For Quick Alerts
ALLOW NOTIFICATIONS  
For Daily Alerts

ಪಿತೃಕರ್ಮಕ್ಕೆ ಪ್ರಸಿದ್ಧಿಯಾಗಿರುವ ಆಷಾಢ ಅಮಾವಾಸ್ಯೆ, ಈ ವರ್ಷ ಯಾವಾಗ ಬರಲಿದೆ ಗೊತ್ತಾ?

|

ಜುಲೈ ತಿಂಗಳೆಂದರೆ ಅದು ಆಷಾಢ ತಿಂಗಳು. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳು ನಿಷಿದ್ಧ. ಧಾರ್ಮಿಕ ದೃಷ್ಟಿಕೋನದಿಂದ ಆಷಾಢ ತಿಂಗಳಲ್ಲಿ ಬರುವ ಅಮಾವಾಸ್ಯೆಯು ಬಹಳ ಮಹತ್ವದ್ದಾಗಿದೆ. ಈ ವರ್ಷ ಆಷಾಢ ಅಮಾವಾಸ್ಯೆ ಜುಲೈ 9 ಶುಕ್ರವಾರ ಬರುತ್ತಿದೆ. ಪಿತೃ ದೋಷ ನಿವಾರಣೆಗಾಗಿ ಹೆಸರುವಾಸಿಯಾಗಿರುವ ಈ ಅಮಾವಾಸ್ಯೆಯ ಮುಹೂರ್ತ, ಪೂಜಾವಿಧಾನ ಹಾಗೂ ಮಹತ್ವವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಆಷಾಢ ಅಮಾವಾಸ್ಯೆಯ ದಿನಾಂಕ, ಮುಹೂರ್ತ, ಪೂಜಾವಿಧಾನ ಹಾಗೂ ಮಹತ್ವವನ್ನು ಈ ಕೆಳಗೆ ನೀಡಲಾಗಿದೆ:

ಆಷಾಢ ಅಮಾವಾಸ್ಯೆಯ ದಿನಾಂಕ, ಮುಹೂರ್ತ, ಪೂಜಾವಿಧಾನ ಹಾಗೂ ಮಹತ್ವವನ್ನು ಈ ಕೆಳಗೆ ನೀಡಲಾಗಿದೆ:

ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರತಿ ತಿಂಗಳ ಕೃಷ್ಣ ಪಕ್ಷದ ಕೊನೆಯ ದಿನಾಂಕವನ್ನು ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಆಷಾಧ ಮಾಸದ ಅಮಾವಾಸ್ಯೆಯನ್ನು ಹಲಹರಿ ಅಮಾವಾಸ್ಯ ಕರಾವಳಿ ಪ್ರದೇಶಗಳಲ್ಲಿ ಆಟಿ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಈ ದಿನದಂದು ನೇಗಿಲು ಒಳಗೊಂಡಂತೆ ಇತರ ಕೃಷಿ ಉಪಕರಣಗಳನ್ನು ಪೂಜಿಸಲಾಗುತ್ತದೆ. ನೇಗಿಲನ್ನು ಪೂಜಿಸುವ ಮೂಲಕ ಸಮೃದ್ಧ ಬೆಳೆ ಸಿಗಲೆಂದು ರೈತರು ದೇವರಲ್ಲಿ ಪ್ರಾರ್ಥಿಸುತ್ತಾರೆ. ಇದರೊಂದಿಗೆ ಅಮಾವಾಸ್ಯೆಯ ದಿನವು ಪೂರ್ವಜರಿಗೆ ಶ್ರಾದ್ಧ ಮಾಡಲು ಬಹಳ ಶುಭ ದಿನವಾಗಿದೆ.

ಆಷಾಢ ಅಮಾವಾಸ್ಯೆ ಮುಹೂರ್ತ:

ಆಷಾಢ ಅಮಾವಾಸ್ಯೆ ಮುಹೂರ್ತ:

ಅಮಾವಾಸ್ಯೆ ತಿಥಿ ಜುಲೈ 9 ರಂದು ಬೆಳಿಗ್ಗೆ 05:16 ರಿಂದ ಪ್ರಾರಂಭವಾಗಲಿದ್ದು, ಜುಲೈ 10 ರಂದು ಬೆಳಿಗ್ಗೆ 06:46 ಕ್ಕೆ ಕೊನೆಗೊಳ್ಳಲಿದೆ.

ಅಮಾವಾಸ್ಯೆ ಪೂಜಾ ವಿಧಾನ:

ಅಮಾವಾಸ್ಯೆ ಪೂಜಾ ವಿಧಾನ:

ಅಮಾವಾಸ್ಯೆಯ ದಿನದಂದು ಮುಂಜಾನೆ ಬೇಗ ಎದ್ದೇಳಿ.

ಈ ದಿನ, ಬ್ರಾಹ್ಮಿ ಮುಹೂರ್ತ ಸಮಯದಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡಿ.

ಸೂರ್ಯೋದಯವಾಗುವಾಗ ಸೂರ್ಯದೇವನಿಗೆ ನೀರನ್ನು ಅರ್ಪಿಸಿ.

ಈ ದಿನ ನಿಮ್ಮ ಪೂರ್ವಜರ ಆತ್ಮ ಶಾಂತಿಗಾಗಿ ಪೂಜೆಗಳನ್ನು ಮಾಡಿ.

ಪೂರ್ವಜರ ಆತ್ಮಗಳ ಶಾಂತಿಗಾಗಿ ಉಪವಾಸವಿರಿ.

ಅಗತ್ಯವಿರುವವರಿಗೆ ದಾನ ಮಾಡಿ.

ಬ್ರಾಹ್ಮಣರಿಗೆ ಆಹಾರವನ್ನು ನೀಡಿ.

ಆಷಾಢ ಅಮಾವಾಸ್ಯೆಯ ಮಹತ್ವ:

ಆಷಾಢ ಅಮಾವಾಸ್ಯೆಯ ಮಹತ್ವ:

ಧರ್ಮಗ್ರಂಥಗಳಲ್ಲಿ ಈ ದಿನ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಈ ದಿನ ಅನೇಕ ಶುಭ ಆಚರಣೆಗಳನ್ನು ನಡೆಸಲಾಗುತ್ತದೆ. ಅನೇಕರು ತಮ್ಮ ಪೂರ್ವಜರನ್ನು ಮೆಚ್ಚಿಸಲು ಅಮಾವಾಸ್ಯೆ ತಿಥಿಯಲ್ಲಿ ಶ್ರಾದ್ಧವನ್ನು ಮಾಡುತ್ತಾರೆ. ಈ ದಿನ, ಪಿತ್ರ ತರ್ಪಣ, ನದಿ ಸ್ನಾನ ಮತ್ತು ದಾನ ಇತ್ಯಾದಿಗಳನ್ನು ಮಾಡುವುದು ಹೆಚ್ಚು ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಇದು ಮಾತ್ರವಲ್ಲ, ಈ ದಿನಾಂಕವನ್ನು ಪಿತೃ ದೋಷ ತೊಡೆದುಹಾಕಲು ಸಹಾಯಕವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಈ ದಿನಾಂಕವನ್ನು ಪಿತೃ ಕರ್ಮಕ್ಕೆ ಬಹಳ ಶುಭವೆಂದು ಪರಿಗಣಿಸಲಾಗಿದೆ.

English summary

Ashada Amavasya 2021 Date, Muhurat Timing, Rituals And Significance in Kannada

Here we talking about Ashada Amavasya 2021 Date, Muhurat Timing, Rituals And Significance, read on
X
Desktop Bottom Promotion