For Quick Alerts
ALLOW NOTIFICATIONS  
For Daily Alerts

ಪ್ರೀತಿ ಮತ್ತು ಅನ್ಯೋನ್ಯತೆಯ ಮೇಲೆ ಸಂಖ್ಯಾಶಾಸ್ತ್ರದ ಪ್ರಭಾವ ಹೇಗಿದೆ ನೋಡಿ.

|

ನಮ್ಮ ಬದುಕಿನಲ್ಲಿ ನಡೆಯುವ ಪ್ರತಿಯೊಂದು ಘಟನೆಯೂ ನಮ್ಮ ಗ್ರಹಗತಿಗಳ ಪ್ರಭಾವದಿಂದ ಉಂಟಾಗುತ್ತದೆ. ಅವುಗಳ ಸೂಚನೆಯನ್ನು ಅಂಕೆ ಸಂಖ್ಯೆಗಳ ತುಲನೆಯಿಂದಾಗಿ ನಿರ್ಧರಿಸುವುದು ಎಂದು ಸಂಖ್ಯಾ ಶಾಸ್ತ್ರ ತಿಳಿಸುವುದು. ಸಂಖ್ಯಾ ಶಾಸ್ತ್ರ ಎನ್ನುವುದು ಒಂದು ವಿಜ್ಞಾನ. ಅತೀಂದ್ರಿಯ ಸಂಖ್ಯೆಗಳನ್ನು ಲೆಕ್ಕಹಾಕುವ ಪರಿಯನ್ನು ಸಂಖ್ಯಾ ಶಾಸ್ತ್ರ ಎನ್ನಲಾಗುವುದು.

ಕೇವಲ ಅಂಕೆ ಎಂದು ಹೇಳಲಾಗುವ ಸಂಖ್ಯೆಗಳು ನಮ್ಮ ಬದುಕಿನ ಭವಿಷ್ಯವನ್ನು ತೆರೆದಿಡುತ್ತದೆ. ಜೀವನದಲ್ಲಿ ಅತ್ಯಂತ ಅಮೂಲ್ಯವಾದದ್ದು ಪ್ರೀತಿ. ಪ್ರೀತಿ ಇಲ್ಲದ ಜೀವನ ಬರುಡು ಜೀವನ ಎಂದು ಹೇಳಲಾಗುವುದು. ಪ್ರೀತಿ ಎನ್ನುವುದನ್ನು ನಮ್ಮ ಜೀವನದಲ್ಲಿ ಹೇಗಿರುತ್ತದೆ? ಅದನ್ನು ನಾವು ಹೇಗೆ ಅನುಭವಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಜೀವನದ ನೆಮ್ಮದಿ ನೆಲೆಸಿರುತ್ತದೆ.

ನಿಮಗೆ ನಿಮ್ಮ ಭವಿಷ್ಯದಲ್ಲಿ ಪ್ರೀತಿಯ ಜೀವನ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎನ್ನುವ ಕುತೂಹಲವಿದ್ದರೆ ಈ ರೀತಿ ಮಾಡಿ ನೋಡಿ. ಉದಾ: ಜನವರಿ 1, 1991 ನಿಮ್ಮ ಜನ್ಮ ದಿನಾಂಕವಾಗಿದ್ದರೆ ಅದನ್ನು 1+1+1+9+9+1=22 ಆಗಿದ್ದು, ಬಳಿಕ 2+2=4 ಆಗುತ್ತದೆ. ಕೊನೆಯಲ್ಲಿ ದೊರೆತ 4ರ ಸಂಖ್ಯೆಗೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.

ಸಂಖ್ಯೆ-1:

ಸಂಖ್ಯೆ-1:

ಸಂಖ್ಯೆ ಒಂದನ್ನು ಪಡೆದ ವ್ಯಕ್ತಿಗಳು ಪ್ರೀತಿಯ ಜೀವನದಲ್ಲಿ ಮುನ್ನಡೆಯನ್ನು ಸಾಧಿಸುತ್ತಾರೆ. ಜೊತೆಗೆ ವೈಭವದ ಪ್ರೇಮಿಗಳು ಎಂದು ಕರೆಸಿಕೊಳ್ಳುವರು. ಇವರು ಆಕ್ರಮಣಕಾರಿ ಲೈಂಗಿಕತೆಯನ್ನು ಪ್ರೀತಿಸುತ್ತಾರೆ. ಇವರು ತಮ್ಮ ನಡವಳಿಕೆಯಲ್ಲಿ ಸರ್ವೋತ್ತಮ ಮತ್ತು ಪ್ರಾಬಲ್ಯದ ಪ್ರವೃತ್ತಿಯನ್ನು ಹೊಂದಿದವರು ಎಂದು ತೋರಿಸಿಕೊಳ್ಳುವರು.

ಸಂಖ್ಯೆ-2:

ಸಂಖ್ಯೆ-2:

ಸಂಖ್ಯೆ ಎರಡನ್ನು ಹೊಂದಿರುವ ವ್ಯಕ್ತಿಗಳು ತಮ್ಮ ಪ್ರೀತಿಯ ಜೀವನವನ್ನು ಸರಾಗವಾಗಿ ನಡೆಸಲು ಇಷ್ಟಪಡುವರು. ಎಂತಹ ಸ್ಥಿತಿ ಎದುರಾದರೂ ಅದರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮುಂದಾಗಲು ಸಿದ್ಧರಾಗಿರುತ್ತಾರೆ. ಎಲ್ಲಾ ಸಮಯದಲ್ಲೂ ತಮ್ಮ ಪ್ರೀತಿಪಾತ್ರರಿಗೆ ಭಾವನಾತ್ಮಕ ಭದ್ರತೆ ನೀಡುವರು.

ಸಂಖ್ಯೆ-3:

ಸಂಖ್ಯೆ-3:

ಸಂಖ್ಯೆ 3ನ್ನು ಪಡೆಯುವ ವ್ಯಕ್ತಿಗಳು ವಿನೋದ, ಶಕ್ತಿಯುತವಾದ ಹಾಗೂ ಪ್ರಾಯೋಗಿಕ ಗುಣವನ್ನು ಹೊಂದಿದವರಾಗಿರುತ್ತಾರೆ. ಈ ವ್ಯಕ್ತಿಗಳು ಸ್ವಾಭಾವಿಕ ಹಾಗೂ ಸೃಜನ ಶೀಲ ಪ್ರವೃತ್ತಿಯವರಾಗಿರುತ್ತಾರೆ. ಇವರಿಗೆ ಪ್ರಣಯ ಎನ್ನುವುದು ಪ್ರೀತಿಯನ್ನು ಪಡೆದುಕೊಳ್ಳುವುದಾಗಿರುತ್ತದೆ.

ಸಂಖ್ಯೆ-4:

ಸಂಖ್ಯೆ-4:

ಸಂಖ್ಯೆ 4ನ್ನು ಹೊಂದುವ ವ್ಯಕ್ತಿಗಳು ಪ್ರೀತಿ ಮತ್ತು ಪ್ರಣಯದ ವಿಚಾರದಲ್ಲಿ ತಮ್ಮದೇ ಆದ ಆಸಕ್ತಿ ಹಾಗೂ ಕಾಳಜಿಯನ್ನು ತೋರುವರು. ಇವರು ತಮ್ಮೊಂದಿಗೆ ಪ್ರೀತಿಯಲ್ಲಿ ಬೀಳುವವರಿಗೆ ಅಥವಾ ಸಂಗಾತಿಗೆ ಗಂಭೀರವಾದ ಭಾವನೆಯೊಂದಿಗೆ ವ್ಯವಹಾರದ ರೂಪದಲ್ಲಿ ಒಲವು ತೋರುತ್ತಾರೆ.

ಸಂಖ್ಯೆ-5:

ಸಂಖ್ಯೆ-5:

ಸಂಖ್ಯೆ 5ನ್ನು ಪಡೆಯುವ ವ್ಯಕ್ತಿಗಳು ಭಾವೋದ್ರಿಕ್ತ ಮತ್ತು ಉತ್ಕಟ ಲೈಂಗಿಕತೆ ಹೊಂದಿದವರಾಗಿರುತ್ತಾರೆ. ಇವರು ಭಯವಿಲ್ಲದ ಪ್ರೇಮಿಗಳಂತೆ ತೋರುತ್ತಾರೆ. ಇವರು ಕೆಲವೊಮ್ಮೆ ಹಿಂಸಾತ್ಮಕ ಪ್ರವೃತ್ತಿ ತೋರಬಹುದು. ಇಲ್ಲವೆ ಹುಚ್ಚರಾಗಬಹುದು. ವಿರುದ್ಧ ಲೈಂಗಿಕತೆಯಲ್ಲಿ ಅತಿಯಾದ ಆಕರ್ಷಣೆ ಹೊಂದಿರುತ್ತಾರೆ.

ಸಂಖ್ಯೆ-6:

ಸಂಖ್ಯೆ-6:

ಸಂಖ್ಯೆ 6ನ್ನು ಪಡೆಯುವ ವ್ಯಕ್ತಿಗಳು ಅಪಶ್ರುತಿಯ ಅಪಾರವಾದ ಅಸಮ್ಮತಿಯನ್ನು ಹೊಂದಿರುತ್ತಾರೆ. ಶಾಂತಿಯನ್ನು ಪಡೆದುಕೊಳ್ಳಲು ಹೆಚ್ಚು ಶ್ರಮಿಸುವರು. ಇವರು ಕುಟುಂಬ ಹಾಗೂ ನೆಮ್ಮದಿಗಾಗಿ ಹೆಚ್ಚು ಶ್ರಮಿಸಿತ್ತಾರೆ. ಸ್ಥಿರ ಸಂಖ್ಯೆಯ ಪಾಲುದಾರರೊಂದಿಗೆ ಇರುವಾಗ ಈ ಸಂಖ್ಯೆಯೊಳಗೆ ಬರುವ ಜನರು ತಮ್ಮ ಜೀವನವನ್ನು ಉತ್ತಮವಾಗಿ ಅನುಭವಿಸುತ್ತಾರೆ.

ಸಂಖ್ಯೆ-7:

ಸಂಖ್ಯೆ-7:

ಸಂಖ್ಯೆ 8ನ್ನು ಪಡೆಯುವ ವ್ಯಕ್ತಿಗಳು ಬಹಳ ಏಕಾಂತವನ್ನು ಇಷ್ಟಪಡುವ ಪ್ರೇಮಿಗಳು. ಇವರು ವಸ್ತು ಮತ್ತು ವಿಷಯಗಳ ಕಡೆಗೆ ಹೆಚ್ಚು ಆಸಕ್ತರಾಗಿರುತ್ತಾರೆ. ಇವರು ಆಧ್ಯಾತ್ಮಿಕ ವಿಚಾರಕ್ಕೆ ಹೆಚ್ಚು ಗಮನ ನೀಡುವರು. ಸಂಬಂಧಗಳಿಗೆ ಹೆಚ್ಚಿನ ಗೌರವವನ್ನು ಮೀಸಲಿಡುತ್ತಾರೆ.

ಸಂಖ್ಯೆ-8:

ಸಂಖ್ಯೆ-8:

ಸಂಖ್ಯೆ 8ನ್ನು ಹೊಂದುವ ವ್ಯಕ್ತಿಗಳು ಲೈಂಗಿಕತೆ, ನೋಟ ಮತ್ತು ಪ್ರಕೃತಿಯಲ್ಲಿ ಹುಚ್ಚರಂತೆ ವರ್ತಿಸುತ್ತಾರೆ. ಮೇಲ್ನೋಟಕ್ಕೆ ಸೂಕ್ಷ್ಮ ಮತ್ತು ಮೃದು ವ್ಯಕ್ತಿಗಳಂತೆ ತೋರುತ್ತಾರೆ ಆದರೂ ಭಾವೋದ್ರಿಕ್ತ ಗುಣ ಇವರಲ್ಲಿ ಅಡಗಿರುವುದು. ಇವರಿಗೆ ಲೈಂಗಿಕತೆ ಎನ್ನುವುದು ಅಧಿಕಾರ ಮತ್ತು ಶಕ್ತಿಯನ್ನಾಗಿ ಬಳಸಿಕೊಳ್ಳುತ್ತಾರೆ.

ಸಂಖ್ಯೆ-9:

ಸಂಖ್ಯೆ-9:

ಸಂಖ್ಯೆ 9ನ್ನು ಪಡೆಯುವ ವ್ಯಕ್ತಿಗಳು ಸಾಮಾನ್ಯವಾಗಿ ಸಹಾಯ ಮಾಡುವ ವ್ಯಕ್ತಿಗಳಾಗಿರುತ್ತಾರೆ. ಸಹಾನುಭೂತಿಯನ್ನು ಹೊಂದಿರುವ ವ್ಯಕ್ತಿಗಳು ಇವರು. ಪ್ರಣಯದ ಪೂರ್ವದಲ್ಲಿ ಸಹಾಯ ಮಾಡುವುದರ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಇವರು ನೈಜವಾದ ಪ್ರೀತಿಯ ಬಗ್ಗೆ ಗೊಂದಲಕ್ಕೆ ಒಳಗಾಗುತ್ತಾರೆ. ಜೊತೆಗೆ ತಮ್ಮ ಸಂಗಾತಿಗೆ ಅಥವಾ ಪಾಲುದಾರರಿಗೆ ಸದಾಕಾಲ ಭರವಸೆಯನ್ನು ನೀಡಲು ಇಷ್ಟಪಡುವರು.

Read more about: ಜೀವನ
English summary

influence-of-numerology-on-love-life

influence-of-numerology-on-love-life
X
Desktop Bottom Promotion