For Quick Alerts
ALLOW NOTIFICATIONS  
For Daily Alerts

ಲಾಕ್ ಡೌನ್‌ ಸಮಯದಲ್ಲಿ ಹೀಗೆ ಮಾಡಿದರೆ ಆರೋಗ್ಯ ಹೆಚ್ಚುವುದು ಸಂಬಂಧ ಮಧುರವಾಗುವುದು

|

ಮಹಾಮಾರಿ ಕೊರೋನಾದಿಂದ ಎಲ್ಲರೂ ಕಂಗೆಟ್ಟಿದ್ದಾರೆ. ದಿನಬೆಳಗಾದರೆ ಯಾರ ಸಾವಿನ ಸುದ್ದಿ ಕೇಳಬೇಕೋ ಅನ್ನೋ ಭಯ ಎಲ್ಲರನ್ನೂ ಕಾಡುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ, ಶವಗಳನ್ನು ಸಂಸ್ಕಾರ ಮಾಡಲು ಸ್ಮಶಾನದಲ್ಲಿ ಜಾಗವೂ ಇಲ್ಲ. ಇದಕ್ಕೆ ಮನೆಯೊಳಗೆ ಇರುವುದೊಂದೇ ಸುರಕ್ಷಿತ ದಾರಿ.

ಆದರೆ ಸದಾ ಕಾಲ ಮನೆಯಲ್ಲಿರುವುದು ಬೇಜಾರು ಅಂತ ಅನ್ಕೊಳೋರೇ ಹೆಚ್ಚು. ಆದರೆ ಮನೇಲಿ ಇಲ್ಲದೇ ಬೇರೆ ವಿಧಿ ಇಲ್ಲ. ಮನೇಲೇ ಇರೋದ್ರಿಂದ ನೀವು ಕೆಲವೊಂದು ನಿಯಮಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬಹುದು. ಇದ್ರಿಂದ ನಿಮ್ಮ ಆರೋಗ್ಯಕ್ಕಷ್ಟೇ ಅಲ್ಲ, ಸಂಬಂಧ ಗಟ್ಟಿಯಾಗಲು ಸಹಾಯ ಆಗುತ್ತದೆ. ಹಾಗಾದ್ರೆ ಆ ನಿಯಮಗಳೇನು ಎಂಬುದನ್ನು ಈ ಕೆಳಗೆ ನೋಡೋಣ.

ಲಾಕ್ ಡೌನ್ ನಿಂದ ಮನೆಯಲ್ಲಿರುವವರು ಅಳವಡಿಸಿಕೊಳ್ಳಬೇಕಾದ ನಿಯಮಗಳು ಈ ಕೆಳಗಿವೆ:

ಮುಂಜಾನೆ ಬೇಗ ಎದ್ದೇಳಿ:

ಮುಂಜಾನೆ ಬೇಗ ಎದ್ದೇಳಿ:

ಕೊರೋನಾ ಕಾರಣದಿಂದ ಅನೇಕ ಸ್ಥಳಗಳಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಪರಿಸ್ಥಿತಿ ಹೀಗಿರುವಾಗ, ಹೆಚ್ಚಿನವರು ತಮ್ಮ ಸ್ವಂತ ಮನೆಯಲ್ಲಿದ್ದಾರೆ. ಆದ್ದರಿಂದ ಈ ಸಮಯದಲ್ಲಿ ನೀವು ಬೇಗ ಏಳುವುದನ್ನು ಅಭ್ಯಾಸ ಮಾಡಬೇಕು. ಇದು ಎಲ್ಲಾ ಸಮಯದಲ್ಲೂ ಅನುಸರಿಸಬೇಕಾದ ನಿಯಮ. ಏಕೆಂದರೆ ಬೆಳಿಗ್ಗೆ ಬೇಗ ಏಳುವುದರಿಂದ ಮನಸ್ಸು ಆರೋಗ್ಯಕರವಾಗಿರುತ್ತದೆ. ಅಲ್ಲದೆ, ಬೇಗನೆ ಎದ್ದೇಳುವುದರಿಂದ ನಿಮ್ಮ ಕೆಲಸವೂ ಬೇಗ ಆಗುವುದಲ್ಲದೇ, ಕುಟುಂಬಕ್ಕೂ ಸಮಯವನ್ನು ನೀಡಲು ನಿಮಗೆ ಸಾಧ್ಯವಾಗುತ್ತದೆ.

ಯೋಗ ಅಥವಾ ವ್ಯಾಯಾಮ ಮಾಡಿ:

ಯೋಗ ಅಥವಾ ವ್ಯಾಯಾಮ ಮಾಡಿ:

ನೀವು ಮನೆಯಲ್ಲಿದ್ದರೆ ಮತ್ತು ಬೆಳಿಗ್ಗೆ ಬೇಗನೆ ಎದ್ದಿದ್ದರೆ, ಯೋಗ ಅಥವಾ ವ್ಯಾಯಾಮ ಮಾಡಬಹುದು. ಈ ಕೊರೋನಾ ಅವಧಿಯಲ್ಲಿ ನಿಮ್ಮನ್ನು ಸದೃಢವಾಗಿ ಮತ್ತು ಆರೋಗ್ಯವಾಗಿರಿಸಿಕೊಳ್ಳುವುದು ಬಹಳ ಮುಖ್ಯ. ಪ್ರತಿದಿನ, ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಅಥವಾ ಯೋಗ ಮಾಡಬೇಕು. ಇದು ನಿಮ್ಮ ಸೋಮಾರಿತನವನ್ನು ಸಹ ದೂರಮಾಡುತ್ತದೆ. ಜೊತೆಗೆ ಮನಸ್ಸು -ದೇಹವನ್ನು ಆರಾಮದಾಯಕವಾಗಿರಿಸುತ್ತದೆ.

ಬೆಳಿಗ್ಗೆ ಎದ್ದು ಹಿರಿಯರಿಗೆ ಶುಭಕೋರಿ:

ಬೆಳಿಗ್ಗೆ ಎದ್ದು ಹಿರಿಯರಿಗೆ ಶುಭಕೋರಿ:

ನಾವು ಹಿರಿಯರನ್ನು ಗೌರವಿಸುವುದು ಅವರ ಯೋಗಕ್ಷೇಮ ವಿಚಾರಿಸುವುದು ಬಹಳ ಮುಖ್ಯ. ಆದರೆ ಈಗಿನವರು ಮೊಬೈಲ್ ನಲ್ಲೇ ಬಿದ್ದಿದ್ದು, ಹಿರಿಯರನ್ನು ಮಾತನಾಡಿಸುವ ಗೋಜಿಗೆ ಹೋಗುವುದಿಲ್ಲ. ಇದು ತಪ್ಪು, ಪ್ರತಿದಿನ ಬೆಳಿಗ್ಗೆ ಎದ್ದ ನಂತರ, ನಾವು ನಮ್ಮ ಹೆತ್ತವರ ಮತ್ತು ಮನೆಯಲ್ಲಿ ಉಳಿದ ಹಿರಿಯರ ಆಶೀರ್ವಾದವನ್ನು ತೆಗೆದುಕೊಳ್ಳಬೇಕು. ಅವರ ಪಾದಗಳನ್ನು ಮುಟ್ಟುವ ಮೂಲಕ ಪ್ರತಿದಿನ ಆಶೀರ್ವಾದ ತೆಗೆದುಕೊಳ್ಳುವುದರಿಂದ ನಮ್ಮ ದಿನವು ಚೆನ್ನಾಗಿ ಹೋಗುತ್ತದೆ ಮತ್ತು ನಮ್ಮ ಸಂಬಂಧಗಳಲ್ಲಿ ಮಾಧುರ್ಯವೂ ಇರುತ್ತದೆ.

ಕೆಲಸದ ಸಮಯದಲ್ಲಿ ಕೆಲಸ ಮಾಡಿ, ಜೊತೆಗೆ ಮನೆಯವರಿಗೆ ಸಹ ಸಮಯ ನೀಡಿ:

ಕೆಲಸದ ಸಮಯದಲ್ಲಿ ಕೆಲಸ ಮಾಡಿ, ಜೊತೆಗೆ ಮನೆಯವರಿಗೆ ಸಹ ಸಮಯ ನೀಡಿ:

ಕೊರೋನಾ ಕಾರಣದಿಂದ ಎಲ್ಲರೂ ಮನೆಯಲ್ಲಿದ್ದಾರೆ. ಅದರ ಜೊತೆಗೆ ನಿಮ್ಮ ಕೆಲಸವೂ ಮನೆಯಿಂದಲೇ ನಡೆಯುತ್ತಿದೆ. ಹೀಗಿರುವಾಗ ನಿಮ್ಮ ಕೆಲಸವನ್ನು ಮೊದಲು ಮಾಡಬೇಕು. ಅದೇ ಸಮಯದಲ್ಲಿ, ನಿಮ್ಮ ಕೆಲಸ ಮುಗಿದ ನಂತರ, ನೀವು ಮೊಬೈಲ್ ಅಥವಾ ಲ್ಯಾಪ್‌ಟಾಪ್‌ಗೆ ಹಿಡಿದುಕೊಳ್ಳುವ ಬದಲು ನಿಮ್ಮ ಕುಟುಂಬ ಸದಸ್ಯರಿಗೆ ಸಮಯವನ್ನು ನೀಡಬೇಕು. ಈ ಕಷ್ಟದ ಸಮಯದಲ್ಲಿ ನೀವು ಅವರೊಂದಿಗೆ ಕುಳಿತು ಅವರೊಂದಿಗೆ ಮಾತನಾಡುವಾಗ, ಅದು ಅವರಿಗೆ ಸಾಕಷ್ಟು ಭರವಸೆ ಹಾಗೂ ನೆಮ್ಮದಿಯನ್ನು ನೀಡುತ್ತದೆ.

English summary

Coronavirus : Follow These Rules In Your Life You Will Get Many Benefits

Here we talking about Coronavirus : Follow These Rules In Your Life You Will Get Many Benefits, read on
X
Desktop Bottom Promotion