For Quick Alerts
ALLOW NOTIFICATIONS  
For Daily Alerts

ಗಾಂಧಿ ಜಯಂತಿ 2023: ಗಾಂಧೀಜಿಯ ಪ್ರೇರಣಾತ್ಮಕ ಸಂದೇಶಗಳು

|

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 153ನೇ ವರ್ಷದ ಜನ್ಮ ದಿನಾಚರಣೆಯನ್ನು 2022ರ ಆಕ್ಟೋಬರ್‌ 2 ರಂದು ಆಚರಿಸುತ್ತಿದ್ದೇವೆ. ದೇಶದ ಸ್ವಾತಂತ್ರಕ್ಕೆ ಅವಿರತ ಶ್ರಮಿಸಿದ ಮಹಾತ್ಮ ಗಾಂಧೀಜಿಯವರ ಹುಟ್ಟುಹಬ್ಬವನ್ನ ಭಾರತ ರಾಷ್ಟ್ರಿಯ ಹಬ್ಬವಾಗಿವಾಗಿ ಆಚರಿಸಲಾಗುವುದು.

Gandhi Jayanti 2022: Inspirational Quotes of Mahatma Gandhi in kannada

ಗಾಂಧೀಜಿಯವರ ಜನ್ಮದಿನಾಚರಣೆಯ ಹಿನ್ನೆಲೆ ಅವರ ಪ್ರೇರಣಾತ್ಮಕ ಉಲ್ಲೇಖ, ಹೇಳಿಕೆಗಳನ್ನು ನಾವಿಲ್ಲಿ ನೀಡಲಿದ್ದೇವೆ.

ಮನುಷ್ಯನು ಅವನದೇ ಆಲೋಚನೆಗಳ ಪ್ರತಿರೂಪ ಆಗಿರುತ್ತಾನೆ. ಅವನು ಏನು ಯೋಚಿಸುತ್ತಾನೋ, ಅವನು ಅದೇ ಆಗುತ್ತಾನೆ. - ಮಹಾತ್ಮ ಗಾಂಧಿ

ಪ್ರಕೃತಿಯು ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಒದಗಿಸುತ್ತದೆ, ಆದರೆ ಮನುಷ್ಯನ ದುರಾಸೆಯಲ್ಲ. - ಮಹಾತ್ಮ ಗಾಂಧಿ

ನೀವು ಮಾನವೀಯತೆಯ ಮೇಲಿನ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ. ಮಾನವೀಯತೆ ಎಂಬುದು ಒಂದು ಸಾಗರದಂತೆ, ಸಮುದ್ರದ ಕೆಲವು ಹನಿಗಳು ಕೊಳಕಾಗಿದ್ದರೆ, ಸಾಗರವು ಕೊಳಕು ಆಗುವುದಿಲ್ಲ. - ಮಹಾತ್ಮ ಗಾಂಧಿ

ನಾವು ಯಾರಿಗೂ ಅವರ ಕೊಳಕು ಆಲೋಚನೆಗಳನ್ನು ನಮ್ಮ ಮನಸ್ಸಿನಲ್ಲಿ ನೆಲೆಸಲು ಅವಕಾಶ ನೀಡಬಾರದು. - ಮಹಾತ್ಮ ಗಾಂಧಿ

ನನ್ನ ಅನುಮತಿಯಿಲ್ಲದೆ ಯಾರೂ ನನ್ನನ್ನು ನೋಯಿಸಲು ಸಾಧ್ಯವೇ ಇಲ್ಲ. - ಮಹಾತ್ಮ ಗಾಂಧಿ

ನಾಳೆಯೇ ನೀವು ಸಾಯುತ್ತೀರಿ ಎಂದೇ ಇಂದು ಬದುಕಿ. ಎಂದೆಂದಿಗೂ ಬದುಕಿಯೇ ಇರುತ್ತೀರಿ ಎಂದು ಭಾವಿಸಿಕೊಂಡು ಹೊಸದನ್ನು ಕಲಿಯಿರಿ. - ಮಹಾತ್ಮ ಗಾಂಧಿ

ದುರ್ಬಲರು ಎಂದಿಗೂ ಕ್ಷಮಿಸಲಾರರು. ಕ್ಷಮೆ ಎಂದಿಗೂ ಬಲಶಾಲಿಗಳ ಗುಣ. - ಮಹಾತ್ಮ ಗಾಂಧಿ

ನನ್ನ ಧರ್ಮವು ಸತ್ಯ ಮತ್ತು ಅಹಿಂಸೆಯನ್ನು ಆಧರಿಸಿದೆ. ಸತ್ಯವೇ ನನ್ನ ದೇವರು, ಅಹಿಂಸೆಯೇ ಆತನನ್ನು ಅರಿತುಕೊಳ್ಳುವ ಸಾಧನವಾಗಿದೆ. - ಮಹಾತ್ಮ ಗಾಂಧಿ

ಪ್ರಪಂಚದ ಎಲ್ಲಾ ಧರ್ಮಗಳು, ಇತರ ವಿಷಯಗಳಲ್ಲಿ ಭಿನ್ನವಾಗಿರಬಹುದು. ಆದರೆ ಸತ್ಯ ಮಾತ್ರ ಎಲ್ಲಾ ಧರ್ಮಗಳಲ್ಲೂ ಒಂದೇ ಆಗಿದೆ. - ಮಹಾತ್ಮ ಗಾಂಧಿ

ನೀವು ಎದುರಾಳಿಗಳನ್ನು ಎದುರಿಸಿದಾಗಲೆಲ್ಲಾ ಪ್ರೀತಿಯಿಂದ ಜಯಿಸಿ. - ಮಹಾತ್ಮ ಗಾಂಧಿ

ಇಂದು ನೀವು ಏನು ಆಗುತ್ತೀರಿ ಎಂಬುದರ ಮೇಲೆ ನಿಮ್ಮ ನಾಳೆ ನಿಂತಿದೆ. - ಮಹಾತ್ಮ ಗಾಂಧಿ

ನಿಮ್ಮನ್ನು ನೀವು ಕಂಡುಕೊಳ್ಳುವ ಬಗೆ ಯಾವುದಾದರೂ ಇದ್ದರೆ ಅದು ಮತ್ತೊಬ್ಬರಿಗೆ ಸೇವೆ ಮಾಡುವುದೇ ಆಗಿದೆ. - ಮಹಾತ್ಮ ಗಾಂಧಿ

English summary

Gandhi Jayanti 2023: Inspirational Quotes of Mahatma Gandhi in kannada

Here we are discussing about Gandhi Jayanti 2022 : Inspirational Quotes of Mahatma Gandhi in kannada. Read more.
X
Desktop Bottom Promotion