For Quick Alerts
ALLOW NOTIFICATIONS  
For Daily Alerts

ಯಾವ ರಾಶಿಗಳ ಜೋಡಿಗಳ ಸಂಬಂಧ ದೀರ್ಘಕಾಲ ಉಳಿಯಲಾರದು

By Prabha Bhat
|

ಹಿಂದೂ ಸಂಸ್ಕೄತಿಯಲ್ಲಿ ಮನೆಯಲ್ಲಿ ಒಂದು ಮಗು ಜನಿಸಿತೆಂದರೆ ಮೊದಲನೆಯ ಕೆಲಸವೆಂದರೆ ಮಗುವಿನ ಹುಟ್ಟಿದ ಘಳಿಗೆಯನ್ನಾಧರಿಸಿ ಮಗುವಿನ ಜನ್ಮ ನಕ್ಷತ್ರ ಮತ್ತು ರಾಶಿಯ ಮಾಹಿತಿಗಳನ್ನೊಳಗೊಂಡ ಜಾತಕವನ್ನು ಬರೆಸುವುದು.

ಹೀಗೆ ಮಗುವು ಬೆಳೆಯುತ್ತಾ ಬೆಳೆಯುತ್ತಾ ಹೋದಂತೆ ಕಾಲ ಕಾಲಕ್ಕೆ ಮಾಡುವ ಧಾರ್ಮಿಕ ಕರ್ಮಗಳು ಈ ಜಾತಕವನ್ನು ಆಧರಸಿರುತ್ತದೆ. ಅಲ್ಲದೆ ಚಲಿಸುತ್ತಿರುವ ಗ್ರಹಗಳು ನಕ್ಷತ್ರಗಳ ಮತ್ತು ರಾಶಿಗಳ ಚಲನೆಯನ್ನು ಪ್ರಭಾವೀಕರಿಸುತ್ತಿರುತ್ತವೆ. ತನ್ಮೂಲಕ ಆ ವ್ಯಕ್ತಿಯ ದೈನಂದಿನ ಜೀವನದ ಮೇಲೆ ನಿರಂತರವಾದ ಪರಿಣಾಮಗಳನ್ನು ಬೀರುತ್ತಲೇ ಇರುತ್ತದೆ.

ಮಗುವಿನ ವಿವಿಧ ಹಂತಗಳಲ್ಲಿ ನೆಡೆಸುವ ಕರ್ಮಗಳಾದ ಚೌಲ, ಬ್ರಹ್ಮೋಪದೇಶ, ಮದುವೆ ಹೀಗೆ ಎಲ್ಲಾ ಸಂದರ್ಭಗಳಲ್ಲಿಯೂ ಜಾತಕ ಫಲವೆಂಬುದು ಬಹಳ ಮುಖ್ಯವಾದ ಪಾತ್ರವನ್ನ ನಿರ್ವಹಿಸುತ್ತದೆ. ವೈಜ್ಞಾನಿಕವಾಗಿ ರಾಶಿಗಳು ಕೇವಲ ನಕ್ಷತ್ರ ಪುಂಜಗಳಾಗಿದ್ದರೂ ಅವುಗಳ ಚಲನೆ ನಮ್ಮ ಜೀವನದ ಮೇಲೆ ಬಹಳಷ್ಟ ಪರಿಣಾಮಗಳನ್ನು ಮತ್ತು ಪ್ರಭಾವಗಳನ್ನು ಬೀರುತ್ತದೆ ಎಂದು ಜ್ಯೋತಿಶಾಸ್ತ್ರ ಹೇಳುತ್ತದೆ.

 ಯಾವ ರಾಶಿಗಳ ಜೋಡಿಗಳ ಸಂಬಂಧ ದೀರ್ಘಕಾಲ ಉಳಿಯಲಾರದು

ಹುಟ್ಟು ಹೇಗೆ ನೈಸರ್ಗಿಕವೋ ಹಾಗೆಯೇ ಸೌರಮಂಡಲದಲ್ಲಿ ಗ್ರಹಗಳ, ಸೂರ್ಯನ ಮತ್ತು ಆಕಾಶಕಾಯಗಳ ಚಲನೆಯೂ ಕೂಡ ನೈಸರ್ಗಿಕ ಪ್ರಕ್ರಿಯೆ. ಈ ಪ್ರಕ್ರಿಯೆ ಮಗುವಿನ ಹುಟ್ಟಿನಿಂದ ಆ ಮಗುವಿನ ಎಲ್ಲಾ ಚಟುವಟಿಕೆಗಳ ಮೇಲೆ ಪರಿಣಾಮಗಳನ್ನು ಬೀರುತ್ತದೆ.

ರಾಶಿಗಳು ಎಂದರೇನು?
ನಕ್ಷತ್ರ ಪುಂಜಗಳು ನಿರ್ದಿಷ್ಟ ಆಕಾರದಲ್ಲಿರುವಂತೆ ಗೋಚರವಾಗುತ್ತವೆ. ಈ ನಕ್ಷತ್ರಗಳ ಗುಂಪನ್ನೇ ರಾಶಿಗಳೆಂದು ಕರೆಲಾಗುತ್ತದೆ. ದ್ವಾದಶ ರಾಶಿಗಳೆಂದೇ ಕರೆಯಲಾಗುವ ೧೨ ರಾಶಿಗಳೆಂದರೆ : ಮೇಷ, ವೄಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲ, ವೃಶ್ಚಿಕ, ಧನು,ಮಕರ, ಕುಂಭ ಮತ್ತು ಮೀನ ಎಂಬುದಾಗಿ.

ಪ್ರತಿಯೊಂದೂ ಕೂಡ ಅವುಗಳ ಹೆಸರಿಗೆ ತಕ್ಕಂತಹಾ ಆಕರದಲ್ಲಿ ಗೋಚರಿಸುವುದರೊಂದಿಗೆ ತಮ್ಮದೇ ಆದ ವಿಶೇಷ ಲಕ್ಷಣಗಳನ್ನು ನಮ್ಮಲ್ಲಿ ರೂಪಿಸುವಷ್ಟು ಶಕ್ತಿಯನ್ನು ಹೊಂದಿರುತ್ತವೆ.

ಸಂಬಂಧಗಳ ಮೇಲೆ ರಾಶಿಗಳು ಪ್ರಭಾವ ಬೀರುತ್ತವೆಯೇ ?

ಯಾವುದೇ ಸಂಬಂಧವಾದರೂ ನೂರಕ್ಕೆ ನೂರು ಪ್ರತಿಶತ ಪರಿಪೂರ್ಣವಾಗಿರುವುದಿಲ್ಲ. ಅವುಗಳನ್ನು ಪರಿಪೂರ್ಣಗೊಳಿಸುವಲ್ಲಿ ಸಂಬಂಧದಲ್ಲಿ ಬಂಧಿಸಲ್ಪಟ್ಟವರ ಪ್ರಯತ್ನ, ಪರಸ್ಪರ ಅನ್ಯೋನ್ಯತೆಗಳು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.

ಇವೆಲ್ಲವೂ ಒಂದು ಹಂತಕ್ಕೆ ಇದ್ದೂ ಸಂಬಂಧಗಳಲ್ಲಿ ತಲೆದೋರುವ ಸಮಸ್ಯೆಗಳಿಗೆ ಇನ್ನೂ ಬೇರೆ ಕಾರಣಗಳಿರುತ್ತವೆ. ಸಂದರ್ಭಗಳು, ಸನ್ನಿವೇಶಗಳ ಅನಾನುಕೂಲತೆ ಇತ್ಯಾದಿ ಕಾರಣಗಳೊಂದಿಗೆ ರಾಶಿ ಫಲಗಳೂ ಕೂಡ ಸಂಬಂಧಗಳ ಬಾಳಿಕೆಯನ್ನು ನಿರ್ಧರಿಸುತ್ತವೆ.

ವಿವಾಹ ಎಂಬುದು ಸಂಬಂಧಗಳಲ್ಲಿಯೇ ವಿಶೇಷವಾದ ಸಂಬಂಧವೆನಿಸುತ್ತದೆ. ಇಲ್ಲಿ ಗಂಡು ಹೆಣ್ಣುಗಳ ಅಭಿಪ್ರಾಯದೊಂದಿಗೆ ಅವರಿಬ್ಬರ ರಾಶಿಗಳೂ ಕೂಡ ಹೊಂದುವುದು ಅತ್ಯಂತ ಅವಶ್ಯಕ ಎಂದು ನಮ್ಮ ಜ್ಯೋತಿಶಾಸ್ತ್ರ ಹೇಳುತ್ತದೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಪುರಾತನ ಕಾಲದಲ್ಲಿ ಗಂಡು ಹೆಣ್ಣುಗಳ ಭೇಟಿಗಿಂತ ಮೊದಲು ಅವರುಗಳ ಜಾತಕಗಳು ಹೊಂದುತ್ತವೆಯೇ ಎಂದು ಪರಿಶೀಲಿಸಲಾಗುತ್ತಿತ್ತು.

ಅವುಗಳಲ್ಲಿ ಮುಖ್ಯವಾಗಿ ಇಬ್ಬರ ರಾಶಿಗಳು ಪರಸ್ಪರ ಹೊಂದುವಂತಿದ್ದರೆ ಸಂಬಂಧವನ್ನು ಮುಂದುವರಿಸಲಾಗುತ್ತಿತ್ತು. ರಾಶಿ ಹೊಂದಿಕೆಯಾಗದ ಸಂಬಂಧಗಳನ್ನು ಕೈ ಬಿಡುವಂತಹಾ ಸಂದರ್ಭಗಳೂ ಅನೇಕವಿರುತ್ತಿತ್ತು. ಈಗಲೂ ಕೂಡ ಈ ಪದ್ಧತಿಯನ್ನು ಅನುಸರಿಸುವವರಿದ್ದಾರೆ.

ರಾಶಿಗಳ ಹೊಂದುವಿಕೆಯಿಂದಾಗುವ ಪ್ರಯೋಜನಗಳೇನು?
ವ್ಯಕ್ತಿಯ ಜನ್ಮ ರಾಶಿ ಮತ್ತು ನಕ್ಷತ್ರಗಳು ಆ ವ್ಯಕ್ತಿಯ ಗುಣ ವಿಶೇಷತೆಗಳು, ಅವಗುಣಗಳು, ವ್ಯಕ್ತಿತ್ವ ಮತ್ತು ನಡವಳಿಕೆಗಳನ್ನು ಪ್ರಭಾವೀಕರಿಸುತ್ತವೆ. ಆದ್ದರಿಂದ ಪರಸ್ಪರ ಹೊಂದಿಕೆಯಾಗುವಂತಹಾ ಜನ್ಮ ರಾಶಿಯನ್ನು ಹೊಂದಿದ ವ್ಯಕ್ತಿಗಳು ವಿವಾಹ ಬಂಧನದಲ್ಲಿ ಬಂಧಿಸಲ್ಪಟ್ಟಾಗ ಅಂತಹಾ ಸಂಬಂಧಗಳು ದೀರ್ಘಕಾಲೀನವಾಗಬಲ್ಲವು ಎನ್ನಲಾಗತ್ತದೆ.

ರಾಶಿಗಳು ವ್ಯಕ್ತಿಗಳ ವ್ಯಕ್ತಿತ್ವವನ್ನು ಹೇಳಬಲ್ಲವಾದ್ದರಿಂದ ಇವುಗಳ ಹೊಂದಿಕೆಯಿಂದಾದ ಜೋಡಿಗಳು ಜೀವನದಲ್ಲಿ ಯಶಸ್ವಿ ಸಂಬಂಧವನ್ನು ಹೊಂದುತ್ತಾರೆ ಎನ್ನಬಹುದು.

ಒಂದೆಡೆ ರಾಶಿಗಳ ಹೊಂದುವಿಕೆಯಿಂದ ಸಂಬಂಧಗಳು ಗಟ್ಟಿಯಾಗುತ್ತವೆ ಎಂದಾದರೆ ಸಂಗಾತಿಗಳ ರಾಶಿಗಳು ಹೊಂದಿಕೆಯಾಗದಿದ್ದರೆ ಅಥವ ರಾಶಿಗಳ ಹೊಂದಿಕೆಯನ್ನಿ ಭಿನ್ನತೆಯಿರುವ ಜೋಡಿಗಳಲ್ಲಿ ಸಾಮರಸ್ಯದ ಕೊರತೆ ಆಥವಾ ಸಂಬಧಗಳೇ ಮುರಿದು ಬೀಳುವ ಸಾಧ್ಯತೆಗಳೂ ಇರುತ್ತವೆ.

ಆದ್ದರಿಂದ ಈ ಲೇಖನದಲ್ಲಿ ಯಾವ ರಾಶಿ ಜೋಡಿಗಳು ಅಲ್ಪಕಾಲೀನ ಸಂಬಂಧಗಳಿಗೆ ದಾರಿಮಾಡಿಕೊಡುವಂತಹುದು ಎಂಬುದರ ಬಗೆಗೆ ಮಾಹಿತಿಯನ್ನು ತಿಳಿಯೋಣ.

 1. ಮೇಷ ಮತ್ತು ಕರ್ಕಾಟಕ ರಾಶಿಗಳು:

1. ಮೇಷ ಮತ್ತು ಕರ್ಕಾಟಕ ರಾಶಿಗಳು:

ಮೇಷ ರಾಶಿಯವರ ಗುಣಾವಗುಣಗಳು: ಮೇಷ ರಾಶಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ನೇರ, ಸತ್ಯ ಮತ್ತು ದಿಟ್ಟ ನಡತೆಯನ್ನು ಹೊಂದಿದವರಾಗಿರುತ್ತಾರೆ.ತಮ್ಮ ಮನಸ್ಸಿಗೆ ಬಂದಂತಹಾ ಕೆಲಸವನ್ನು ತಕ್ಷಣದಲ್ಲಿ ಮಾಡುವವರಾಗಿರುತ್ತರೆ. ಮತ್ತು ಈ ರಾಶಿಯಲ್ಲಿ ಜನಿಸಿದವರು ಜೀವನದಲ್ಲಿ ಬಹಳಷ್ಟನ್ನು ಮಾಡಲು ಮತ್ತು ಸಾಧಿಸಲು ಇಚ್ಚಿಸುವವರಾಗಿರುತ್ತಾರಾದ್ದರಿಂದ ಸಮಯವನ್ನು ವ್ಯರ್ಥವಾಗಿ ಕಳೆಯಲು ಇಚ್ಚಿಸುವುದಿಲ್ಲ.ಇವರಲ್ಲಿ ತಾಳ್ಮೆಯ ಕೊರತೆಯಿರುತ್ತದೆ.

ಕರ್ಕಾಟಕ ರಾಶಿಯವರ ಗುಣಾವಗುಣಗಳು: ಕರ್ಕಾಟಕ ರಾಶಿಯಲ್ಲಿ ಜನಿಸಿದವರು ಬಹಳ ಸೂಕ್ಷ್ಮ ಮನಸ್ಸಿನವರೂ ಮತ್ತು ಬೇರೆಯವರಿಂದ ಹೆಚ್ಚಿನ ಕಾಳಜಿಯನ್ನು ಇಚ್ಚಿಸುವವರೂ ಆಗಿರುತ್ತಾರೆ. ತಮ್ಮ ಸಂಗಾತಿಗಳಿಂದ ಹೆಚ್ಚಿನ ಕಾಳಜಿ, ಪ್ರೀತಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಹೆಚ್ಚಿನ ಸಮಯವನ್ನು ಬಯಸುವವರಾಗಿರುತ್ತಾರೆ. ತಮ್ಮೆಡೆಗೆ ತಮ್ಮ ಸಂಗಾತಿಯ ಗಮನಹರಿಸುವಿಕೆಯೂ ಇವರಿಗೆ ಬಹಳ ಮುಖ್ಯವಾದುದಾಗಿರುತ್ತದೆ.

ಪರಿಣಾಮ: ಈ ಮೇಲಿನ ವೈರುಧ್ಯವಾದ ಗುಣಗಳಿಂದಲೇ ಮೇಷರಾಶಿಯಲ್ಲಿ ಜನಿಸಿದವರಿಗೆ ಕರ್ಕಾಟಕ ರಾಶಿಯಲ್ಲಿ ಜನಿಸಿದವರನ್ನು ಸಂಭಾಳಿಸುವುದು ಕಷ್ಟಕರವೆನಿಸುತ್ತದೆ. ಆದ್ದರಿಂದಲೇ ಈ ಎರಡೂ ಭಿನ್ನ ರಾಶಿಗಳು ಎಂದಿಗೂ ಹೊಂದಿಕೆಯುವುದಿಲ್ಲ.

2.ವೃಷಭ ಮತ್ತು ಧನು ರಾಶಿಗಳು:

2.ವೃಷಭ ಮತ್ತು ಧನು ರಾಶಿಗಳು:

ವೃಷಭ ರಾಶಿಯವರ ಗುಣಾವಗುಣಗಳು: ವೃಷಭ ರಾಶಿಯಲ್ಲಿ ಜನಿಸಿದವರು ಧನು ರಾಶಿಯಲ್ಲಿ ಜನಿಸಿದವರಲ್ಲಿ ಭವನಾತ್ಮಕ ಭದ್ರತೆ ಮತ್ತು ಸ್ಥಿರತೆಯನ್ನು ಪಡೆಯುವಲ್ಲಿ ವಿಫಲರಾಗುತ್ತಾರೆ.

ಧನು ರಾಶಿಯವರ ಗುಣಾವಗುಣಗಳು: ಧನು ರಾಶಿಯವರು ಸಂಬಂಧಗಳಲ್ಲಿ ತಮ್ಮನ್ನ ತಾವು ಬಂಧಿಸಿಕೊಳ್ಳಲು ಬೇಕಾದ ಬದ್ಧತೆಯನ್ನು ಹೊಂದಿರುವುದಿಲ್ಲ. ಆದ್ದರಿಂದಲೇ ತಮ್ಮ ಸಂಗಾತಿ ಬಯಸುವ ಬಯಸುವ ಬದ್ಧತೆಯನ್ನು ಒದಗಿಸುವಲ್ಲಿ ವಿಫಲರಾಗುತ್ತಾರೆ.

ಪರಿಣಾಮ: ಈ ರಾಶಿ ಜೋಡಿಗಳ ವ್ಯಕ್ತಿಗಳು ಉತ್ತಮ ಸ್ನೇಹಿತರಾಗಬಹುದೇ ಹೊರತು ಸಂಗಾತಿಗಳಾಗಲಾರರು. ಆರಂಭದಲ್ಲಿ ಉತ್ತಮ ಹೊಂದಾಣಿಕೆ ತೋರುವ ಈ ಬಗೆಯ ಜೋಡಿಗಳು ನಂತರದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಸಂಬಂಧಗಳಲ್ಲಿ ಬದ್ಧತೆ ಮುಖ್ಯಾವಾದುದರಿಂದ ಈ ಜೋಡಿಗಳು ದೀರ್ಘಕಾಲೀನ ಸಂಬಂಧವನ್ನು ಉಳಿಸಿಕೊಳ್ಳಲಾರರು.

3. ಮಿಥುನ ಮತ್ತು ಕನ್ಯಾ ರಾಶಿಗಳು:

3. ಮಿಥುನ ಮತ್ತು ಕನ್ಯಾ ರಾಶಿಗಳು:

ಮಿಥುನ ರಾಶಿಯವರ ಗುಣಾವಗುಣಗಳು: ಮಿಥುನ ರಾಶಿಯವರು ಜೀವನದಲ್ಲಿ ನಿರ್ದಿಷ್ಟ ಗುರಿಗಳಿಲ್ಲದೆ ಅನಿಯೋಜಿತವಾಗಿ ಕಾರ್ಯಗಳನ್ನು ಮಾಡುವವರಾಗಿರುತ್ತಾರೆ. ಯಾವುದೇ ಕಾರ್ಯಗಳನ್ನು ನಿಖತರೆ ಮತ್ತು ಸ್ಪಷ್ಟತೆಯಿಂದ ಮಾಡಲಾರರು. ಜೀವನದ ತೀರ್ಮಾನಗಳು ಯೋಜಿತವಾಗಿರುವುದಿಲ್ಲ.

ಕನ್ಯಾ ರಾಶಿಯವರ ಗುಣಾವಗುಣಗಳು: ಕನ್ಯಾ ರಾಶಿಯವರು ಇದಕ್ಕೆ ವಿರುದ್ಧವಾಗಿ ಬಹಳ ಶಿಸ್ತಿನ ಮತ್ತು ಪೂರ್ವನಿಯೋಜಿತ ಜೀವನವನ್ನ ನೆಡೆಸಲು ಇಚ್ಚಿಸುವಂತವರಾಗಿರುತ್ತಾರೆ. ಇವರ ಎಲ್ಲಾ ಕಾರ್ಯಗಳೂ ಕೂಡ ಬಧ್ಧತೆ ಮತ್ತು ನಿಖರತೆಯಿಂದ ಕೂಡಿರತ್ತದೆ.

ಪರಿಣಾಮ: ಈ ಎರಡು ರಾಶಿಗಳಲ್ಲಿ ಜನಿಸಿದವರು ಸ್ನೇಹಿತರಾಗಲೂ ಅಸಾಧ್ಯವೆನಿಸುವಷ್ಟು ಭಿನ್ನ ವ್ಯಕ್ತಿತ್ವವನ್ನು ಹೊಂದಿದವರಾಗಿರುತ್ತಾರೆ. ಆದ್ದರಿಂದಲೇ ಈ ಜೋಡಿಯಿಂದಾದ ಸಂಬಂಧ ತೀರ ಅಲ್ಪಕಾಲೀನವಾಗುವುದರಲ್ಲಿ ಸಂಶಯವಿಲ್ಲ. ಮಿಥುನ ರಾಶಿಯವರ ಗುಣಗಳು ಕನ್ಯಾ ರಾಶಿಯವರಿಗೆ ಉದ್ರೇಕಕ್ಕೊಳಪಡಿಸಿ ಕಿರಿ ಕಿರಿಯನ್ನುಂಟುಮಾಡಬಲ್ಲದು. ಆದ್ದರಿಂದಲೇ ಈ ಸಂಬಂಧಗಳು ಅಲ್ಪಕಾಲೀನವಾಗಿರುತ್ತವೆ.

4. ಸಿಂಹ ಮತ್ತು ವೃಶ್ಚಿಕ:

4. ಸಿಂಹ ಮತ್ತು ವೃಶ್ಚಿಕ:

ಸಿಂಹರಾಶಿ ಮತ್ತು ವೃಶ್ಚಿಕ ರಾಶಿಯವರ ಗುಣಾವಗುಣಗಳು: ಈ ಎರಡೂ ರಾಶಿಯವರೂ ಕೂಡ ಒಂದೇ ತೆರನಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಆದರೆ ಇವರ ಕಾರ್ಯವೈಖರಿ ಮತ್ತು ಸಂಬಂಧವನ್ನು ನಿಭಾಯಿಸುವ ರೀತಿ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಈ ಎರಡೂ ರಾಶಿಯವರೂ ಕೂಡ ಅಧಿಕಾರವನ್ನು ಅಪೇಕ್ಷಿಸುವಂತವರಾಗಿರುತ್ತಾರೆ. ಇನ್ನೊಬ್ಬರನ್ನು ತಮ್ಮ ಮುಷ್ಟಿಯಲ್ಲಿಟ್ಟುಕೊಳ್ಳಲು ಬಯಸುವವರಾಗಿರುತ್ತಾರೆ. ಬೇರೆಯವರೊಂದಿಗೆ ಯಾವುದೇ ಬಗೆಯ ಹೊಂದಾಣಿಕೆಯನ್ನು ಮಾಡಿಕೊಳ್ಳಲು ತಯಾರಿಲ್ಲದ ಮನಸ್ಥಿತಿಯನ್ನು ಹೊಂದಿದವರಾಗಿರುತ್ತಾರೆ.

ಪರಿಣಾಮ: ಇಬ್ಬರಲ್ಲಿಯೂ ಹೊಂದಾಣಿಕೆಯ ಗುಣಗಳಿಲ್ಲದಿರುವುದರಿಂದ ಈ ಸಂಬಂಧ ಯಶಸ್ವಿಯಾಗಲಾರದು. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಪರಸ್ಪರರನ್ನು ಗೌರವಿಸುವ ಮನೋಭಾವ ಅತ್ಯಂತ ಅವಶ್ಯಕವಾದುದು ಆದರೆ ಈ ಜೋಡಿಗಳಲ್ಲಿ ಸಾಮರಸ್ಯವೆಂಬುದು ಅಸಾಧ್ಯವೆನಿಸುತ್ತದೆ. ಪ್ರೀತಿ-ಪ್ರೇಮ-ವಿವಾಹ ಸಂಬಂಧದಲ್ಲಿ ಸಂಗಾತಿಯನ್ನು ತಮ್ಮ ಮುಷ್ಟಿಯಲ್ಲಿಟ್ಟೂಕೊಳ್ಳುವ ಮನೋಭಾವ ಋಣಾತ್ಮಕ ಪರಿಣಾಮವನ್ನು ಬೀರುತ್ತವೆ.

5. ಮಕರ ಮತ್ತು ಕುಂಭ:

5. ಮಕರ ಮತ್ತು ಕುಂಭ:

ಈ ಜೋಡಿಯು ನೋಡಲು ಪರಿಪೂರ್ಣ ಜೋಡಿಯೆನಿಸಿದರೂ ಇಲ್ಲಿಯೂ ಕೂಡ ಸಂಬಂಧವು ಅಲ್ಪಕಾಲೀನವೇ ಆಗಿರುತ್ತದೆ.

ಮಕರ ರಾಶಿಯವರ ಗುಣಾವಗುಣಗಳು: ಈ ರಾಶಿಯಲ್ಲಿ ಜನಿಸಿದವರು ಲೌಕಿಕವಾಗಿ ಆಲೋಚಿಸುವ ಗುಣಗಳನ್ನು ಹೊಂದಿರುತ್ತಾರೆ. ಇವರು ಬುದ್ಧಿವಂತರೂ ಮತ್ತು ತಮಗೆ ಬೇಕಾದದ್ದನ್ನು ಜೀವನದಲ್ಲಿ ಪಡೆಯುವ ಸಾಮರ್ಥ್ಯವನ್ನು ಮತ್ತು ಜಾಣತನವನ್ನು ಹೊಂದಿದವರಾಗಿದ್ದಾರೆ.

ಕುಂಭ ರಾಶಿಯವರ ಗುಣಾವಗುಣಗಳು: ಕುಂಭ ರಾಶಿಯಲ್ಲಿ ಜನಿಸಿದವರ ಗುಣಗಳು ಮಕರ ರಾಶಿಯವರಿಗೆ ಹೋಲುವಂತಿರುತ್ತವೆ. ಇವರೂ ಕೂಡ ಲೌಕಿಕವಾದ ಆಲೋಚನೆಯನ್ನು ಹೊಂದಿದವರೂ ಮತ್ತು ಜೀವನ ಕೌಶಲವನ್ನು ಹೊಂದಿದವರಾಗಿರುತ್ತಾರೆ.

ಪರಿಣಾಮ: ಸಂಬಂಧಗಳಲ್ಲಿ ಗುಣ ಸಾಮ್ಯತೆಗಳು ಅವಶ್ಯಕವಾದರೂ, ಹೇಗೆ ಸಜಾತೀಯ ದ್ರುವಗಳು ವಿಕರ್ಷಿಸಲ್ಪಡುತ್ತದೆಯೋ ಹಾಗೆಯೇ ಈ ಎರಡೂ ರಾಶಿಗಳಲ್ಲಿ ಸಾಮ್ಯಗುಣಗಳಿದ್ದರೂ ಪರಸ್ಪರ ಆಕರ್ಷಿಸಲ್ಪಡುವುದಿಲ್ಲ. ಇವರು ತಮಗಿಂತ ಭಿನ್ನವಾಗಿರುವ ಸಂಗಾತಿಯನ್ನೇ ಬಯಸುವಂತವರಾಗಿರುತ್ತಾರೆ.

6. ತುಲ ಮತ್ತು ಮೀನ:

6. ತುಲ ಮತ್ತು ಮೀನ:

ತುಲ ರಾಶಿಯವರ ಗುಣಾವಗುಣಗಳು: ತುಲ ರಾಶಿಯವರು ಜನ ಬಳಕೆಯನ್ನು ಇಚ್ಚಿಸುವಂತವರಾಗಿರುತ್ತಾರೆ. ಸೌಂದರ್ಯೋಪಾಸಕರು ಮತ್ತು ಉತ್ತಮ ನಡವಳಿಕೆಯಿಂದ ಸುತ್ತಮುತ್ತಲಿನವರಿಂದ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಸಮಾಜಮುಖಿ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಸಮಾಜದೊಂದಿಗೆ ಹೆಚ್ಚಿನ ಸಂಪರ್ಕವನ್ನು ಹೊಂದಲು ಇಚ್ಚಸುತ್ತಾರೆ.

ಮೀನ ರಾಶಿಯವರ ಗುಣಾವಗುಣಗಳು: ಮೀನ ರಾಶಿಯವರು ಕಾಲ್ಪನಿಕ ಲೋಕದಲ್ಲಿಯೇ ಇರುವಂತವರಾಗಿರುತ್ತಾರೆ. ಇವರು ಸಮಾಜ ಮುಖಿಯಾಗಿರದೆ ಅಂತರ್ಮುಖಿಯಾಗಿರುತ್ತಾರೆ. ಸಮಾಜದೊಂದಿಗೆ ಅನ್ಯೋನ್ಯ ಸಂಪರ್ಕವನ್ನು ಹೊಂದಲು ಇಚ್ಚಿಸದವರಾಗಿರುತ್ತಾರೆ.

ಪರಿಣಾಮ: ಜನರ ಒಡನಾಟವನ್ನು ಇಚ್ಚಿಸುವವರಿಗೂ ಮತ್ತು ಕಾಲ್ಪನಿಕ ಲೋಕದಲ್ಲಿಯೇ ತಮ್ಮ ಜೀವನವನ್ನು ಸಾಗಿಸುವವರಿಗೆ ಒಳ್ಳೆಯ ತಾಳ-ಮೇಳ ಕೂಡಿಬರಲಾರದು. ಆದ್ದರಿಂದಲೇ ಈ ಎರಡೂ ರಾಶಿಗಳ ಜೋಡಿಗಳಿಂದಾದ ಸಂಬಂಧ ಅಲ್ಪಕಾಲೀನವಾಗಿರುತ್ತದೆ ಎನ್ನಲಾಗುತ್ತದೆ.

ಈ ಮೇಲಿನ ರಾಶಿ ಜೋಡಿಗಳು ಸಂಬಂಧವಾಗಿ ಮಾರ್ಪಟ್ಟಾಗ ಆಗುವ ಪರಿಣಾಮಗಳು:

ಈ ಮೇಲಿನ ಆರು ರಾಶಿ ಜೋಡಿಗಳನ್ನು ಹೊಂದಿದವರು ಸಂಬಂಧಗಳಲ್ಲಿ ಬಂಧಿಸಲ್ಪಟ್ಟರೆ ಜೀವನದಲ್ಲಿ ತೀವ್ರತೆರನಾದ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

• ಸಣ್ಣ ಪುಟ್ಟ ವಿಷಯಗಳಿಗೂ ಕಲಹಗಳು ನೆಡೆಯುವುದು ಸಾಮಾನ್ಯವಾಗಿ ಕಾಣಸಿಗುತ್ತವೆ. ಇವುಗಳನ್ನೇ ಪುನರಾವರ್ತಿತ ಕಲಹಗಳೆಂದು ಕರೆಯಬಹುದಾಗಿದೆ.

• ಆರ್ಥಿಕ ಸಂಕಷ್ಟಗಳು: ಆಕಸ್ಮಿಕವಾಗಿ ಆರ್ಥಿಕ ಸಂಕಷ್ಟಗಳು ತಲೆದೋರುವುದು ಇದರ ಪರಿಣಾಮವಾಗಿ ವೈವಾಹಿಕ ದಾಂಪತ್ಯ ಜೀವನದಲ್ಲಿ ಕಲಹಗಳುಂಟಾಗುವಂತದ್ದು.

• ಭಿನ್ನಾಭಿಪ್ರಾಯಗಳು: ಸಂಗಾತಿಗಳಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಿ ಅವುಗಳೇ ಬೆಳೆದು ಸಂಬಂಧವೇ ಮುರಿದು ಬೀಳುವ ಸಾಧ್ಯತೆಗಳೂ ಕೂಡ ಇರುತ್ತವೆ.

• ವಿಚ್ಛೇದನದವರೆಗೂ ಹೋಗಬಲ್ಲ ಸಾಂಸಾರಿಕ ಕಲಹಗಳು.

• ದಾಂಪತ್ಯದಲ್ಲಿ ನಂಬಿಕೆ ಮತ್ತು ಪ್ರೀತಿಯ ಪ್ರಮಾಣ ದಿನೇ ದಿನೇ ತಗ್ಗುವುದು.

ಹೀಗೆ ಸಂಬಂಧವೇ ಕೊನೆಗೊಳ್ಳುವ ಸಂದರ್ಭಗಳು ಎದುರಾಗುತ್ತವೆ. ಆದ್ದರಿಂದ ಜಾತಕ ಫಲದಲ್ಲಿ ನಂಬಿಕೆಯನ್ನು ಹೊಂದಿರುವವರು ಯಾವ ರಾಶಿಯ ಸಂಗಾತಿಯನ್ನು ಆಯ್ಕೆಮಾಡಿಕೊಂಡಾಗ ನಮ್ಮ ವೈವಾಹಿಕ ಜೀವನ ಸುಖಮಯವಾಗಬಹುದೆಂಬುದನ್ನು ತಿಳಿದು ಅದಕ್ಕೆ ಹೊಂದುವ ರಾಶಿಯಲ್ಲಿ ಜನಿಸಿದವರನ್ನೇ ವರಿಸುವುದು ಅತ್ಯಂತ ಸೂಕ್ತವೆನಿಸುತ್ತದೆ. ಇದರಿಂದ ಮುಂಬರುವ ನೋವುಗಳನ್ನು ನಿರಾಶೆಗಳನ್ನು ಆದಷ್ಟು ಕಡಿಮೆಗೊಳಿಸಬಹುದು. ಈ ಮೂಲಕ ಶಾಂತಿಯುತವಾದ ಮತ್ತು ಸುಖವಾದ ಜೀವನವನ್ನು ನಿಮ್ಮದಾಗಿಸಿಕೊಳ್ಳಬಹುದು.ಇಂದೇ ನಿಮ್ಮ ಜೀವನ ಸಂಗಾತಿಯಾಗುವವಳ ರಾಶಿಯನ್ನು ತಿಳಿದಕೊಳ್ಳಿ!!!!

Read more about: life astrology
English summary

Zodiac Combinations That Are Destined To Never Last! ಯಾವ ರಾಶಿಗಳ ಜೋಡಿಗಳ ಸಂಬಂಧ ದೀರ್ಘಕಾಲ ಉಳಿಯಲಾರದು

These signs get closer with their intense compatibility, but over a period of time, their craze fizzes out and turns out to be the worst match when compared to other zodiac sign combinations. Find out the zodiac sign with which you are not compatible with!
X
Desktop Bottom Promotion