For Quick Alerts
ALLOW NOTIFICATIONS  
For Daily Alerts

ಕೇನ್ಸ್‌ 2015: ಮೋಡಿ ಮಾಡುವರೇ ಸೋನಮ್ ಕಪೂರ್?

By Super
|

ಭಾರತದ ಸುಂದರ ನಟಿ ಮಣಿಯರಲ್ಲಿ ಒಬ್ಬಳಾಗಿರುವ ಸೋನಮ್ ಕಪೂರ್ ಇದುವರೆಗು ಕೇನ್ಸ್‌ನಲ್ಲಿ ಭಾಗವಹಿಸಿದ ಚಿತ್ರೋತ್ಸವಗಳಲ್ಲಿ ಒಂದಕ್ಕಿಂತ ಮತ್ತೊಂದು ಸುಂದರವಾದ ಉಡುಗೆಗಳನ್ನು ಧರಿಸುತ್ತ ಬಂದಿದ್ದಾಳೆ.

ವಿಶ್ವದ ಶ್ರೇಷ್ಠ ವಿನ್ಯಾಸಕಾರರು ಆಕೆಯ ಸೌಂದರ್ಯಕ್ಕೆ ಮೆರಗು ನೀಡುವಂತಹ ದಿರಿಸುಗಳನ್ನು ಒದಗಿಸಲು ಹಗಲಿರುಲು ಶ್ರಮಿಸುತ್ತ ಇದ್ದಾರೆ. ಇವರ ವಿನ್ಯಾಸಗಳಲ್ಲಿ ತಮಗೆ ಒಪ್ಪುವಂತಹ ಸುಂದರವಾದ ಉಡುಗೆಯನ್ನು ಈಕೆ ಆರಿಸಿಕೊಳ್ಳುತ್ತ ಬಂದಿದ್ದಾಳೆ. ಸೋನಮ್ ಕಪೂರ್ ತನ್ನದೆ ಆದ ಫ್ಯಾಷನ್ ಪ್ರಜ್ಞೆಯಿಂದ ಉದ್ಯಮದಲ್ಲಿ ಛಾಪು ಮೂಡಿಸಿದ್ದಾಳೆ.

Sonam Kapoor's Magical Attires Over The Years

2011 ರಲ್ಲಿ ಕೇನ್ಸ್‌ ಚಿತ್ರೋತ್ಸವದಲ್ಲಿ ಕಾಣಿಸಿಕೊಂಡ ಲುಕ್ ಇದುವರೆಗಿನ ಆಕೆಯ ಬೆಸ್ಟ್ ಲುಕ್‌ನಲ್ಲಿ ಒಂದಾಗಿದೆ ಎಂದೇ ಹೇಳಬಹುದು, ಅಂದು ಆಕೆ ಧರಿಸಿದ ಜೀನ್ ಪಾಲ್ ಗೌಲ್ಟಿಯರ್ ವೈಟ್ ಶಿಯರ್ ನೆಟ್ ಗೌನ್ ಎಲ್ಲರನ್ನು ಮೂಕವಿಸ್ಮಿತಗೊಳಿಸಿತು. ಆದರೆ ಆಕೆ 2012 ಕೇನ್ಸ್‌ನಲ್ಲಿ ಧರಿಸಿದ್ದ ಉಡುಗೆ ಅಲೆಕ್ಸಾಂಡರ್ ಮೆಕ್‌ಕ್ವೀನ್ ಸಂಗ್ರಹದಿಂದ ಆರಿಸಿಕೊಳ್ಳಲಾಗಿತ್ತಾದರೂ, ಡೇರಿಂಗ್ ಗೋಥಿಕ್ ಶೈಲಿಯ ಗೌನ್ ನೋಡಲು ಅಷ್ಟು ಸೊಗಸಾಗಿಲ್ಲದಿದ್ದರು, ಯಾರೂ ತೆಗಳುವಂತೆನೂ ಇರಲಿಲ್ಲ. ಕೇನ್ಸ್ 2015: ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆದ ಕತ್ರಿನಾ ಕೈಫ್

ಸೋನಮ್ ಕಪೂರ್ 2013 ರಲ್ಲಿ ಧರಿಸಿದ್ದ ಉಡುಗೆಯು ಕೆಂಪು ಕಾರ್ಪೆಟ್‌ನಲ್ಲಿ ಆಕೆಗೆ ಫೇರಿಟೇಲ್ ಲುಕ್ ಅನ್ನು ನೀಡಿತ್ತು. ಆಗ ಈಕೆ ಕ್ಯಾನ್-ಕ್ಯಾನ್ ಡೋಲ್ಸ್ ಮತ್ತು ಗಬ್ಬಾನ ಬಾಲ್‌ರೂಮ್ ಪ್ರಿನ್ಸೆಸ್ ಗೌನ್ ಧರಿಸಿದ್ದಳು. ರೋಸ್ ಫ್ಲೋರಲ್ ಪ್ರಿಂಟ್ ಮತ್ತು ವೈಟ್ ಬೇಸ್ ಹೊಂದಿದ್ದ ಸುಂದರವಾದ ಗೌನ್ ಇದಾಗಿತ್ತು.

Sonam Kapoor's Magical Attires Over The Years

2014ರಲ್ಲಿ ಆಕೆ ಧರಿಸಿದ್ದ ಅತ್ಯಾಧುನಿಕ ಭಾರತೀಯ ಸಾಂಪ್ರದಾಯಿಕ ಲುಕ್ ಮೋಡಿ ಮಾಡಿತ್ತು. ಆಗ ಈಕೆ ಶೀರ್ ನೆಟ್ ಫ್ಯಾಬ್ರಿಕ್ ಔಟರ್ ಕವರ್ ಇರುವ ರೀಇನ್‍ವೆಂಟೆಡ್ ಸೀರೆಯನ್ನು ಧರಿಸಿದ್ದಳು. ಧೋತಿ ಶೈಲಿಯಿಂದ ಸ್ಫೂರ್ತಿ ಪಡೆದಿದ್ದ ಸೀರೆ ಮತ್ತು ಅದರ ಜೊತೆಗೆ ಇದ್ದ ಚೋಕರ್ ಜ್ಯೂವೆಲ್ಲರಿಯನ್ನು ಆಕೆ ಧರಿಸಿದ್ದಳು. ಇದನ್ನು ಆಕೆ ತನ್ನ ತಾಯಿಯ ಸಂಗ್ರಹದಿಂದ ಆರಿಸಿಕೊಂಡಿದ್ದಳು ಎಂಬುದು ವಿಶೇಷ.

ಇಲ್ಲಿ ಆಕೆ ಹಿಂದಿನ ಕೇನ್ಸ್‌ನಲ್ಲಿ ಧರಿಸಿದ್ದ ಉಡುಗೆಗಳ ಚಿತ್ರಗಳನ್ನು ನಾವು ಇಲ್ಲಿ ನೀಡಿದ್ದೇವೆ. ಇನ್ನು ಈ ವರ್ಷ ಕೇನ್ಸ್‌ನಲ್ಲಿ ಆಕೆ ಯಾವ ಉಡುಗೆಯಲ್ಲಿ ಕಾಣಿಸಿಕೊಳ್ಳುತ್ತಾಳೆ ಎಂಬ ಆಲೋಚನೆಯೇ ನಮ್ಮನ್ನು ನಿದ್ದೆ ಮಾಡದಂತೆ ಮಾಡಿಬಿಟ್ಟಿದೆ.

Sonam Kapoor's Magical Attires Over The Years

2015 ಮೇ ನಲ್ಲಿ ನಡೆಯುತ್ತಿರುವ 68ನೇ ಕೇನ್ಸ್‌ನಲ್ಲಿ ಚಿತ್ರೋತ್ಸವದಲ್ಲಿ ನಮ್ಮನ್ನು ಬೆರಗಾಗಿಸುವ ಯಾವ ಉಡುಗೆಯನ್ನು ಈಕೆ ಧರಿಸುತ್ತಾಳೋ, ಕಾದು ನೋಡಬೇಕು.

English summary

Sonam Kapoor's Magical Attires Over The Years

Sonam Kapoor, the fashionista of the industry, has been gracing us with the best looks by far at Cannes till date. With the best of the designers around the world being at her service night and day she pulls out the best fashion strings with ease. Even without the help of any great designer, Sonam herself has an exquisite fashion sense in the industry.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more