For Quick Alerts
ALLOW NOTIFICATIONS  
For Daily Alerts

ವೃತ್ತಿ ಬದುಕಿನಲ್ಲಿ ಯಸಸ್ಸು ಪಡೆಯಲು ಚಾಣಕ್ಯ ಹೇಳಿದ ಸಪ್ತ ಸೂತ್ರಗಳು

|

ನಮಗೆಲ್ಲಾ ಬದುಕಿನಲ್ಲಿ ಯಸಸ್ಸು ಆಗಬೇಕೆಂಬ ಆಸೆ ಇರುತ್ತದೆ, ಆದರೆ ಯಶಸ್ಸು ಪಡೆಯಲು ಏನು ಮಾಡಬೇಕೆಂಬುವುದೇ ಗೊತ್ತಿರುವುದಿಲ್ಲ, ಯಾರೇ ಆಗಲಿ ಜೀವನದಲ್ಲಿ ಕೆಲವೊಂದು ಸೂತ್ರಗಳನ್ನು ಅಳವಡಿಸಿಕೊಮಡರೆ ಯಶಸ್ಸು ಪಡೆಯಬಹುದು ಎಂದು ಚಾಣಕ್ಯ ಹೇಳುತ್ತಾರೆ.

Chankya Neeti

ನಾವೆಲ್ಲರೂ ದುಡಿಯುವುದು ಹಣ ಮಾಡಲಿಕ್ಕೆ ಅದರಲ್ಲಿ ನೋ ಡೌಟ್‌.. ಆದರೆ ವೃತ್ತಿ ಬದುಕನ್ನು ನಾವು ಹೇಗೆ ನಿಭಾಯಸಿಕೊಂಡು ಹೋಗುತ್ತೇವೆ ಎಂಬುವುದರಲ್ಲಿ ನಮ್ಮ ಸಕ್ಸಸ್ ಅಡಗಿದೆ, ಯಾವುದೇ ವೃತ್ತಿಯಾಗಿರಲಿ ನಾವು ಕೆಲವೊಂದು ಸೂತ್ರಗಳನ್ನು ಅನುಸರಿಸಿದರೆ ಖಂಡಿತ ಯಶಸ್ಸು ಪಡೆಯಬಹುದು.

ನಾವೆಲ್ಲಾ ಬೆಳಗ್ಗೆ ಎದ್ದು ಆಫೀಸ್‌ಗೆ ಹೋಗುವಾಗ 'ಅಯ್ಯೋ ಇವತ್ತು ಆಫೀಸ್ ಇದೆಯಲ್ಲಪ್ಪಾ, ಆ ಕೆಲಸಗಳೆನ್ನೆಲ್ಲಾ ಹೇಗಪ್ಪಾ ಮುಗಿಸುವು ಎಂದು ಆಫೀಸ್‌ಗೆ ಹೋಗುತ್ತೇವರ ಅಲ್ವಾ? ಹೀಗೆ ಯೋಚಿಸಿದರೆ ಖಂಡಿತ ಯಸಸ್ಸು ಸಿಗಲ್ಲ. ಅದರ ಬದಲಿಗೆ 'ಇವತ್ತು ನಾನು ಆಫೀಸ್‌ಗೆ ಹೋಗಿ ಕೆಲಸವನ್ನು ತುಂಬಾ ಚೆನ್ನಾಗಿ ನಿಭಾಯಿಸುತ್ತೇನೆ' ಎಂದು ಆಲೋಚಿಸಬೇಕು, ಆಗ ನಾವು ಕೆಲಸ ಮಾಡುವ ರೀತಿಯೇ ಬದಲಾಗುವುದು.

ನೀವು ಮಾಡುವ ಕೆಲಸದಲ್ಲಿ ಯಶಸ್ಸು ದೊರೆಯಲು ಚಾಣಕ್ಯ ಹೇಳಿರುವ ರೀತಿಯಲ್ಲಿ ಈ ಸೂತ್ರಗಳನ್ನು ತಪ್ಪದೆ ಪಾಲಿಸಿ:

1. ದಿನದ ಪ್ಲ್ಯಾನ್ ಮಾಡಿ

1. ದಿನದ ಪ್ಲ್ಯಾನ್ ಮಾಡಿ

ಯಾವುದೇ ಕೆಲಸ ಮಾಡುವ ಮುನ್ನ ಪ್ಲ್ಯಾನ್ ಮಾಡಬೇಕು. ನೆನ್ನೆ ಯಾವೆಲ್ಲಾ ಕೆಲಸ ಬಾಕಿ ಉಳಿದಿದೆ, ಇವತ್ತು ಬಹುಮುಖ್ಯವಾಗಿ ಮಾಡಬೇಕಾಗಿರುವುದು ಏನು ಎಂಬುವುದರ ಬಗ್ಗೆ ಪ್ಲ್ಯಾನ್‌ ಮಾಡಬೇಕು. ಯಾವ ಕೆಲಸ ಮೊದಲು ಮಾಡಬೇಕು, ಯಾವುದು ನಂತರ ಮಾಡಿದರೂ ಆಗುತ್ತೆ ಎಂಬೆಲ್ಲಾ ಸ್ಪಷ್ಟ ಪ್ಲ್ಯಾನ್‌ ಇಟ್ಟು ಕೆಲಸ ಪ್ರಾರಂಭಿಸಬೇಕು.

2. ನಮ್ಮ ಸುತ್ತ-ಮುತ್ತ ಕಣ್ಣಾಡಿಸಬೇಕು

2. ನಮ್ಮ ಸುತ್ತ-ಮುತ್ತ ಕಣ್ಣಾಡಿಸಬೇಕು

ಬರೀ ಪ್ಲ್ಯಾನ್ ಮಾಡಿ ಕೆಲಸ ಮುಗಿಸಿ ಹೋಗುವುದಲ್ಲ, ನಮ್ಮ ಸುತ್ತ-ಮುತ್ತ ಏನು ನಡೆಯುತ್ತಿದೆ ಎಂಬುವುದು ತಿಳಿದುಕೊಳ್ಳುವುದು ಕೂಡ ಮುಖ್ಯವಾಗುತ್ತೆ. ಪೇಪರ್‌ ಓದಿ, ಆ ದಿನದ ಅಪ್‌ಡೇಡ್‌ಗಳ ಬಗ್ಗೆ ಕಣ್ಣಾಡಿಸಿ.

ಯಾವ ಕೆಲಸ ಯಾರು ಮಾಡಬೇಕು ಎಂಬುವುದರ ಬಗ್ಗೆ ಒಂದು ಸ್ಪಷ್ಟತೆ ಇರಲಿ. ಆಫೀಸ್‌ ಎಂದ ಮೇಲೆ ಹತ್ತಾರು ಕೆಲಸ ಬರುತ್ತೆ, ಎಲ್ಲಾ ನೀವೇ ಮಾಡಬೇಕಾಗಿಲ್ಲ, ನೀವು ಯಾವುದು ಮಾಡಬೇಕು, ನಿಮ್ಮ ಜೂನಿಯರ್‌ಗೆ ಯಾವುದು ಮಾಡಲು ಕೊಡಬೇಕು ಎಂಬ ತಿಳುವಳಿಕೆ ಬೇಕು.

3. ಎಲ್ಲವೂ ಪ್ಲ್ಯಾನ್‌ನಂತೆ ನಡೆಯಲ್ಲ, ಅದಕ್ಕೆ ಸಿದ್ಧರಾಗಿ

3. ಎಲ್ಲವೂ ಪ್ಲ್ಯಾನ್‌ನಂತೆ ನಡೆಯಲ್ಲ, ಅದಕ್ಕೆ ಸಿದ್ಧರಾಗಿ

ನೀವು 8 ಗಂಟೆ ಕೆಲಸ ಮಾಡುವುದಾದರೆ 6 ಗಂಟೆ ಏನು ಕೆಲಸ ಮಾಡಿ ಮುಗಿಸಬೇಕು ಎಂಬುವುದು ತಲೆಯಲ್ಲಿ ಇರಲಿ, ಎರಡು ಗಂಟೆ ಏನೂ ಶೆಡ್ಯೂಲ್‌ ಮಾಡಬೇಡಿ, ಆಫೀಸ್‌ನಲ್ಲಿ ಏನದರೂ ಕೆಲಸ ಬಂದರೆ ಅದನ್ನು ಮಾಡಲು ಆ ಸಮಯ ಬೇಕಾಗುತ್ತೆ, ಏನೂ ಬಂದಿಲ್ಲ ಎಂದರೆ ಆ ಸಮಯದಲ್ಲಿ ನೀವು ಮಾಡಿ ಮುಗಿಸಬೇಕಾಗಿರುವ ಕೆಲಸದ ಕಡೆ ಗಮನ ನೀಡಬಹುದು. ಎಲ್ಲವೂ ಪ್ಲ್ಯಾನ್‌ ಮಾಡಿದಂತೆ ನಡೆಯುತ್ತೆ ಎಂದಲ್ಲ, ಕೆಲವೊಮ್ಮೆ ನಾವು ಪ್ಲ್ಯಾನ್ ಮಾಡದೇ ಇರುವ ಕೆಲಸ ಬಂದಾಗ ನಿಭಾಯಿಸಲು ಗೊತ್ತಿರಬೇಕು.

ನೀವು ಎಲ್ಲಾ ಕೆಲಸ ಮುಗಿಸಬೇಕು ಎಂದು ಬಯಸುವುದು ಸರಿಯಲ್ಲ, ಕೆಲವೊಮ್ಮೆ ಸ್ವಲ್ಪ ಕೆಲಸ ಬಾಕಿಯುಳಿದರೆ ತುಂಬಾ ಟೆನ್ಷನ್‌ ಮಾಡಬೇಡಿ, ಅದನ್ನುನಾಳೆಮುಗಿಸಬಹುದು, ಆಫೀಸ್‌ ಕೆಲಸ ಮುಗಿಸುವಾಗ ನಿಮ್ಮ ಮುಖದಲ್ಲಿಒಂದು ನಗುವಿರಲಿ. ಅದು ತುಂಬಾನೇ ಮುಖ್ಯ.

4. ಕೆಲಸದ ನಡುವೆ ಬ್ರೇಕ್‌ ತೆಗೆದುಕೊಳ್ಳಿ

4. ಕೆಲಸದ ನಡುವೆ ಬ್ರೇಕ್‌ ತೆಗೆದುಕೊಳ್ಳಿ

ದಿನವಿಡೀ ಕೆಲಸ ಕೆಲಸ ಅಂತ ಕೂರಬೇಡಿ, ಆಫೀಸ್‌ ಎಂದ ಮೇಲೆ ಮೀಟಿಂಗ್, ಪ್ರಾಜೆಕ್ಟ್ ಎಲ್ಲಾ ಇರುತ್ತದೆ, ಆದರೆ ಇವೆಲ್ಲದರ ನಡುವೆ ಸ್ವಲ್ಪ ಸೈಲೆಂಟ್‌ ಸಮಯ ಅಥವಾ ಬ್ರೇಕ್‌ ಎನ್ನುವುದು ಬೇಕಾಗುತ್ತದೆ. ಸೈಲೆಂಟ್‌ ಎಂದರೆ ನೀವು ಆಪೀಸ್‌ನಲ್ಲಿ ಮೆಡಿಡೇಷನ್ ಮಾಡಿ ಎಂದಲ್ಲ. ಕೆಲಸದ ನಡುವೆ ಒಂದು ಹತ್ತು ನಿಮಿಷ ಬ್ರೇಕ್‌ ತೆಗೆದುಕೊಳ್ಳಿ. ಇದರಿಂದ ನಿಮ್ಮ ಮೈಂಡ್ ತುಂಬಾನೇ ರಿಫ್ರೆಷ್‌ ಆಗುತ್ತೆ, ನೀವು ಮತ್ತಷ್ಟು ಜೋಶ್‌ನಿಂದ ಕೆಲಸ ಮಾಡಬಹುದು. ನಾವು ಹೆಚ್ಚು ಪ್ರೊಡೆಕ್ಟಿವ್‌ ಆಗಬೇಕೆಂದರೆ ನಾವು ಎಷ್ಟು ಕಷ್ಟಪಟ್ಟು ಕೆಲಸ ಮಾಡಿದ್ದೇವೆ ಎಂಬುವುದಕ್ಕಿಂತ ನಾವು ಹೇಗೆ ಮಾಡಿದ್ದೇವೆ ಎಂಬುವುದು ಮುಖ್ಯವಾಗುವುದು..

ಅದಕ್ಕೆ ಹೇಳುವುದು ಹಾರ್ಡ್‌ವರ್ಕ್‌ಗಿಂತ ಸ್ಮಾರ್ಟ್‌ವರ್ಕ್‌ ತುಂಬಾನೇ ಮುಖ್ಯ.

5. ಸಹಾಯ ಪಡೆಯಿರಿ

5. ಸಹಾಯ ಪಡೆಯಿರಿ

ನಿಮ್ಮ ಕೆಲಸ ಪೂರ್ಣಗೊಳಿಸಲು ಸೀನಿಯರ್‌ ಬಳಿ ಸಲಹೆ ಕೇಳಿ ಜೂನಿಯರ್ ಹತ್ರ ಅವರು ಯಾವ ಕೆಲಸ ಮಾಡಬೇಕು ಎಂಬುವುದನ್ನು ತಿಳಿಸಿ. ನಿಮ್ಮ ಕೆಲಸದ ಬಗ್ಗೆ ನಿಮ್ಮಲ್ಲಿ ಕ್ಲಾರಿಟಿ ಇದ್ದಷ್ಟೂ ಕೆಲಸವನ್ನು ಸುಲಭವಾಗಿ ಮುಗಿಸಬಹುದು.

6. ಸ್ವಂತ ಬುದ್ಧಿವಂತಿಕೆ ಬಳಸಿ

6. ಸ್ವಂತ ಬುದ್ಧಿವಂತಿಕೆ ಬಳಸಿ

ಯಾವುದನ್ನೇ ಆಗಲಿ ಸ್ವಂತ ಬುದ್ಧಿವಂತಿಕೆಯಿಂದ ಚಿಂಸುವುದು ಒಳ್ಳೆಯದು. ಯಾವಾಗ ಸ್ವ ಬುದ್ಧಿವಂತಿಕೆ ಬಳಸುತ್ತಿರೋ ನಿಮ್ಮ ಆಲೋಚನೆಗಳೂ ಉತ್ತಮವಾಗುವುದು. ಇದರಿಂದ ನಿಮ್ಮ ನಿರ್ಧಾರಗಳೂ ಸ್ಪಷ್ಟವಾಗಿರುತ್ತೆ. ಭವಿಷ್ಯ ಹೇಗಿರುತ್ತೆ ಎಂದು ಹೇಳಲು ಸಾಧ್ಯವಿಲ್ಲ, ಆದರೆ ಹೇಗಿರಬೇಕು ಎಂದು ಖಂಡಿತ ನಿರ್ಧರಿಸಬಹುದು.

7.ಲಾಭವಾಗುತ್ತಿದೆಯೇ?

7.ಲಾಭವಾಗುತ್ತಿದೆಯೇ?

ಹೌದು ಈ ಪ್ರಶ್ನೆ ನಿಮ್ಮನ್ನು ನೀವು ಕೇಳಿ ಕೊಳ್ಳಬೇಕು. ಒಂದು ಕಂಪನಿ ನಿಮಗೆ ಒಂದು ಸ್ಯಾಲರಿ ಅಂತ ಫಿಕ್ಸ್‌ ಮಾಡಿ ಕೊಟ್ಟ ಮೇಲೆ, ನಿಮ್ಮಿಂದ ಕಂಪನಿಗೆ ಇಷ್ಟು ಅಂತ ಪ್ರೋಫಿಟ್ ಆಗಬೇಕು, ಇಲ್ಲದಿದ್ದರೆ ಕಂಪನಿ ನಿಮ್ಮನ್ನು ಇಷ್ಟುಕೊಳ್ಳುವುದಿಲ್ಲ, ಆದ್ದರಿಂದ ಕಂಪನಿಗೆ ಪ್ರೋಫಿಟ್ ಬರಲು ನೀವು ಹೇಗೆ ಕೆಲಸ ಮಾಡಬೇಕು ಎಂಬುವುದು ಗೊತ್ತಿರಬೇಕು.

ನಾವು ಏನು ಪಡೆಯುತ್ತೇವೋ ಅದರ ಡಬಲ್ ಕೊಡಬೇಕು, ನಾವು ಎಷ್ಟು ತಿನ್ನುತ್ತೇವೋ ಅದರ ದುಪ್ಪಟ್ಟು ಉತ್ಪಾದಿಸಬೇಕು.

ಇಷ್ಟು ಸೂತ್ರ ಪಾಲಿಸಿದರೆ ನೀವು ಖಂಡಿತ ಯಶಸ್ಸು ಪಡೆಯುತ್ತೀರಿ....

English summary

Chankya Says These 7 things are the success mantra of professional life in kannada

Chankya Neeti, success mantra of professional life, chankya sutra to get success,
Story first published: Saturday, January 28, 2023, 18:25 [IST]
X
Desktop Bottom Promotion