For Quick Alerts
ALLOW NOTIFICATIONS  
For Daily Alerts

ನಿಮ್ಮ ಹೆಂಡತಿಯಲ್ಲಿ ಈ ಗುಣಗಳಿದ್ದರೆ, ನೀವೇ ಅದೃಷ್ಠವಂತರು!

|

ಪ್ರತಿಯೊಬ್ಬರ ಜೀವನದಲ್ಲಿ ಹೆಣ್ಣು ಪ್ರಮುಖ ಪಾತ್ರ ವಹಿಸುತ್ತಾಳೆ. ತಾಯಾಗಿ, ಹೆಂಡತಿಯಾಗಿ, ಮಗಳಾಗಿ, ಸಹೋದರಿಯಾಗಿ ಹೀಗೆ.. ಆದರೆ ಆಕೆ ಯಾವುದೇ ಪಾತ್ರದಲ್ಲಿದ್ದರೂ ಉತ್ತಮ ಗುಣಗಳನ್ನು ಹೊಂದುವುದು ತುಂಬಾ ಮುಖ್ಯ. ಅದರಲ್ಲೂ ಮುಖ್ಯವಾಗಿ ಪತ್ನಿಯ ಪಾತ್ರದಲ್ಲಿ. ಗಂಡನ ಏಳು-ಬೀಳು ನಿಂತಿರುವುದೇ ಆಕೆಯ ಕೈಯಲ್ಲಿ.

ಒಳ್ಳೆಯ ಗುಣಗಳನ್ನು ಹೊಂದಿರುವ ಹೆಣ್ಣನ್ನು ವಿವಾಹವಾದರೆ ಮನೆ ಸ್ವರ್ಗ, ಇಲ್ಲ ಅದೇ ಮನೆ ನಿಮಗೆ ನರಕವಾಗಿ ಕಾಡಿಬಿಡುತ್ತದೆ ಎಂಬ ಮಾತಿದೆ. ಚಾಣಕ್ಯನ ಪ್ರಕಾರ, ಮಹಿಳೆಯರು ಈ ಕೆಳಗಿನ ಗುಣಗಳನ್ನು ಹೊಂದಿದ್ದರೆ, ಅವರನ್ನು ಪಡೆದ ಗಂಡಂದಿರು ತುಂಬಾ ಅದೃಷ್ಠವಂತರಂತೆ. ಆ ಪುರುಷರ ಜೀವನ ಸಂತೋಷದಿಂದ ಕೂಡಿರುತ್ತದೆ. ಹಾಗಾದ್ರೆ ಆ ಗುಣಗಳಾವುವು ನೋಡೋಣ.

ಉತ್ತಮ ದಾಂಪತ್ಯಕ್ಕಾಗಿ ಮಹಿಳೆಯರಲ್ಲಿ ಇರಬೇಕಾದ ಗುಣಗಳನ್ನು ಈ ಕೆಳಗೆ ನೀಡಲಾಗಿದೆ:

ದಯೆ ಮತ್ತು ಕರುಣೆ:

ದಯೆ ಮತ್ತು ಕರುಣೆ:

ಚಾಣಕ್ಯನ ಪ್ರಕಾರ, ಮಹಿಳೆಯು ಕಠೋರ ಮನಸ್ಥಿತಿಯನ್ನು ಹೊಂದಿರಬಾರದು. ಅದರ ಬದಲಿಗೆ ಇತರರ ಬಗ್ಗೆ ಕರುಣೆ ಮತ್ತು ನಮ್ರತೆಯ ಗುಣಗಳನ್ನು ಹೊಂದಿರಬೇಕು. ಯಾವಾಗಲೂ ಕುಟುಂಬ ಮತ್ತು ಸಂಬಂಧಗಳನ್ನು ಪ್ರೀತಿಸುತ್ತಾಳೆ. ಜೊತೆಗೆ ಯಾವಾಗಲೂ ಇತರರ ಯೋಗಕ್ಷೇಮದ ಬಗ್ಗೆ ಯೋಚಿಸುತ್ತಾಳೆ. ಅಂತಹ ಕುಟುಂಬದಲ್ಲಿ ಯಾವಾಗಲೂ ಸಂತೋಷ ಮತ್ತು ಶಾಂತಿ ನೆಲೆಸಿರುತ್ತದೆ. ಹೆಂಡತಿಯಲ್ಲಿ ಈ ಗುಣಗಳನ್ನು ಹೊಂದಿರುವ ವ್ಯಕ್ತಿಯ ಕುಟುಂಬವು ಸಂತೋಷವಾಗಿರತ್ತದೆ. ಅವನ ಜೀವನವೂ ಸಂತೋಷದಾಯಕವಾಗಿರುತ್ತದೆ.

ಧರ್ಮ ಪಾಲನೆ:

ಧರ್ಮ ಪಾಲನೆ:

ಮಹಿಳೆಯಾಗಲಿ ಅಥವಾ ಪುರುಷರಾಗಲಿ ಧರ್ಮವನ್ನು ಅನುಸರಿಸಬೇಕು ಎಂಬುದು ಚಾಣಕ್ಯನ ಮಾತು. ಧರ್ಮವನ್ನು ಅನುಸರಿಸುವ ಮಹಿಳೆ, ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಾಳೆ. ಧರ್ಮವನ್ನು ಅನುಸರಿಸುವ ಮಹಿಳೆ ಯಾವಾಗಲೂ ಸತ್ಯ ಧರ್ಮದ ಹಾದಿಯಲ್ಲಿ ಸಾಗುತ್ತಾಳೆ. ಅವರು ತಮ್ಮ ಸಂತತಿಯನ್ನು ಸುಸಂಸ್ಕೃತಗೊಳಿಸುತ್ತಾರೆ. ಅಂತಹ ಮಹಿಳೆ ಯಾವಾಗಲೂ ತನ್ನ ಕರ್ತವ್ಯಗಳನ್ನು ನಿರ್ವಹಿಸುತ್ತಾಳೆ. ತನ್ನ ಕುಟುಂಬವನ್ನು ಮಾತ್ರವಲ್ಲದೆ ತನ್ನ ಸುತ್ತಮುತ್ತಲಿರುವ ಜನರನ್ನು ಒಳ್ಳೆಯದನ್ನೇ ಹೇಳಿಕೊಡುತ್ತಾರೆ. ಧರ್ಮದ ಹಾದಿಯಲ್ಲಿ ನಡೆಯುವ ಮಹಿಳೆ ಸ್ವಾಭಿಮಾನದಿಂದ ಇರುವುದಲ್ಲದೇ, ಇಡೀ ಕುಟುಂಬದ ಮೌಲ್ಯವನ್ನು ಹೆಚ್ಚಿಸುತ್ತಾಳೆ.

ಹಣ ಉಳಿತಾಯ:

ಹಣ ಉಳಿತಾಯ:

ಹಣವು ವ್ಯಕ್ತಿಯ ಕೆಟ್ಟ ಕಾಲದಲ್ಲಿ ಸಹಾಯ ಮಾಡುತ್ತದೆ ಮತ್ತು ಕೆಟ್ಟ ಸಂದರ್ಭಗಳಿಂದ ಹೊರಬರಲು ಸಹಾಯ ಮಾಡುತ್ತದೆ ಎಂದು ಚಾಣಕ್ಯ ಹೇಳುತ್ತಾರೆ. ಸಂಪತ್ತನ್ನು ಸಂಗ್ರಹಿಸುವ ಅಭ್ಯಾಸವನ್ನು ಹೊಂದಿರುವ ವ್ಯಕ್ತಿಯು ಕೆಟ್ಟ ಸಮಯವನ್ನು ಸುಲಭವಾಗಿ ಜಯಿಸುತ್ತಾನೆ. ಆದ್ದರಿಂದ ಹೆಂಡತಿ ದುಂದು ವೆಚ್ಚ ಮಾಡದೇ, ಅಗತ್ಯದಷ್ಟೇ ಖರ್ಚು ಮಾಡಿಕೊಂಡು ಮನೆಯ ವೆಚ್ಚಗಳ್ನೆಲ್ಲಾ ಭರಿಸಿ, ಸ್ವಲ್ಪ ಮಟ್ಟದ ಉಳಿತಾಯ ಮಾಡುತ್ತಾಳೆಂದರೆ ನೀವೇ ಅದೃಷ್ಠವಂತರು. ಅವರಿಗೆ ಮನೆ ಹೇಗೆ ನಿರ್ವಹಿಸುವುದೆಂದು ಚೆನ್ನಾಗಿ ತಿಳಿದಿರುತ್ತದೆ.

ಗೌರವ:

ಗೌರವ:

ಗೌರವ ಎಂದಾಕ್ಷಣ ಕೇವಲ ತಗ್ಗಿ ನಿಲ್ಲುವುದು, ಆಡಿದ ಮಾತುಗಳನ್ನೆಲ್ಲಾ ಸಹಿಸಿಕೊಳ್ಳುವುದು ಎಂದಲ್ಲ. ತಮ್ಮ ಹಿರಿಯರಿಗೆ ಗೌರವ ನೀಡುವುದು, ನಿಮ್ಮ ಮಾತುಗಳಿಗೆ ಗೌರವ ನಿಡುವುದರ ಜೊತೆಗೆ ಅವರ ಅಭಿಪ್ರಾಯಕ್ಕೂ ಮಹತ್ವ ನೀಡುದುದಾಗಿದೆ. ಗೌರವ ಕೊಟ್ಟು ಗೌರವ ಸಂಪಾದಿಸುವ ವ್ಯಕ್ತಿತ್ವ ನಿಮ್ ಪತ್ನಿಯದ್ದಾಗಿದ್ದರೆ, ನೀವು ಅದೃಷ್ಟವಂತರು. ಅವರು ಎಲ್ಲಿಯೂ ನಿಮ್ಮ ಗೌರವಕ್ಕೆ ಧಕ್ಕ ಬರುವಂತೆ ನಡೆದುಕೊಳ್ಳುವುದಿಲ್ಲ, ನಿಮ್ಮ ಗೌರವ ಕಮ್ಮಿಯಾಗುವುದನ್ನೂ ಸಹಿಸುವುದಿಲ್ಲ.

Read more about: insync women ಮಹಿಳೆ
English summary

Chanakya Niti on Good Qualities Of Women in Kannada

Here we talking about Chanakya Niti on Good Qualities Of Women in Kannada, read on
X
Desktop Bottom Promotion