For Quick Alerts
ALLOW NOTIFICATIONS  
For Daily Alerts

Buddha Purnima 2021: ಬುದ್ಧ ಪೂರ್ಣಿಮಾ ದಿನಾಂಕ, ಶುಭ ಘಳಿಗೆ ಹಾಗೂ ಮಹತ್ವದ ಕುರಿತ ಸಂಪೂರ್ಣ ಮಾಹಿತಿ

|

ಜಗತ್ತಿಗೆ ಕರುಣೆ ಮತ್ತು ಶಾಂತಿಯನ್ನು ಸಾರಿದ ವ್ಯಕ್ತಿ ಬುದ್ಧ. ಈತನನ್ನು ಬೌದ್ಧ ಧರ್ಮದವರು ಮಾತ್ರವಲ್ಲದೇ ಜಗತ್ತಿನದ್ಯಾಂತ ಲಕ್ಷಾಂತರ ಜನರು ಪೂಜಿಸುತ್ತಾರೆ. ವೈಶಾಖ ಮಾಸದ ಹುಣ್ಣಿಮೆಯ ದಿನ ಬುದ್ಧ ಜಯಂತಿ. ಸಿದ್ದಾರ್ಥ ಬುದ್ಧನಾಗಿದ್ದುಇದೇ ದಿನ, ಸಿದ್ದಾರ್ಥ ಹುಟ್ಟಿದ್ದೂ ಕೂಡ ಇದೇ ದಿನ. ಹಾಗಾದ್ರೆ ಈ ವರ್ಷ ಈ ಬುದ್ಧ ಪೂರ್ಣಿಮಾ ಯಾವಾಗ ಬಂದಿದೆ? ಅದರ ಮಹತ್ವವೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

2021ರ ಬುದ್ಧ ಪೂರ್ಣಿಮಾ ದಿನಾಂಕ:

2021ರ ಬುದ್ಧ ಪೂರ್ಣಿಮಾ ದಿನಾಂಕ:

ಬುದ್ಧ ಪೂರ್ಣಿಮಾವನ್ನು ಬುದ್ಧ ಜಯಂತಿ ಎಂದೂ ಕರೆಯುತ್ತಾರೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಬುದ್ಧ ಜಯಂತಿಯನ್ನು ವೈಶಾಖ ತಿಂಗಳ ಹುಣ್ಣಿಮೆಯ ದಿನದಂದು (ಪೂರ್ಣಿಮಾ) ಆಚರಿಸಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಇದನ್ನು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಆಚರಿಸಲಾಗುತ್ತದೆ.

ಈ ವರ್ಷ, ಗೌತಮ ಬುದ್ಧನ 2583 ನೇ ಜನ್ಮ ದಿನಾಚರಣೆಯಾಗಿದ್ದು, ಇದನ್ನು ಮೇ 26 ರಂದು ಆಚರಿಸಲಾಗುವುದು. ಆದರೆ, ಗೌತಮ ಬುದ್ಧನ ಜನನ ಮತ್ತು ಮರಣದ ಸಮಯದ ಬಗ್ಗೆ ಇತಿಹಾಸಕರರಲ್ಲಿ ಗೊಂದಲವಿದೆ.

ಬುದ್ಧ ಪೂರ್ಣಿಮಾ ತಿಥಿ:

ಬುದ್ಧ ಪೂರ್ಣಿಮಾ ತಿಥಿ:

ಪೂರ್ಣಿಮಾ ತಿಥಿ 2021 ರ ಮೇ 25 ರಂದು 09:29 ಕ್ಕೆ ಪ್ರಾರಂಭವಾಗಿ, ಮೇ 26 ರಂದು 04:43 ಕ್ಕೆ ಕೊನೆಗೊಳ್ಳುತ್ತದೆ.

ಬುದ್ಧ ಪೂರ್ಣಿಮಾದ ಮಹತ್ವ :

ಬುದ್ಧ ಪೂರ್ಣಿಮಾದ ಮಹತ್ವ :

ಈ ದಿನ ಭಕ್ತರು ಬೌದ್ಧ ದೇವಾಲಯಗಳಿಗೆ ಭೇಟಿ ನೀಡಿ, ಭಗವಾನ್ ಬುದ್ಧನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಅಗತ್ಯವಿರುವವರಿಗೆ ದಾನ ಮಾಡುತ್ತಾರೆ. ಕೆಲವು ಭಕ್ತರು ಉಪವಾಸವನ್ನು ಆಚರಿಸುತ್ತಾರೆ ಜೊತೆಗೆ ಧ್ಯಾನ ಮಾಡುತ್ತಾರೆ ಮತ್ತು ಪವಿತ್ರ ಗ್ರಂಥವನ್ನು ಓದುತ್ತಾರೆ. ಇದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಶಾಂತಿ ದೊರೆಯುವುದು ಎಂಬುದು ಜನರ ನಂಬಿಕೆಯಾಗಿದೆ.

ಬುದ್ಧ ಪೂರ್ಣಿಮಾ ಯಶಸ್ಸಿಗೆ ಉತ್ತಮ ದಾರಿಗಳು :

ಬುದ್ಧ ಪೂರ್ಣಿಮಾ ಯಶಸ್ಸಿಗೆ ಉತ್ತಮ ದಾರಿಗಳು :

ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮುಖ್ಯ. ಮೋಕ್ಷ ಸಾಧಿಸಲು ಶಾಂತಿ ಹಾಗೂ ಕರುಣೆಯ ಮಾರ್ಗದ ಮೂಲಕ ಸಾಗಿದರೆ ಉತ್ತಮ ಎಂದು ಲೋಕಕ್ಕೆ ಸಾರಿದ ಬುದ್ಧನ ಎಂಟು ಉತ್ತಮ ಮೌಲ್ಯಗಳು ಈ ಕೆಳಗಿವೆ.

1. ಸರಿಯಾದ ತಿಳುವಳಿಕೆ

2. ಸರಿಯಾದ ಚಿಂತನೆ

3. ಸರಿಯಾದ ಕ್ರಿಯೆ

4. ಸರಿಯಾದ ಮಾತು

5. ಸರಿಯಾದ ಮನಸ್ಸು

6. ಸರಿಯಾದ ಜೀವನೋಪಾಯ,

7. ಸರಿಯಾದ ಪ್ರಯತ್ನ

8. ಬಲ ಏಕಾಗ್ರತೆ

English summary

Buddha Purnima 2021: Date, Time & Significance in Kannada

Here we talking about Buddha Purnima 2021: Date, time & significance, read on
X
Desktop Bottom Promotion