For Quick Alerts
ALLOW NOTIFICATIONS  
For Daily Alerts

ರಾಶಿಚಕ್ರದ ಪ್ರಕಾರ ಇವರು ಅತ್ಯುತ್ತಮ ಪಾಲಕರಾಗುವರು.

|

ಒಂದು ಮಗುವಿಗೆ ಜನ್ಮ ನೀಡುವುದು ನಿಸರ್ಗದ ಒಂದು ಸಹಜ ಪ್ರಕೃತಿ. ಇದನ್ನು ಎಲ್ಲಾ ಜೀವ ಸಂಕುಲದಲ್ಲಿಯೂ ಕಾಣಬಹುದು. ಬುದ್ಧಿವಂತ ಜೀವಿ ಎನಿಸಿಕೊಂಡ ಮನುಷ್ಯನಲ್ಲಿ ಒಂದು ಮಗುವಿಗೆ ಜನ್ಮ ನೀಡುವುದು ಹಾಗೂ ಅದರ ಬೆಳವಣಿಗೆಗೆ ಹೇಗೆ ಸಹಕರಿಸಿ ನಿಲ್ಲುತ್ತಾರೆ ಎನ್ನುವುದು ಬಹಳ ಪ್ರಮುಖವಾದ ವಿಚಾರವಾಗಿರುತ್ತದೆ. ಮಗುವಿನ ಬೆಳವಣಿಗೆಯ ಪ್ರತಿಯೊಂದು ಹಂತದಲ್ಲೂ ಹೇಗೆ ತಿದ್ದಿ ತೀಡಿ ಆದರ್ಶ ವ್ಯಕ್ತಿಯನ್ನಾಗಿ ಮಾಡುವುದು ಪ್ರತಿಯೊಬ್ಬ ಪಾಲಕರಿಗೂ ಒಂದು ಸವಾಲಿನ ಜವಾಬ್ದಾರಿ ಎಂದರೆ ತಪ್ಪಾಗಲಾರದು.

ಬಾಲ್ಯದಲ್ಲಿ ತಂದೆತಾಯಿಗೆ ತನ್ನ ತುಂಟತನದಿಂದ ಸಂತೋಷ ನೀಡುವ ಮಗು ಬೆಳೆದಂತೆ ಜವಾಬ್ದಾರಿಯ ನಿರ್ವಹಣೆ ಮಾಡಬೇಕಾಗುತ್ತದೆ. ಜೊತೆಗೆ ಪಾಲಕರು ತಮ್ಮ ಶಕ್ತಿಯನ್ನು ಕಳೆದುಕೊಳ್ಳುತ್ತಾ ಬರುತ್ತಾರೆ. ಅದಕ್ಕೆ ಅನುಗುಣವಾಗಿ ಮಕ್ಕಳು ಎಲ್ಲಾ ಬಗೆಯ ಸಹಕಾರ ಹಾಗೂ ಜವಾಬ್ದಾರಿ ವರ್ತನೆ ತೋರಬೇಕು. ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬದುಕಿ ಬಾಳಬೇಕು. ಈ ಎಲ್ಲಾ ಬದಲಾವಣೆ ಅಥವಾ ಬೆಳವಣಿಗೆಗೆ ಪ್ರಮುಖವಾಗಿ ಪಾಲಕರು ಸೂಕ್ತ ಪೋಷಣೆಯನ್ನು ಮಾಡಬೇಕಾಗಿರುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಚಕ್ರದವರು ಸಹ ತಾವು ಪಾಲಕರಾದಾಗ ವಿಭಿನ್ನ ರೀತಿಯ ಪೋಷಣೆ ಹಾಗೂ ಆರೈಕೆಯನ್ನು ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾದರೆ ಆ ಪರಿಯೇನು? ನಿಮ್ಮ ರಾಶಿಕ್ರದ ಅನುಸಾರ ನೀವು ಯಾವ ಬಗೆಯ ಪಾಲಕರಾಗುತ್ತೀರಿ? ಎನ್ನುವುದನ್ನು ತಿಳಿದುಕೊಳ್ಳಬೇಕು ಎಂದುಕೊಂಡಿದ್ದರೆ ಮುಂದೆ ಬೋಲ್ಡ್ ಸ್ಕೈ ನೀಡಿರುವ ಸೂಕ್ತ ವಿವರಣೆಯನ್ನು ಪರಿಶೀಲಿಸಿ...

ಕರ್ಕ:

ಕರ್ಕ:

ಈ ರಾಶಿಯವರು ಉತ್ತಮ ಪಾಲಕರಾಗಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಹೇಳಬಹುದು. ಇವರು ಹುಟ್ಟುತ್ತಲೇ ಉತ್ತಮ ನಿರ್ವಹಣೆಯ ಕೌಶಲ್ಯವನ್ನು ಹೊಂದಿರುತ್ತಾರೆ. ಹಾಗಾಗಿ ವಿವಾಹ, ಮಕ್ಕಳು ಎನ್ನುವುದು ಇವರಿಗೆ ಒಂದು ಸಾಹಸ ಎನಿಸದು. ಬದಲಿಗೆ ಸುಲಭವಾಗಿ ತಮ್ಮ ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಾರೆ. ಇವರು ಸುಖ ಸಂಸಾರ ಹೊಂದಲು ಹಾಗೂ ಮಕ್ಕಳ ಬೆಳವಣಿಗೆಯಲ್ಲಿ ಸಹಕರಿಸಲು ಸಾಕಷ್ಟು ಗಮನ ನೀಡುತ್ತಾರೆ. ಜೊತೆಗೆ ಇವರು ಒಂದಷ್ಟು ಶ್ರಮವನ್ನು ವಹಿಸಬೇಕಾಗುವುದು.

ವೃಶ್ಚಿಕ:

ವೃಶ್ಚಿಕ:

ರಾಶಿಚಕ್ರದ ಅನುಸಾರ ಇವರು ಉತ್ಸಾಹಪೂರ್ಣ ಪಾಲಕರು ಎಂದು ಕಾಣಿಸದಿದ್ದರೂ ಭಾವನೆಗಳನ್ನು ಹೊಂದಿರುತ್ತಾರೆ. ಜೊತೆಗೆ ತಮ್ಮ ಭಾವನೆಗಳನ್ನು ಅತ್ಯುತ್ತಮ ರೀತಿಯಲ್ಲಿ ನಿಯಂತ್ರಣದಲ್ಲಿ ಇಡುತ್ತಾರೆ ಎಂದು ಹೇಳಲಾಗುವುದು. ಮಕ್ಕಳಿಗೆ ರಕ್ಷಣಾತ್ಮಕವಾಗಿರುವುದರ ಮೂಲಕ ಅತ್ಯುತ್ತಮ ಗಮನ ಹಾಗೂ ಪ್ರೀತಿಯನ್ನು ನೀಡುತ್ತಾರೆ ಎನ್ನಲಾಗುವುದು.

ಸಿಂಹ:

ಸಿಂಹ:

ಈ ರಾಶಿಚಕ್ರದವರು ಸ್ವಯಂ ಕೇಂದ್ರಿತ ಚಿಹ್ನೆಯವರು ಎಂದು ಕರೆಯಲ್ಪಟ್ಟರೂ ಪಾಲನೆ ಹಾಗೂ ಪೋಷಣೆಯ ವಿಚಾರದಲ್ಲಿ ಉತ್ಸುಕರಾಗಿರುತ್ತಾರೆ ಎನ್ನಲಾಗುವುದು. ಕೆಲವೊಂದು ವಿಚಾರಗಳನ್ನು ಒಪ್ಪಿಕೊಳ್ಳಲು ಇವರು ಸಿದ್ಧರಾಗಿರುತ್ತಾರೆ. ಮಕ್ಕಳ ವಿಚಾರದಲ್ಲಿ ಧನಾತ್ಮಕ ಗಮನವನ್ನು ನೀಡುವುದರ ಮೌಲ್ಯವನ್ನು ಇವರು ತಿಳಿದಿರುತ್ತಾರೆ. ನೈಸರ್ಗಿಕವಾಗಿ ಯಾವುದು ಅಗತ್ಯ ಎನ್ನುವುದನ್ನು ಅರಿತು ಬೇಕಾದದ್ದನ್ನು ನೀಡುತ್ತಾರೆ.

ತುಲಾ:

ತುಲಾ:

ಈ ರಾಶಿಚಕ್ರದವರಲ್ಲಿ ಸಹಾನುಭೂತಿ ಹಾಗೂ ಸಹಾಯ ಮಾಡುವ ಸ್ವಭಾವ ಇರುತ್ತದೆ. ಹಾಗಾಗಿ ಪೋಷಕರಾಗಿಯೂ ಅತ್ಯುತ್ತಮ ನಿರ್ವಹಣೆ ಹಾಗೂ ಸಹಕಾರ ನೀಡುವರು. ಭಾವನಾತ್ಮಕವಾಗಿ ಮೃದು ಸ್ವಭಾವ ಹೊಂದಿರುವ ಇವರು ಮಕ್ಕಳ ಬೆಳವಣಿಗೆಗೆ ಹಾಗೂ ಭಾವನೆಗಳಿಗೆ ಹೆಚ್ಚು ಮಹತ್ವವನ್ನು ನೀಡುತ್ತಾರೆ. ಉತ್ತಮ ಬೆಳವಣಿಗೆಗೂ ಸಹಾಯ ಮಾಡುವರು.

ಮೀನ:

ಮೀನ:

ಈ ರಾಶಿಯವರು ನೈಸರ್ಗಿಕವಾಗಿಯೇ ಅತ್ಯುತ್ತಮ ಪೋಷಕರಾಗಿರುತ್ತಾರೆ. ಒಂದು ಜೀವಕ್ಕೆ ಜನ್ಮ ನೀಡುವುದು ಹಾಗೂ ಅದರ ಪೋಷಣೆಯನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸುವ ಕೌಶಲ್ಯವನ್ನು ಕಲಿತಿರುತ್ತಾರೆ. ಕೆಲವು ವಿಚಾರಕ್ಕೆ ಇವರು ಸ್ಥಿರವಾಗಿರಬಾರದು ಎಂದು ಹೇಳಲಾಗುತ್ತದೆ. ಸ್ವಾಭಾವಿಕ ಪರಾನುಭೂತಿಯಿಂದ ಮಕ್ಕಳ ಮೆಚ್ಚುಗೆ ಪಡೆದುಕೊಳ್ಳುತ್ತಾರೆ.

ವೃಷಭ:

ವೃಷಭ:

ಈ ರಾಶಿಚಕ್ರದವರು ಹೆಚ್ಚು ಸೌಕರ್ಯಗಳಿಂದ ಕೂಡಿರುವ ಜೀವನವನ್ನು ನಡೆಸಲು ಬಯಸುತ್ತಾರೆ. ಇವರು ಪೋಷಕ ಸ್ಥಾನದಲ್ಲಿ ನಿಂತಾಗ ಹೆಚ್ಚು ಭಾವೋದ್ರಿಕ್ತರಾಗಿರುತ್ತಾರೆ. ಕೆಲವೊಮ್ಮೆ ಸಂದಿಗ್ಧತೆಗಳಿಂದ ಬದುಕುತ್ತಾರೆ. ಇವರು ತಮ್ಮ ಕುಟುಂಬಕ್ಕೆ ಸಾಕಷ್ಟು ಕೊಡುಗೆಯನ್ನು ಸಹ ನೀಡುತ್ತಾರೆ. ತಮ್ಮ ಮಕ್ಕಳಿಗೆ ಆರಾಮದಾಯಕ ಹಾಗೂ ಭೌತಿಕತೆಯನ್ನು ನೀಡಲು ಬಯಸುತ್ತಾರೆ.

ಮಕರ:

ಮಕರ:

ಈ ರಾಶಿಯವರು ತಮ್ಮ ಮಕ್ಕಳ ವಿಚಾರದಲ್ಲಿ ಅತ್ಯಂತ ಗಮನವನ್ನು ನೀಡುತ್ತಾರೆ ಎಂದು ಹೇಳಲಾಗದು. ಆದರೆ ತಮ್ಮ ಸಂಸಾರಕ್ಕೆ ಹೆಚ್ಚಿನ ಪ್ರೀತಿಯನ್ನು ನೀಡುವುದು ಹಾಗೂ ನಿಷ್ಠಾವಂತರಾಗಿರುತ್ತಾರೆ. ಮಕ್ಕಳಿಗೆ ಅತ್ಯುತ್ತಮವಾದ ಭಾವನೆಗಳನ್ನು ಆಳವಾಗಿ ಮೂಡುವಂತೆ ಮಾಡುತ್ತಾರೆ.

ಮೇಷ:

ಮೇಷ:

ಈ ರಾಶಿಯವರು ಪೋಷಕ ಪ್ರವೃತ್ತಿಯನ್ನು ಹೊಂದಲು ಕಡಿಮೆ ಆಸಕ್ತಿ ಹೊಂದಿದವರು ಎನ್ನಲಾಗುವುದು. ಇವರು ತಾವು ಉನ್ನತ ಮಟ್ಟಕ್ಕೆ ಸಾಗಬೇಕು ಎನ್ನುವ ಅಭಿಲಾಷೆ ಹೊಂದಿರುವುದರಿಂದ ಪೋಷಕಾಗಿ ಕಾರ್ಯ ನಿರ್ವಹಿಸಲು ನಿರಾಕರಿಸುವರು. ಮಕ್ಕಳನ್ನು ಪಡೆಯುವುದು ಇವರಿಗೆ ಕೊನೆಯ ಆಯ್ಕೆಯಾಗಿರುತ್ತದೆ.

ಕನ್ಯಾ:

ಕನ್ಯಾ:

ಈ ರಾಶಿಯವರು ಪೋಷಕರಾಗಿರಲು ಸಿದ್ಧರಾಗಿರುವುದಿಲ್ಲ. ಇವರು ಹೊಣೆಗಾರಿಕೆಯನ್ನು ತೆಗೆದುಕೊಳ್ಳುವುದರ ಪರಿಣಾಮವಾಗಿ ಯಾವುದೇ ಕೆಲಸ ಎದುರಾದರೂ ತಕ್ಷಣ ಸರಿಯಾಗಿ ಕೆಲಸ ನಿರ್ವಹಿಸುತ್ತಾರೆ. ಪೋಷಣೆ ಹಾಗೂ ಪರಾನುಭೂತಿಯ ಗುಣಗಳು ಇವರಲ್ಲಿ ಇರುವುದರಿಂದ ಪೋಷಕರಾಗಿ ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಇದು ಕೆಲವೊಮ್ಮೆ ಇವರಿಗೆ ಕೊರತೆಯ ವಿಚಾರವಾಗಿ ಕಾಣಬಹುದು.

ಮಿಥುನ:

ಮಿಥುನ:

ಈ ರಾಶಿಚಕ್ರದವರು ಸಾಮಾಜಿಕವಾಗಿ ಬುದ್ಧಿವಂತರಾಗಿರುತ್ತಾರೆ. ಆದರೆ ಪೋಷಕರ ವಿಚಾರಕ್ಕೆ ಬಂದಾಗ ವಿಷಯದ ವಿರುದ್ಧವಾಗಿರುತ್ತದೆ. ಪಾಲಕರಾಗುವುದು ಇವರಿಗೆ ಕಷ್ಟದ ವಿಚಾರವಾಗಿರುತ್ತದೆ. ಮಕ್ಕಳಾದ ಬಳಿಕ ಇವರು ತಮ್ಮನ್ನು ಹೆಚ್ಚು ಸಾಮಾಜಿಕ ಜೀವನದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ. ಇದರಿಂದಾಗಿ ಇವರ ಮಕ್ಕಳು ಜೀವನದಲ್ಲಿ ಬಹಳಷ್ಟು ವಿನೋದವನ್ನು ಮಾಡುತ್ತಿರುತ್ತಾರೆ.

ಕುಂಭ:

ಕುಂಭ:

ಈ ರಾಶಿಯವರು ಭಾವನೆಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವುದಿಲ್ಲ. ಇವರು ಸಾಧ್ಯವಾದಷ್ಟು ಪೋಷಕರಾಗಿರುವ ಭಾವನೆಯನ್ನು ಹೊರಹಾಕುತ್ತಾರೆ. ಇವರು ತಮ್ಮ ಮಕ್ಕಳನ್ನು ವಿಲಕ್ಷಣ ಜೀವನ ಶೈಲಿಯಲ್ಲಿ ಬೆಳೆಸುತ್ತಾರೆ. ಇನ್ನೊಂದೆಡೆ ಅವರಲ್ಲಿ ಮಾನವೀಯ ಮೌಲ್ಯಗಳನ್ನು ಸಹ ಬೆಳೆಸುತ್ತಾರೆ. ಇವರು ಸಮಯಕ್ಕೆ ಸರಿಯಾಗಿ ತಮ್ಮ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಬೇಕು ಎನ್ನುವುದನ್ನು ತಿಳಿದಿರಬೇಕು.

ಧನು:

ಧನು:

ಈ ರಾಶಿಯವರು ದೀರ್ಘಕಾಲದವರೆಗೆ ಅಥವಾ ಶಾಶ್ವತವಾಗಿ ಪೋಷಕರಾಗಿಯೇ ಜವಾಬ್ದಾರಿ ನಿರ್ವಹಿಸಲು ಇಷ್ಟಪಡರು. ಹೆಚ್ಚು ಏಕಾಂಗಿಯಾಗಿರಲು ಬಯಸುತ್ತಾರೆ. ಮದುವೆ ಹಾಗೂ ಪೋಷಕರಾಗಿರಲು ಭಾವನಾತ್ಮಕವಾಗಿ ಇಷ್ಟಪಡುವುದಿಲ್ಲ. ಮತ್ತೊಂದೆಡೆ ಇವರು ಸಾಂಭಾವ್ಯವಾಗಿ ಮಗುವಿನ ನಿರ್ವಹಣೆ ಮಾಡುವರು. ಮಕ್ಕಳನ್ನು ಪಡೆಯಲು ಇವರು ಎರಡು ಬಾರಿ ಯೋಚಿಸಬೇಕಾದ ಅಗತ್ಯವಿರುತ್ತದೆ.

English summary

zodiac-signs-who-are-ready-to-become-parents

zodiac-signs-who-are-ready-to-become-parents
X
Desktop Bottom Promotion