For Quick Alerts
ALLOW NOTIFICATIONS  
For Daily Alerts

Basava Jayanti 2021: ದಿನಾಂಕ, ಹಿನ್ನಲೆ ಹಾಗೂ ಪ್ರಾಮುಖ್ಯತೆಯ ಕುರಿತ ಸಮಗ್ರ ಮಾಹಿತಿ

|

ಕಾಯಕವೇ ಕೈಲಾಸ ಎಂದ ಮಹಾನ್ ಪುರುಷ ಬಸವಣ್ಣ ಹುಟ್ಟಿದ ದಿನವನ್ನ ಬಸವ ಜಯಂತಿ ಎಂದು ನಾಡಿನಾದ್ಯಂತ ಆಚರಣೆ ಮಾಡಲಾಗುತ್ತದೆ. 12 ನೇ ಶತಮಾನದ ಸಮಾಜ ಸುಧಾರಕರಾದ ಇವರ ಜಯಂತಿಯನ್ನು ಹೆಚ್ಚಾಗಿ ಲಿಂಗಾಯುತರು ಆಚರಿಸುತ್ತಾರೆ.

ಭಕ್ತಿ ಭಂಡಾರಿ ಬಸವಣ್ಣನನ್ನು ಕವಿ, ದಾರ್ಶನಿಕ ಹಾಗೂ ಲಿಂಗಾಯುತವಾದದ ಸ್ಥಾಪಕ ಸಂತರೆಂದು ನಂಬಲಾಗಿದೆ. ಅನುಭವ ಮಂಟಪವನ್ನು ಕಟ್ಟಿದ ಬಸವಣ್ಣನ ಈ ವರ್ಷದ ಜಯಂತಿ ಯಾವಾಗ ಆಚರಣೆ ಮಾಡಲಾಗುತ್ತದೆ? ಅದರ ಹಿಂದಿರುವ ಇತಿಹಾಸವೇನು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

2021ರ ಬಸವ ಜಯಂತಿಯ ದಿನಾಂಕ:

2021ರ ಬಸವ ಜಯಂತಿಯ ದಿನಾಂಕ:

ಅಂತರಂಗ ಶುದ್ಧಿ -ಬಹಿರಂಗ ಶುದ್ದೀ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸಿದ ಬಸವಣ್ಣ 12ನೇ ಶತಮಾನದಲ್ಲಿ ಜನಿಸಿದರು. ಹಿಂದೂ ಕ್ಯಾಲೆಂಡರ್ ಪ್ರಕಾರ, ಸಾಮಾನ್ಯವಾಗಿ ಬಸವಣ್ಣನ ಜನ್ಮದಿನವು ವೈಶಾಖ ತಿಂಗಳ 3 ನೇ ದಿನದಂದು ಬರುತ್ತದೆ. ಈ ವರ್ಷ ಇದು 14 ಮೇ 2021 ರಂದು ಬಂದಿದ್ದು, ಇದೇ ದಿನ ಅಕ್ಷಯ ತೃತೀಯವೂ ಇದೆ. ಆದ್ದರಿಂದ ಈ ದಿನವನ್ನು ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು ಸೇರಿದಂತೆ ಇತರ ಪ್ರದೇಶಗಳಲ್ಲಿ ಆಚರಣೆ ಮಾಡುತ್ತಾರೆ.

ಬಸವ ಜಯಂತಿಯ ಹಿನ್ನೆಲೆ:

ಬಸವ ಜಯಂತಿಯ ಹಿನ್ನೆಲೆ:

ಬಸವಣ್ಣ ಒಬ್ಬ ಮಹಾನ್ ಕವಿ, ಸಾಮಾಜಿಕ ಸುಧಾರಕ ಮತ್ತು ದಾರ್ಶನಿಕ. ಕಾವ್ಯದ ಮೂಲಕ ಅವರು ಸಾಮಾಜಿಕ ಜಾಗೃತಿಯನ್ನು ಹರಡಲು ಪ್ರಾರಂಭಿಸಿದರು. ಲಿಂಗ ಅಥವಾ ಜಾತಿ ಪದ್ಧತಿಯನ್ನು ತಿರಸ್ಕರಿಸಿದರು. ಇದರ ಜೊತೆಗೆ ಇಷ್ಟಲಿಂಗ ಹಾರವನ್ನು ಪರಿಚಯಿಸಿದರು. ಬಿಜ್ಜಾಲ್ ಸಾಮ್ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಸವಣ್ಣ ಅನುಭವ ಮಂಟಪವನ್ನು ಪ್ರಾರಂಭಿಸಿದರು. ಇದು ಮುಂದೆ ಎಲ್ಲಾ ವರ್ಗದ ಜನರಿಗೆ ಜೀವನದ ಆಧ್ಯಾತ್ಮಿಕ ಸಮಸ್ಯೆಗಳನ್ನು ಬಹಿರಂಗವಾಗಿ ಚರ್ಚಿಸುವ ಸಾಮಾನ್ಯ ಕೇಂದ್ರವಾಯಿತು. ಬಸವಣ್ಣನ ಕೃತಿಗಳು ವಚನ ಸಾಹಿತ್ಯವನ್ನು ಒಳಗೊಂಡಿವೆ. ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ ಈ ಬಸವಣ್ಣ ಹುಟ್ಟಿದ ದಿನವನ್ನು ಪ್ರತಿವರ್ಷ ಆಚರಣೆ ಮಾಡಲಾಗುತ್ತದೆ.

ಬಸವ ಜಯಂತಿಯ ಆಚರಣೆಗಳು ಹೇಗೆ ನಡೆಯುತ್ತವೆ?:

ಬಸವ ಜಯಂತಿಯ ಆಚರಣೆಗಳು ಹೇಗೆ ನಡೆಯುತ್ತವೆ?:

ಇದನ್ನು ಕರ್ನಾಟಕದಲ್ಲಿ ರಾಜ್ಯ ರಜಾದಿನವೆಂದು ಘೋಷಿಸಲಾಗಿದೆ. ಏಕೆಂದರೆ ಕರ್ನಾಟಕದಲ್ಲಿ ಬಸವಣ್ಣನ ಅನುಯಾಯಿಗಳು ಅಪಾರ ಸಂಖ್ಯೆಯಲ್ಲಿದ್ದಾರೆ. ಈ ದಿನ ಜನರು ಪ್ರಾರ್ಥನೆ ಸಲ್ಲಿಸಲು ಬಸವೇಶ್ವರ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಇದು ರೈತರಿಗೆ ಒಂದು ಪ್ರಮುಖ ದಿನವಾಗಿದೆ. ಲಿಂಗಾಯತ ಸಮಿತಿಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಜನರು ಬಸವ ಜಯಂತಿಯಂದು ಸಿಹಿತಿಂಡಿ ಮತ್ತು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.

ಬಸವಣ್ಣನ ಬೋಧನೆಗಳನ್ನು ನೆನಪಿಟ್ಟುಕೊಳ್ಳಲು ಉಪನ್ಯಾಸಗಳು ನಡೆಯುತ್ತವೆ. ಅನೇಕ ಜನರು 6-7 ದಿನಗಳ ಕಾಲ ಬಸವ ಜಯಂತಿಯನ್ನು ಆಚರಿಸುವ ಮತ್ತು ಹಲವಾರು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಕೂಡಲಸಂಗಮಕ್ಕೆ ಭೇಟಿ ನೀಡಲು ಬಯಸುತ್ತಾರೆ. ಆದರೆ ಈ ವರ್ಷ ಕೊರೋನಾ ಕರಿನೆರಳು ಎಲ್ಲ ಹಬ್ಬಗಳ ಮೇಲೂ ಬಿದ್ದಿದ್ದು, ಮನೆಯಲ್ಲಿಯೇ ಸಾಂಪ್ರದಾಯಿಕವಾಗಿ ಆಚರಣೆ ಮಾಡುವಂತಾಗಿದೆ.

English summary

Basava Jayanti 2021 Date, Story and Significance

Here we talking about Basava Jayanti 2021 date, story and significance, read on
X
Desktop Bottom Promotion