For Quick Alerts
ALLOW NOTIFICATIONS  
For Daily Alerts

75ನೇ ಸ್ವಾತಂತ್ರ್ಯ ದಿನಾಚರಣೆ: ಕರ್ನಾಟಕದ 10 ಮಹಾನ್ ಸ್ವಾತಂತ್ರ್ಯ ಹೋರಾಟಗಾರರು

|

ಬ್ರಿಟಿಷರ ಕಪಿಮುಷ್ಠಿಯಿಂದ ಬಿಡಿಸಿಕೊಂಡು, ನಾಳೆಗೆ ಎಪ್ಪತ್ತೈದು ವರ್ಷ. ಹೌದು, ಭಾರತ ಸ್ವತಂತ್ರಗೊಂಡು 2021ರ ಆಗಸ್ಟ್ 15ಕ್ಕೆ ಎಪ್ಪತ್ತೈದು ವರ್ಷ ತುಂಬುತ್ತಿದೆ. ಇಡೀ ದೇಶ ಅಮೃತಮಹೋತ್ಸವದ ಸಂಭ್ರಮದಲ್ಲಿ ತೊಡಗಿದ್ದು, ಈ ನಗು, ಖುಷಿಯ ಹಿಂದೆ ಸಾವಿರಾರು ಸಾವು, ನೋವು, ತ್ಯಾಗ, ಬಲಿದಾನಗಳು ನಡೆದಿವೆ ಎಂಬುದನ್ನು ಪ್ರತಿಯೊಬ್ಬ ಭಾರತೀಯನು ಮರೆಯಬಾರದು.

ಈ ಹಿನ್ನಲೆಯಲ್ಲಿ, ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಕರ್ನಾಟಕದ ಕೆಚ್ಚೆದೆಯ ವೀರರನ್ನು ಪರಿಚಯಿಸಲು ಹೊರಟಿದ್ದೇವೆ. ಮಾಡಿದ್ದೇವೆ. ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ವೇಳೆ, ಅವರನ್ನು ನೆನೆದು, ಗೌರವ ಸಲ್ಲಿಸುವ ಕಿರು ಪ್ರಯತ್ನವಿದು.

ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಕರ್ನಾಟಕದವರು ಯಾರೆಲ್ಲಾ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಕಿತ್ತೂರು ರಾಣಿ ಚೆನ್ನಮ್ಮ:

ಕಿತ್ತೂರು ರಾಣಿ ಚೆನ್ನಮ್ಮ:

ಜನನ - 23 ಅಕ್ಟೋಬರ್ 1778, ಬೆಳಗಾವಿ

ಮರಣ - 2 ಫೆಬ್ರವರಿ 1829, ಬೈಲಹೊಂಗಲ

ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ಭಾರತದ ಸ್ವಾತಂತ್ರ್ಯಕ್ಕಾಗಿ ಮೊದಲ ಮಹಿಳಾ ಕಾರ್ಯಕರ್ತೆ. ಚೆನ್ನಮ್ಮರಿಂದ ಬ್ರಿಟಿಷರನ್ನು ಸೋಲಿಸಲು ಸಾಧ್ಯವಾಗಲಿಲ್ಲ ಆದರೆ, ಅವರು ಬ್ರಿಟಿಷ್ ಆಳ್ವಿಕೆಯ ವಿರುದ್ಧ ದೇಶದಲ್ಲಿ ಏಳುವಂತೆ ಅನೇಕ ಮಹಿಳೆಯರನ್ನು ಪ್ರೇರೇಪಿಸಿದರು. ಇವರು ಕರ್ನಾಟಕ ಕಿತ್ತೂರು ಸಂಸ್ಥಾನದ ರಾಣಿಯಾಗಿದ್ದರು.

ಸಂಗೊಳ್ಳಿ ರಾಯಣ್ಣ:

ಸಂಗೊಳ್ಳಿ ರಾಯಣ್ಣ:

ಜನನ - 15 ಆಗಸ್ಟ್ 1798, ಸಂಗೊಳ್ಳಿ

ಮರಣ - 26 ಜನವರಿ 1831, ಬೆಳಗಾವಿ

ಸಂಗೊಳ್ಳಿ ರಾಯಣ್ಣ ಕಿತ್ತೂರು ರಾಣಿ ಚೆನ್ನಮ್ಮನ ಆಸ್ಥಾನದಲ್ಲಿ, ಕಿತ್ತೂರು ಸಾಮ್ರಾಜ್ಯದ ಸೈನ್ಯವನ್ನು ಮುನ್ನಡೆಸುತ್ತಿದ್ದರು. ಇವರಿಬ್ಬರು 1824 ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡಿದರು. ರಾಣಿಯು ಸೆರೆಮನೆಯಲ್ಲಿದ್ದಾಗಲೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಯಣ್ಣನನ್ನು 1932 ರಲ್ಲಿ ಗಲ್ಲಿಗೇರಿಸಲಾಯಿತು. ಅವರ ಧೈರ್ಯ ಮತ್ತು ಸಾಮ್ರಾಜ್ಯದ ಬಗೆಗಿನ ನಿಷ್ಠೆಯನ್ನು ಇಂದಿಗೂ ನೆನಪಿಸಿಕೊಳ್ಳುವಂತದ್ದು.

ಉಮಾಬಾಯಿ ಕುಂದಾಪುರ:

ಉಮಾಬಾಯಿ ಕುಂದಾಪುರ:

ಜನನ - 1892 ಕರ್ನಾಟಕದ ಕುಂದಾಪುರ

ಮರಣ - 1992

ಉಮಾಬಾಯಿ ಕುಂದಾಪುರ ಜಿಲ್ಲೆಯ ಮಹಿಳೆಯಾಗಿದ್ದು, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸ್ವಯಂಸೇವಕರ ದೊಡ್ಡ ಸಂಘಟನೆಯನ್ನು ಸಂಘಟಿಸಿದರು. ತಮ್ಮ ಮನೆಯಿಂದ ಹೊರಗೆ ಹೋಗದ ಸ್ಥಳೀಯ ಮಹಿಳೆಯರನ್ನು ಪ್ರೋತ್ಸಾಹಿಸಿದರು. ಜಲಿಯನ್ ವಾಲಾ ಬಾಗ್ ನ ಘಟನೆಗಳು ಆಕೆಯ ಜೀವನದ ಹಾದಿಯನ್ನು ಬದಲಿಸಿದವು. ಇದರಿಂದ ಪ್ರೇರಿತಳಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು.

ಕಾರ್ನಾಡ್ ಸದಾಶಿವ ರಾವ್:

ಕಾರ್ನಾಡ್ ಸದಾಶಿವ ರಾವ್:

ಜನನ: 1881, ಮಂಗಳೂರು

ಮರಣ: 9 ಜನವರಿ 1937, ಮುಂಬೈ

ಕಾರ್ನಾಡ್ ಸದಾಶಿವ ರಾವ್ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರ.ಇವರು ಮೂಲತಃ ಶ್ರೀಮಂತ ಮಂಗಳೂರಿನ ಕುಟುಂಬದವರಾಗಿದ್ದು, ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿದ್ದರು. ಅವರ ಪತ್ನಿ ಶಾಂತಾಬಾಯಿಯ ಬೆಂಬಲದೊಂದಿಗೆ ಬಡ ಮಹಿಳೆಯರು ಮತ್ತು ವಿಧವೆಯರಿಗೆ ಸಹಾಯ ಮಾಡಲು ಮಹಿಳಾ ಸಭೆಯನ್ನು ಸ್ಥಾಪಿಸಿದರು. ಅವರು ಮಹಾತ್ಮ ಗಾಂಧಿಯವರ ನಿಜವಾದ ಅನುಯಾಯಿಯಾಗಿದ್ದರು.

ಟಿಪ್ಪು ಸುಲ್ತಾನ್

ಟಿಪ್ಪು ಸುಲ್ತಾನ್

ಜನನ: 20 ನವೆಂಬರ್ 1750, ದೇವನಹಳ್ಳಿ

ಮರಣ: 4 ಮೇ 1799, ಶ್ರೀರಂಗಪಟ್ಟಣ

ಮೈಸೂರಿನ ಹುಲಿ ಎಂದೇ ಖ್ಯಾತಿಯಾಗಿರುವ ಟಿಪ್ಪು ಸುಲ್ತಾನ್, 1782 ರಿಂದ 1799 ರವರೆಗೆ ಮೈಸೂರು ರಾಜ್ಯವನ್ನು ಆಳಿದರು. ಟಿಪ್ಪು ವಿದ್ವಾಂಸ, ಸೈನಿಕ ಮತ್ತು ಕವಿ ಕೂಡ ಆಗಿದ್ದರು. ಹೈದರ್ ಅಲಿ ಮತ್ತು ಆತನ ಪತ್ನಿ ಫಾತಿಮಾ ಫಕ್ರ್-ಉನ್-ನಿಸಾಳ ಮೊದಲ ಮಗ. ಅವರು ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದು, ಬ್ರಿಟಿಷರೊಂದಿಗೆ ಅನೇಕ ಯುದ್ಧಗಳನ್ನು ಮಾಡಿದರು. ಆರಂಭದಲ್ಲಿ ಫ್ರೆಂಚ್ ಬೆಂಬಲವನ್ನು ಪಡೆದಿದ್ದರು.

ಒನಕೆ ಓಬವ್ವ:

ಒನಕೆ ಓಬವ್ವ:

ಜನನ: 18 ನೇ ಶತಮಾನ

ಮರಣ: 1779, ಚಿತ್ರದುರ್ಗ

ಒನಕೆ ಓಬವ್ವ ಒಬ್ಬ ವೀರ ಮಹಿಳೆ. ಚಿತ್ರದುರ್ಗ ಸಾಮ್ರಾಜ್ಯದ ಮೇಲೆ ಸೈನ್ಯವು ದಾಳಿ ಮಾಡಿದಾಗ ತನ್ನ ಗಂಡನಿಗೆ ಧೈರ್ಯ ಮತ್ತು ಸಹಾಯ ಮಾಡಿದಳು. ತನ್ನ ಗಂಡನ ಗಮನಕ್ಕೆ ಬರುವವರೆಗೂ ಶತ್ರುಗಳ ವಿರುದ್ಧ ಹೋರಾಡಿ, ವೀರಮರಣ ಹೊಂದಿದಳು.

ಎನ್ ಎಸ್ ಹರ್ಡಿಕರ್:

ಎನ್ ಎಸ್ ಹರ್ಡಿಕರ್:

ಜನನ: 7 ಮೇ 1889 ಧಾರವಾಡ

ಮರಣ: 26 ಆಗಸ್ಟ್ 1975

ಡಾ. ನಾರಾಯಣ್ ಸುಬ್ಬರಾವ್ ಹರ್ಡಿಕರ್ ಅವರು ಪುಸ್ತಕ ಮಾರಾಟ ಮಾಡಿಕೊಂಡೇ, ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡಿದ್ದರು. ಆಗ ಇದ್ದ ಕಾಂಗ್ರಸ್ ನಲ್ಲಿ ಅನೇಕ ಜವಾಬ್ದಾರಿಗಳನ್ನು ವಹಿಸಿಕೊಂಡು, ಅಗಾಧ ಕಾರ್ಯಗಳನ್ನು ಮಾಡಿದ್ದರು. ಜೊತೆಗ ಹಿಂದೂಸ್ತಾನ್ ಅಸೋಸಿಯೇಶನ್ ಆಫ್ ಅಮೆರಿಕದ ಅಧ್ಯಕ್ಷರಾಗಿದ್ದರು.

ಯಶೋಧರ ದಾಸಪ್ಪ:

ಯಶೋಧರ ದಾಸಪ್ಪ:

ಜನನ: 28 ಮೇ 1905, ಬೆಂಗಳೂರು

ಮರಣ: 1980

ಯಶೋಧರ ದಾಸಪ್ಪ ಗಾಂಧಿವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿ. ಇವರು ಭಾರತದ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ರಾಜಕೀಯವಾಗಿ ಹೊಂದಿಕೊಂಡಿದ್ದರು. ಎಸ್‌ಆರ್ ಕಂಠಿ ಮತ್ತು ಎಸ್ ನಿಜಲಿಂಗಪ್ಪ ನೇತೃತ್ವದ ಸರ್ಕಾರಗಳಲ್ಲಿ ಮಂತ್ರಿಯಾಗಿ ಸೇವೆ ಸಲ್ಲಿಸಿದರು.

ಕಮಲಾದೇವಿ ಚಟ್ಟೋಪಾಧ್ಯಾಯ:

ಕಮಲಾದೇವಿ ಚಟ್ಟೋಪಾಧ್ಯಾಯ:

ಜನನ: 3 ಏಪ್ರಿಲ್ 1903, ಮಂಗಳೂರು

ಮರಣ: 29 ಅಕ್ಟೋಬರ್ 1988, ಮುಂಬೈ

ಕಮಲಾದೇವಿ ಚಟ್ಟೋಪಾಧ್ಯಾಯರು ಮಹಾನ್ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದು, ಮುಖ್ಯವಾಗಿ ಉಪ್ಪಿನ ಸತ್ಯಾಗ್ರಹದಲ್ಲಿ ತೊಡಗಿಸಿಕೊಂಡಿದ್ದರು. ಸ್ವಾತಂತ್ರ್ಯಾನಂತರ ಕರಕುಶಲ ವಸ್ತುಗಳು, ಕೈಮಗ್ಗಗಳು ಕೈಗಾರಿಕೆಯಲ್ಲಿ ಅನೇಕ ಮಹಿಳೆಯರನ್ನು ಮುಂದೆ ತಂದಿರುವುದಕ್ಕೆ ಅವರು ಹೆಸರುವಾಸಿಯಾಗಿದ್ದಾರೆ.

ನಿಟ್ಟೂರು ಶ್ರೀನಿವಾಸ್ ರಾವ್:

ನಿಟ್ಟೂರು ಶ್ರೀನಿವಾಸ್ ರಾವ್:

ಜನನ: 1903 ರ ಆಗಸ್ಟ್‌ 24 ರಂದು, ಬೆಂಗಳೂರು

ಮರಣ: 2004ರ ಆಗಸ್ಟ್ 12

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಕಾರ್ಯಕರ್ತರಾಗಿ ದುಡಿಯುವ ಮೂಲಕ ರಾಜಕಾರಣದಲ್ಲೂ ನಿಟ್ಟೂರು ಅನುಭವ ಪಡೆದಿದ್ದರು. ಅವರದ್ದು ಗಾಂಧಿ ನೆಚ್ಚಿದ್ದ ರಾಜಕಾರಣ. ಆ ಕಾರಣದಿಂದಲೇ ಗಾಂಧಿಬೋಧೆಯಿಂದ ಪ್ರೇರಿತರಾಗಿ, ಖಾದಿ ಮತ್ತು ಹಿಂದಿ ಪ್ರಚಾರ ಆಂದೋಲನದಲ್ಲಿ ತೊಡಗಿಸಿಕೊಂಡರು.

English summary

75th Independence Day: List of Freedom Fighters from Karnataka

Here we talking about 75th Independence Day: List of Ten Freedom Fighters from Karnataka, read on
X
Desktop Bottom Promotion