For Quick Alerts
ALLOW NOTIFICATIONS  
For Daily Alerts

ಪರಂಪರೆಯ ಸೌಂದರ್ಯಕ್ಕೆ ಇನ್ನೊಂದು ಹೆಸರೇ ಫೂಲ್ಕರಿ

By Venu
|

ಭಾರತದ ವ್ಯಾಪಕ ಪ್ರದೇಶವು ಹೇಳಲಾಗದಷ್ಟು ಸಂಖ್ಯೆಯ ಪರಂಪರೆಯ ಕಲಾ ಪ್ರಕಾರಗಳ ತವರಾಗಿದೆ. ವರ್ಷಗಳಿಂದ, ಅವುಗಳಲ್ಲಿ ಕೆಲವು ಏಳಿಗೆ ಕಾಣಲು ಸಾಧ್ಯವಾದರೆ, ಉಳಿದ ಅನೇಕವು ದೇಶಾದ್ಯಂತದ ಹಳ್ಳಿಗಳ ಮನೆಗಳಲ್ಲೇ ಉಳಿದುಕೊಂಡಿವೆ. ಅಂತಹ ಒಂದು ಕಲೆಯೇ ಈಗ ಮಾನ್ಯತೆ ಪಡೆದಿರುವ ಫೂಲ್ಕರಿ.

ಫೂಲ್ಕರಿ (ಫೂಲ್- ಹೂವು ಮತ್ತು ಕರಿ- ಕಲೆ) ಇದು ಪಂಜಾಬಿನ ಎಂಬ್ರಾಯಿಡರಿ ಸ್ಟೈಲ್ ಆಗಿದ್ದು, ಮೂಲತಃ ದೇಶೀಯ ಗುಣವುಳ್ಳದ್ದಾಗಿದೆ. ಸಮುದಾಯದ ಮಹಿಳೆಯರು ಈ ಕಲಾ ಕುಸುರಿಯನ್ನು ಸೃಷ್ಟಿಸಿ ಕ್ರಿಯಾತ್ಮಕ ಮಳಿಗೆಗಳಿಗೆ ಸ್ವತಃ ತಾವೇ ನೀಡುತ್ತಾರೆ. ಇವುಗಳು ಒಳಾಂಗಣ ಅಲಂಕಾರ ಹಾಗೂ ಮದುವೆಗಳಲ್ಲಿ ತುಂಬಾ ಬಳಕೆಯಾಗುತ್ತವೆ. ವರ್ಷಗಳು ಕಳೆದಂತೆ, ಫೂಲ್ಕರಿ ಕುಸುರಿಗಳು ದೇಶದ ಇತರೆ ಭಾಗಗಳಲ್ಲೂ ಜನಪ್ರಿಯವಾಗತೊಡಗಿದವು.

Exploring story opportunity on original works of Phulkari

ಬೆಂಗಳೂರಿನಲ್ಲಿ, ಫೂಲ್ಕರಿಯ ಮೂಲ ಕುಸುರಿಯು ನೇರವಾಗಿ ಪಂಜಾಬ್‍ನ ಹಳ್ಳಿಗಳಿಂದ ಬರುತ್ತಿದ್ದು, ಇದು ಒರಾಯನ್ ಕ್ಯಾರಾವಾನ್ ಫ್ಲೀ ಮಾರ್ಕೆಟ್ ನ ಮನೋಗ್ ಅಗಾರಿಯಾ ಮಳಿಗೆಯಲ್ಲಿ ಕಾಣಬಹುದಾಗಿದೆ. ಇವರು ಹ್ಯಾಂಡ್ ಬ್ಯಾಗ್‍ಗಳು, ಕ್ಲಚಸ್, ಒಡ್ನಿಸ್, ದುಪ್ಪಟ್ಟಾಗಳು, ಕುರ್ತಾಗಳು ಹಾಗೂ ಸೆಮಿ ಸ್ಟಿಚ್ಡ್ ಬ್ಲೌಸ್‍ಗಳನ್ನು ಹೊಂದಿದ್ದಾರೆ.

ಪ್ರತಿ ಬಾರಿ ಇವರು ಹೊಸ ದಾಸ್ತಾನು ಪಡೆದಾಗಲೂ ಸಂಪೂರ್ಣ ಹೊಸ ಶ್ರೇಣಿಯ ಸರಕುಗಳು ಪ್ಯಾಕ್ ಆಗಿ ಬರುತ್ತವೆ. ಆದ್ದರಿಂದ ಇವರ ಮಳಿಗೆಯು ಯಾವಾಗಲೂ ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ ಹಾಗೂ ಪ್ರತಿ ಬಾರಿ ಹೋದಾಗಲೂ ಒಂದೇ ರೀತಿಯನ್ನು ಕಾಣಲು ಸಾಧ್ಯವಿಲ್ಲ.

ಫೂಲ್ಕರಿ ಕುಸುರಿಯು ಪ್ರಾಥಮಿಕವಾಗಿ ಹೂವಿನ ಆಧಾರಿತ ಎಂಬ್ರಾಯಿಡರಿಯಾಗಿದೆ. ಇದರ ಪರಿಕಲ್ಪನೆ ಮತ್ತು ವಿನ್ಯಾಸವು ಆ ಪ್ರದೇಶವನ್ನು ಅವಲಂಬಿಸಿದೆ. ಕುಚಿ, ರಾಜವಾಡಿ ಹಾಗೂ ಕಡಾಯ್ ಸ್ಟೈಲ್‍ಗಳ ಫೂಲ್ಕರಿಯನ್ನು ಹೊಂದಬಹುದು, ಇವೆಲ್ಲವೂ ಆಯಾ ಪ್ರದೇಶಗಳಿಂದಾಗಿ ಪಡೆದ ಹೆಸರುಗಳಾಗಿವೆ ಎಂದು ವಿವರಿಸುತ್ತಾರೆ ಮನೋಜ್.

ಎಲ್ಲಾ ಕುಸುರಿಗಳು ಕೈಯಲ್ಲೇ ಮಾಡಿದ್ದಾಗಿವೆ ಮತ್ತು ವಿನ್ಯಾಸವನ್ನು ಆಧರಿಸಿ ಸಮಯ ವಿನಿಯೋಗಿಸಲಾಗಿರುತ್ತದೆ. ಉದಾಹರಣೆಗೆ, ಒಂದು ಕಡಾಯ್ ಕುಸುರಿಯ ಡಬಲ್ ಬೆಡ್ ಶೀಟ್ ಹಾಗೂ ಎರಡು ತಲೆದಿಂಬಿನ ಕವರ್ ಅನ್ನು ರಚಿಸಲು ಒಬ್ಬ ಕಲಾವಿದನಿಗೆ 5 ದಿನಗಳು ಬೇಕಾಗುತ್ತವೆ. ಫೂಲ್ಕರಿಯಲ್ಲಿ ಉಪಯೋಗಿಸುವ ವಸ್ತುಗಳು ಕೂಡ ವಿವಿಧ ಶ್ರೇಣಿಯದ್ದಾಗಿರುತ್ತವೆ. ಬೇಸ್ ಮೆಟೀರಿಯಲ್ ಆಗಿ ಹತ್ತಿ ಬಟ್ಟೆ (ತಸ್ವಿ ಕಾಟನ್ ಒಂದು ಅನನ್ಯ ಆಯ್ಕೆ), ಉಣ್ಣೆ, ಪಾಲಿಸ್ಟರ್, ಹಾಗೂ ರೇಷ್ಮೆಯನ್ನು ಸಾಮಾನ್ಯವಾಗಿ ಉಪಯೋಗಿಸಲಾಗುತ್ತದೆ.

ಇದರ ಮೇಲಿನ ಕುಸುರಿಯು ಮೆಟೀರಿಯಲ್‌ನ ತೂಕದ ಮೇಲೆ ಅವಲಂಬಿತವಾಗಿದೆ.ಕುಸುರಿಗೆ ಉಪಯೋಗಿಸುವ ಥ್ರೆಡ್‍ಗಳು ಹಾಗೂ ವಿನ್ಯಾಸ ಎಲ್ಲವೂ ಮೆಟೀರಿಯಲ್ ಎಷ್ಟು ತೂಕವನ್ನು ನಿಭಾಯಿಸಬಲ್ಲುದು ಎಂಬುದನ್ನು ಅವಲಂಬಿಸಿರುತ್ತದೆ. ಹತ್ತಿ, ರೇಷ್ಮೆ, ಹಾಗೂ ಉಣ್ಣೆಯ ಥ್ರೆಡ್‍ಗಳನ್ನು ಸಾಮಾನ್ಯವಾಗಿ ಉಪಯೋಗಿಸಲಾಗುತ್ತದೆ.

ಬೆಲೆಯು ಕೂಡಾ ಉಪಯೋಗಿಸಿದ ಮೆಟೀರಿಯಲ್ ಹಾಗೂ ಉತ್ಪನ್ನದ ಮೇಲೆ ಅವಲಂಬಿಸಿ ವ್ಯತ್ಯಾಸವಿರುತ್ತದೆ. ಸಣ್ಣ ಉತ್ಪನ್ನಗಳ ಬೆಲೆಯು 200 ರೂ. ನಿಂದ ಆರಂಭಗೊಳ್ಳುತ್ತದೆ. ಕೆಲಸ ಹೆಚ್ಚಿದ್ದಂತೆ ಬೆಲೆಯೂ ಹೆಚ್ಚಾಗುತ್ತದೆ.


ಬೆಡ್ ಶೀಟ್‍ನ ಬೆಲೆ 1,000 ರೂ.ನಿಂದ ಆರಂಭಗೊಂಡು 3,000 ರೂ. ತನಕ ಇರುತ್ತದೆ. ಫೂಲ್ಕರಿಯು ನಿಮಗೆ ಪರಂಪರೆಯ ಉತ್ಪನ್ನಗಳ ಆಯ್ಕೆಯ ಅವಕಾಶ ನೀಡುತ್ತದೆ. ಪ್ರತಿ ತುಣುಕು ಕೂಡಾ ಅನನ್ಯವಾದ ಗುರುತನ್ನು ಹೊಂದಿದ್ದು, ಅದರೊಂದಿಗೆ ನೀವು ಹೊರಗೆ ಕಾಲಿಟ್ಟಾಗ ಎಲ್ಲರ ಕಣ್ಣನ್ನು ಸೆಳೆಯುವ ಸಾಮರ್ಥ್ಯ ಹೊಂದಿದೆ.
English summary

Exploring story opportunity on original works of Phulkari

Phulkari (Phul – flower and Kari – art) is a Punjabi embroidery style that was originally very domestic in nature. The women of the community created these art pieces to serve as creative outlets for themselves. These were extensively used in their interior décor as well as during weddings. Over time, works of Phulkari came to be popular in other parts of the country as well.
Story first published: Tuesday, August 25, 2015, 16:34 [IST]
X
Desktop Bottom Promotion