For Quick Alerts
ALLOW NOTIFICATIONS  
For Daily Alerts

ಎಪಿಜೆ ಅಬ್ದುಲ್ ಕಲಾಂ ಪುಣ್ಯಸ್ಮರಣೆ: ಅವರ ಜೀವನದ ಆಸಕ್ತಿಕರ ಸಂಗತಿಗಳು, ಕೋಟ್ಸ್‌

|

ಇಂದು ನಮ್ಮ ದೇಶದ ಮಹಾನ್ ಸಾಧಕ ಅಬ್ದುಲ್‌ ಕಲಾಂ ಅವರ 7ನೇ ವರ್ಷದ ಪುಣ್ಯಸ್ಮರಣೆ. ಇದರ ಸ್ಮರಣಾರ್ಥ ಈ ವಿಶೇಷ ದಿನದಂದು ಭಾರತದ ಮಾಜಿ ರಾಷ್ಟ್ರಪತಿಯ ಬಗ್ಗೆ ಕೆಲವು ಸಂಗತಿಗಳು ಮತ್ತು ಉಲ್ಲೇಖಗಳನ್ನು ಹಂಚಿಕೊಳ್ಳಲ್ಲಿದ್ದೇವೆ.

ಎಪಿಜೆ ಅಬ್ದುಲ್ ಕಲಾಂ ಎಂದೇ ಜನಜನಿತರಾದ ವಿದ್ಯಾರ್ಥಿಗಳು ಹಾಗೂ ಯುವಜನತೆಯ ನೆಚ್ಚಿನ ಮಾರ್ಗದರ್ಶಕ, ಪ್ರೇರಕ ಅವುಲ್ ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ ಅವರು 1931ರ ಅಕ್ಟೋಬರ್ 15ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದರು. ತಮಿಳು ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಕಲಾಂ ಅವರ ತಂದೆ ದೋಣಿ ಮಾಲೀಕರಾಗಿದ್ದರು ಮತ್ತು ತಾಯಿ ಗೃಹಿಣಿಯಾಗಿದ್ದರು. ನಾಲ್ವರು ಸಹೋದರರು ಮತ್ತು ಓರ್ವ ಸಹೋದರಿಯರಲ್ಲಿ ಕಲಾಂ ಅತೀ ಕಿರಿಯರು. 2015ರ ಜುಲೈ 27ರಂದು ಅಬ್ದುಲ್‌ ಕಲಾಂ ಅವರು ದೈವಾದೀನರಾದರು.

apj abdul kalam

ಬಾಲ್ಯದಲ್ಲೇ ಬಹಳ ಚುರುಕು ಮತ್ತು ಪರಿಶ್ರಮಿ ವಿದ್ಯಾರ್ಥಿಯಾಗಿದ್ದ ಕಲಾಂ ಅವರಿಗೆ ಕಲಿಯಬೇಕೆಂಬ ಮಹತ್ತರ ಆಸೆ ಹೊಂದಿದ್ದರು. ನಂತರ ಇವರು ಜೀವನದಲ್ಲಿ ಮಾಡಿದ ಎಲ್ಲವೂ ಇತಿಹಾಸ.

ಎಪಿಜೆ ಅಬ್ದುಲ್ ಕಲಾಂ ಕುರಿತ ಸತ್ಯ ಸಂಗತಿಗಳು

ಎಪಿಜೆ ಅಬ್ದುಲ್ ಕಲಾಂ ಕುರಿತ ಸತ್ಯ ಸಂಗತಿಗಳು

1. 5ನೇ ವಯಸ್ಸಿನಲ್ಲಿಯೇ ತಮ್ಮ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡಲು ಶಾಲೆಯ ನಂತರ ಪತ್ರಿಕೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು.

2. ರಾಮನಾಥಪುರಂನ ಶ್ವಾರ್ಟ್ಜ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಣ ಮಾಡಿದ ಕಲಾಂ ಅವರಿಗೆ ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದ ಮೇಲೆ ಅಪಾರ ಆಸಕ್ತಿ ಇತ್ತು.

3. 1954ರಲ್ಲಿ ತ್ರಿಚುರಪಲ್ಲಿಯ ಸೇಂಟ್ ಜೋಸೆಫ್ ಕಾಲೇಜಿನಿಂದ ಪದವಿ ಪೂರ್ಣಗೊಳಿಸಿದರು ಮತ್ತು 1955ರಲ್ಲಿ ಅವರು ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ದಾಖಲಾದರು.

ಎಪಿಜೆ ಅಬ್ದುಲ್ ಕಲಾಂ ಕುರಿತ ಸತ್ಯ ಸಂಗತಿಗಳು

ಎಪಿಜೆ ಅಬ್ದುಲ್ ಕಲಾಂ ಕುರಿತ ಸತ್ಯ ಸಂಗತಿಗಳು

4. ಕಲಾಂ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಪಡೆದು ನಂತರ 1960ರಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಏರೋನಾಟಿಕಲ್ ಡೆವಲಪ್ ಮೆಂಟ್ ಎಸ್ಟಾಬ್ಲಿಷಮೆಂಟ್ ಗೆ ವಿಜ್ಞಾನಿಯಾಗಿ ಸೇರ್ಪಡೆಯಾದರು.

5. 1969ರಲ್ಲಿ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ) ವರ್ಗಾಯಿಸಲಾಯಿತು, ನಂತರ ಅವರು ಭಾರತದ ಮೊದಲ ಉಪಗ್ರಹ ಉಡಾವಣಾ ಯೋಜನೆಯ ನಿರ್ದೇಶಕರಾಗಿದ್ದರು.

6. 1970-1990ರ ಅವಧಿಯಲ್ಲಿ ಅಬ್ದುಲ್ ಕಲಾಂ ಅವರು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್ ‌ಎಲ್‌ವಿ)ಮತ್ತು ಎಸ್‌ಎಲ್‌ವಿ -3 ಯೋಜನೆಗಳನ್ನು ಅಭಿವೃದ್ಧಿಪಡಿಸಿದರು, ಅದು ಯಶಸ್ವಿಯಾಯಿತು.

ಎಪಿಜೆ ಅಬ್ದುಲ್ ಕಲಾಂ ಕುರಿತ ಸತ್ಯ ಸಂಗತಿಗಳು

ಎಪಿಜೆ ಅಬ್ದುಲ್ ಕಲಾಂ ಕುರಿತ ಸತ್ಯ ಸಂಗತಿಗಳು

7. ಜುಲೈ 1991ರಿಂದ ಡಿಸೆಂಬರ್ 1999ರವರೆಗೆ ಎಪಿಜೆ ಅಬ್ದುಲ್ ಕಲಾಂ ಅವರು ಪ್ರಧಾನ ಮಂತ್ರಿಯ ಮುಖ್ಯ ವೈಜ್ಞಾನಿಕ ಸಲಹೆಗಾರರಾಗಿ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.

8. ಕಲಾಂ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಭಾರತ ರತ್ನ (1997), ಪದ್ಮಭೂಷಣ್ (1981) ಮತ್ತು ಪದ್ಮವಿಭೂಷಣ್ (1990) ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

9. 2002ರಿಂದ 2007ರವರೆಗೆ ಅವರು ಭಾರತದ 11ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು.

ಎಪಿಜೆ ಅಬ್ದುಲ್ ಕಲಾಂ ಕುರಿತ ಸತ್ಯ ಸಂಗತಿಗಳು

ಎಪಿಜೆ ಅಬ್ದುಲ್ ಕಲಾಂ ಕುರಿತ ಸತ್ಯ ಸಂಗತಿಗಳು

10. 40 ವಿಶ್ವವಿದ್ಯಾಲಯಗಳಿಂದ 7 ಗೌರವ ಡಾಕ್ಟರೇಟ್ ಪಡೆದ ಹೆಮ್ಮೆ ಕಲಾಂ ಅವರದ್ದು.

11. ಕಲಾಂ ಅವರ ಜೀವನವನ್ನು ಆಧರಿಸಿ 2011ರಲ್ಲಿ 'ಐ ಆಮ್ ಕಲಾಂ' ಎಂಬ ಬಾಲಿವುಡ್ ಚಲನಚಿತ್ರವನ್ನು ನಿರ್ಮಿಸಲಾಯಿತು.

12. ಮೇ 2012 ರಲ್ಲಿ, ಕಲಾಂ ಅವರು ಭ್ರಷ್ಟಾಚಾರವನ್ನು ತೊಲಗಿಸಲು ನಾನು ಏನನ್ನು ಕೊಡಬಹುದು ಚಳುವಳಿಯನ್ನು ಪ್ರಾರಂಭಿಸಿದರು.

ಎಪಿಜೆ ಅಬ್ದುಲ್ ಕಲಾಂ ಕುರಿತ ಸತ್ಯ ಸಂಗತಿಗಳು

ಎಪಿಜೆ ಅಬ್ದುಲ್ ಕಲಾಂ ಕುರಿತ ಸತ್ಯ ಸಂಗತಿಗಳು

13. ಸಂಗೀತ ವಾದ್ಯಗಳಲ್ಲಿ ವೀಣೆಯನ್ನು ನುಡಿಸಲು ಕಲಾಂಗೆ ತುಂಬಾ ಇಷ್ಟವಿತ್ತು.

14. ರಾಷ್ಟ್ರಪತಿ ಹುದ್ದೆಯನ್ನು ತೊರೆದ ನಂತರ ಕಲಾಂ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಶಿಲ್ಲಾಂಗ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಹಮದಾಬಾದ್ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಇಂದೋರ್ ನಲ್ಲಿ ಪ್ರಾಧ್ಯಾಪಕರಾಗಿ ತಮ್ಮ ಸೇವೆ ಮುಂದುವರೆಸಿದರು.

15. ಅಬ್ದುಲ್ ಕಲಾಂ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಗೌರವ ಪ್ರಾಧ್ಯಾಪಕರಾಗಿ, ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ತಿರುವನಂತಪುರದ ಕುಲಪತಿಯಾಗಿ ಮತ್ತು ಅಣ್ಣಾ ವಿಶ್ವವಿದ್ಯಾಲಯದ ಏರೋಸ್ಪೇಸ್ ಎಂಜಿನಿಯರಿಂಗ್ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

16. 2015ರ ಜುಲೈ 27ರಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಶಿಲ್ಲಾಂಗ್ ನಲ್ಲಿ ವಿದ್ಯಾರ್ಥಿಗಳ ಎದುರು ಉಪನ್ಯಾಸ ನೀಡುವ ಸಮಯದಲ್ಲೇ ಕಲಾಂ ಅವರು ಹೃದಯ ಸ್ತಂಭನದಿಂದ ಕುಸಿದು ನಿಧನರಾದರು.

ಅಬ್ದುಲ್ ಕಲಾಂ ಅವರ ಪ್ರಮುಖ ಪ್ರೇರಣಾತ್ಮಕ ಹೇಳಿಕೆಗಳು

ಅಬ್ದುಲ್ ಕಲಾಂ ಅವರ ಪ್ರಮುಖ ಪ್ರೇರಣಾತ್ಮಕ ಹೇಳಿಕೆಗಳು

ಕಲಾಂ ಅವರು ಸಾಕಷ್ಟು ಬಡತನದಿಂದ, ಸ್ವಂತ ಪರಿಶ್ರಮದಿಂದ ಸಾಧನೆಗೈದವರು. ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದವರು. ಆದ್ದರಿಂದ ಇವರಿಗೆ ಬಡತನದ ನೋವು ಗೊತ್ತು, ಸಿರಿತನದ ಐಭೋಗವೂ ಗೊತ್ತಿದೆ. ತಾನು ಎಷ್ಟೇ ಉನ್ನತ ಹುದ್ದೆ ಏರಿದರು ಇವರಿಗೆ ವಿದ್ಯಾರ್ಥಿಗಳ ಮೇಲಿದ್ದ ಪ್ರೀತಿ ಮಾತ್ರ ಎಂದಿಗೂ ಕುಂದಲಿಲ್ಲ. ಇದಕ್ಕೆ ಉತ್ತಮ ನಿದರ್ಶನ ಎಂದರೆ, ರಾಷ್ಟ್ರಪತಿ ಹುದ್ದೆಯ ನಂತರವೂ ಸಾಕಷ್ಟು ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿರುವುದು.

ಕಲಾಂ ಎಂದಿಗೂ ತಮ್ಮ ಜೀವನದ ಅನುಭವಗಳನ್ನೇ ವಿದ್ಯಾರ್ಥಿಗಳಿಗೆ ಬುದ್ದಿಪಾಠವಾಗಿ ಹೇಳುತ್ತಿದ್ದರು. ಇವರ ಸಾಕಷ್ಟು ಹೇಳಿಕೆಗಳಿಂದ ಪ್ರೇರಣೆ ಪಡೆದ ಅನೇಕರು ಇಂದು ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕಲಾಂ ಹೇಳಿಕೆಗಳು ಇಂದಿಗೂ ಸಾಕಷ್ಟು ಜನರಿಗೆ ಸ್ಪೂರ್ತಿದಾಯಕ. ಅವರ ಕೆಲವು ಪ್ರಮುಖ ಹೇಳಿಕೆಗಳನ್ನು ಮುಂದೆ ನೀಡಿದ್ದೇವೆ.

ಅಬ್ದುಲ್ ಕಲಾಂ ಅವರ ಪ್ರಮುಖ ಪ್ರೇರಣಾತ್ಮಕ ಹೇಳಿಕೆಗಳು

ಅಬ್ದುಲ್ ಕಲಾಂ ಅವರ ಪ್ರಮುಖ ಪ್ರೇರಣಾತ್ಮಕ ಹೇಳಿಕೆಗಳು

* ನನ್ನ ಜೀವನ ನಾನು ವಿದ್ಯಾರ್ಥಿಗಳ ಜೊತೆಗೆ ಇರುವಾಗಲೇ ಕೊನೆಯಾಗಬೇಕು.

* ಬದುಕಿನ ಯಶಸ್ಸು ಮತ್ತು ಸಂತೋಷದ ಅರಿವಾಗುವುದು ಕಷ್ಟಗಳನ್ನು ಅನುಭವಿಸಿದ ಮನುಷ್ಯನಿಗೆ ಮಾತ್ರ.

ಅಬ್ದುಲ್ ಕಲಾಂ ಅವರ ಪ್ರಮುಖ ಪ್ರೇರಣಾತ್ಮಕ ಹೇಳಿಕೆಗಳು

ಅಬ್ದುಲ್ ಕಲಾಂ ಅವರ ಪ್ರಮುಖ ಪ್ರೇರಣಾತ್ಮಕ ಹೇಳಿಕೆಗಳು

* ಈ ಜಗತ್ತು ನಾವು ಹೇಳುವ ಸತ್ಯಕ್ಕಿಂತ ಮಿಗಿಲಾಗಿ ನಮ್ಮ ಕುರಿತು ಇತರರು ಹೇಳುವ ಸುಳ್ಳನ್ನು ನಂಬುತ್ತದೆ.

* ಯಶಸ್ವಿಯಾಗುವ ನನ್ನ ನಿರ್ಣಯವು ಸಾಕಷ್ಟು ಬಲವಾಗಿದ್ದರೆ ವಿಫಲತೆಯು ನನ್ನನ್ನು ಏನು ಮಾಡಲಾಗದು.

ಅಬ್ದುಲ್ ಕಲಾಂ ಅವರ ಪ್ರಮುಖ ಪ್ರೇರಣಾತ್ಮಕ ಹೇಳಿಕೆಗಳು

ಅಬ್ದುಲ್ ಕಲಾಂ ಅವರ ಪ್ರಮುಖ ಪ್ರೇರಣಾತ್ಮಕ ಹೇಳಿಕೆಗಳು

* ಒಂದು ಪುಸ್ತಕ ನೂರು ಉತ್ತಮ ಸ್ನೇಹಿತರಿಗೆ ಸಮ, ಆದರೆ ಒಬ್ಬ ಒಳ್ಳೆಯ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮ.

* ಅತಿಯಾದ ಸಂತೋಷವಾದಾಗ ಅಥವಾ ಅತೀವ ದುಃಖವಾದಾಗ ಮಾತ್ರ ಕವನ ಕುಡಿಯೊಡೆಯುತ್ತದೆ.

ಅಬ್ದುಲ್ ಕಲಾಂ ಅವರ ಪ್ರಮುಖ ಪ್ರೇರಣಾತ್ಮಕ ಹೇಳಿಕೆಗಳು

ಅಬ್ದುಲ್ ಕಲಾಂ ಅವರ ಪ್ರಮುಖ ಪ್ರೇರಣಾತ್ಮಕ ಹೇಳಿಕೆಗಳು

* ಸೋಲೆಂಬ ರೋಗಕ್ಕೆ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸವೇ ಮದ್ದು. ಇದು ಯಾರಲ್ಲಿ ಇರುತ್ತದೆಯೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ.

* ಈ ಸಮಾಜವೇ ಒಂದು ವಿಚಿತ್ರ. ಮಾತನಾಡಿದರೆ ಮಾತಿನಲ್ಲಿರುವ ತಪ್ಪನ್ನು ಹುಡುಕುತ್ತಾರೆ, ಮೌನಿಯಾದರೆ ನಮ್ಮನ್ನೇ ತಪ್ಪಾಗಿ ಚಿತ್ರಿಸುತ್ತಾರೆ.

ಅಬ್ದುಲ್ ಕಲಾಂ ಅವರ ಪ್ರಮುಖ ಪ್ರೇರಣಾತ್ಮಕ ಹೇಳಿಕೆಗಳು

ಅಬ್ದುಲ್ ಕಲಾಂ ಅವರ ಪ್ರಮುಖ ಪ್ರೇರಣಾತ್ಮಕ ಹೇಳಿಕೆಗಳು

* ಒಬ್ಬ ಒಳ್ಳೆಯ ವ್ಯಕ್ತಿಗೆ ಮೋಸ ಮಾಡುವುದು ಎಂದರೆ ಕೈಯಲ್ಲಿರುವ ವಜ್ರವನ್ನು ಎಸೆದು ಕಲ್ಲನ್ನು ಎತ್ತಿಕೊಂಡಂತೆ.

* ಅದೃಷ್ಟದ ಮೇಲೆ ಎಂದಿಗೂ ನಂಬಿಕೆ ಇಡಬೇಡಿ. ನಿಮ್ಮ ಕಠಿಣ ಶ್ರಮದ ಮೇಲೆ ನಂಬಿಕೆ ಇಡಿ, ಯಶಸ್ಸು ನಿಮ್ಮದಾಗುತ್ತದೆ.

ಅಬ್ದುಲ್ ಕಲಾಂ ಅವರ ಪ್ರಮುಖ ಪ್ರೇರಣಾತ್ಮಕ ಹೇಳಿಕೆಗಳು

ಅಬ್ದುಲ್ ಕಲಾಂ ಅವರ ಪ್ರಮುಖ ಪ್ರೇರಣಾತ್ಮಕ ಹೇಳಿಕೆಗಳು

* ಶ್ರೇಷ್ಠ ವ್ಯಕ್ತಿಗಳಿಗೆ ಧರ್ಮವು ಸ್ನೇಹಿತರನ್ನು ಸಂಪಾದಿಸುವ ಮಾರ್ಗವಾಗಿದೆ. ಆದರೆ ಚಿಲ್ಲರೆ ವ್ಯಕ್ತಿಗಳಿಗೆ ಧರ್ಮವು ಕಲಹವನ್ನು ಸೃಷ್ಟಿಸುವ ಅಸ್ತ್ರವಾಗಿದೆ.

* ಕೇವಲ ಯಶಸ್ಸಿನ ಕತೆಗಳನ್ನೇ ಹೆಚ್ಚು ಓದಬೇಡಿ. ಏಕೆಂದರೆ ಯಶಸ್ಸಿನ ಕತೆಗಳಲ್ಲಿ ನಿಮಗೆ ಸಂದೇಶಗಳಷ್ಟೇ ಸಿಗುತ್ತದೆ. ಸೋಲಿನ ಕತೆಗಳನ್ನು ಓದಿ, ನೀವು ಯಶಸ್ವಿಯಾಗಲು ಉತ್ತಮ ಚಿಂತನೆಗಳು ಕುಡಿಯೊಡೆಯುತ್ತದೆ.

ಅಬ್ದುಲ್ ಕಲಾಂ ಅವರ ಪ್ರಮುಖ ಪ್ರೇರಣಾತ್ಮಕ ಹೇಳಿಕೆಗಳು

ಅಬ್ದುಲ್ ಕಲಾಂ ಅವರ ಪ್ರಮುಖ ಪ್ರೇರಣಾತ್ಮಕ ಹೇಳಿಕೆಗಳು

* ನೀವು ನಿದ್ದೆ ಮಾಡುವಾಗ ಕಾಣುವ ಕನಸು ನಿಜವಾದ ಕನಸಲ್ಲ. ಯಾವ ಕನಸು ನಿಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲವೋ ಅದೇ ನಿಜವಾದ ಕನಸು.

* ಕಪ್ಪು ಬಣ್ಣ ಭಾವನಾತ್ಮಕವಾಗಿ ಕೆಟ್ಟದು. ಆದರೆ ಪ್ರತಿಯೊಂದು ಕಪ್ಪುಹಲಗೆಯು ವಿದ್ಯಾರ್ಥಿಯ ಜೀವನವನ್ನು ಪ್ರಕಾಶಮಾನವಾಗಿಸುತ್ತದೆ.

ಅಬ್ದುಲ್ ಕಲಾಂ ಅವರ ಪ್ರಮುಖ ಪ್ರೇರಣಾತ್ಮಕ ಹೇಳಿಕೆಗಳು

ಅಬ್ದುಲ್ ಕಲಾಂ ಅವರ ಪ್ರಮುಖ ಪ್ರೇರಣಾತ್ಮಕ ಹೇಳಿಕೆಗಳು

* ಇತರರಿಗಾಗಿ ನಿಮ್ಮ ಸ್ವಂತಿಕೆಯನ್ನು ಎಂದಿಗೂ ಬಿಟ್ಟುಕೊಡಬೇಡಿ. ಏಕೆಂದರೆ ಈ ಪ್ರಪಂಚದಲ್ಲಿ ನಿಮ್ಮ ಪಾತ್ರವನ್ನು ನಿಮಗಿಂತ ಚೆನ್ನಾಗಿ ಯಾರೂ ನಿಭಾಯಿಸಲು ಸಾಧ್ಯವಿಲ್ಲ.

* ಗೆದ್ದಾಗ ಅಹಂ ಪಟ್ಟವನು ಉಳಿಯಲಾರ, ಸೋತಾಗ ಕುಸಿದು ಹೋದವನು ಬೆಳೆಯಲಾರ. ಗೆಲುವಿನ ಸಂಭ್ರಮ ನೆತ್ತಿಗೆ ಏರದಿರಲಿ, ಸೋಲಿನ ನೋವು ಮನಸಿಗೆ ತಾಕದಿರಲಿ.

ಅಬ್ದುಲ್ ಕಲಾಂ ಅವರ ಪ್ರಮುಖ ಪ್ರೇರಣಾತ್ಮಕ ಹೇಳಿಕೆಗಳು

ಅಬ್ದುಲ್ ಕಲಾಂ ಅವರ ಪ್ರಮುಖ ಪ್ರೇರಣಾತ್ಮಕ ಹೇಳಿಕೆಗಳು

* ದೊಡ್ಡ ಗುರಿ, ಜ್ಞಾನ ಹೆಚ್ಚಿಸಿಕೊಳ್ಳುವುದು, ಕಠಿಣ ಪರಿಶ್ರಮ ಮತ್ತು ಧೃಢ ನಿಷ್ಠೆ ಇವುಗಳನ್ನು ನೀವು ನಿರಂತರವಾಗಿ ಪಾಲಿಸಿದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು.

* ನೊಣಗಳು ಸುಂದರವಾದ ದೇಹವನ್ನು ಬಿಟ್ಟು ಗಾಯದ ಮೇಲೆಯೇ ಕುಳಿತುಕೊಳ್ಳುವ ಹಾಗೆ, ಕೆಲವರು ನಮ್ಮಲ್ಲಿರುವ ಸದ್ಗುಣಗಳನ್ನು ತಳ್ಳಿಹಾಕಿ ಲೋಪದೋಷಗಳನ್ನು ಮಾತ್ರ ಹುಡುಕುತ್ತಾರೆ.

ಅಬ್ದುಲ್ ಕಲಾಂ ಅವರ ಪ್ರಮುಖ ಪ್ರೇರಣಾತ್ಮಕ ಹೇಳಿಕೆಗಳು

ಅಬ್ದುಲ್ ಕಲಾಂ ಅವರ ಪ್ರಮುಖ ಪ್ರೇರಣಾತ್ಮಕ ಹೇಳಿಕೆಗಳು

* ನಿಮ್ಮ ಮೊದಲ ವಿಜಯದ ನಂತರ ವಿಶ್ರಾಂತಿ ತೆಗೆದುಕೊಳ್ಳಬೇಡಿ. ಏಕೆಂದರೆ, ನೀವು ಎರಡನೇಯದರಲ್ಲಿ ವಿಫಲರಾದರೆ ನಿಮ್ಮ ಮೊದಲ ಗೆಲುವು ಕೇವಲ ಅದೃಷ್ಟ ಎಂದು ಹೇಳಲು ಹೆಚ್ಚು ತುಟಿಗಳು ಕಾಯುತ್ತಿರುತ್ತದೆ.

* ಒಂದು ದೇಶ ಭ್ರಷ್ಟಾಚಾರ ಮುಕ್ತವಾಗಬೇಕೆಂದರೆ ಹಾಗೂ ಅತ್ಯುತ್ತಮ ಮನಸ್ಸು, ಬುದ್ದಿ ಇರುವ ಜನರ ದೇಶವಾಗಬೇಕೆಂದರೆ, ಸಮಾಜದ ಮೂರು ಪ್ರಮುಖ ವ್ಯಕ್ತಿಗಳಿಂದ ಮಾತ್ರ ಸಾಧ್ಯ ಎಂಬುದು ನನ್ನ ದೃಢ ನಂಬಿಕೆ. ಅವರೆಂದರೆ, ತಂದೆ, ತಾಯಿ ಹಾಗೂ ಶಿಕ್ಷಕರು.

English summary

APJ Abdul Kalam Death Anniversary: Inspiring, Motivational Quotes and Interesting Facts

Avul Pakir Jainulabdeen Abdul Kalam, popularly known as APJ Abdul Kalam, was born on 15 October 1931 in Rameswaram, Tamil Nadu. He was born into a Tamil Muslim family, his father was a boat owner and his mother a housewife. Abdul Kalam was the youngest of four brothers and they had one sister. During his school years, he was a bright and hardworking student who had a strong desire to learn.
X
Desktop Bottom Promotion