಳನ್ನು ಅರ್ಪಿಸಿ.

ಧನಸ್ಸು:

ಧನಸ್ಸು:

ಈ ರಾಶಿಯ ಜನರು ಹಳದಿ ಬಣ್ಣದ ಗಣೇಶನ ಮೂರ್ತಿಯನ್ನು ಇಟ್ಟು ಅದನ್ನು ಹಳದಿ ಬಟ್ಟೆಯಿಂದ ಅಲಂಕರಿಸಬೇಕು. ಪೂಜೆಯ ಸಮಯದಲ್ಲಿ ಗಣಪನಿಗೆ ಹಳದಿ ಹೂವು, ಹಳದಿ ಬಣ್ಣದ ಸಿಹಿತಿಂಡಿ, ಮೋದಕ ಮತ್ತು ಬಾಳೆಹಣ್ಣುಗಳನ್ನು ಅರ್ಪಿಸಿ.

ಮಕರ:

ಮಕರ:

ಈ ರಾಶಿಯ ಸ್ಥಳೀಯರು ನೀಲಿ ಬಣ್ಣದ ಗಣೇಶನ ಮೂರ್ತಿಯನ್ನು ಮನೆಗೆ ತಂದು ನೀಲಿ ಬಟ್ಟೆಯಿಂದ ಅಲಂಕರಿಸಬೇಕು. ಗಜಾನನ ಪೂಜೆಯಲ್ಲಿ ಒಣದ್ರಾಕ್ಷಿ, ಬಿಳಿ ಹೂವು, ಎಳ್ಳಿನ ಲಡ್ಡು ಮತ್ತು ಮಲ್ಲಿಗೆ ಎಣ್ಣೆಯನ್ನು ಕುಂಕುಮದೊಂದಿಗೆ ಬೆರೆಸಿ ಅರ್ಪಿಸಬೇಕು.

ಕುಂಭ:

ಕುಂಭ:

ಕುಂಭ ರಾಶಿಯವರು ನೀಲಿ ಬಣ್ಣದ ಗಣೇಶನ ಮೂರ್ತಿಯನ್ನು ಇಟ್ಟು ನೀಲಿ ಬಟ್ಟೆಯಿಂದ ಅಲಂಕರಿಸಬೇಕು. ಪೂಜೆಯ ಸಮಯದಲ್ಲಿ, ಒಣದ್ರಾಕ್ಷಿ, ಹಸಿರು ಹಣ್ಣುಗಳು, ಬಿಳಿ ಹೂವುಗಳು, ಬೆಲ್ಲದಿಂದ ಮಾಡಿದ ಲಡ್ಡು ಮತ್ತು ಮಲ್ಲಿಗೆ ಎಣ್ಣೆಯನ್ನು ಸಿಂಧೂರದೊಂದಿಗೆ ಬೆರೆಸಿದ ಪ್ರಸಾದವನ್ನು ಅರ್ಪಿಸಿ.

ಮೀನ:

ಮೀನ:

ಈ ರಾಶಿಯವರು ಡಾರ್ಕ್ ಹಳದಿ ಬಣ್ಣದ ಗಣೇಶನ ಮೂರ್ತಿಯನ್ನು ಮನೆಗೆ ತಂದು ಹಳದಿ ಬಟ್ಟೆಯಿಂದ ಅಲಂಕರಿಸಿ. ಗಜಾನನ ಪೂಜೆಯಲ್ಲಿ, ಹಳದಿ ಬಟ್ಟೆ, ಹಳದಿ ಹೂವು, ಬಾದಾಮಿ, ಹಳದಿ ಸಿಹಿತಿಂಡಿಗಳು, ಕಡಲೆಹಿಟ್ಟಿನ ಲಡ್ಡು ಮತ್ತು ಬಾಳೆಹಣ್ಣುಗಳನ್ನು ಅರ್ಪಿಸಿ.

English summary

Ganesh Chaturthi Puja Rituals as per Zodiac Signs

Here we talking about Ganesh Chaturthi Puja as per Zodiac Signs, read on
X
Desktop Bottom Promotion