Just In
Don't Miss
- News
"ತಮಿಳುನಾಡು ಸಂಸ್ಕೃತಿ ಬಗ್ಗೆ ಕೇಂದ್ರಕ್ಕೆ ಕಿಂಚಿತ್ತೂ ಗೌರವವಿಲ್ಲ, ಆದರೂ..."
- Automobiles
ಹೈಬ್ರಿಡ್ ಸ್ಕೂಟರ್ ಆಗಿ ಮಾಡಿಫೈಗೊಂಡ ಹೋಂಡಾ ಆಕ್ಟಿವಾ
- Sports
ಭಾರತ vs ಇಂಗ್ಲೆಂಡ್: ಬೂಮ್ರಾ, ಸುಂದರ್ ಸ್ಥಾನಕ್ಕೆ ಉಮೇಶ್, ಕುಲ್ದೀಪ್ ಕಣಕ್ಕಿಳಿಯುವ ಸಂಭವ
- Movies
'ಅಣ್ಣ ಎಂದು ಕೂಗಬೇಡ': ಮಂಜು ಪಾವಗಡಗೆ ಅಣ್ಣ ಎಂದಿದ್ದು ಯಾರು?
- Finance
ಎಲ್ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ : 25 ರೂ. ಏರಿಕೆ
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
happy christmas wishes 2020 : ಕ್ರಿಸ್ಮಸ್ ಹಬ್ಬದ ಶುಭಾಶಯ, ಸಂದೇಶ, ಚಿತ್ರಗಳು
ಡಿಸೆಂಬರ್ ಅಂದ ತಕ್ಷಣ ಎಲ್ಲರಿಗೂ ತಕ್ಷಣ ನೆನಪಿಗೆ ಬರುವುದು ಕ್ರಿಸ್ಮಸ್ ಆಚರಣೆ. ಇದು ಕ್ರಿಶ್ಚಿಯನ್‌ರ ಹಬ್ಬವಾದರೂ ಎಲ್ಲರೂ ಸಂತೋಷದಿಂದ ಈ ಆಚರಣೆಯಲ್ಲಿ ಭಾಗವಹಿಸುವುದು ಇದರ ವಿಶೇಷ. ಅದರಲ್ಲೂ ಸಂತಾ ಕ್ಲಾಸ್ ಬರುವುದು, ಕೇಕ್, ವಿವಿಧ ಬಗೆಯ ಭಕ್ಷ್ಯ, ಕ್ರಿಸ್ಮಸ್ ಟ್ರೀ, ವಿವಿಧ ಬಗೆಯ ಭಕ್ಷ್ಯ ಇವುಗಳಿಂದ ಕ್ರಿಸ್ಮಸ್ ತುಂಬಾ ವಿಶೇಷವಾಗಿರುತ್ತದೆ.
ನಾವಿಲ್ಲಿ ಕ್ರಿಸ್ಮಸ್‌ಗೆ ನಿಮ್ಮ ಪ್ರೀತಿ ಪಾತ್ರರಿಗೆ ಶುಭ ಕೋರಲು ಇಲ್ಲಿ ವಾಟ್ಸಾಪ್ ಹಾಗೂ ಸೋಷಿಯಲ್ ಮೀಡಿಯಾ ಸ್ಟೇಟಸ್ ಹಾಕಲು ಕೆಲವೊಂದು ಶುಭಾಶಯಗಳನ್ನು ನೀಡಿದ್ದೇವೆ ನೋಡಿ:

ಶುಭಾಶಯ 1
ಈ ಕ್ರಿಸ್ಮಸ್ ನಿಮಗೆ ಅದೃಷ್ಟ, ಆರೋಗ್ಯ, ಸಂಪತ್ತು, ಕುಟುಂಬದಲ್ಲಿ ಸಂತೋಷ ತುಂಬಲಿ. ಕ್ರಿಸ್ಮಸ್ ಹಬ್ಬದ ಶುಭಾಶಯಗಳು

ಶುಭಾಶಯ 2
ಈ ಕ್ರಿಸ್ಮಸ್ ಸಂತೋಷ, ಪ್ರೀತಿ, ಶಾಂತಿ ನಿಮ್ಮ ಬದುಕಿನಲ್ಲಿ ತುಂಬಲಿ. ಮೇರಿ ಕ್ರಿಸ್ಮಸ್.

ಶುಭಾಶಯ 3
ಮೇರಿಕ್ರಿಸ್ಮಸ್! ನನ್ನ ಪ್ರೀತಿಯ ಕಂದಾ... ನಿನಗೆ ಇದೋ ನನ್ನ ಕಡೆಯಿಂದ ಈ ಕ್ರಿಸ್ಮಸ್ ಉಡುಗೊರೆ, ನಿನಗೆ ಅತ್ಯಂತ ಸಂತೋಷ ತುಂಬುವ ಕ್ರಿಸ್ಮಸ್ ಇದಾಗಿರಲಿ.

ಶುಭಾಶಯ 4
ಈ ಕ್ರಿಸ್ಮಸ್ ಮತ್ತಷ್ಟು ಸುಂದರವಾಗಿರುವುದು ನಿನ್ನಿಂದ ಮೈ ಲವ್, ನನ್ನ ಸಂಗಾತಿಯಾಗಿರುವುದಕ್ಕೆ ಧನ್ಯವಾದಗಳು, ಮೇರಿಕ್ರಿಸ್ಮಸ್.

ಶುಭಾಶಯ 5
ನಿನ್ನ ಸುಂದರ ನಗುವೇ ನನಗೆ ದೊಡ್ಡ ಕ್ರಿಸ್ಮಸ್ ಗಿಫ್ಟ್... ಸದಾ ಹೀಗೆ ನಗು-ನಗುತ್ತಾ ಇರು.... ಮೇರಿ ಕ್ರಿಸ್ಮಸ್.

ಶುಭಾಶಯ 6
ಮೆರಿ ಕ್ರಿಸ್ಮಸ್ ಮೈ ಫ್ರೆಂಡ್... ಈ ಕ್ರಿಸ್ಮಸ್‌ನ ಶುಭ ಸಮಯದಲ್ಲಿ ನೀನು ಬಯಸಿದ್ದು ನೆರವೇರಲು ಆ ದೇವರ ಆಶೀರ್ವಾದ ನಿನ್ನ ಮೇಲಿರಲಿ.

ಶುಭಾಶಯ 7
ಈ ಕ್ರಿಸ್ಮಸ್‌ಗೆ ನಿನ್ನಂಥ ಸ್ನೇಹಿತ ಸಿಕ್ಕಿದ್ದಕ್ಕೆ ದೇವರಿಗೆ ಧನ್ಯವಾದ ಹೇಳುತ್ತೇನೆ... ಕ್ರಿಸ್ಮಸ್ ಮೇಣದ ಬತ್ತಿ ಹಚ್ಚೊದಾಗ ಬೆಳಗುವ ಪ್ರಭೆಯಂತೆ ನಿನ್ನ ಬಾಳು ಬೆಳಗಲಿ... ಮೇರಿ ಕ್ರಿಸ್ಮಸ್.

ಶುಭಾಶಯ 8
ನನಗೆ ಈ ಜಗತ್ತಿನಲ್ಲಿ ಅತ್ಯಂತ ಪ್ರಿಯವಾದ ವ್ಯಕ್ತಿಗೆ ಮೇರಿ ಕ್ರಿಸ್ಮಸ್. ಈ ಹಬ್ಬದ ಸಮಯವನ್ನು ಮತ್ತಷ್ಟು ಸ್ಪೆಷಲ್ ಆಗಿಸೋಣ....

ಶುಭಾಶಯ 9
ನನ್ನ ಬೆಸ್ಟ್ ಫ್ರೆಂಡ್‌ಗೆ ಮಿಲಿಯನ್ಸ್ ಥ್ಯಾಂಕ್ಸ್... ಈ ಕ್ರಿಸ್ಮಸ್ ನಿನಗೆ ತುಂಬಾ ವಿಶೇಷವಾಗಿರಲಿ ಎಂದು ಆಶಿಸುತ್ತೇನೆ.

ಶುಭಾಶಯ 10
ನೀನು ನನ್ನ ಜೀವನದಲ್ಲಿ ಎಷ್ಟು ಮುಖ್ಯವೆಂದು ದಿನಾ ನಾನು ಹೇಳದೇ ಇರಬಹುದು... ಆದರೆ ಒಂದು ಹೇಳಬಲ್ಲೆ ನೀನಿಲ್ಲದ ಕ್ರಿಸ್ಮಸ್ ನೆನೆಸಲೂ ಸಾಧ್ಯವಿಲ್ಲ.. Love You always...