For Quick Alerts
ALLOW NOTIFICATIONS  
For Daily Alerts

ರಾಶಿಫಲಕ್ಕನುಗುಣವಾಗಿ ನಿಮ್ಮಲ್ಲಿರುವ ಯಾವ ಗುಣ ಸಂಗಾತಿಯನ್ನು ಆಕರ್ಷಿಸುತ್ತದೆ ತಿಳಿಯಿರಿ

By Prabha Bhat
|

ಪುರಾತನ ಸಂಪ್ರದಾಯದ ಪ್ರಕಾರ ವಿವಾಹ ಪೂರ್ವದಲ್ಲಿ ವಧು-ವರರ ಜಾತಕಗಳನ್ನು ನೋಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಪದ್ಧತಿ ಕಡಿಮೆಯಾಗುತ್ತಿರುವುದು ಕಂಡುಬಂದರೂ ಇಂದಿಗೂ ರಾಶಿಫಲಗಳು ದಾಂಪತ್ಯದಲ್ಲಿ ಸಾಮರಸ್ಯವನ್ನು ತಂದುಕೊಡಬಲ್ಲವು ಎನ್ನಲಾಗುತ್ತದೆ. ಅಷ್ಟೇ ಅಲ್ಲದೆ ಸಂಗಾತಿಗಳ ರಾಶಿಫಲಗಳು ಇಬ್ಬರ ಸಂಬಂಧದ ಮೇಲೆಯೂ ಪರಿಣಾಮವನ್ನು ಬೀರುತ್ತದೆ ಎನ್ನಲಾಗುತ್ತದೆ.ದಾಂಪತ್ಯದಲ್ಲಿ ಪರಸ್ಪರ ಸಾಮರಸ್ಯವೆಂಬುದು ಬಹು ಮುಖ್ಯವಾದ ಅಂಶವಾಗಿರುತ್ತದೆ. ಸಂಗಾತಿಗಳಲ್ಲಿ ಪರಸ್ಪರ ಪ್ರೀತಿ, ಗೌರವ ಇತ್ಯಾದಿ ಭಾವನೆಗಳಿರುವುದು ಅತ್ಯಂತ ಅನಿವಾರ್ಯವೂ ಮತ್ತು ಅವಶ್ಯಕವಾದುದು ಎನ್ನಬಹುದು.

ದಾಂಪತ್ಯದ ಸಾಮರಸ್ಯದ ಉತ್ಪತ್ತಿಗೆ ಅಥವಾ ಇರುವಿಕೆಗೆ ಪರಸ್ಪರ ಅರ್ಥಮಾಡಿಕೊಳ್ಳುವಿಕೆಯೊಂದಿಗೆ ಇಬ್ಬರ ರಾಶಿ ಫಲಗಳೂ ಕೂಡ ಕೂಡಿಬರಬೇಕಾಗುತ್ತದೆ. ಗ್ರಹಗತಿಗಳು ಮತ್ತು ನಕ್ಷತ್ರಗಳು ದಂಪತಿಗಳ ವೈವಾಹಿಕ ಜೀವನದ ಮೇಲೆ ಪರಿಣಾಮವನ್ನು ಬೀರಬಲ್ಲವು. ಪ್ರತಿಯೊಂದೂ ರಾಶಿಗೂ ತನ್ನದೇ ಆದ ಪ್ರತ್ಯೇಕ ಗುಣಗಳನ್ನು ನೀಡುವ ಸಾಮರ್ಥ್ಯವಿರುವುದರಿಂದ ಆ ರಾಶಿಯನ್ನು ಹೊಂದಿದವನು ಪ್ರತ್ಯೇಕವಾದ ಗುಣಗಳನ್ನು ಪ್ರದರ್ಶಿಸುವ ಲಕ್ಷಣಗಳನ್ನು ಕಾಣಬಹುದಾಗಿದೆ.

ಪ್ರತಿಯೊಬ್ಬರೂ ಕೂಡ ಮತ್ತೊಬ್ಬರಿಂದ ಭಿನ್ನರಾಗಿರುತ್ತಾರೆ. ಈ ಬಗೆಯ ಬಿನ್ನತೆಗಳಿಗೆ ಕಾರಣಗಳೇನು? ಪ್ರತಿಯೊಬ್ಬರಿಗೂ ತಮ್ಮದೇ ವಿಶೇಷ ಗುಣಗಳಿರುತ್ತವೆ. ಈ ಗುಣಗಳು ನಿಮ್ಮನ್ನು ಬೇರೆಯವರಿಂದ ಭಿನ್ನವಾಗಿಸುತ್ತದೆ. ಈ ಗುಣ ಭಿನ್ನತೆ ಮತ್ತು ಗುಣ ವಿಶೇಷತೆಯನ್ನು ನಿಮ್ಮ ರಾಶಿಫಲದ ಆಧಾರದ ಮೇಲೆ ವಿವರಿಸಬಹದಾಗಿದೆ. ಈ ಅಂಕಣದಲ್ಲಿ ಯಾವ ಅಂಶಗಳು ನಿಮ್ಮ ರಾಶಿಚಕ್ರವನ್ನು ಬಿಂಬಿಸುತ್ತವೆ ಎಂಬುದನ್ನು ವಿವರವಾಗಿ ಚರ್ಚಿಸಲಾಗಿದೆ. ಈ ಆಕರ್ಷಕ ಲಕ್ಷಣಗಳು ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಮೇಲಿರುವ ಅಭಿಪ್ರಾಯಗಳನ್ನು ತಿಳಿದುಕೊಳ್ಳಲು ಸಹಾಯಕವಾಗುವಂತದ್ದು ಎನ್ನಲಾಗುತ್ತದೆ.

ಎಲ್ಲಾ ರಾಶಿಚಕ್ರಗಳೂ ಕೂಡ ತಮ್ಮದೇ ಗುಣ ವಿಶೇಷತೆಗಳನ್ನು ಆ ವ್ಯಕ್ತಿಯ ಮೇಲೆ ಪ್ರಭಾವೀಕರಿಸುವುದರಿಂದ ನಿಮ್ಮ ಮತ್ತು ನಿಮ್ಮ ಸಂಗಾತಿಗಳ ರಾಶಿಚಕ್ರವನ್ನಾಧರಿಸಿ ಹೊಂದುವಂತಹಾ ವ್ಯಕ್ತಿತ್ವ ಉಳ್ಳವರು ದಾಂಪತ್ಯದ ಸವಿಯನ್ನನುಭವಿಸಬಹುದು. ರಾಶಿ ಫಲಗಳು ನಮ್ಮ ಆರೋಗ್ಯದ ಮೇಲೆ, ನಮ್ಮ ಅರ್ಥಿಕ ಸ್ಥಿತಿಯ ಮೇಲೆ, ನಮ್ಮ ವ್ಯಕ್ತಿತ್ವದ ಮೇಲೆ, ನಮ್ಮ ಗುಣ ನಡತೆಗಳ ಮೇಲೆ ಪ್ರಭಾವವನ್ನು ಬೀರುವುದರಿಂದ ನಿಮ್ಮ ಸಂಗಾತಿಯನ್ನು ಆಕರ್ಷಿಸುವ ನಿಮ್ಮ ಗುಣಗಳ ಬಗೆಗೆ ತಿಳಿದುಕೊಳ್ಳಬಹುದು. ದ್ವಾದಶ ರಾಶಿಗಳಲ್ಲಿ ಜನಿಸಿದವರ ಗುಣವಿಶೇಷತೆಗಳನ್ನು ಈ ಕೆಳಗೆ ಚರ್ಚಿಸಲಾಗಿದೆ.

ಮೇಷ: ಮಾರ್ಚ್ 21 ರಿಂದ ಏಪ್ರಿಲ್ 19

ಮೇಷ: ಮಾರ್ಚ್ 21 ರಿಂದ ಏಪ್ರಿಲ್ 19

ನಿಮ್ಮ ಉತ್ಸಾಹ ನಿಮ್ಮ ಸಂಗಾತಿಯನ್ನೂ ಅತ್ಯುತ್ಸಾಹವನ್ನು ಹೊಂದುವಂತೆ ಮಾಡುತ್ತದೆ. ನಿಮಗೆ ಬೇಕಾದ್ದನ್ನು ಪಡೆಯುವ ಸಲುವಾಗಿ ನೀವು ಏನನ್ನಾದರೂ ಮತ್ತು ಎಷ್ಟನ್ನಾದರೂ ಮಾಡಲು ತಯಾರಿರುವಂತವರಾಗಿರುತ್ತೀರಿ. ಈ ಗುಣಗಳಿಂದಲೇ ನಿಮ್ಮೆಡಗೆ ನಿಮ್ಮ ಸಂಗಾತಿ ಬಲು ಬೇಗ ಆಕರ್ಷಿತರಾಗುತ್ತಾರೆ ಮತ್ತು ಪ್ರೀತಿ ಪಾತ್ರರಾಗಿರುತ್ತೀರಿ. ಪ್ರೀತಿಯೆಡೆಗೆ ನಿಮ್ಮ ನಿರ್ದಿಷ್ಟತೆ ಮತ್ತು ನಿಖರತೆ ನಿಮ್ಮ ಸಂಗಾತಿಯನ್ನು ಇನ್ನೂ ಅತ್ಯುತ್ಸಾಹಿಯನ್ನಾಗಿಸುತ್ತದೆ.

ವೃಷಭ: ಏಪ್ರಿಲ್ 21 ರಿಂದ ಮೇ 20:

ವೃಷಭ: ಏಪ್ರಿಲ್ 21 ರಿಂದ ಮೇ 20:

ಸಂಬಂಧಗಳೆಡೆಗಿನ ನಿಮ್ಮ ಬದ್ಧತೆ ನಿಮ್ಮ ವ್ಯಕ್ತಿತ್ವವನ್ನು ಇನ್ನೂ ಆಕರ್ಷಕವನ್ನಾಗಿಸುತ್ತದೆ. ನೀವಾಗಿಯೇ ಅತ್ಯುತ್ಸಾಹದಿಂದ ಮುನ್ನುಗ್ಗುವ ಸ್ವಭಾವದವರಾಗಿರದೆ ನಿಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ನಿಮ್ಮ ಪ್ರಯತ್ನವನ್ನು ಮಾಡುತ್ತಾ ಇರುವಂತಹಾ ಗುಣಗಳನ್ನು ಹೊಂದಿರುತ್ತೀರಿ. ಆದರೂ ಕೂಡ ಸಂಗಾತಿಗೆ ಸದಾ ಕಾಲ ಬದ್ಧವಾದ, ಸ್ಥಿರವಾದ ಜೀವನವನ್ನು ಮತ್ತು ಪ್ರೀತಿಯನ್ನು ಸದಾ ಹಂಚಿಕೊಳ್ಳುವಂತವರಾಗಿರತ್ತೀರಿ.

ಮಿಥನ: ಮೇ 21 ರಿಂದ ಜೂನ್ 20 :

ಮಿಥನ: ಮೇ 21 ರಿಂದ ಜೂನ್ 20 :

ನಿಮ್ಮಲ್ಲಿರುವ ಇಚ್ಚಾ ಶಕ್ತಿ ಮತ್ತು ಧನಾತ್ಮಕ ಶಕ್ತಿ ನಿಮ್ಮ ಸಂಗಾತಿಯನ್ನೂ ಅತ್ಯುತ್ಸಾಹಿಯನ್ನಾಗಿಸುತ್ತದೆ. ನಿಮ್ಮಲ್ಲಿರುವ ಅತಿಯೆನಿಸುವ ಮೋಡಿ ಅಥವಾ ರೂಪ ಬೇರೆಯವರನ್ನು ಹೊಟ್ಟೆಕಿಚ್ಚುಪಡುವಂತಿರುತ್ತದೆ.ಅಷ್ಟೇ ಅಲ್ಲದೆ ನೀವು ವಿಶಾಲ ಹೄದಯದವರಾಗಿರುವುದರಿಂದ ನಿಮ್ಮಲ್ಲಿರುವ ಜ್ಞಾನ, ಉತ್ಸಾಹ ಮತ್ತು ನಿಮ್ಮ ಭಾವನೆಗಳು ಸತತವಾಗಿ ನಿಮ್ಮ ಸಂಗಾತಿಯೊಡನೆ ಹಂಚಿಕೊಳ್ಳುವ ಮನಸ್ಥಿತಿಯವರಾಗಿರುತ್ತೀರಿ.

ಕರ್ಕ : ಜೂನ್ 21 ರಿಂದ ಜುಲೈ 22:

ಕರ್ಕ : ಜೂನ್ 21 ರಿಂದ ಜುಲೈ 22:

ಕಾರ್ಯ ಅಥವಾ ಕೆಲಸದಲ್ಲಿನ ನಿಮ್ಮ ಏಕಾಗ್ರತೆ ಮತ್ತು ಕಾರ್ಯ ತತ್ಪರತೆ ನಿಮ್ಮನ್ನು ನಿಮ್ಮ ಸುತ್ತಲಿನವರಿಂದ ಭಿನ್ನವೂ ವಿಶೇಷವೂ ಆಗಿ ಕಾಣುವಂತೆ ಮಾಡುತ್ತದೆ. ನಿಮ್ಮ ಸಂಗಾತಿಯೆಡೆಗೆ ನಿಮ್ಮ ಕಾಳಜಿ ಮತ್ತು ಪ್ರೀತಿ ನಿಮ್ಮ ವಿಶೇಷ ಗುಣಗಳಲ್ಲಿ ಒಂದು. ನಿಮ್ಮಲ್ಲಿ ಹೆಚ್ಚು ರಸಿಕ ಗುಣವೂ ಕೂಡ ಇರುವಂತದ್ದಾಗಿದ್ದು ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಬಲ್ಲವರಾಗಿರುತ್ತೀರಿ. ಆದ್ದರಿಂದ ನಿಮ್ಮವರು ನಿಮ್ಮೊಂದಿಗೆ ಸುರಕ್ಷಿತ ಮತ್ತು ಆರಾಮದಾಯಕ ಅನುಭೂತಿಯನ್ನು ಪಡೆಯತ್ತಾರೆ.

ಸಿಂಹ : ಜುಲೈ 23 ರಂದ ಆಗಸ್ಟ್ 23:

ಸಿಂಹ : ಜುಲೈ 23 ರಂದ ಆಗಸ್ಟ್ 23:

ನಿಮ್ಮಲ್ಲಿರವ ಉದಾರ ಗುಣಗಳು ಬೇರೆಯವರ ಹೃದಯವನ್ನು ಗೆಲ್ಲುವ ಶಕ್ತಿಯನ್ನು ಹೊಂದಿರುತ್ತದೆ. ನಿಮ್ಮ ಸಂಗಾತಿಯೆಡೆಗಿನ ಪ್ರೀತಿಯು ಸೂರ್ಯನಂತೆ ತೀವ್ರವೂ ಮತ್ತು ವಿಶ್ವಾಸದಿಂದ ಭರಿತವೂ ಆಗಿರುವುದರಿಂದ ನಿಮ್ಮ ವ್ಯಕ್ತಿತ್ವವು ಆಕರ್ಷಕವಾಗಿ ಹೊರಹೊಮ್ಮುತ್ತದೆ. ಈ ಎಲ್ಲಾ ಗುಣಗಳಿಂದ ನೀವು ಪ್ರೀತಿಪಾತ್ರರಾಗಿರುತ್ತೀರಿ.

ಕನ್ಯಾ : ಆಗಸ್ಟ್ 24 ರಿಂದ ಸೆಪ್ಟೆಂಬರ್ 23

ಕನ್ಯಾ : ಆಗಸ್ಟ್ 24 ರಿಂದ ಸೆಪ್ಟೆಂಬರ್ 23

ನಿಮ್ಮ ಗಮನಿಸುವಿಕೆಯ ಗುಣದಿಂದ ಬೇರೆಯವರು ನಿಮ್ಮೆಡೆಗೆ ಅತ್ಯುತ್ಸಾಹ ಹೊಂದಿದವರಾಗುತ್ತಾರೆ. ನೀವು ನಿಮ್ಮ ಸಂಗಾತಿಯ ಆಂತರಿಕ ಮತ್ತು ಬಾಹ್ಯ ಗುಣಗಳನ್ನು ಅರಿತವರೂ ಹಾಗೂ ಅವರ ಗುಣಾವಗುಣಗಳನ್ನು ಒಪ್ಪಿಕೊಳ್ಳುವಂತಹಾ ಮನೋಭಾವವನ್ನು ಹೊಂದಿರುತ್ತೀರಿ.ಈ ವಿಶೇಷತೆಗಳಿಂದಾಗಿ ನಿಮ್ಮ ಸಂಗಾತಿ ನಿಮ್ಮೊಡನೆ ಬಹಳ ಸ್ವಾಭಾವಕವಾಗಿ ವ್ಯವಹರಿಸುತ್ತಾರೆ.

ತುಲಾ: ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 23:

ತುಲಾ: ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 23:

ನಿಮ್ಮ ಸಾಮರಸ್ಯದಿಂದ ಕೂಡಿದ ಗುಣದಿಂದ ನಿಮ್ಮ ಸಂಗಾತಿಯೆಡೆಗೆ ಬಲವಾಗಿ ಬಂಧಿಸಿರುತ್ತದೆ. ಆದ್ದರಿಂದ ಸಂಗಾತಿಯ ಸೂರ್ಣ ಪ್ರಮಾಣದ ಸ್ನೇಹ ಮತ್ತು ಪ್ರೀತಿ ನಿಮ್ಮದಾಗುತ್ತದೆ. ನೀವು ನಿಮ್ಮ ಸಂಗಾತಿಯೊಡನೆ ಪ್ರೀತಿಯನ್ನು ಹಂಚಿಕೊಳ್ಳುವ ಮೂಲಕ ಸಾಮರಸ್ಯದ ಜೀವನವನ್ನು ಪಡೆದುಕೊಳ್ಳುವವರಾಗರುತ್ತೀರಿ. ನಿಮ್ಮೊಂದಿಗೆ ನಿಮ್ಮ ಸಂಗಾತಿಯ ಜೀವನ ಸುಲಲಿತವೂ, ಆರಾಮದಾಯಕವೂ ಆಗಿರುತ್ತದೆ. ಜಗಳಗಳ ಪ್ರಮಾಣ ಕಡಿಮೆಯಿರುತ್ತದೆ.

ವೃಶ್ಚಿಕ : ಅಕ್ಟೋಬರ್ 24 ರಿಂದ ನವೆಂಬರ್ 22:

ವೃಶ್ಚಿಕ : ಅಕ್ಟೋಬರ್ 24 ರಿಂದ ನವೆಂಬರ್ 22:

ನಿಮ್ಮಲ್ಲಿರುವ ಭಕ್ತಿ ಮತ್ತು ಉತ್ಸಾಹಿ ಗುಣಗಳು ನಿಮ್ಮ ಸಂಗಾತಿಯನ್ನು ನಿಮ್ಮೆಡೆಗೆ ಅವರನ್ನು ಆಕರ್ಷಿಸುತ್ತದೆ. ನಿಮ್ಮ ಸಂಗಾತಿಯೆಡೆಗೆ ಅತಿಯಾದ ಸಮಯವನ್ನು ಕಳೆಯುವವರಲ್ಲದಿದ್ದರೂ ನಿಮ್ಮ ಜವಾಬ್ಧಾರಿಗಳನ್ನು ಒಪ್ಪವಾಗಿ ನಿರ್ವಹಿಸುವಂತವರಾಗಿರುತ್ತೀರಿ.

ಧನಸ್ಸು : ನವೆಂಬರ್ 23 ರಿಂದ ಡಿಸೆಂಬರ್ 22:

ಧನಸ್ಸು : ನವೆಂಬರ್ 23 ರಿಂದ ಡಿಸೆಂಬರ್ 22:

ನಿಮ್ಮ ಆಶಾವಾದಿ ಗುಣವು ಯಾವಾಗಲೂ ನಿಮ್ಮ ಪ್ರಯೋಜನಕ್ಕೆ ಬರುತ್ತದೆ. ನಿಮ್ಮ ಹರ್ಷಚಿತ್ತತೆ ಮತ್ತು ಉತ್ಸಾಹಿ ಗುಣಗಳು ನಿಮ್ಮನ್ನು ನಿಮ್ಮವರಲ್ಲಿ ಆಕರ್ಷಕವನ್ನಾಗಿಸುತ್ತದೆ. ನಿಮ್ಮ ಸತ್ಯ ಪರತೆ ಮತ್ತು ಪ್ರತಿಯೊಂದೂ ಸಂದರ್ಭಗಳಲ್ಲಿಯೂ ಧನಾತ್ಮಕತೆಯನ್ನು ಕಾಣುವ ಗುಣಗಳು ನಿಮ್ಮ ಸಂಗಾತಿಯನ್ನು ನಿಮ್ಮೆಡೆಗೆ ಆಕರ್ಷಿಸುವಲ್ಲಿ ಉತ್ತೇಜಿಸುತ್ತದೆ.

ಮಕರ : ಡಿಸೆಂಬರ್ 23 ರಿಂದ ಜನವರಿ 20:

ಮಕರ : ಡಿಸೆಂಬರ್ 23 ರಿಂದ ಜನವರಿ 20:

ನಿಮ್ಮ ಸ್ಥಿರ ನಡತೆಗಳು ನಿಮ್ಮ ಸಂಗಾತಿಯನ್ನು ಅತ್ಯುತ್ಸಾಹಿಯನ್ನಾಗಿಸುತ್ತದೆ. ನಿಮ್ಮ ಸಂಬಂಧಗಳಿಗೆ ಸಂಬಂಧಿಸಿದಂತೆ ಯಾವತ್ತೂ ಕೂಡ ವೈಫಲ್ಯತೆಯನ್ನು ಅನುಭವಿಸಲು ಇಚ್ಚಿಸುವುದಿಲ್ಲ. ನಿಮ್ಮ ಸಂಗಾತಿಯನ್ನು ಯಾವುದೇ ಕಾರಣಕ್ಕೂ ನಿರಾಶೆಗೊಳಿಸಲಾರಿರಿ. ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ನಿಮ್ಮ ನಂಬಿಕೆಗಳೇ ಆಧಾರ ಸ್ಥಂಭವಾಗಿ ವರ್ತಿಸುತ್ತದೆ.

ಕುಂಭ : ಜನವರಿ 21 ರಿಂದ ಫೆಬ್ರವರಿ 18:

ಕುಂಭ : ಜನವರಿ 21 ರಿಂದ ಫೆಬ್ರವರಿ 18:

ನಿಮ್ಮ ಪ್ರಾಮಾಣಿಕತನ ನಿಮ್ಮ ಸಂಗಾತಿಯನ್ನು ನಿಮ್ಮನ್ನು ಪ್ರೀತಿಸುವಲ್ಲಿ ಪ್ರೇರೇಪಿಸುತ್ತದೆ. ನಿಮ್ಮ ಭಾವನೆಗಳನ್ನು ಸರಾಗವಾಗಿ ಹಂಚಿಕೊಳ್ಳುವುದು ನಿಮಗೆ ಕಷ್ಟಕರವಾದುದು ಆದರೆ ನಿಮ್ಮ ಸಂಗಾತಿಯೊಂದಿಗೆ ಯಾವುದೇ ಮುಚ್ಚು ಮರೆಯಿಲ್ಲದ ಪಾರದರ್ಶಕ ವ್ಯವಹಾರಗಳು ಬಲು ಬೇಗ ನಿಮ್ಮನ್ನು ಅವರ ಪ್ರೀತಿಪಾತ್ರರನ್ನಾಗಿಸುತ್ತದೆ. ಈ ಗುಣಗಳನ್ನೇ ಎಲ್ಲಾ ಸಂಗಾತಿಯೂ ಇಚ್ಚಿಸುವುದರಿಂದ ಸಂಬಂಧ ಗಟ್ಟಿಯಾಗಿರುತ್ತದೆ ಎನ್ನಬಹುದು.

ಮೀನ : ಫೆಬ್ರವರಿ 19 ರಿಂದ ಮಾರ್ಚ್ 20:

ಮೀನ : ಫೆಬ್ರವರಿ 19 ರಿಂದ ಮಾರ್ಚ್ 20:

ನಿಮ್ಮಲ್ಲಿರುವ ಪರಾನುಭೂತಿ ಗುಣಗಳು ನಿಮ್ಮನ್ನು ಶಾಂತ ಮತ್ತು ಮೃದು ಸ್ವಭಾವದವರನ್ನಾಗಿ ಬಿಂಬಿಸುತ್ತದೆ. ನಿಮ್ಮ ಕಾಳಜಿ ವಹಿಸುವ ಗುಣಗಳು, ಪ್ರೀತಿಪೂರಿತತೆ ಮತ್ತು ಸಹಾನಿಭೂತಿ ಗುಣಗಳು ನಿಮ್ಮ ಸಂಗಾತಿಯನ್ನು ಬಹು ಬೇಗ ನಿಮ್ಮನ್ನು ಆಕರ್ಷಸುತ್ತದೆ. ಈ ಮೇಲಿನ ಎಲ್ಲಾ ಗುಣಗಳು ನಿಮ್ಮ ಸಂಗಾತಿಯನ್ನು ನಿಮ್ಮೊಡನೆ ಪ್ರೀತಿಯಲ್ಲಿ ಬಂಧಿಸಿಡುವಲ್ಲಿ ಮತ್ತು ಅವರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲಸುವಂತೆ ಮಾಡುತ್ತದೆ.

ಮೇಲಿನ ಎಲ್ಲಾ ಮಾಹಿತಿಗಳನ್ನು ತಿಳಿದುಕೊಳ್ಳುವುದರಿಂದ ನಿಮ್ಮ ಮತ್ತು ನಿಮ್ಮ ಸಂಗಾತಿಯೊಡಗಿನ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಬಹುದು. ನೀವೂ ಕೂಡ ನಿಮ್ಮ ರಾಶಿಗೆ ತಿಳಿಸಲಾದ ಗುಣಗಳಿವೆಯೇ ಎಂದು ಪರೀಕ್ಷಿಸಿ ನೋಡಿಕೊಳ್ಳಿ....

Read more about: life
English summary

Qualities Of Your Personality Which Can Attract Your Love Based On Your Zodiac

Each of us have the best thing in us and what better way than understanding it with the help of our zodiac sign? Each zodiac sign has its own charm that attracts their soulmate to them. For example, if your zodiac sign is Capricorn, your stability is what drives your partner crazy.
X
Desktop Bottom Promotion