For Quick Alerts
ALLOW NOTIFICATIONS  
For Daily Alerts

ನಕಾರಾತ್ಮಕ ಸ್ವಭಾವ ಯಾವ ರೀತಿ ಹಿತವನ್ನುಂಟು ಮಾಡುತ್ತದೆ ನೋಡಿ

By Divya Pandit
|

ಯಾರೂ ಸರ್ವಕಾಲದಲ್ಲೂ ಪರಿಪೂರ್ಣರಾಗಿರಲು ಸಾಧ್ಯವಿಲ್ಲ. ಎಲ್ಲರಲ್ಲೂ ಒಂದೊಂದು ನಕಾರಾತ್ಮಕ ಗುಣಗಳು ಇದ್ದೇ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಳ್ಳೆಯ ಮತ್ತು ಕೆಟ್ಟಗುಣಗಳು ಇರುವುದು ಸಾಮಾನ್ಯ. ಸಕಾರಾತ್ಮಕ ಗುಣದಿಂದ ಒಳಿತನ್ನು ಹಾಗೂ ನಕಾರಾತ್ಮಕ ಗುಣದಿಂದ ಕೆಟ್ಟ ಅನುಭವವನ್ನು ಅನುಭವಿಸುತ್ತಾನೆ ಎಂದು ಹೇಳಲಾಗುವುದು. ಅದೇ ಕೆಲವೊಮ್ಮೆ ನಮ್ಮ ನಿರೀಕ್ಷೆಗೂ ಮೀರಿದ ಪರಿಣಾಮವನ್ನು ಅನುಭವಿಸುವ ಸಾಧ್ಯತೆಗಳಿರುತ್ತವೆ.

ನೀವು ನಿಮ್ಮ ಸ್ನೇಹಿತರೊಂದಿಗೆ ಇರುವಾಗ ಕೆಲವೊಮ್ಮೆ ಗೊಂದಲಕ್ಕೆ ಒಳಗಾದಂತಹ ಸನ್ನಿವೇಶಗಳನ್ನು ಎದುರಿಸಿರಬಹುದು. ಅವರ ವರ್ತನೆಗಳು ಕೆಲವೊಮ್ಮೆ ನಿಮಗೆ ಬೇಸರ ತಂದಿರಬಹುದು. ಅವರ ನಕಾರಾತ್ಮಕ ಗುಣಗಳು ನಿಮಗೆ ಇಷ್ಟವಾಗದೆಯೇ ಇರಬಹುದು. ಆಗ ನಿಮಗೆ ಅವರ ಬಗ್ಗೆ ಒಂದಿಷ್ಟು ಬೇರ ಉಂಟಾಗಿರುವ ಸಾಧ್ಯತೆಗಳು ಇರಬುದು. ಇವೆಲ್ಲವೂ ಅವರವರ ರಾಶಿಚಕ್ರಕ್ಕೆ ಅನುಗುಣವಾದ ವರ್ತನೆಗಳು ಹಾಗೂ ಗ್ರಹಗತಿಗಳ ಪ್ರಭಾವ ಎನ್ನಲಾಗುವುದು.

Zodiac Signs

ನೀವು ಒಮ್ಮೆಯಾದರೂ ನಿಮ್ಮ ಸ್ನೇಹಿತರು ಯಾಕೆ ಹೀಗೆ ವರ್ತಿಸುತ್ತಾರೆ ಎಂದು ಯೋಚಿಸಿದ್ದೀರಾ? ಸಾಮಾನ್ಯವಾಗಿ ಯಾರೇ ಆದರೂ ನಕಾರಾತ್ಮಕ ವರ್ತನೆಯನ್ನು ತೋರಿದರೆ ಅವರಿಂದ ದೂರ ಇರಲು ಯೋಚಿಸುತ್ತೇವೆ. ಅವರ ಸ್ಥಿತಿ ಏಕೆ ಹೀಗಿದೆ? ಎನ್ನುವುದರ ಕುರಿತು ಚಿಂತಿಸಿರುವುದೇ ಇಲ್ಲ. ತುಂಬಾ ಆತ್ಮೀಯರಾಗಿದ್ದರೆ ಅಷ್ಟೇ ಅವುಗಳನ್ನು ವಿಚಾರಿಸಲು ಮುಂದಾಗುತ್ತಾರೆ ಅಷ್ಟೆ.

ವ್ಯಕ್ತಿಯಲ್ಲಿರುವ ನಕಾರಾತ್ಮಕ ಗುಣವು ವ್ಯಕ್ತಿಗೆ ಕೆಡುಕು ಮಾಡುವುದು ಎಂದು ಹೇಳುವುದು ಸಹಜ. ಆದರೆ ಕೆಲವೊಮ್ಮೆ ವ್ಯಕ್ತಿಯ ಪರಿಸ್ಥಿತಿ ಬಹಳಷ್ಟು ಕಷ್ಟಕರವಾಗಿದ್ದರೆ ಅಥವಾ ಚಿಂತನೀಯ ಸ್ಥಿತಿಯಲ್ಲಿದ್ದರೆ ಅವರಲ್ಲಿರುವ ನಕಾರಾತ್ಮಕ ಗುಣಗಳೇ ಸಹಾಯ ಮಾಡುತ್ತದೆ. ಎಂತಹ ಗಂಭೀರ ಸಮಸ್ಯೆ ಎದುರಾದರೂ ಈ ನಕಾರಾತ್ಮಕ ಗುಣಗಳು ವ್ಯಕ್ತಿತ್ವವನ್ನು ಅಲುಗಾಡಿಸಲು ಕೊಡುವುದಿಲ್ಲ ಎಂದು ಹೇಳಲಾಗುವುದು. ಅಲ್ಲದೆ ನಕಾರಾತ್ಮಕ ವರ್ತನೆಗಳು ಒಳ್ಳೆಯ ಫಲಿತಾಂಶವನ್ನು ನೀಡುವುದು ಎನ್ನಲಾಗುವುದು.

ಹಾಗಾದರೆ ರಾಶಿಚಕ್ರಗಳಿಗೆ ಅನುಗುಣವಾಗಿ ಯಾವೆಲ್ಲಾ ನಕಾರಾತ್ಮಕ ಗುಣಗಳಿರುತ್ತವೆ? ಅವುಗಳ ಪ್ರಭಾವದಿಂದ ಯಾವ ಬಗೆಯ ಸಕಾರಾತ್ಮಕ ಫಲಿತಾಂಶವನ್ನು ಪಡೆದುಕೊಳ್ಳುವೆವು? ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

ಮೇಷ:

ಮೇಷ:

ಮೇಷ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಎಲ್ಲಾ ತರಹದ ಕೆಲಸವನ್ನು ನಿರ್ವಹಿಸಬಲ್ಲರು. ತಮಗಾಗಿ ಒಂದಿಷ್ಟು ಸಮಯವನ್ನು ಮೀಸಲಾಗಿಟ್ಟುಕೊಳ್ಳುವರು. ಇವರು ಸಿಟ್ಟಿಗೆ ಒಳಗಾಗಿರುವಾಗ ಅಥವಾ ಒತ್ತಡಕ್ಕೆ ಒಳಗಾಗಿದ್ದರೆ ಎಲ್ಲರಿಂದಲೂ ಸ್ವಲ್ಪ ದೂರ ಸರಿದುಕೊಳ್ಳುವರು. ಜೊತೆಗೆ ಭಾವನೆ ಹಾಗೂ ಮನಸ್ಸನ್ನು ಹತೋಟಿಗೆ ತಂದುಕೊಳ್ಳುವರು.

ಇವರು ಭಾವೋದ್ರಿಕ್ತ ಹಾಗೂ ಉತ್ಸಾಹಪೂರ್ಣ ವ್ಯಕ್ತಿಗಳಾಗಿರುತ್ತಾರೆ. ಹಾಗಾಗಿ ಆಗಾಗ ಕೆಲವು ವಿಚಾರಗಳಿಗೆ ಬಹುಬೇಗ ಸಿಟ್ಟು ಹಾಗೂ ನಕಾರಾತ್ಮಕ ವರ್ತನೆಯನ್ನು ತೋರುವ ಸಾಧ್ಯತೆಗಳು ಹೆಚ್ಚು. ಆಕ್ರಮಣ ಶೀಲ ಪ್ರವೃತ್ತಿಯನ್ನು ತೋರುವರು. ಇದು ಕೆಲವೊಮ್ಮೆ ಇವರ ವ್ಯಕ್ತಿತ್ವದ ಮೇಲೆ ಇತರರ ಪ್ರಭಾವ ಉಂಟಾಗದಂತೆ ಕಾಪಾಡುವುದು. ಸುತ್ತಲಿನ ಜನರು ಇವರ ಮೇಲೆ ನಿಯಂತ್ರಣ ಹೇರಲು ಪ್ರಯತ್ನಿಸುವುದು ತಪ್ಪುವುದು. ಆದಷ್ಟು ಪ್ರಾಮಾಣಿಕ ವ್ಯಕ್ತಿಗಳಾಗಿ ಉಳಿದುಕೊಳ್ಳುವರು.

ವೃಷಭ:

ವೃಷಭ:

ಎಂತಹ ಪರಿಸ್ಥಿತಿ ಎದುರಾದರೂ ವೃಷಭ ರಾಶಿಯವರು ತಮ್ಮ ಸ್ಥಿರತೆಯನ್ನು ಕಾಪಾಡಿಕೊಳ್ಳುವುದರ ಮೂಲಕ ಪರಿಸ್ಥಿತಿಯನ್ನು ಎದುರಿಸುವರು. ಪರಿಸ್ಥಿತಿಯ ಕುರಿತು ಯಾವುದೇ ದೋಷಣೆಯನ್ನು ಮಾಡುವುದಿಲ್ಲ. ಪ್ರಪಂಚವು ಅಪಾಯಗಳಿಂದ ಕೂಡಿದೆ, ಸುತ್ತಲಿನವರು ನಾಟಕ ಮಾಡುವರು ಎನ್ನುವಂತಹ ಯಾವುದೇ ಭ್ರಮೆಗೆ ಒಳಗಾಗುವುದಿಲ್ಲ.

ಆದರೆ ಕೆಲವೊಮ್ಮೆ ಇವರ ಸೋಮಾರಿತನವು ಇವರ ನಕಾರಾತ್ಮಕ ಗುಣ ಎಂದು ಹೇಳಲಾಗುವುದು. ಇವರು ಸೋಮಾರಿತನವನ್ನು ಹೊಂದಿರದೆ ಇದ್ದಾಗ ಸುತ್ತಲಿನವರು ಇವರೊಂದಿಗೆ ಮೋಜು ಮಾಡಲು ಬಯಸುವರು. ಅಂತಹ ಸಮಯದಲ್ಲಿ ಸೋಮಾರಿ ತನದಿಂದ ವಿಶ್ರಾಂತಿ ತೆಗೆದುಕೊಳ್ಳಲು ಇವರು ಬಯಸುವುದರಿಂದ ಇವರಿಂದ ದುರುಪಯೋಗ ಪಡಿಸಿಕೊಳ್ಳುವ ಜನರಿಂದ ಇವರು ದೂರ ಉಳಿಯಬಹುದು. ಇವರ ಈ ನಕಾರಾತ್ಮಕ ಗುಣವು ಇವರಿಗೆ ಒಳ್ಳೆಯದನ್ನುಂಟುಮಾಡುವುದು.

ಮಿಥುನ:

ಮಿಥುನ:

ಇವರು ಅದ್ಭುತ ಸಂವಹನ ಕೌಶಲ್ಯವನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಕೆಲವೊಮ್ಮೆ ಇವರ ಈ ಕೌಶಲ್ಯದಿಂದಲೇ ತೊಂದರೆಯನ್ನು ಎದುರಿಸಬೇಕಾಗುವುದು. ಇವರ ಮಾತುಗಳು ಅಥವಾ ವಿಚಾರಗಳು ಬೇರೆಯ ದಿಕ್ಕನ್ನೇ ಪಡೆದುಕೊಳ್ಳುತ್ತಿದೆ ಎಂದಾಗಲೂ ತಮ್ಮ ಮಾತುಗಾರಿಕೆಯನ್ನು ಇವರು ನಿಲ್ಲಿಸುವುದಿಲ್ಲ.

ಸಾಮಾಜಿವಾಗಿ ಆಕರ್ಷಕರಾಗಲು ಹಾಗೂ ಅತಿಹೆಚ್ಚು ಮಾತನಾಡಲು ಬಯಸುತ್ತಾರೆ. ಇವರ ಮಾತಿನಿಂದ ಆತ್ಮೀಯರಿಗೆ ನೋವುಂಟುಮಾಡಬಹುದು. ಸದಾ ವಟವಟ ಎನ್ನುವ ಇವರ ಸ್ವಭಾವದಿಂದ ಇತರೊಂದಿಗೆ ತಮ್ಮ ಆಂತರ್ಯದ ವಿಚಾರ ಹಾಗೂ ವೈಯಕ್ತಿಕ ಚಿಂತನೆಗಳನ್ನು ಹೇಳಿಕೊಳ್ಳುವರು. ಇದು ಅವರ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಲು ಆಪ್ತರಿಗೆ ನೆರವಾಗುವುದು.

ಕರ್ಕ:

ಕರ್ಕ:

ಈ ರಾಶಿಯ ವ್ಯಕ್ತಿಗಳು ಬಹುಬೇಗ ಇತರರ ಭಾವನೆ ಹಾಗೂ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವರು. ಹಾಗಾಗಿ ಇವರು ಇತರರನ್ನು ಬಹುಬೇಗ ಅರ್ಥಮಾಡಿಕೊಳ್ಳುವ ಗುಣವನ್ನು ಹೊಂದಿದ್ದಾರೆ ಎಂದು ಹೇಳಲಾಗುವುದು. ಜೊತೆಗೆ ಅವರೊಂದಿಗೆ ತಾವು ಹೇಗೆ ಇರಬೇಕು ಎನ್ನುವುದನ್ನು ಬಹುಬೇಗ ತಿಳಿದುಕೊಳ್ಳುತ್ತಾರೆ.

ಸ್ನೇಹಿತರೊಂದಿಗೆ ಬಹುಬೇಗ ಬೆರೆಯುವುದು ಹಾಗೂ ಅವರ ಬಗ್ಗೆ ತಿಳಿದುಕೊಳ್ಳುವ ಇವರು ಅವರ ಬಗ್ಗೆ ಗಾಸಿಪ್ ಹರಡುವರು. ಇದು ಅವರ ಕೆಟ್ಟ ಗುಣ ಅಥವಾ ನಕಾರಾತ್ಮಕ ವರ್ತನೆ ಎನ್ನಬಹುದು. ಇವರ ಈ ಕೆಲಸದಿಂದ ಸಿಟ್ಟಿಗೆದ್ದ ಸ್ನೇಹಿತರು ಅವರ ಇನ್ನೊಂದು ಮುಖವನ್ನು ತೋರುವರು. ಈ ಪರಿಯಿಂದಾಗಿ ಸ್ನೇಹಿತರ ಅಥವಾ ಸುತ್ತಲಿನ ಜನರ ಆಳವಾದ ಭಾವನೆ ಏನು ಎನ್ನುವುದು ಅರ್ಥಮಾಡಿಕೊಳ್ಳಲು ಸುಲಭವಾಗುವುದು.

ಸಿಂಹ:

ಸಿಂಹ:

ಇವರು ಸದಾ ಎಲ್ಲರೆದುರು ಕೇಂದ್ರ ಬಿಂದುವಾಗಿ ಆಕರ್ಷಣೆಗೆ ಒಳಗಾಗಬೇಕೆಂದು ಬಯಸುತ್ತಾರೆ. ಇವರನ್ನು ನಿರ್ಲಕ್ಷಿಸಿದವರ ಬಗ್ಗೆ ದ್ವೇಷಿಸುತ್ತಾರೆ. ಇಂತಹ ಸ್ಥಿತಿಯಲ್ಲಿ ಇವರು ಅತಿರೀಕದ ರೀತಿಯಲ್ಲಿ ವರ್ತಿಸಿದರೆ ಯಾವುದೇ ಆಶ್ಚರ್ಯಕ್ಕೆ ಒಳಗಾಗುವ ಅಗತ್ಯವಿಲ್ಲ. ಭಾವೋದ್ರಿಕ್ತ ಮತ್ತು ಸೃಜನಶೀಲರಾದ ಇವರು ಬಹಳ ಜಂಬದ/ಸೊಕ್ಕಿನ ವ್ಯಕ್ತಿಗಳು ಹೌದು.

ಇವರ ಈ ಗುಣಗಳು ಇವರ ಆತ್ಮ ವಿಶ್ವಾಸವನ್ನು ಕುಗ್ಗಿಸಬಹುದು. ಇವರ ಈ ಗುಣಗಳನ್ನು ಗಮನಿಸಿದವರು ಇಂತಹದ್ದೇ ಗುಣ ಇರುವ ವ್ಯಕ್ತಿಗಳು ಇವರಿಂದ ದೂರ ಇರುವರು. ನಕಾರಾತ್ಮಕವಾದ ಇವರ ಸ್ವಭಾವವು ಇವರಿಗೆ ಅನುಕೂಲವನ್ನುಂಟುಮಾಡುವುದು.

ಕನ್ಯಾ:

ಕನ್ಯಾ:

ಇವರು ತಮ್ಮ ಬಗ್ಗೆ ಹಾಗೂ ಇತರರ ಬಗ್ಗೆ ಹೆಚ್ಚು ವಿಮರ್ಶೆಯನ್ನು ಮಾಡುವರು. ಇದು ಕೆಲವೊಮ್ಮೆ ಒಳಿತನ್ನು ಮಾಡಿದರೆ ಬಹುತೇಕ ಸಂದರ್ಭದಲ್ಲಿ ಕೆಡುಕನ್ನು ಅನುಭವಿಸಬೇಕಾಗುವುದು. ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ನ್ಯೂನತೆಯನ್ನು ಹುಡುಕುವುದರ ಮೂಲಕ ತಮ್ಮ ನಕಾರಾತ್ಮಕ ವರ್ತನೆಯನ್ನು ತೋರಿಸಿಕೊಳ್ಳುವರು. ಕೆಲವೊಮ್ಮೆ ಇವರ ಈ ಗುಣವು ಇತರರಿಗೆ ಕಿರಿಕಿರಿಯನ್ನುಂಟುಮಾಡುವುದು.

ಯಾವ ವ್ಯಕ್ತಿಯೂ ಪರಿಪೂರ್ಣತೆಯನ್ನು ಹೊಂದಿರುವುದಿಲ್ಲ ಎನ್ನುವುದನ್ನು ಇವರು ಅರಿತಿರಬೇಕು. ಇವರ ಈ ಗುಣವು ಇತರಿಗೆ ಉಚಿತ ಎನಿಸದು. ಅಲ್ಲದೆ ಬಹುತೇಕ ಜನರು ಇವರ ಈ ಗುಣದಿಂದ ದೂರ ಇರಲು ಬಯಸುವರು. ಇದು ಕನ್ಯಾರಾಶಿಯವರಿಗೆ ಅನುಕೂಲವಾಗುವುದು. ಯಾರು ತಮ್ಮ ಆತ್ಮೀಯ ವ್ಯಕ್ತಿಗಳು ಎಂದು ಗುರುತಿಸಲು ಅನುಕೂಲವಾಗುವುದು.

ತುಲಾ:

ತುಲಾ:

ಇವರು ಶಾಂತ ಪ್ರಿಯ ವ್ಯಕ್ತಿಗಳು ಎಂದು ಹೇಳಲಾಗುವುದು. ಇವರು ಎಲ್ಲಾ ವಿಚಾರಗಳನ್ನು ತಮ್ಮ ಮನಸ್ಸಿನಲ್ಲಿಯೇ ಇಟ್ಟುಕೊಳ್ಳುವರು. ಇವರು ಮೆಲ್ನೋಟಕ್ಕೆ ಸ್ವಲ್ಪ ಗಂಭೀರ ವ್ಯಕ್ತಿ ಹಾಗೂ ನಾಟಕವನ್ನು ಮಾಡುತ್ತಾರೆ ಎಂದು ಕಾಣಿಸುವುದು. ಸ್ನೇಹಿತರ ನಡುವೆ ಮಧ್ಯವರ್ತಿಗಳಾಗಿ ಇರಲು ಇಷ್ಟಪಡುವರು. ಇದು ಕೆಲವೊಮ್ಮೆ ಇತರರಿಗೆ ಒತ್ತಡವನ್ನುಂಟುಮಾಡಬಹುದು.

ವಿಶಾಲ ಮನಸ್ಸಿಲ್ಲದ ಸ್ನೇಹಿತರು ತಾವಾಗಿಯೇ ಇವರಿಂದ ದೂರವಾಗುತ್ತಾರೆ. ಇದರಿಂದಾಗಿ ಇವರು ಯಾರು ಹಿತವರು ಎಂದು ಗುರುತಿಸುವ ಅಗತ್ಯವಿರುವುದಿಲ್ಲ. ಇವರು ತೋರುವ ಉದ್ವಿಗ್ನತೆಯು ಇವರಿಗೆ ಒಳಿತಿನ ಫಲಿತಾಂಶವನ್ನು ನೀಡುವುದು ಎಂದು ಹೇಳಲಾಗುವುದು.

ವೃಶ್ಚಿಕ:

ವೃಶ್ಚಿಕ:

ಈ ರಾಶಿಯವರು ಆಹ್ಲಾದಕರವಾದ ಭಾವನೆ ಹಾಗೂ ಸ್ವಭಾವದವರು. ಗಾಢವಾದ ಚಿಂತನೆ ಹೊಂದಿರುವ ಇವರು ಕೆಲವೊಮ್ಮೆ ಹಿಂಸಾತ್ಮಕ ಪ್ರವೃತ್ತಿಯನ್ನು ತೋರಬಹುದು. ಇವರ ಈ ಗುಣವನ್ನು ತೋರುವ ಮುನ್ನ ಪ್ರಾಮಾಣಿಕತೆಯಿಂದ ಇರಬೇಕೆಂದು ಬಯಸುತ್ತಾರೆ. ಜೊತೆಗೆ ತಮ್ಮ ಕೆಲಸಕ್ಕೆ ಶ್ಲಾಘನೆಯನ್ನು ನಿರೀಕ್ಷಿಸುವರು.

ಇವರ ಈ ಕಠಿಣ ಪ್ರವೃತ್ತಿಯಿಂದಾಗಿ ಸ್ನೇಹಿತರಿಂದ ಕತ್ತಲು ಹಾಗೂ ಕಷ್ಟದ ಕೆಲಸಗಳಿಗೆ ತಳ್ಳಲ್ಪಡುತ್ತಾರೆ. ಶ್ರಮದಾಯಕ ಹಾಗೂ ಸೂಕ್ತ ನಿರ್ವಹಣೆಯ ಕಲೆ ಹೊಂದಿರುವ ಇವರು ಸುಲಭವಾಗಿ ಕೆಲಸ ನಿರ್ವಹಿಸುವರು. ಜೊತೆಗೆ ಶ್ರೇಯಸ್ಸು ದೊರೆಯುವುದು ಎಂದು ಹೇಳಲಾಗುವುದು. ಅನಿರೀಕ್ಷಿತವಾದ ಜಯ ಹಾಗೂ ಹೆಸರನ್ನು ಪಡೆದುಕೊಳ್ಳುವರು.

ಧನು:

ಧನು:

ಸ್ವತಂತ್ರ ಪ್ರಿಯರು ಹಾಗೂ ಸಾಹಸ ಪ್ರವೃತ್ತಿಯವರಾದ ಇವರು ಅದ್ಭುತ ವಿಚಾರವನ್ನು ಹೊಂದಲು ಬಯಸುತ್ತಾರೆ. ಜೊತೆಗೆ ಸಾಕಷ್ಟು ಸಮಯದಲ್ಲಿ ಹೆಚ್ಚು ಆನಂದದಿಂದ ಇರಲು ಬಯಸುವರು. ತಮ್ಮದೇ ಆದ ಲೋಕದಲ್ಲಿ ತೇಲುವ ಇವರನ್ನು ಜನರು ತಪ್ಪಾಗಿ ಗ್ರಹಿಸುವರು.

ಯಾವುದೇ ಹೇಳಿಕೆಗೆ ತಲೆಕೊಡದ ಇವರು ತಮ್ಮದೇ ಆದ ರೀತಿಯಲ್ಲಿ ಜೀವನ ಹಾಗೂ ವರ್ತನೆಯನ್ನು ತೋರುತ್ತಾರೆ. ಇದು ಅವರಿಗೆ ಹೆಚ್ಚಿನ ಸಂತೋಷ ಹಾಗೂ ವಿಶೇಷ ಸಾಧನೆ ಮಾಡಲು ಸಹಕರಿಸುವುದು.

ಮಕರ:

ಮಕರ:

ಇವರು ಬಹಳ ಗಂಭೀರ ಪ್ರವೃತ್ತಿಯವರು. ಕೆಲವೊಮ್ಮೆ ಇವರ ಗಂಭೀರ ಪ್ರವೃತ್ತಿಯಿಂದಲೇ ಇವರು ಕೆಲಸವನ್ನು ಸೂಕ್ತವಾಗಿ ನಿರ್ವಹಿಸುವರು. ಬುದ್ಧಿವಂತವರಾದ ಇವರು ತಮ್ಮದೇ ಆದ ರೀತಿಯಲ್ಲಿ ಕೆಲಸವನ್ನು ನಿರ್ವಹಿಸುತ್ತಾರೆ. ಇವರು ಇತರರೊಂದಿಗೆ ಹಾಸ್ಯಾಸ್ಪದವಾದ ವರ್ತನೆಯಿಂದಲೂ ಬೆರೆಯುವರು ಎನ್ನಲಾಗುವುದು.

ಇವರು ಪ್ರಾಯೋಗಿಕ ಮತ್ತು ಸ್ವಯಂ ನಿಯಂತ್ರಣ ಹೊಂದಿರುವ ವ್ಯಕ್ತಿಗಳಾಗಿರುವುದರಿಂದ ಇತರರ ಮಾತಿಗೆ ಅಷ್ಟಾಗಿ ಪ್ರಾಮುಖ್ಯತೆ ನೀಡರು. ಇತರರನ್ನು ನಿರ್ಲಕ್ಷಿಸುವ ಕಾರಣದಿಂದ ಬಹುತೇಕ ಜನರು ಇವರಿಂದ ದೂರ ನಿಲ್ಲಲು ಬಯಸುವರು. ಇವರ ಆಪ್ತರು ಮಾತ್ರ ಇವರ ಬಳಿ ಇರುವರು. ಇದು ಅವರಿಗೆ ಉತ್ತಮ ಫಲಿತಾಂಶ ನೀಡುವುದು ಎಂದು ಹೇಳಲಾಗುವುದು.

ಕುಂಭ:

ಕುಂಭ:

ಕ್ರಿಯಾಶೀಲ ಹಾಗೂ ಬುದ್ಧಿವಂತ ವ್ಯಕ್ತಿಗಳಾದ ಇವರು ಪ್ರತಿಯೊಂದು ಕೆಲಸವನ್ನು ಬಹಳ ಸೂಕ್ಷ್ಮ ರೀತಿಯಲ್ಲಿ ನಿರ್ವಹಿಸುವರು. ಇವರು ಎಲ್ಲಾ ಸಂಗತಿಗಳನ್ನು ಬಹಳ ಆಳವಾದ ಚಿಂತನೆ ಹಾಗೂ ನಿರ್ವಹಣೆಯ ಮೂಲಕ ನೆರವೇರಿಸುತ್ತಾರೆ. ಏಕಾಂತವಾಗಿರಲು ಬಯಸುವ ಇವರ ಗುಣವು ಜನರಿಂದ ಒಂದಿಷ್ಟು ಅಂತರವನ್ನು ಸೃಷ್ಟಿಸುವುದು.

ಶಾಂತವಾದ ಮತ್ತು ಒಂಟಿಯಾಗಿರುವಂತಹ ಗುಣದಿಂದ ಜನರು ಇವರಿಂದ ದೂರ ಇರುತ್ತಾರೆ. ಸೊಕ್ಕಿನ ವ್ಯಕ್ತಿ ಎಂದು ಸಹ ಪರಿಗಣಿಸುವರು. ಇವರ ಈ ನಕಾರಾತ್ಮಕ ಗುಣದಿಂದ ತಮ್ಮದೇ ಆದ ಒಂದಿಷ್ಟು ಸಮಯವನ್ನು ಪಡೆದುಕೊಳ್ಳುವರು. ಈ ಸಮಯದಲ್ಲಿ ಅಗತ್ಯ ಕೆಲಸಗಳನ್ನು ನೆರವೇರಿಸುವುದರ ಮೂಲಕ ಪ್ರಗತಿಶೀಲರಾಗುವರು.

ಮೀನ:

ಮೀನ:

ಮೃದು ಸ್ವಭಾವದವರು ಹಾಗೂ ಸ್ನೇಹಪರ ವ್ಯಕ್ತಿತ್ವದವರಾಗಿರುತ್ತಾರೆ. ಸೃಜನಾತ್ಮಕ ಮತ್ತು ಕಲಾತ್ಮಕ ಪ್ರತಿಭೆಯು ಇವರನ್ನು ಸದಾ ಆಕರ್ಷಕ ವ್ಯಕ್ತಿಯನ್ನಾಗಿ ಮಾಡಿಸುವುದು. ಇವರ ಮೃದು ಸ್ವಭಾವವನ್ನು ಇತರರು ದುರುಪಯೋಗ ಪಡಿಸಿಕೊಳ್ಳುವಸಾಧ್ಯತೆಗಳು ಹೆಚ್ಚಾಗಿರುತ್ತವೆ.

ತಮ್ಮ ಇಚ್ಛೆಗೆ ವಿರುದ್ಧವಾದ ಅಥವಾ ನಿರಸವನ್ನುಂಟುಮಾಡುವ ಕೆಲಸವನ್ನು ನಿರ್ವಹಿಸರು. ಇದು ಇವರ ಸುತ್ತಲಿನ ವ್ಯಕ್ತಿಗಳಿಗೆ ಗೊಂದಲ ಹಾಗೂ ಬೇಸರವನ್ನುಂಟುಮಾಡಬಹುದು. ಗಂಭೀರ ಆತ್ಮಾವಲೋಕನದಿಂದ ಉತ್ತಮ ವರ್ತನೆ ಹಾಗೂ ಸ್ನೇಹಿತರನ್ನು ಪಡೆದುಕೊಳ್ಳುವರು ಎಂದು ಹೇಳಲಾಗುವುದು.

Read more about: zodiac signs
English summary

How Your Negative Behavior Can Actually Be Positive

It is normal to say that the negative nature of a person is to harm the person. But sometimes the person's situation can be very difficult or if they are in a state of thinking, their negative qualities help them.
X
Desktop Bottom Promotion