For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್‌: ರಜತ ಪದಕ ಗೆದ್ದ ಮೀರಾಬಾಯಿ ಚಾನುಗೆ ಲೈಫ್‌ಟೈಮ್ ಫ್ರೀ ಪಿಜ್ಜಾ

|

ಟೋಕಿಯೋ 2020 ಒಲಿಂಪಿಕ್ಸ್‌ನಲ್ಲಿ ಭಾರ ಎತ್ತುವ 49 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು ಮಾಧ್ಯಮಗಳ ಜೊತೆ ಮಾತನಾಡುವಾಗ ನನಗೆ ಪಿಜ್ಜಾ ತಿನ್ನುವ ಬಯಕೆಯಾಗಿದೆ ಎಂದು ಹೇಳಿದ್ದರು....ಅವರ ಆಸೆ ಕೇಳಿದ ಡೊಮಿನೋಸ್‌ ಅವರಿಗೆ ಭರ್ಜರಿ ಕೊಡುಗೆಯನ್ನೇ ನೀಡಿದೆ. ಅವರಿಗೆ ಪಿಜ್ಜಾ ತುಂಬಾ ಇಷ್ಟ ಎಂದು ತಿಳಿದು ಅವರಿಗೆ ಲೈಫ್‌ಟೈಮ್ ಫ್ರೀ ಪಿಜ್ಜಾ ನೀಡುವುದಾಗಿ ಘೋಷಿಸಿದೆ.

ಭಾರತಕ್ಕೆ ಪದಕ ತಂದಿರುವುದಕ್ಕೆ ಅಭಿನಂದನೆಗಳು, ನೀವು ಲಕ್ಷಗಟ್ಟಲೆ ಭಾರತೀಯರ ಕನಸ್ಸಿಗೆ ಭರವಸೆ ತುಂಬಿದ್ದೀರಿ, ನಿಮಗೆ ಜೀವನಪೂರ್ತಿ ಫ್ರೀ ಪಿಜ್ಜಾ ನೀಡುವುದಕ್ಕೆ ನಮಗೆ ಖುಷಿ ಇದೆ, ಮತ್ತೊಮ್ಮೆ ಅಭಿನಂದನೆಗಳು' ಎಂದು ಟ್ವೀಟ್‌ ಮಾಡಿದ್ದಾರೆ.

2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸೋತಾಗ ಉಂಟಾದ ಅವಮಾನ ಮೀರಾಬಾಯಿ ಚಾನು ಅವರನ್ನು ದುಃಸ್ವಪ್ನದಂತೆ ಕಾಡಿತ್ತು... ಏನೇ ಆಗಲಿ ನಾನು ಪದಕ ಗೆದ್ದೇ ಗೆಲ್ಲುತ್ತೇನೆ ಎಂಬ ಹಠದಲ್ಲಿ 5 ವರ್ಷ ತುಂನಾ ಕಷ್ಟಪಟ್ಟಿದ್ದಾರೆ. ಹಗಲು-ರಾತ್ರಿ ಗೆಲ್ಲಬೇಕೆಂಬ ಆಲೋಚನೆಯೊಂದೇ ಅವರನ್ನು ಕಾಡುತ್ತಿತ್ತು. ಅದಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ.

ಸ್ಪೋರ್ಟ್ಸ್‌ನಲ್ಲಿರುವವರು ತುಂಬಾ ಶಿಸ್ತಿನ ಜೀವನ ನಡೆಸಬೇಕು, ಆಹಾರ ವಿಷಯದಲ್ಲಿ ತುಂಬಾನೇ ಗಮನ ಹರಿಸಬೇಕು, ಇಷ್ಟ ಅಂತ ಎಲ್ಲಾ ಆಹಾರ ತಿನ್ನುವಂತಿಲ್ಲ, ಮೀರಾಬಾಯಿ ಕೂಡ ತಮ್ಮ ಇಷ್ಟದ ಆಹಾರಗಳನ್ನು ಮುಟ್ಟದೆ ಕಷ್ಟಪಟ್ಟು ಅಭ್ಯಾಸ ಮಾಡಿ ಇಂದು ಸಾಧನೆ ಮೆಟ್ಟಿಲೇರಿದ್ದಾರೆ. ಪದಕ ಗೆದ್ದ ಮೇಲೆ ಅವರಿಗೆ ತಮ್ಮ ನೆಚ್ಚಿನ ಪಿಜ್ಜಾ ತುಂಡು ಬಾಯಿಗೆ ಹಾಕಬೇಕೆನಿಸಿದೆ... ನಿನಗೆ ಯಾವಗೆಲ್ಲಾ ತಿನ್ನಬೇಕೆನಿಸುತ್ತದೋ ಆವಾಗೆಲ್ಲಾ ನಾವು ನಿಮಗೆ ಫ್ರೀ ಪಿಜ್ಜಾ ನೀಡುತ್ತೇವೆ ಎಂದು ಪ್ರೀತಿಯಿಂದ ಡೋಮಿನೋಸ್ ಮುಂದೆ ಬಂದಿದೆ.

English summary

Dominos India offers weightlifter Mirabai Chanu free pizza for lifetime after winning silver medal at Tokyo Olympics

Dominos India offers weightlifter Mirabai Chanu free pizza for lifetime after winning silver medal at Tokyo Olympics,
Story first published: Monday, July 26, 2021, 16:30 [IST]
X